ಜಲ ಶಕ್ತಿ ಸಚಿವಾಲಯ
azadi ka amrit mahotsav

ಕುಡಿಯುವ ನೀರಿನ ಸೇವೆಗಳನ್ನು ವಿಮರ್ಶಿಸಲು “ಜಲ ಸೇವಾ ಆಂಕಲನ್” ತಂತ್ರಾಂಶಕ್ಕೆ ಕೇಂದ್ರ ಜಲ ಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್ ಚಾಲನೆ ನೀಡಿದರು


ಗ್ರಾಮಗಳಿಗೆ ನೀರಿನ ಸೇವೆಗಳನ್ನು ವಿಮರ್ಶಿಸಲು “ಜಲ ಸೇವಾ ಆಂಕಲನ್” ಅಧಿಕಾರ ನೀಡುತ್ತದೆ; ಗ್ರಾಮೀಣ ನೀರಿನ ಆಡಳಿತದಲ್ಲಿ ವಿ.ಡಬ್ಲ್ಯೂ.ಎಸ್.ಸಿ. ಗಳನ್ನು ಕೇಂದ್ರೀಕರಿಸಲಾಗುತ್ತದೆ

“ಜಲ ಸೇವಾ ಆಂಕಲನ್” ರಾಷ್ಟ್ರವ್ಯಾಪಿ ಕಾರ್ಯನಿರ್ವಹಿಸುತ್ತಿದ್ದಂತೆ ಜನರ ಭಾಗವಹಿಸುವಿಕೆ, ಪಾರದರ್ಶಕತೆ ಮತ್ತು ತಂತ್ರಜ್ಞಾನವು ಒಮ್ಮುಖವಾಗಿ ಕಾರ್ಯ ಪ್ರವರ್ತಿಸುತ್ತದೆ

प्रविष्टि तिथि: 30 DEC 2025 3:30PM by PIB Bengaluru

“ಜಲ ಜೀವನ್ ಮಿಷನ್” ಅಡಿ ಸೇವಾ ವಿತರಣೆ ಮತ್ತು ಸಮುದಾಯ ಮಾಲೀಕತ್ವವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಲ್ಲಿ, ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಡಿ.ಡಿ.ಡಬ್ಲ್ಯೂ.), ಇಂದು ಜಲ ಜೀವನ್ ಮಿಷನ್ (ಜೆ.ಜೆ.ಎಂ.) ಜಾಲತಾಣದಲ್ಲಿ ಗ್ರಾಮ ಪಂಚಾಯಿತಿ ನೇತೃತ್ವದ ಡಿಜಿಟಲ್ ಕುಡಿಯುವ ನೀರಿನ ಸೇವಾ ಕಾರ್ಯನಿರ್ವಹಣೆಯ ಮೌಲ್ಯಮಾಪನ ಸಾಧನವಾದ “ಜಲ ಸೇವಾ ಆಂಕಲನ್” ಗೆ ಜಾಲತಾಣ ಮೂಲಕ ಚಾಲನೆ ನೀಡಿದರು.

ಈ ಉಪಕ್ರಮವು ಮೂಲಸೌಕರ್ಯ ಸೃಷ್ಟಿಯಿಂದ ನಿರಂತರ ಸೇವಾ ವಿತರಣೆಗೆ ನಿರ್ಣಾಯಕ ಬದಲಾವಣೆಯನ್ನು ಸೂಚಿಸುತ್ತದೆ. ಹರ್ ಘರ್ ಜಲ (ಹೆಚ್.ಜಿ.ಜೆ.) ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆಯ ಕ್ರಮಬದ್ಧತೆ, ಸಮರ್ಪಕತೆ, ಗುಣಮಟ್ಟ ಮತ್ತು ಸುಸ್ಥಿರತೆಯನ್ನು ನಿರ್ಣಯಿಸುವ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮ ಸಂಸ್ಥೆಗಳು ಪಾತ್ರನಿರ್ವಹಿಸುತ್ತವೆ.

ಹೆಚ್ಚಿನ ಸಂಖ್ಯೆಯ ಗ್ರಾಮ ಪಂಚಾಯಿತಿಗಳು ಹರ್ ಘರ್ ಜಲ ಸ್ಥಾನಮಾನವನ್ನು ಸಾಧಿಸಿರುವುದರಿಂದ, ಜಲ ಜೀವನ್ ಮಿಷನ್ ಹೊಸ ಹಂತವನ್ನು ಪ್ರವೇಶಿಸಿದೆ, ಅಲ್ಲಿ ನಲ್ಲಿ ಸಂಪರ್ಕಗಳು ಪ್ರತಿದಿನ ವಿಶ್ವಾಸಾರ್ಹ ಮತ್ತು ಸುರಕ್ಷಿತ ಶುದ್ಧ ಕುಡಿಯುವ ನೀರಿನ ಸೇವೆಗಳಾಗಿ ರೂಪಾಂತರಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವತ್ತ ಗಮನ ನೀಡಲಾಗಿದೆ. “ಜಲ ಸೇವಾ ಆಂಕಲನ್” ಅನ್ನು ಸಮುದಾಯ ಸ್ವಾಮ್ಯದ ಸ್ವಯಂ-ಮೌಲ್ಯಮಾಪನ ಎಂದು ಪರಿಕಲ್ಪನೆ ಮಾಡಲಾಗಿದೆ, ಇದು ಹಳ್ಳಿಗಳು ಅಪರೂಪದ ಮತ್ತು ದುಬಾರಿ ಮೂರನೇ ವ್ಯಕ್ತಿಯ ಸಮೀಕ್ಷೆಗಳನ್ನು ಮಾತ್ರ ಅವಲಂಬಿಸುವ ಬದಲು ತಮ್ಮ ನೀರಿನ ಸೇವಾ ವಿತರಣಾ ವ್ಯವಸ್ಥೆಗಳ ಬಗ್ಗೆ ಸಾಮೂಹಿಕವಾಗಿ ಯೋಚಿಸಲು ಅನುವು ಮಾಡಿಕೊಡುತ್ತದೆ.

A screenshot of a video conferenceAI-generated content may be incorrect.

ಈ ಉಪಕರಣವನ್ನು ಔಪಚಾರಿಕವಾಗಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರು ಇ-ಜಾಲತಾಣ ಮೂಲಕ ಚಾಲನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ರಾಜ್ಯ ಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ ಮತ್ತು ಶ್ರೀ ರಾಜ್ ಭೂಷಣ್ ಚೌಧರಿ, ಡಿಡಿಡಬ್ಲ್ಯೂಎಸ್ ನ ಹಿರಿಯ ಅಧಿಕಾರಿಗಳು, ರಾಜ್ಯಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳು, ಪಂಚಾಯಿತಿ ಕಾರ್ಯದರ್ಶಿಗಳು, ಸರಪಂಚರು ಮತ್ತು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಭಾಗವಹಿಸಿದ್ದರು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಹರ್ ಘರ್ ಜಲ ಗ್ರಾಮ ಪಂಚಾಯಿತಿಗಳ ಸುಮಾರು 10,000 ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದ್ದರು. 

A group of men standing in a meeting roomAI-generated content may be incorrect.

ಸಭೆಯನ್ನುದ್ದೇಶಿಸಿ ಮಾತನಾಡಿದ ಗೌರವಾನ್ವಿತ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರು, ಜಲ ಜೀವನ್ ಮಿಷನ್ (ಜೆ.ಜೆ.ಎಂ.) ಕೇವಲ ಸ್ವತ್ತುಗಳನ್ನು ಸೃಷ್ಟಿಸುವುದಲ್ಲ, ಬದಲಾಗಿ ಪ್ರತಿ ಗ್ರಾಮೀಣ ಮನೆಗೂ ವಿಶ್ವಾಸಾರ್ಹ ಕುಡಿಯುವ ನೀರಿನ ಸೇವೆಗಳನ್ನು ನಿರಂತರ ಆಧಾರದ ಮೇಲೆ ತಲುಪಿಸುತ್ತದೆ ಎಂದು ಹೇಳಿದರು.  ಯೋಜನೆಯ ನಾಲ್ಕು ಪ್ರಮುಖ ಸ್ತಂಭಗಳಾದ ರಾಜಕೀಯ ಇಚ್ಛಾಶಕ್ತಿ, ಜನರ ಭಾಗವಹಿಸುವಿಕೆ, ಪಾಲುದಾರರ ಸಹಯೋಗ ಮತ್ತು ಅತ್ಯುತ್ತಮ ಸಂಪನ್ಮೂಲ ಬಳಕೆಗಳನ್ನು ವಿವರಿಸಿದರು ಮತ್ತು ಹರ್ ಘರ್ ಜಲ ಸಾಧನೆಗಳ ದೀರ್ಘಕಾಲೀನ ಸುಸ್ಥಿರತೆ ಖಚಿತಪಡಿಸಿಕೊಳ್ಳಲು ಜನ್ ಭಾಗೀದಾರಿ ಅತ್ಯಂತ ನಿರ್ಣಾಯಕ ಸ್ತಂಭವಾಗಿದೆ ಎಂದು ವಿವರಿಸಿದರು.

A screenshot of a video conferenceAI-generated content may be incorrect.

ಗ್ರಾಮ ಪಂಚಾಯಿತಿಗಳು ತಮ್ಮದೇ ಆದ ನೀರು ಸರಬರಾಜು ವ್ಯವಸ್ಥೆಗಳ ಪಾಲಕರಾಗಲು “ಜಲ ಸೇವಾ ಆಂಕಲನ್” ಅಧಿಕಾರ ನೀಡುತ್ತದೆ ಮತ್ತು ಗ್ರಾಮ ಸಭೆಗಳ ಮೂಲಕ ಪ್ರಜಾಪ್ರಭುತ್ವ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. "ಜಲ್ ಜೀವನ್ ಮಿಷನ್ ಜನರಿಗೆ ಮತ್ತು ಹಳ್ಳಿಗಳಿಗೆ ಮತ್ತು ಅದನ್ನು ಮುಂದುವರಿಸುವ ಜವಾಬ್ದಾರಿ ಸಮುದಾಯದ ಮೇಲಿದೆ; ಇದನ್ನು ಜನ್ ಭಾಗೀದಾರಿಯ ಮೂಲಕ ಮಾತ್ರ ಸಾಧಿಸಬಹುದು" ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಗಳ ದೀರ್ಘಕಾಲೀನ ಸುಸ್ಥಿರತೆಗೆ ಸಮುದಾಯದ ಭಾಗವಹಿಸುವಿಕೆ ಮತ್ತು ಪಾರದರ್ಶಕತೆ ಅತ್ಯಗತ್ಯ ಮತ್ತು ಹೊಸ ಉಪಕರಣವು ಸೇವಾ ವಿತರಣಾ ಅಂತರವನ್ನು ಮೊದಲೇ ಗುರುತಿಸಲು ಮತ್ತು ಸಕಾಲಿಕ ಸರಿಪಡಿಸುವ ಕ್ರಮವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

A screenshot of a video conferenceAI-generated content may be incorrect.

ಕೇಂದ್ರ ಜಲಶಕ್ತಿಯ ರಾಜ್ಯಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಹರ್ ಘರ್ ಜಲ ಸಾಧನೆಗಳನ್ನು ಉಳಿಸಿಕೊಳ್ಳುವಲ್ಲಿ ಮತ್ತು ಗ್ರಾಮಗಳ ಪರಿವರ್ತನೆಗೆ ಚಾಲನೆ ನೀಡುವಲ್ಲಿ ಜನರ ಭಾಗವಹಿಸುವಿಕೆಯ ಮಹತ್ವವನ್ನು ವಿವರಿಸಿದರು. “ಜಲ ಸೇವಾ ಆಂಕಲನ್” ಸ್ಥಳೀಯ ಸಂಸ್ಥೆಗಳ ಮೇಲಿನ ಸರ್ಕಾರದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಕುಡಿಯುವ ನೀರಿನ ಸೇವೆಗಳ ಗ್ರಾಮ ಮಟ್ಟದ ಆಡಳಿತವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯತ್ ಗಳೊಂದಿಗೆ ಸಂವಹನ

ಘೋನಾಶಿ ಗ್ರಾಮ ಪಂಚಾಯತ್ (ಕರದ್ ಬ್ಲಾಕ್, ಸತಾರಾ ಜಿಲ್ಲೆ, ಮಹಾರಾಷ್ಟ್ರ), ಗೋಗಥಲಾ ಗ್ರಾಮ ಪಂಚಾಯತ್ (ರೈಲ್ಮಗ್ರಾ ಬ್ಲಾಕ್, ರಾಜ್ಸಮಂಡ್ ಜಿಲ್ಲೆ, ರಾಜಸ್ಥಾನ) ಮತ್ತು ಬಿಲ್ಹಾಪುರ ಗ್ರಾಮ ಪಂಚಾಯತ್ (ಅಮ್ರೋಧಾ ಬ್ಲಾಕ್, ಕಾನ್ಪುರ್ ದೇಹತ್ ಜಿಲ್ಲೆ, ಉತ್ತರ ಪ್ರದೇಶ) ದ ಪಂಚಾಯತ್ ಪ್ರತಿನಿಧಿಗಳು ಮತ್ತು ಅವರ ನಡುವಿನ ಸಂವಾದವು ಈ ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು. ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳನ್ನು ನಿರ್ವಹಿಸುವುದು, ನೀರಿನ ಪೂರೈಕೆಯ ಕ್ರಮಬದ್ಧತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು, ನಿಯಮಿತ ಪರೀಕ್ಷೆ, ಬಳಕೆದಾರರ ಶುಲ್ಕಗಳ ಸಂಗ್ರಹ ಮತ್ತು ಹರ್ ಘರ್ ಜಲ ಸಾಧನೆಗಳನ್ನು ಉಳಿಸಿಕೊಳ್ಳುವಲ್ಲಿ ಗ್ರಾಮದ ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ, “ಜಲ ಸೇವಾ ಆಂಕಲನ್” ಒಂದು ತಪಾಸಣೆ ಅಥವಾ ಬಾಹ್ಯ ಲೆಕ್ಕಪರಿಶೋಧನೆಯಲ್ಲ, ಬದಲಾಗಿ ಒಂದು ರಚನಾತ್ಮಕ, ಸಮುದಾಯ ನೇತೃತ್ವದ ಸ್ವಯಂ-ಪರಿಶೀಲನಾ ಪ್ರಕ್ರಿಯೆಯಾಗಿದ್ದು, ಇದು ಹಳ್ಳಿಗಳು ತಮ್ಮ ಕೊಳವೆಗಳ ಮೂಲಕ ನೀರು ಸರಬರಾಜು ವ್ಯವಸ್ಥೆಗಳು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನಿರ್ಣಯಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ವಿವರಿಸಿದರು. 

A screenshot of a video conferenceAI-generated content may be incorrect.

ಈ ಉಪಕ್ರಮವು ಸಮುದಾಯಗಳು, ಗ್ರಾಮ ಪಂಚಾಯಿತಿಗಳ ಮತ್ತು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳನ್ನು ಸೇವಾ ವಿತರಣಾ ನಿಯತಾಂಕಗಳಾದ ಕ್ರಮಬದ್ಧತೆ, ಸಮರ್ಪಕತೆ, ಗುಣಮಟ್ಟ ಮತ್ತು ವ್ಯವಸ್ಥೆಯ ನಿರ್ವಹಣೆಯನ್ನು ಮೌಲ್ಯಮಾಪನ ಮಾಡುವ ಕೇಂದ್ರದಲ್ಲಿ ಇರಿಸುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಜಲ ಜೀವನ್ ಮಿಷನ್ ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರಾದ ಶ್ರೀ ಕಮಲ್ ಕಿಶೋರ್ ಸೋನ್, ಜಲ ಸೇವಾ ಆಂಕಲನ್ ಪ್ರಕ್ರಿಯೆಯನ್ನು ವಿವರಿಸುತ್ತಾ, ಗ್ರಾಮ ಪಂಚಾಯತಿಗಳು ಒದಗಿಸುವ ಮಾಹಿತಿಗಳನ್ನು ಸರಿಯಾಗಿ ಮತ್ತು ಜವಾಬ್ದಾರಿಯುತವಾಗಿ ಭರ್ತಿ ಮಾಡಬೇಕು. ಏಕೆಂದರೆ ಮೌಲ್ಯಮಾಪನ ದತ್ತಾಂಶವು ರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕವಾಗಿ ಲಭ್ಯವಿರುತ್ತದೆ, ಇದು ನಿಖರತೆ ಮತ್ತು ವಿಶ್ವಾಸಾರ್ಹತೆಯ ಮಹತ್ವವನ್ನು ತಿಳಿಹೇಳುತ್ತದೆ. ಜಿಲ್ಲಾ ಪಂಚಾಯಿತಿಗಳು ಜಿಲ್ಲಾ ಮಟ್ಟದಲ್ಲಿ ಯೋಜನೆ ಮತ್ತು ಸಮನ್ವಯದೊಂದಿಗೆ ಸಕ್ರಿಯ ಸಹಾಯಕ ಪಾತ್ರವನ್ನು ವಹಿಸುತ್ತವೆ ಎಂದು ಅವರು ಹೇಳಿದರು. ಬ್ಲಾಕ್ ಮಟ್ಟದಲ್ಲಿ, ವಿಶೇಷವಾಗಿ ಪಂಚಾಯಿತಿ ಕಾರ್ಯದರ್ಶಿಗಳ ವ್ಯವಸ್ಥಿತ ತರಬೇತಿಯು ಸರಿಯಾದ ದತ್ತಾಂಶ ನಮೂದನ್ನು ಖಚಿತಪಡಿಸಿಕೊಳ್ಳಲು ಅತ್ಯಗತ್ಯ. “ಜಲ ಸೇವಾ ಆಂಕಲನ್“ ಫಲಿತಾಂಶಗಳ ಸಾಮೂಹಿಕ ಪರಿಶೀಲನೆ ಮತ್ತು ಮಾಲೀಕತ್ವಕ್ಕಾಗಿ ಅಂತಿಮ ವೇದಿಕೆಯಾಗಿ ಕಾರ್ಯನಿರ್ವಹಿಸುವ ಗ್ರಾಮ ಸಭೆಯಲ್ಲಿ ಚರ್ಚೆ ಮತ್ತು ಅನುಮೋದನೆಯ ಮೂಲಕ ಮಾತ್ರ ಮೌಲ್ಯಮಾಪನದ ದೃಢೀಕರಣವನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದರು.

ಎನ್.ಜೆ.ಜೆ.ಎಂ. ನ ಜಂಟಿ ಕಾರ್ಯದರ್ಶಿ ಶ್ರೀಮತಿ ಸ್ವಾತಿ ಮೀನಾ ನಾಯಕ್ ವಂದಿಸಿದರು. ನಂತರ ಎನ್.ಜೆ.ಜೆ.ಎಂ. ನ ಉಪ ಕಾರ್ಯದರ್ಶಿ ಶ್ರೀಮತಿ ಅಂಕಿತಾ ಚಕ್ರವರ್ತಿ ಅವರಿಂದ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ “ಜಲ ಸೇವಾ ಆಂಕಲನ್” ಉಪಕರಣದ ಕುರಿತು ತರಬೇತಿ ಅವಧಿ ನಡೆಯಿತು.

“ಜಲ ಸೇವಾ ಆಂಕಲನ್” ಏಕೆ ಮುಖ್ಯವಾಗಿದೆ

ಗಮನಾರ್ಹ ಸಂಖ್ಯೆಯ ಗ್ರಾಮ ಪಂಚಾಯಿತಿಗಳು ಹರ್ ಘರ್ ಜಲ ಸ್ಥಾನಮಾನವನ್ನು ಸಾಧಿಸಿರುವುದರಿಂದ, ಈಗ ಗಮನವು ನಿಯಮಿತ, ಸಮರ್ಪಕ, ಸುರಕ್ಷಿತ ಮತ್ತು ಸುಸ್ಥಿರ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವತ್ತ ಸಾಗಿದೆ. ಸ್ಥಳೀಯ ಆಡಳಿತದಲ್ಲಿ ಬೇರೂರಿರುವ ನಿರಂತರ, ಸಾಂಸ್ಥಿಕವಾಗಿ ಹುದುಗಿಸಲಾದ ಮೌಲ್ಯಮಾಪನ ಕಾರ್ಯವಿಧಾನದೊಂದಿಗೆ “ಜಲ ಸೇವಾ ಆಂಕಲನ್” ಅಪರೂಪದ ಬಾಹ್ಯ ಸಮೀಕ್ಷೆಗಳ ಮೇಲಿನ ಅವಲಂಬನೆಯನ್ನು ಬದಲಾಯಿಸುತ್ತದೆ.

ಜಲ ಸೇವಾ ಆಂಕಲನ್ - ಮೌಲ್ಯಮಾಪನವು ಪ್ರಮುಖ ಸೇವಾ ನಿಯತಾಂಕಗಳನ್ನು ಒಳಗೊಂಡಿದೆ:

  • ನೀರು ಪೂರೈಕೆಯ ಕ್ರಮಬದ್ಧತೆ ಮತ್ತು ಸಮರ್ಪಕತೆ
  • ಕುಡಿಯುವ ನೀರಿನ ಗುಣಮಟ್ಟ
  • ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ
  • ಮೂಲ ಸುಸ್ಥಿರತೆ
  • ಗ್ರಾಮ ಮಟ್ಟದ ಸಾಂಸ್ಥಿಕ ಮತ್ತು ನಿರ್ವಹಣಾ ವ್ಯವಸ್ಥೆಗಳು

ಮೌಲ್ಯಮಾಪನ ಪ್ರಕ್ರಿಯೆ

ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ (ಡಬ್ಲ್ಯೂ.ಡಬ್ಲ್ಯೂ.ಎಸ್.ಸಿ.) ಸದಸ್ಯರು, ಪಂಚಾಯಿತಿ ಕಾರ್ಯದರ್ಶಿ, ವ್ಯವಸ್ಥೆ ನಿರ್ವಾಹಕರು ಮತ್ತು ಮಹಿಳೆಯರು ಮತ್ತು ದುರ್ಬಲ ಗುಂಪುಗಳು ಸೇರಿದಂತೆ ನೀರಿನ ಬಳಕೆದಾರರ ಪ್ರತಿನಿಧಿ ವಿಭಾಗವನ್ನು ಒಳಗೊಂಡ ರಚನಾತ್ಮಕ ಚರ್ಚೆಗಳೊಂದಿಗೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ನಂತರ ಸಂಶೋಧನೆಗಳನ್ನು ಮುಕ್ತ ಚರ್ಚೆ ಮತ್ತು ಅನುಮೋದನೆಗಾಗಿ ಗ್ರಾಮ ಸಭೆಯ ಮುಂದೆ ಇಡಲಾಗುತ್ತದೆ.

ಗ್ರಾಮ ಸಭೆಯ ನಿರ್ಣಯದ ಮೂಲಕ ಅನುಮೋದನೆ ಪಡೆದ ನಂತರ, ಮೌಲ್ಯಮಾಪನವನ್ನು ಜೆಜೆಎಂ ಪಂಚಾಯತ್ ಡ್ಯಾಶ್ ಬೋರ್ಡ್ ನಲ್ಲಿ ಡಿಜಿಟಲ್ ಆಗಿ ಅಪ್ಲೋಡ್ ಮಾಡಲಾಗುತ್ತದೆ ಮತ್ತು ಅಂತಿಮಗೊಳಿಸುವ ಮೊದಲು 30 ದಿನಗಳ ನಾಗರಿಕ ಪ್ರತಿಕ್ರಿಯೆ ವಿಂಡೋದೊಂದಿಗೆ ಇ-ಗ್ರಾಮ್ ಸ್ವರಾಜ್ ಮತ್ತು ಮೇರಿ ಪಂಚಾಯಿತಿ ಅಪ್ಲಿಕೇಶನ್ ನಂತಹ ವೇದಿಕೆಗಳ ಮೂಲಕ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುತ್ತದೆ. ಅಗತ್ಯವಿರುವ ಕಡೆಗಳಲ್ಲಿ ಸರಿಪಡಿಸುವ ಕ್ರಮ ಮತ್ತು ಸಮಸ್ಯೆಗಳ ಪರಿಹಾರವನ್ನು ಸಕ್ರಿಯಗೊಳಿಸಲು ಸಂಶೋಧನೆಗಳು ಜಿಲ್ಲಾಧಿಕಾರಿಗಳು/ಸಿಇಒ ಜಿಲ್ಲಾ ಪಂಚಾಯಿತಿಗಳು ಮತ್ತು ರಾಜ್ಯ ಮಟ್ಟದ ಅಧಿಕಾರಿಗಳಿಗೆ ಲಭ್ಯವಿರುತ್ತವೆ.

ನಿರೀಕ್ಷಿತ ಫಲಿತಾಂಶಗಳು

“ಜಲ ಸೇವಾ ಆಂಕಲನ್” ಇವುಗಳನ್ನು ನಿರೀಕ್ಷಿಸಲಾಗಿದೆ:

  • ಗ್ರಾಮ ಸಭೆಯ ಚರ್ಚೆಗಳಲ್ಲಿ ಕುಡಿಯುವ ನೀರಿನ ಸೇವಾ ಮೌಲ್ಯಮಾಪನವನ್ನು ಆಧಾರವಾಗಿಟ್ಟುಕೊಳ್ಳುವುದು
  • ಕಾರ್ಯಾಚರಣೆ, ಗುಣಮಟ್ಟ ಮತ್ತು ಸುಸ್ಥಿರತೆಯ ಸವಾಲುಗಳ ಆರಂಭಿಕ ಗುರುತಿಸುವಿಕೆಯನ್ನು ಸಕ್ರಿಯಗೊಳಿಸುವುದು
  • ಸೇವಾ ಕಾರ್ಯಕ್ಷಮತೆಯ ಸಾರ್ವಜನಿಕ ಬಹಿರಂಗಪಡಿಸುವಿಕೆಯ ಮೂಲಕ ಪಾರದರ್ಶಕತೆಯನ್ನು ಸುಧಾರಿಸುವುದು
  • ಪುರಾವೆ ಆಧಾರಿತ ಜಿಲ್ಲಾ ಮತ್ತು ರಾಜ್ಯ ಮಟ್ಟದ ಯೋಜನೆಯನ್ನು ಬೆಂಬಲಿಸುವುದು
  • ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳ ಸಮುದಾಯ ಉಸ್ತುವಾರಿಯನ್ನು ಬಲಪಡಿಸುವುದು

ಎಲ್ಲಾ ಹರ್ ಘರ್ ಜಲ ಗ್ರಾಮ ಪಂಚಾಯತ್ ಗಳು ಜನವರಿ 26, 2026 ರೊಳಗೆ “ಜಲ ಸೇವಾ ಆಂಕಲನ್” ಅನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ, ಇದು ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳು ಸಂಪೂರ್ಣವಾಗಿ ಸಮುದಾಯಕ್ಕೆ ಸೇರಿವೆ ಮತ್ತು ಸಮುದಾಯವೇ ಸಂಪೂರ್ಣವಾಗಿ ನಿರ್ವಹಿಸಬೇಕು ಎಂಬ ತತ್ವವನ್ನು ಬಲಪಡಿಸುತ್ತದೆ.

 

*****


(रिलीज़ आईडी: 2209973) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati , Malayalam