ವಾರ್ತಾ ಮತ್ತು ಪ್ರಸಾರ ಸಚಿವಾಲಯ
‘ಬದಲ್ತಾ ಭಾರತ್ ಮೇರಾ ಅನುಭವ್' ಸೃಜನಶೀಲ ಸ್ಪರ್ಧೆಗಳ ವಿಜೇತರ ಘೋಷಣೆ
प्रविष्टि तिथि:
03 JAN 2026 12:42PM by PIB Bengaluru
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು 'ಬದಲ್ತಾ ಭಾರತ್ ಮೇರಾ ಅನುಭವ್' ಅಭಿಯಾನದ ಅಡಿಯಲ್ಲಿ ನಾಲ್ಕು ಸೃಜನಶೀಲ ಸ್ಪರ್ಧೆಗಳ ವಿಜೇತರನ್ನು ಘೋಷಿಸಿದೆ. "ಮೈ ಗವರ್ನಮೆಂಟ್" (MyGov) ಸಹಯೋಗದೊಂದಿಗೆ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಕಳೆದ 11 ವರ್ಷಗಳಲ್ಲಿ ಭಾರತದ ಪರಿವರ್ತನೆಯನ್ನು ಪ್ರತಿಬಿಂಬಿಸುವ ತಮ್ಮ ವೈಯಕ್ತಿಕ ಅನುಭವಗಳು ಮತ್ತು ಸೃಜನಶೀಲ ಅಭಿವ್ಯಕ್ತಿಗಳನ್ನು ಹಂಚಿಕೊಳ್ಳಲು ದೇಶಾದ್ಯಂತದ ನಾಗರಿಕರನ್ನು ಆಹ್ವಾನಿಸಲಾಗಿತ್ತು.
'ವಿಕಸಿತ ಭಾರತ@2047' ಆಶಯಕ್ಕೆ ಅನುಗುಣವಾಗಿ, ಈ ಅಭಿಯಾನವು ವಿವಿಧ ವಯೋಮಾನದವರು ಮತ್ತು ವೈವಿಧ್ಯಮಯ ಹಿನ್ನೆಲೆಯ ನಾಗರಿಕರಿಂದ ಉತ್ಸಾಹಭರಿತ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಆಡಳಿತದಲ್ಲಿ ಕ್ರಾಂತಿಕಾರಿ ಪರಿವರ್ತನೆ ಮತ್ತು ನಾನಾ ಕ್ಷೇತ್ರಗಳಾದ್ಯಂತ ತ್ವರಿತ ಅಭಿವೃದ್ಧಿಯ ಪ್ರಭಾವವನ್ನು ತಮ್ಮ ವ್ಯಾಪಕ ಶ್ರೇಣಿಯ ಸೃಜನಶೀಲತೆ ಮೂಲಕ ಸ್ಪರ್ಧಾಳುಗಳು ಅಭಿವ್ಯಕ್ತಿಪಡಿಸಿದರು. ಆ ಮೂಲಕ ಅವರು ನಾಗರಿಕರ ಧ್ವನಿಯನ್ನು ಹೆಚ್ಚಿಸಿದ್ದಾರೆ ಮತ್ತು ಅಭಿವೃದ್ಧಿ ಹೊಂದಿದ ಭಾರತದತ್ತ ರಾಷ್ಟ್ರದ ಪ್ರಯಾಣದಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಿದ್ದಾರೆ. ತಳಮಟ್ಟದ ಭಾಗವಹಿಸುವಿಕೆಯಿಂದ ಹಿಡಿದು ಸೃಜನಶೀಲ ಪ್ರದರ್ಶನಗಳವರೆಗೆ, ಈ ಉಪಕ್ರಮವು ಪ್ರತಿಯೊಬ್ಬ ಭಾರತೀಯನ ಧ್ವನಿಯನ್ನು ತೊಡಗಿಸಿಕೊಂಡಿದೆ, ಉತ್ತೇಜಿಸಿದೆ ಮತ್ತು ವರ್ಧಿಸಿದೆ.
ವರ್ಗವಾರು ವಿಜೇತರು ಈ ಕೆಳಗಿನಂತಿದ್ದಾರೆ:
1. ಬದಲ್ತಾ ಭಾರತ್ ಮೇರಾ ಅನುಭವ್ - ಇನ್ಸ್ಟಾಗ್ರಾಮ್ ರೀಲ್ ಸ್ಪರ್ಧೆ
- ಪ್ರಥಮ ಬಹುಮಾನ: ಇಂದ್ರಜೀತ್ ಸುಬೋಧ್ ಮಶಂಕರ್
- ದ್ವಿತೀಯ ಬಹುಮಾನ: ಮಂಜರಿ ವಿ ಮಹಾಜನ್
- ತೃತೀಯ ಬಹುಮಾನ: ಮಿಷ್ಟಿ ಲೊಹಾರೆ
- 7 ಸಮಾಧಾನ ಬಹುಮಾನಗಳು: ಮೊಹಮ್ಮದ್ ಹಾಜಿಮ್ ರಾಥರ್, ಅನುಭವಿ ಸಿನ್ಹಾ, ಆಯುಷ್ಮಾನ್ ಬರ್ಮೈಯಾ, ಸಿದ್ಧಾರ್ಥ್ ಎಂ, ಕಾರ್ತಿಕ್ ಭಟ್ನಾಗರ್, ಐಶ್ವರ್ಯಾ ಕುಮಾವತ್, ಆತಿಶ್ ಮೊಹಾಪಾತ್ರ
2. ಬದಲ್ತಾ ಭಾರತ್ ಮೇರಾ ಅನುಭವ್ - ಯೂಟ್ಯೂಬ್ ಶಾರ್ಟ್ಸ್ ಸ್ಪರ್ಧೆ
- ಪ್ರಥಮ ಬಹುಮಾನ: ಮಂಥನ್ ರೋಹಿತ್
- ದ್ವಿತೀಯ ಬಹುಮಾನ: ಜೂನಿಯರ್ ಟ್ಯೂಬ್ ಚಾನೆಲ್ ತೃತೀಯ ಬಹುಮಾನ: ಲೇಖಾ ಚೇತನ್ ಕೊಠಾರಿ
- 7 ಸಮಾಧಾನಕರ ಬಹುಮಾನಗಳು: ಸೌಮಿತಾ ದತ್ತಾ, ಹೈಮಂತಿ ಮೆಟೆ, ದಿನೇಶ್ ಚೋಟಿಯಾ, ದಿವ್ಯಾ ಬಿಷ್ಣೋಯ್, ತಪೇಶ್, ಸಿದ್ಧಾರ್ಥ್ ಎಂ, ದಿನೇಶ್ ಕುಮಾರ್
3. ಶಾರ್ಟ್ಸ್ ಎವಿ ಸ್ಪರ್ಧೆ - ನವ ಭಾರತದ ಕಥೆ
- ಪ್ರಥಮ ಹುಮಾನ: ಸುಶೋವನ್ ಮನ್ನಾ
- ದ್ವಿತೀಯ ಬಹುಮಾನ: ಪಪ್ಪೆ ಸೋಮ್
- ತೃತೀಯ ಬಹುಮಾನ: ರವಿ ಪರಿಹಾರ್
- 2 ಸಮಾಧಾನ ಬಹುಮಾನಗಳು: ದಿನೇಶ್ ಚೋಟಿಯಾ, ಸಿದ್ಧಾರ್ಥ್ ಎಂ
4. ಬದಲ್ತಾ ಭಾರತ್ ಮೇರಾ ಅನುಭವ್ - ಬ್ಲಾಗ್ ಬರವಣಿಗೆ ಸ್ಪರ್ಧೆ
- ಪ್ರಥಮ ಬಹುಮಾನ: ಕೃಷ್ಣ ಗುಪ್ತಾ
- ದ್ವಿತೀಯ ಬಹುಮಾನ: ಸಿಂಜಿನಿ ಚಟರ್ಜ
- ತೃತೀಯ ಬಹುಮಾನ: ಬೃಂದಾ ಸೋಮಾನಿ
- 7 ಸಮಾಧಾನ ಬಹುಮಾನಗಳು: ನೂಪುರ್ ಜೋಶಿ, ತ್ರಿಶಾ ಸಿಂಗ್ ಬಘೇಲ್, ಮೀನಾಕ್ಷಿ ಬನ್ಸಾಲಿ, ವಿಶ್ವನಾಥ್ ಕ್ಲೇರ್, ನಂದನಿ ಭಾವ್ಸರ್, ಶ್ರೀರಾಮ್ ಗಣೇಶ್, ಅಪೂರ್ವ

ವಾರ್ತಾ ಮತ್ತು ಪ್ರಸಾರ ಸಚಿವಾಲಯವು 'ಬದಲ್ತಾ ಭಾರತ್ ಮೇರಾ ಅನುಭವ್' ಅಭಿಯಾನದ ಎಲ್ಲಾ ವಿಜೇತರು ಮತ್ತು ಭಾಗವಹಿಸಿದವರನ್ನು ಅವರ 'ವಿಕಸಿತ ಭಾರತ'ದ ಕಥೆಗಳನ್ನು ನಿರೂಪಿಸುವಲ್ಲಿ ಉತ್ಸಾಹಭರಿತ ಕೊಡುಗೆಗಾಗಿ ಅಭಿನಂದಿಸುತ್ತದೆ. ಜೊತೆಗೆ, ಈ ಪರಿವರ್ತನೆಯ ಪ್ರಯಾಣದತ್ತ ತಮ್ಮ ಸೃಜನಶೀಲ ಸಾರಥ್ಯ ಮುಂದುವರಿಸುವಂತೆ ಎಲ್ಲಾ ವಿಜೇತರನ್ನು ಒತ್ತಾಯಿಸುತ್ತದೆ.
*****
(रिलीज़ आईडी: 2211052)
आगंतुक पटल : 23