ಪ್ರಧಾನ ಮಂತ್ರಿಯವರ ಕಛೇರಿ
ಪವಿತ್ರ ಪ್ರಕಾಶ್ ಉತ್ಸವದಂದು ಶ್ರೀ ಗುರು ಗೋವಿಂದ ಸಿಂಗ್ ಅವರಿಗೆ ಪ್ರಧಾನಮಂತ್ರಿ ಗೌರವ ನಮನ
प्रविष्टि तिथि:
27 DEC 2025 10:44AM by PIB Bengaluru
ಇಂದು ಪವಿತ್ರ ಪ್ರಕಾಶ್ ಉತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ಗೋವಿಂದ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದರು. ಗುರು ಗೋವಿಂದ ಸಿಂಗ್ ಅವರು ಧೈರ್ಯ, ಕರುಣೆ ಮತ್ತು ತ್ಯಾಗದ ಸಾಕಾರರೂಪವಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಶ್ರೀ ಗುರು ಗೋವಿಂದ ಸಿಂಗ್ ಅವರ ಜೀವನ ಮತ್ತು ಬೋಧನೆಗಳು ಸತ್ಯ, ನ್ಯಾಯ, ಸದಾಚಾರಕ್ಕಾಗಿ ನಿಲ್ಲಲು ಮತ್ತು ಮಾನವ ಘನತೆಯನ್ನು ರಕ್ಷಿಸಲು ನಮಗೆ ಸ್ಫೂರ್ತಿ ನೀಡುತ್ತವೆ. ಶ್ರೀ ಗುರು ಗೋವಿಂದ ಸಿಂಗ್ ಅವರ ದೃಷ್ಟಿಕೋನವು ಪೀಳಿಗೆಗೆ ಸೇವೆ ಮತ್ತು ನಿಸ್ವಾರ್ಥ ಕರ್ತವ್ಯದ ಕಡೆಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು.
ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಮಂತ್ರಿಗಳು ಹೀಗೆ ಬರೆದುಕೊಂಡಿದ್ದಾರೆ:
"ಶ್ರೀ ಗುರು ಗೋವಿಂದ ಸಿಂಗ್ ಅವರ ಪವಿತ್ರ ಪ್ರಕಾಶ್ ಉತ್ಸವದಂದು, ನಾವು ಅವರಿಗೆ ಗೌರವ ಸಲ್ಲಿಸುತ್ತೇವೆ. ಅವರು ಧೈರ್ಯ, ಕರುಣೆ ಮತ್ತು ತ್ಯಾಗದ ಸಾಕಾರವಾಗಿ ಉಳಿದಿದ್ದಾರೆ. ಅವರ ಜೀವನ ಮತ್ತು ಬೋಧನೆಗಳು ಸತ್ಯ, ನ್ಯಾಯ, ಸದಾಚಾರಕ್ಕಾಗಿ ನಿಲ್ಲಲು ಮತ್ತು ಮಾನವ ಘನತೆಯನ್ನು ರಕ್ಷಿಸಲು ನಮಗೆ ಸ್ಫೂರ್ತಿ ನೀಡುತ್ತವೆ. ಶ್ರೀ ಗುರು ಗೋವಿಂದ ಸಿಂಗ್ ಅವರ ದೃಷ್ಟಿಕೋನವು ಪೀಳಿಗೆಗಳನ್ನು ಸೇವೆ ಮತ್ತು ನಿಸ್ವಾರ್ಥ ಕರ್ತವ್ಯದ ಕಡೆಗೆ ಮಾರ್ಗದರ್ಶನ ಮಾಡುತ್ತಲೇ ಇದೆ.
ಈ ವರ್ಷದ ಆರಂಭದಲ್ಲಿ ಪಾಟ್ನಾದಲ್ಲಿರುವ ತಖ್ತ್ ಶ್ರೀ ಹರಿಮಂದಿರ್ ಸಾಹಿಬ್‌ಗೆ ನಾನು ಭೇಟಿ ನೀಡಿದ ಚಿತ್ರಗಳು ಇಲ್ಲಿವೆ, ಅಲ್ಲಿ ನಾನು ಶ್ರೀ ಗುರು ಗೋಬಿಂದ್ ಸಿಂಗ್ ಮತ್ತು ಸಾಹಿಬ್ ಕೌರ್ ಮಾತೆಯವರ ಪವಿತ್ರ ಜೋರ್ ಸಾಹಿಬ್‌ನ ದರ್ಶನ ಪಡೆದಿದ್ದೇನೆ."
"ਸ੍ਰੀ ਗੁਰੂ ਗੋਬਿੰਦ ਸਿੰਘ ਜੀ ਦੇ ਪਵਿੱਤਰ ਪ੍ਰਕਾਸ਼ ਉਤਸਵ 'ਤੇ ਅਸੀਂ ਉਨ੍ਹਾਂ ਨੂੰ ਸ਼ਰਧਾ ਸਹਿਤ ਪ੍ਰਣਾਮ ਕਰਦੇ ਹਾਂ। ਉਹ ਹਿੰਮਤ, ਹਮਦਰਦੀ ਅਤੇ ਕੁਰਬਾਨੀ ਦੇ ਪ੍ਰਤੀਕ ਹਨ।ਉਨ੍ਹਾਂ ਦਾ ਜੀਵਨ ਅਤੇ ਸਿੱਖਿਆਵਾਂ ਸਾਨੂੰ ਸੱਚ, ਨਿਆਂ, ਧਰਮ ਲਈ ਖੜ੍ਹੇ ਹੋਣ ਅਤੇ ਮਨੁੱਖੀ ਮਾਣ-ਸਨਮਾਨ ਦੀ ਰਾਖੀ ਲਈ ਪ੍ਰੇਰਿਤ ਕਰਦੀਆਂ ਹਨ। ਸ੍ਰੀ ਗੁਰੂ ਗੋਬਿੰਦ ਸਿੰਘ ਜੀ ਦਾ ਦ੍ਰਿਸ਼ਟੀਕੋਣ ਪੀੜ੍ਹੀਆਂ ਨੂੰ ਸੇਵਾ ਅਤੇ ਨਿਰਸਵਾਰਥ ਕਰਤੱਵ ਦੇ ਰਾਹ 'ਤੇ ਰਹਿਨੁਮਾਈ ਕਰਦਾ ਰਹਿੰਦਾ ਹੈ।
ਇਸ ਸਾਲ ਦੀ ਸ਼ੁਰੂਆਤ ਵਿੱਚ ਤਖ਼ਤ ਸ੍ਰੀ ਹਰਿਮੰਦਰ ਜੀ ਪਟਨਾ ਸਾਹਿਬ ਦੀ ਮੇਰੀ ਯਾਤਰਾ ਦੀਆਂ ਇੱਥੇ ਤਸਵੀਰਾਂ ਹਨ, ਜਿੱਥੇ ਮੈਨੂੰ ਸ੍ਰੀ ਗੁਰੂ ਗੋਬਿੰਦ ਸਿੰਘ ਜੀ ਅਤੇ ਮਾਤਾ ਸਾਹਿਬ ਕੌਰ ਜੀ ਦੇ ਪਵਿੱਤਰ ਜੋੜਾ ਸਾਹਿਬ ਦੇ ਦਰਸ਼ਨ ਵੀ ਹੋਏ ਸਨ।"
*****
(रिलीज़ आईडी: 2209120)
आगंतुक पटल : 21
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam