ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸದ್ಗುಣಗಳೊಂದಿಗೆ ಗುರಿ ಹೊಂದುವುದು ಹೇಗೆ ಎಂಬುದನ್ನು ವಿವರಿಸುವ ಸುಭಾಷಿತ ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 01 JAN 2026 8:12AM by PIB Bengaluru

ಹೊಸ ವರ್ಷ 2026ರ ಉದಯದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯ ಕೋರಿದ್ದಾರೆ.

ಜ್ಞಾನ, ವೈರಾಗ್ಯ, ಸಂಪತ್ತು, ಶೌರ್ಯ, ಶಕ್ತಿ, ಬಲ, ಸ್ಮರಣಶಕ್ತಿ, ಸ್ವಾತಂತ್ರ್ಯ, ಕೌಶಲ್ಯ, ಜಾಣ್ಮೆ, ತಾಳ್ಮೆ ಮತ್ತು ಮೃದುತ್ವದ ಸದ್ಗುಣಗಳೊಂದಿಗೆ ಜೀವನದ ಗುರಿ ಹೊಂದುವುದು ಹೇಗೆ ಎಂದು ಸುಭಾಷಿತದ ಮೂಲಕ ಶ್ರೀ ಮೋದಿ ಅವರು ವಿವರಿಸಿದ್ದಾರೆ.

ಪ್ರಾಚೀನ ಜ್ಞಾನ ಉಲ್ಲೇಖಿಸಿ ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ:

"ನಿಮ್ಮೆಲ್ಲರಿಗೂ  ಹೊಸ ವರ್ಷ 2026ರ ಶುಭಾಶಯಗಳು. ಈ ವರ್ಷ ಎಲ್ಲರಿಗೂ ಹೊಸ ಭರವಸೆಗಳು, ಹೊಸ ಸಂಕಲ್ಪ ಮತ್ತು ಹೊಸ ಆತ್ಮವಿಶ್ವಾಸವನ್ನು ತರಲಿ. ಎಲ್ಲರೂ ಜೀವನದಲ್ಲಿ ಮುನ್ನಡೆಯಲು ಸ್ಫೂರ್ತಿ ನೀಡಲಿ."

“ಜ್ಞಾನ, ವೈರಾಗ್ಯ, ಸಂಪತ್ತು, ಶೌರ್ಯ, ವೈಭವ, ಶಕ್ತಿ ಮತ್ತು ಸ್ಮರಣಶಕ್ತಿ, ಸ್ವಾತಂತ್ರ್ಯ, ಕೌಶಲ್ಯ, ಪ್ರಭೆ, ತಾಳ್ಮೆ ಮತ್ತು ಸೌಮ್ಯತೆಯ ಗುಣಗಳಿದ್ದಲ್ಲಿ ವ್ಯಕ್ತಿಯ ಜೀವನ ಅರ್ಥಪೂರ್ಣ”

ಹೀಗಾಗಿ ಈ ಎಲ್ಲಾ ಗುಣಗಳೊಂದಿಗೆ ಸಮತೋಲಿತ ಜೀವನದ ಗುರಿ‌ ಹೊಂದಬೇಕು.

ज्ञानं विरक्तिरैश्वर्यं शौर्यं तेजो बलं स्मृतिः।

स्वातन्त्र्यं कौशलं कान्तिर्धैर्यं मार्दवमेव च ॥”

****


(रिलीज़ आईडी: 2210410) आगंतुक पटल : 23
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Bengali-TR , Punjabi , Gujarati , Tamil , Telugu , Malayalam