ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೋಮನಾಥ ದೇಗುಲದ ಒಂದು ಸಾವಿರ ವರ್ಷಗಳ ಸ್ಥಿರಸ್ಥಿತಿಗೆ ಪ್ರಧಾನಮಂತ್ರಿ ಗೌರವ ನಮನ

प्रविष्टि तिथि: 05 JAN 2026 8:59AM by PIB Bengaluru

ಸೋಮನಾಥ ದೇಗುಲದ ಮೇಲೆ ಕ್ರಿ.ಶ 1026ರಲ್ಲಿ ಮೊದಲ ದಾಳಿ ನಡೆದು 1000 ವರ್ಷಗಳು ಗತಿಸಿರುವ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸಲು ಸಂಪಾದಕೀಯ ಅಭಿಮತದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ.

ಶತಮಾನಗಳಿಂದ ಪದೇ ಪದೇ ದಾಳಿಗಳು ನಡೆದಿದ್ದರೂ, ಸೋಮನಾಥ ದೇಗುಲವು ಭಾರತದ ನಿರಂತರ ಚೈತನ್ಯದ ಸಂಕೇತವಾಗಿ ಹಾಗೇ ಎತ್ತರವಾಗಿ ನಿಂತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ.  ಸೋಮನಾಥ ದೇಗುಲ ದಾಳಿಯ ಕಥೆ ಕೇವಲ ಒಂದು ದೇವಾಲಯದ ಬಗೆಗಿನ ವಿಷಯವಲ್ಲ, ಬದಲಾಗಿ ರಾಷ್ಟ್ರದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ರಕ್ಷಿಸಿದ ಭಾರತ ಮಾತೆಯ ಅಸಂಖ್ಯಾತ ಮಕ್ಕಳ ಅಚಲ ಧೈರ್ಯದ ಬಗ್ಗೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯೇಕ ಎಕ್ಸ್ ಪೋಸ್ಟ್‌ಗಳಲ್ಲಿ, ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ: 

“ಜೈ ಸೋಮನಾಥ್!

ಸೋಮನಾಥ ದೇಗುಲದ ಮೇಲೆ ಮೊದಲ ದಾಳಿ ನಡೆದು 2026 ಕ್ಕೆ ಒಂದು ಸಾವಿರ ವರ್ಷಗಳು. ಈ ದಾಳಿಯ ತರುವಾಯ ಪದೇ ಪದೇ ದಾಳಿ ನಡೆದರೂ, ಸೋಮನಾಥ ಎತ್ತರವಾಗಿ ನಿಂತಿದೆ!  ಸೋಮನಾಥನ ದೇಗುಲದ ಕಥೆಯು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯನ್ನು ರಕ್ಷಿಸಿದ ಭಾರತ ಮಾತೆಯ ಅಸಂಖ್ಯಾತ ಮಕ್ಕಳ ದೃಢ ಶೌರ್ಯವನ್ನು ಸಾರುತ್ತದೆ. 

ಈಸ್ಟ್ ವಿಷಯದ ಬಗ್ಗೆ ನನ್ನ ಸಂಪಾದಕೀಯ ಲೇಖನ ಇಲ್ಲಿದೆ : 

#SomnathSwabhimanParv

https://www.narendramodi.in/somnath-swabhiman-parv-a-1000-years-of-unbroken-faith-1026-2026


“जय सोमनाथ!

वर्ष 2026 में आस्था की हमारी तीर्थस्थली सोमनाथ ज्योतिर्लिंग पर हुए पहले आक्रमण के 1000 वर्ष पूरे हो रहे हैं। बार-बार हुए हमलों के बावजूद हमारा सोमनाथ मंदिर आज भी अडिग खड़ा है! सोमनाथ दरअसल भारत माता की उन करोड़ों वीर संतानों के स्वाभिमान और अदम्य साहस की गाथा है, जिनके लिए अपनी संस्कृति और सभ्यता सदैव सर्वोपरि रही है।

पढ़िए, इसी विषय से जुड़ा मेरा यह आलेख...

#SomnathSwabhimanParv

https://www.narendramodi.in/hi/somnath-swabhiman-parv-a-1000-years-of-unbroken-faith-1026-2026

 

*****


(रिलीज़ आईडी: 2211431) आगंतुक पटल : 22
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Bengali-TR , Assamese , Punjabi , Gujarati , Odia , Tamil , Telugu , Malayalam