ಆಯುಷ್
ವರ್ಷಾಂತ್ಯದ ಪರಾಮರ್ಶೆ 2025
ಪುರಾವೆ-ಆಧರಿತ ಪ್ರಗತಿ, ಜಾಗತಿಕ ಸಾರಥ್ಯ ಮತ್ತು ಜನ ಕೇಂದ್ರಿತ ಆರೋಗ್ಯ ರಕ್ಷಣೆಯ ಪರಿವರ್ತಕ ವರ್ಷಕ್ಕೆ ಸಾಕ್ಷಿಯಾದ ಆಯುಷ್ ಸಚಿವಾಲಯ
ಪ್ರಕಟಣಾ ದಿನಾಂಕ:
26 DEC 2025 10:34AM by PIB Bengaluru
2025ನೇ ಸಾಲಿನ ವರ್ಷವು ಇನ್ನೇನು ಅಂತ್ಯಗೊಳ್ಳುತ್ತಿದೆ. ಈ ಹೊತ್ತಿನಲ್ಲಿ, ಆಯುಷ್ ಸಚಿವಾಲಯವು ಈ ವರ್ಷವನ್ನು ಪುರಾವೆ-ಆಧರಿತ ಪ್ರಗತಿ, ಜನ-ಕೇಂದ್ರಿತ ಹಾಗೂ ಜಾಗತಿಕವಾಗಿ ಸಂಯೋಜಿತವಾದ ಸಾಂಪ್ರದಾಯಿಕ ಆರೋಗ್ಯ ರಕ್ಷಣೆಯತ್ತ ಭಾರತದ ಪ್ರಯಾಣದಲ್ಲಿ ಒಂದು ಪರ್ವಕಾಲವೆಂದು ಗುರುತಿಸುತ್ತದೆ. ಮಹತ್ವಾಕಾಂಕ್ಷೆಯ ನೀತಿ ಉಪಕ್ರಮಗಳು ಮತ್ತು ವಿಶ್ವದರ್ಜೆಯ ಮೂಲಸೌಕರ್ಯ ವಿಸ್ತರಣೆಯಿಂದ ಹಿಡಿದು ಐತಿಹಾಸಿಕ ಜಾಗತಿಕ ಸಹಯೋಗಗಳು ಮತ್ತು ಸಾಮೂಹಿಕ ಸಾರ್ವಜನಿಕ ಆರೋಗ್ಯ ವ್ಯಾಪ್ತಿ ಹೆಚ್ಚಳದವರೆಗೆ, ಆಯುಷ್ ವ್ಯವಸ್ಥೆಗಳು ಮೂಲೆಗಂಪಿನ ಸ್ಥಿತಿಯಿಂದ ಮುಖ್ಯವಾಹಿನಿಗೆ ಸಾಗುತ್ತಿರುವ ನಿರ್ಣಾಯಕ ಘಟ್ಟಕ್ಕೆ ಈ ವರ್ಷವು ಸಾಕ್ಷಿಯಾಯಿತು. 'ವಿಕಸಿತ ಭಾರತ@2047’ ಆಶಯಕ್ಕೆ ಅನುಗುಣವಾಗಿ, ಸಚಿವಾಲಯವು ಸಾಂಪ್ರದಾಯಿಕ ಔಷಧದಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸಿದೆ. ಸಂಶೋಧನೆ, ನಿಯಂತ್ರಣ, ಡಿಜಿಟಲ್ ಏಕೀಕರಣ ಮತ್ತು ಅಂತರರಾಷ್ಟ್ರೀಯ ವಿಶ್ವಾಸಾರ್ಹತೆಯನ್ನು ಬಲಪಡಿಸಿದೆ. ಸಮಗ್ರ ಆರೋಗ್ಯ ರಕ್ಷಣೆಯ ಪ್ರಯೋಜನಗಳು ದೇಶಾದ್ಯಂತ ಮತ್ತು ಅದರಾಚೆಗೆ ಲಕ್ಷಾಂತರ ಜನರನ್ನು ತಲುಪುವುದನ್ನು ಖಚಿತಪಡಿಸಿದೆ.
ದೆಹಲಿಯಲ್ಲಿ 'ಸಿಎಆರ್‌ಐ'ನ ಅತ್ಯಾಧುನಿಕ ಆಯುರ್ವೇದ ಸಂಶೋಧನಾ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ರೋಹಿಣಿಯಲ್ಲಿ ಹೊಸ 'ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆʼಯ(ಸಿಎಆರ್‌ಐ) ಕಟ್ಟಡಕ್ಕೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಒಟ್ಟು 187 ಕೋಟಿ ರೂ.ಗಳ ವೆಚ್ಚದೊಂದಿಗೆ 2.92 ಎಕರೆ ವಿಸ್ತೀರ್ಣದಲ್ಲಿ ಇಲ್ಲಿ ತಲೆ ಎತ್ತಲಿರುವ ಅತ್ಯಾಧುನಿಕ ಕ್ಯಾಂಪಸ್ 100 ಹಾಸಿಗೆಗಳ ಸಂಶೋಧನಾ ಆಸ್ಪತ್ರೆ, ವಿಶೇಷ ಚಿಕಿತ್ಸಾಲಯಗಳು, ಸುಧಾರಿತ ಪ್ರಯೋಗಾಲಯಗಳು ಮತ್ತು ತರಬೇತಿ ಸೌಲಭ್ಯಗಳನ್ನು ಹೊಂದಿರುತ್ತದೆ. ಇದು ಬಾಡಿಗೆ ಕಟ್ಟಡದಲ್ಲಿ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆ ಕ್ರಾಂತಿಕಾರಿ ವಿಸ್ತರಣೆಯನ್ನು ಸೂಚಿಸುತ್ತದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು ಸಾಂಪ್ರದಾಯಿಕ ಔಷಧದಲ್ಲಿ ಹೆಚ್ಚುತ್ತಿರುವ ಭಾರತದ ಜಾಗತಿಕ ನಾಯಕತ್ವ, ʻಆಯುಷ್ ವೀಸಾʼ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ವಿಶ್ವದ ಆರೋಗ್ಯ ಮತ್ತು ಯೋಗಕ್ಷೇಮ ಕ್ಷೇತ್ರದ ರಾಜಧಾನಿಯಾಗುವ ಭಾರತದ ಸಾಮರ್ಥ್ಯವನ್ನು ಎತ್ತಿ ತೋರಿದರು. ಕೇಂದ್ರ ಆಯುಷ್ ಸಚಿವ ಶ್ರೀ ಪ್ರತಾಪರಾವ್ ಜಾಧವ್, ಸಂಸದ ಶ್ರೀ ಯೋಗೇಂದರ್ ಚಂದೋಲಿಯಾ, ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಮತ್ತು ʻಸಿಸಿಆರ್‌ಎಎಸ್ʼ ಅಧಿಕಾರಿಗಳು ಸಂಶೋಧನೆ, ರೋಗಿಗಳ ಆರೈಕೆ ಮತ್ತು ಲಭ್ಯತೆಯ ಮೇಲೆ ಯೋಜನೆಯ ದೀರ್ಘಕಾಲೀನ ಪರಿಣಾಮವನ್ನು ಒತ್ತಿಹೇಳಿದರು. ಆಧುನಿಕ ರೋಗನಿರ್ಣಯದ ಜೊತೆಗೆ ಪಂಚಕರ್ಮ, ಕ್ಷರ ಸೂತ್ರ ಮತ್ತು ಜಲೌಕವಚರಣದಂತಹ ಚಿಕಿತ್ಸೆಗಳನ್ನು ಬೆಂಬಲಿಸುವ ಆಧುನಿಕ ಮೂಲಸೌಕರ್ಯಗಳೊಂದಿಗೆ ಆಯುರ್ವೇದ ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಏರಿಸಲು ಹೊಸ ʻಸಿಎಆರ್‌ಐʼ ಕ್ಯಾಂಪಸ್ ಸಜ್ಜಾಗಿದೆ.
https://www.pib.gov.in/PressReleasePage.aspx?PRID=2090365
ಅಂತಾರಾಷ್ಟ್ರೀಯ ಯುನಾನಿ ಸಮ್ಮೇಳನವನ್ನು ಉದ್ಘಾಟಿಸಿದ ಭಾರತದ ರಾಷ್ಟ್ರಪತಿಗಳು, ಜಾಗತಿಕ ಮನ್ನಣೆಗೆ ನಾವೀನ್ಯತೆ ಮುಖ್ಯವೆಂದು ಎಂದು ಬಣ್ಣಿಸಿದರು
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ʻಯುನಾನಿ ದಿನʼದಂದು ಯುನಾನಿ ʻಔಷಧದ ಕೇಂದ್ರೀಯ ಸಂಶೋಧನಾ ಮಂಡಳಿʼ(ಸಿಸಿಆರ್‌ಯುಎಂ) ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು. ಈ ವೇಳೆ ಹಕೀಮ್ ಅಜ್ಮಲ್ ಖಾನ್ ಅವರಿಗೆ ಗೌರವ ಸಲ್ಲಿಸಿದರು ಮತ್ತು ಸಾರ್ವಜನಿಕ ಆರೋಗ್ಯಕ್ಕೆ ʻಸಿಸಿಆರ್‌ಯುಎಂʼ ಕೊಡುಗೆಗಳನ್ನು ಶ್ಲಾಘಿಸಿದರು. ʻವಿಜ್ಞಾನ ಭವನʼದಲ್ಲಿ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಶತಮಾನಗಳಷ್ಟು ಪುರಾತನ ಜ್ಞಾನದಲ್ಲಿ ಬೇರೂರಿರುವ ʻಯುನಾನಿʼ ವೈದ್ಯಕೀಯ ಪದ್ಧತಿಯು ತನ್ನ ಜಾಗತಿಕ ಸ್ವೀಕಾರಾರ್ಹತೆಯನ್ನು ವಿಸ್ತರಿಸಲು ನಾವೀನ್ಯತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು. ಭಾರತವು ಯುನಾನಿ ಶಿಕ್ಷಣ, ಸಂಶೋಧನೆ ಮತ್ತು ಆರೋಗ್ಯ ಸಂಸ್ಥೆಗಳ ವಿಶ್ವದ ಅತಿದೊಡ್ಡ ಜಾಲವನ್ನು ಹೊಂದಿದೆ ಎಂದು ಹೇಳಿದರು. "ಸಮಗ್ರ ಆರೋಗ್ಯ ಪರಿಹಾರಗಳಿಗಾಗಿ ಯುನಾನಿ ಔಷಧದಲ್ಲಿನ ನಾವೀನ್ಯತೆಗಳು - ಮುಂದಿನ ಹಾದಿ" ಎಂಬ ಸಮ್ಮೇಳನದ ವಿಷಯದ ಪ್ರಸ್ತುತತೆಯನ್ನು ಒತ್ತಿ ಹೇಳಿದ ತೋರಿಸಿದ ಅವರು, ʻಯುನಾನಿʼಯನ್ನು ಮುಖ್ಯವಾಹಿನಿಯ ಆರೋಗ್ಯ ವ್ಯವಸ್ಥೆಯಲ್ಲಿ ಸಂಯೋಜಿಸುವಲ್ಲಿ ಸಂಶೋಧನೆ, ಸಹಯೋಗ ಮತ್ತು ಜ್ಞಾನ ವಿನಿಮಯದ ಮಹತ್ವವನ್ನು ಒತ್ತಿಹೇಳಿದರು. ಡಾ. ಜಿತೇಂದ್ರ ಸಿಂಗ್ ಅವರು ವ್ಯವಸ್ಥೆಯನ್ನು ಆಧುನೀಕರಿಸುವಲ್ಲಿ ಆಣ್ವಿಕ ಜೀವಶಾಸ್ತ್ರ, ಕೃತಕ ಬುದ್ಧಿಮತ್ತೆ ಮತ್ತು ಸುಧಾರಿತ ಸಂಶೋಧನೆಯ ಪಾತ್ರವನ್ನು ಒತ್ತಿ ಹೇಳಿದರು. ಕೇಂದ್ರ ಆಯುಷ್ ಸಚಿವ ಶ್ರೀ ಪ್ರತಾಪರಾವ್ ಜಾಧವ್ ಅವರು ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಆಧುನಿಕ ವಿಜ್ಞಾನ ಹಾಗೂ ಸಾಂಪ್ರದಾಯಿಕ ಜ್ಞಾನವನ್ನು ಬೆರೆಸುವ ಅಗತ್ಯವನ್ನು ಪುನರುಚ್ಚರಿಸಿದರು. ಈ ಕಾರ್ಯಕ್ರಮದಲ್ಲಿ ಆಯುಷ್ ಕ್ಷೇತ್ರದ ಪ್ರಮುಖರು, ʻಸಿಸಿಆರ್‌ಯುಎಂʼ ಅಧಿಕಾರಿಗಳು ಮತ್ತು ಒಂಬತ್ತು ದೇಶಗಳ ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಿದ್ದರು.
https://www.pib.gov.in/PressReleasePage.aspx?PRID=2101944
ಮಹಾ ಕುಂಭದಲ್ಲಿ ಮಿಂಚಿದ ಆಯುಷ್ ಸೇವೆಗಳು
ಪ್ರಯಾಗ್ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ʻಆಯುಷ್ʼ ಅತ್ಯಂತ ವಿಶ್ವಾಸಾರ್ಹ ಮತ್ತು ವ್ಯಾಪಕವಾಗಿ ಪ್ರವೇಶಿಸಬಹುದಾದ ಆರೋಗ್ಯ ಆಧಾರಸ್ತಂಭಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 9 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ʻಒಪಿಡಿʼಗಳು, ಸಂಚಾರಿ ಆರೋಗ್ಯ ಘಟಕಗಳು, ಯೋಗಕ್ಷೇಮ ಸಭಾಂಗಣಗಳು ಮತ್ತು ಯೋಗ ಅಧಿವೇಶನಗಳ ಮೂಲಕ ಅದರ ಸೇವೆಗಳಿಂದ ಪ್ರಯೋಜನ ಪಡೆದಿದ್ದಾರೆ. ಈ ಹಿಂದಿನ 1.21 ಲಕ್ಷ ಫಲಾನುಭವಿಗಳ ಮೈಲುಗಲ್ಲನ್ನು ಮೀರಿ, ʻಆಯುಷ್ʼ ತನ್ನ ಅಸ್ತಿತ್ವವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಮೇಳದ ಮೈದಾನದಾದ್ಯಂತ 20 ಹೊರರೋಗಿ ವಿಭಾಗಗಳು, 90ಕ್ಕೂ ಹೆಚ್ಚು ವೈದ್ಯರು, 150 ಆರೋಗ್ಯ ಕಾರ್ಯಕರ್ತರು ಮತ್ತು ವಿಶೇಷ ಮೊಬೈಲ್ ಘಟಕಗಳನ್ನು ನಿಯೋಜಿಸಲಾಗಿತ್ತು. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ(ಎಂಡಿಎನ್‌ಐವೈ) ವತಿಯಿಂದ ಚಿಕಿತ್ಸಕ ಯೋಗ ಅಧಿವೇಶನಗಳು ಅಂತರರಾಷ್ಟ್ರೀಯ ಮತ್ತು ದೇಶೀಯ ಭಕ್ತರನ್ನು ಆಕರ್ಷಿಸಿದವು. ಮತ್ತೊಂದೆಡೆ ಸೆಕ್ಟರ್ 2, 21 ಮತ್ತು 24 ರಲ್ಲಿನ ʻಆಯುಷ್ ಸಭಾಂಗಣʼಗಲ್ಲಿ ಆರೋಗ್ಯ ಮತ್ತು ರೋಗ ನಿರ್ವಹಣೆಯ ಬಗ್ಗೆ ಯಾತ್ರಾರ್ಥಿಗಳಿಗೆ ಶಿಕ್ಷಣ ಒದಗಿಸಲಾಯಿತು. ಪ್ರಮುಖ ʻಅಖಾರʼಗಳ ಸಂತರಿಗೆ ವಿಶೇಷ ತಪಾಸಣೆಗಳನ್ನು ನಡೆಸಲಾಯಿತು, ಆ ಮೂಲಕ ಬೃಹತ್ ಕಾರ್ಯಕ್ರಮದ ವೇಳೆ ಅವರ ಯೋಗಕ್ಷೇಮವನ್ನು ಖಾತ್ರಿಪಡಿಸಲಾಯಿತು. ʻಅಖಿಲ ಭಾರತ ಆಯುರ್ವೇದ ಸಂಸ್ಥೆʼಯು 10,000 ʻಆಯುಷ್ ರಕ್ಷಾ ಕಿಟ್ʼಗಳನ್ನು ವಿತರಿಸುವ ಮೂಲಕ ಹಾಗೂ 15,000 ಯಾತ್ರಾರ್ಥಿಗಳಿಗೆ ಒಂದು ವಾರದ ಆರೋಗ್ಯ ಶಿಬಿರವನ್ನು ಆಯೋಜಿಸುವ ಮೂಲಕ ರೋಗ ತಡೆ ಆರೈಕೆ ಪರಿಸರ ವ್ಯವಸ್ಥೆಯನ್ನು ಬಲಪಡಿಸಿತು. ʻರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿʼಯು 25,000 ಔಷಧೀಯ ಸಸ್ಯಗಳನ್ನು ವಿತರಿಸಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಪರಿಸರ ಮತ್ತು ಜೀವನೋಪಾಯದ ಆಯಾಮವನ್ನು ಸೇರಿಸಿತು. ನೈಸರ್ಗಿಕ ಗುಣಪಡಿಸುವಿಕೆ ಮತ್ತು ಔಷಧೀಯ ಸಸ್ಯಗಳ ಕೃಷಿಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. ಒಟ್ಟಾರೆಯಾಗಿ, ಈ ಪ್ರಯತ್ನಗಳು - ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕೂಟವನ್ನು ಅರ್ಥಪೂರ್ಣ ಮಾತ್ರವಲ್ಲದೆ ಆರೋಗ್ಯಕರ, ಸುರಕ್ಷಿತ ಮತ್ತು ಭಾರತದ ಸಾಂಪ್ರದಾಯಿಕ ಸ್ವಾಸ್ಥ್ಯ ಪರಂಪರೆಯೊಂದಿಗೆ ಹೆಚ್ಚು ಸಂಪರ್ಕ ಹೊಂದಿರುವಂತೆ ಮಾಡಬೇಕೆಂಬ ಆಯುಷ್ ಸಚಿವಾಲಯದ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸಿದವು.
https://www.pib.gov.in/PressReleasePage.aspx?PRID=2101469
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇಂಡೋನೇಷ್ಯಾ ಅಧ್ಯಕ್ಷರಾದ ಪ್ರಬೋವೊ ಸುಬಿಯಾಂಟೊ ಅವರು ನವದೆಹಲಿಯ ʻಹೈದ್ರಾಬಾದ್ ಹೌಸ್ʼನಲ್ಲಿ ಒಪ್ಪಂದಗಳ ವಿನಿಮಯಕ್ಕೆ ಸಾಕ್ಷಿಯಾದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇಂಡೋನೇಷ್ಯಾದ ಅಧ್ಯಕ್ಷ ಶ್ರೀ ಪ್ರಬೋವೊ ಸುಬಿಯಾಂಟೊ ಅವರು 2025ರ ಜನವರಿ 25ರಂದು ಆಯುಷ್ ಸಚಿವಾಲಯದ ʻಪಿಸಿಐಎಂಎಚ್ʼ ಮತ್ತು ಇಂಡೋನೇಷ್ಯಾದ ʻಆಹಾರ ಮತ್ತು ಔಷಧ ಪ್ರಾಧಿಕಾರʼದ ನಡುವೆ ಸಾಂಪ್ರದಾಯಿಕ ಔಷಧ ಗುಣಮಟ್ಟ ಭರವಸೆ ಕುರಿತ ಒಪ್ಪಂದದ ವಿನಿಮಯಕ್ಕೆ ಸಾಕ್ಷಿಯಾದರು. ಆ ಮೂಲಕ ಭಾರತ ಮತ್ತು ಇಂಡೋನೇಷ್ಯಾ ಸಾಂಪ್ರದಾಯಿಕ ವೈದ್ಯಕೀಯ ಸಹಯೋಗದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದವು. ಸಾಂಪ್ರದಾಯಿಕ ಔಷಧಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಗುಣಮಟ್ಟವನ್ನು ಖಾತ್ರಿಪಡಿಸುವ ಮೂಲಕ ಈ ಪಾಲುದಾರಿಕೆಯು ಜಾಗತಿಕ ಮಾನದಂಡಗಳನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಸಚಿವ ಶ್ರೀ ಪ್ರತಾಪರಾವ್ ಜಾಧವ್ ಹೇಳಿದರು. ಏತನ್ಮಧ್ಯೆ, ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಅವರು ಈ ಸಹಯೋಗವು ಜ್ಞಾನ ವಿನಿಮಯ, ಸಾಮರ್ಥ್ಯ ವರ್ಧನೆ ಮತ್ತು ನಿಯಂತ್ರಕ ಸಹಕಾರವನ್ನು ಬಲಪಡಿಸುತ್ತದೆ ಎಂದು ಒತ್ತಿ ಹೇಳಿದರು. ಈ ಒಪ್ಪಂದವು ತಾಂತ್ರಿಕ ಜ್ಞಾನ ವಿನಿಮಯ, ತರಬೇತಿ ಕಾರ್ಯಕ್ರಮಗಳು, ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಹಾಗೂ ಪರಸ್ಪರ ಒಪ್ಪಿದ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವುದು ಸೇರಿದಂತೆ ಜಂಟಿ ಉಪಕ್ರಮಗಳನ್ನು ವಿವರಿಸುತ್ತದೆ. ಆಧುನಿಕ, ಪುರಾವೆ ಆಧಾರಿತ ನೀತಿಗಳಡಿಯಲ್ಲಿ ಸಾಂಪ್ರದಾಯಿಕ ವೈದ್ಯವನ್ನು ಮುನ್ನಡೆಸುವ ಸಮಾನ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ. ಜೊತೆಗೆ ಭಾರತ-ಇಂಡೋನೇಷ್ಯಾ ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸುತ್ತದೆ.
https://www.pib.gov.in/PressReleasePage.aspx?PRID=2102672
ವಿಶ್ವ ಆರೋಗ್ಯ ಸಂಸ್ಥೆಯಿಂದ ʻ2025 ಐಸಿಡಿ-11ʼ ನವೀಕರಣವು ಆಯುರ್ವೇದ, ಸಿದ್ಧ ಮತ್ತು ಯುನಾನಿಯ ಜಾಗತಿಕ ಪುರಾವೆ ಆಧಾರಿತ ವರದಿಗೆ ಉತ್ತೇಜನ ನೀಡಿದೆ
ವಿಶ್ವ ಆರೋಗ್ಯ ಸಂಸ್ಥೆಯು ʻಐಸಿಡಿ -11ʼಕ್ಕೆ 2025ನೇ ಸಾಲಿನಲ್ಲಿ ಮಾಡಿದ ನವೀಕರಣವು ಆಯುರ್ವೇದ, ಸಿದ್ಧ ಮತ್ತು ಯುನಾನಿಗಾಗಿ ವಿಶೇಷ ಮಾಡ್ಯೂಲ್ ಅನ್ನು ಅಧಿಕೃತವಾಗಿ ಪರಿಚಯಿಸಿದೆ. ಆ ಮೂಲಕ ಸಾಂಪ್ರದಾಯಿಕ ಔಷಧಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಹೆಜ್ಜೆಯನ್ನು ಇದು ಸೂಚಿಸುತ್ತದೆ. ಇದು ಸಾಂಪ್ರದಾಯಿಕ ವೈದ್ಯಕೀಯ ಪರಿಸ್ಥಿತಿಗಳ ಜೊತೆಗೆ ಅವುಗಳ ವ್ಯವಸ್ಥಿತ ಜಾಗತಿಕ ವರದಿಯನ್ನು ಸಕ್ರಿಯಗೊಳಿಸುತ್ತದೆ. ನವದೆಹಲಿಯಲ್ಲಿ ʻಐಸಿಡಿ-11 ಟಿಎಂ-2ʼ ಅನ್ನು ಪ್ರಾರಂಭಿಸಿ, ಒಂದು ವರ್ಷದ ವ್ಯಾಪಕ ಪರೀಕ್ಷೆಯ ನಂತರ, ಹೊಸ ಮಾಡ್ಯೂಲ್ ಪರಿಚಯಿಸಲಾಗಿದೆ. ಈಗ ಇದು ʻಡಬ್ಲ್ಯುಎಚ್ಒ ಬ್ಲೂ ಬ್ರೌಸರ್ʼನಲ್ಲಿ ಲೈವ್ ಆಗಿ ಲಭ್ಯವಿದೆ. ಇದು ʻಡ್ಯುಯಲ್ ಕೋಡಿಂಗ್ʼ ಅನ್ನು ಸಕ್ರಿಯಗೊಳಿಸುಇವ ಮೂಲಕ ದತ್ತಾಂಶ ಸಂಗ್ರಹಣೆಯನ್ನು ಹೆಚ್ಚಿಸುತ್ತದೆ, ಪರಸ್ಪರ ಕಾರ್ಯಸಾಧ್ಯತೆಯನ್ನು ಸುಧಾರಿಸುತ್ತದೆ ಮತ್ತು ಪುರಾವೆ ಆಧಾರಿತ ನೀತಿ ನಿರೂಪಣೆಯನ್ನು ಬಲಪಡಿಸುತ್ತದೆ. ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಅವರು ಈ ನವೀಕರಣವನ್ನು ಜಾಗತಿಕ ಏಕೀಕರಣ ಮತ್ತು ಸಾಂಪ್ರದಾಯಿಕ ಔಷಧದ ಮಾನ್ಯತೆಯತ್ತ ಪ್ರಮುಖ ಹೆಜ್ಜೆ ಎಂದು ಸ್ವಾಗತಿಸಿದರು. ಇದೇವೇಳೆ, ವಿಶ್ವ ಆರೋಗ್ಯ ಸಂಸ್ಥೆ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳಿಗೆ ಪ್ರಯೋಜನಗಳನ್ನು ಒತ್ತಿಹೇಳಿತು. ಈ ಬೆಳವಣಿಗೆಯು ವಿಶ್ವಾದ್ಯಂತ ಸಾಂಪ್ರದಾಯಿಕ ಔಷಧದ ಗೋಚರತೆ, ವಿಶ್ವಾಸಾರ್ಹತೆ ಮತ್ತು ಕ್ಲಿನಿಕಲ್ ಪ್ರಸ್ತುತತೆಯನ್ನು ಹೆಚ್ಚಿಸುತ್ತದೆ. ಆಧುನಿಕ ಆರೋಗ್ಯ ನೀತಿಗಳಲ್ಲಿ ಸಮಗ್ರ ಮತ್ತು ಪುರಾವೆ ಆಧಾರಿತ ಅಭ್ಯಾಸಗಳನ್ನು ಸಂಯೋಜಿಸಲು ದೇಶಗಳಿಗೆ ಅನುವು ಮಾಡಿಕೊಡುತ್ತದೆ.
https://www.pib.gov.in/PressReleasePage.aspx?PRID=2104767
'ದೇಶ್ ಕಾ ಪ್ರಕೃತಿ ಪರೀಕ್ಷಾನ್ ಅಭಿಯಾನ'ದ ಮೊದಲ ಹಂತ ಮುಕ್ತಾಯವಾಗಿದ್ದು, ಭಾರತವು ಐದು ʻಗಿನ್ನಿಸ್ ವಿಶ್ವ ದಾಖಲೆʼಗಳನ್ನು ಸಾಧಿಸಿದೆ
'ದೇಶ್ ಕಾ ಪ್ರಕೃತಿ ಪರೀಕ್ಷಾನ್ ಅಭಿಯಾನ'ದ ಮೊದಲ ಹಂತವು, ಐದು ಗಿನ್ನೆಸ್ ವಿಶ್ವ ದಾಖಲೆಗಳ ಹೆಗ್ಗುರುತಿನ ಸಾಧನೆಯೊಂದಿಗೆ ಮುಕ್ತಾಯಗೊಂಡಿತು. ಇದು ಸಮಗ್ರ ಮತ್ತು ವೈಯಕ್ತಿಕಗೊಳಿಸಿದ ಆರೋಗ್ಯ ರಕ್ಷಣೆಯಲ್ಲಿ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. ಆಯುಷ್ ಸಚಿವಾಲಯದ ಬೆಂಬಲದೊಂದಿಗೆ ʻಎನ್‌ಸಿಐಎಸ್ಎಂʼ ನೇತೃತ್ವದಲ್ಲಿ ನಡೆದ ಈ ಅಭಿಯಾನವು 1.29 ಕೋಟಿಗೂ ಹೆಚ್ಚು ಪ್ರಕೃತಿ ಮೌಲ್ಯಮಾಪನಗಳನ್ನು ದಾಖಲಿಸಿದೆ. ಇದು ಅಭಿಯಾನದ ಗುರಿಯಾಗಿದ್ದ 1 ಕೋಟಿಗಿಂತಲೂ ಹೆಚ್ಚು. ಜೊತೆಗೆ ಆರೋಗ್ಯ ಉಪಕ್ರಮಕ್ಕೆ ಸಂಬಂಧಿಸಿದ ಅತಿದೊಡ್ಡ ಆನ್‌ಲೈನ್ ಫೋಟೋ ಮತ್ತು ವೀಡಿಯೊ ಆಲ್‌ಬಂಗಳಿಗಾಗಿ ಹಾಗೂ ಅತ್ಯಧಿಕ ಸಂಖ್ಯೆ ಪ್ರತಿಜ್ಞೆಗಳಿಗಾಗಿ ಎರಡು ಜಾಗತಿಕ ದಾಖಲೆಗಳನ್ನು ನಿರ್ಮಿಸಲಾಯಿತು. ಕೇಂದ್ರ ಸಚಿವ ಶ್ರೀ ಪ್ರತಾಪರಾವ್ ಜಾಧವ್ ಹಾಗೂ ಮಹಾರಾಷ್ಟ್ರ ಆರೋಗ್ಯ ಸಚಿವ ಶ್ರೀ ಪ್ರಕಾಶ್ ಅಬಿಟ್ಕರ್ ಮತ್ತು ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಸೇರಿದಂತೆ ನಾಯಕರಿಗೆ ಅವರಿಗೆ ಔಪಚಾರಿಕವಾಗಿ ಪ್ರಮಾಣಪತ್ರಗಳನ್ನು ನೀಡಲಾಯಿತು. ಈ ವೇಳೆ ನಾಯಕರು ಕೊಟೆಚಾ ರಾಷ್ಟ್ರವ್ಯಾಪಿ ಪ್ರಯತ್ನವನ್ನು ಶ್ಲಾಘಿಸಿದರು. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಸ್ವಂತ ಮೌಲ್ಯಮಾಪನದಿಂದ ಪ್ರೇರಿತವಾಗಿ 1.8 ಲಕ್ಷ ಸ್ವಯಂಸೇವಕರು ಮತ್ತು ಭಾಗವಹಿಸುವಿಕೆಯೊಂದಿಗೆ ಈ ಉಪಕ್ರಮವು ಪುರಾವೆ ಆಧಾರಿತ ಆಯುರ್ವೇದ ಮತ್ತು ವೈಯಕ್ತಿಕಗೊಳಿಸಿದ ಆರೋಗ್ಯದಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸಿದೆ. ಆಧುನಿಕ ಆರೋಗ್ಯ ವ್ಯವಸ್ಥೆಗಳೊಂದಿಗೆ ಸಾಂಪ್ರದಾಯಿಕ ಜ್ಞಾನದ ಆಳವಾದ ಸಂಯೋಜನೆಗೆ ದಾರಿ ಮಾಡಿಕೊಟ್ಟಿದೆ.
https://www.pib.gov.in/PressReleasePage.aspx?PRID=2105326
ಶ್ರೀ ಪ್ರತಾಪ್ ರಾವ್ ಜಾಧವ್ ಅವರು ʻಯೋಗ ಮಹೋತ್ಸವ-2025ʼ ಅನ್ನು ಉದ್ಘಾಟಿಸಿದರು, ಅಂತರರಾಷ್ಟ್ರೀಯ ಯೋಗ ದಿನಾಚರಣೆಗಾಗಿ 100 ದಿನಗಳ ಕ್ಷಣಗಣನೆಗೆ ಚಾಲನೆ ನೀಡಿದರು
ಕೇಂದ್ರ ಆಯುಷ್ ರಾಜ್ಯ ಖಾತೆ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ಪ್ರತಾಪ್ ರಾವ್ ಜಾಧವ್ ಅವರು ನವದೆಹಲಿಯಲ್ಲಿ ʻಯೋಗ ಮಹೋತ್ಸವ-2025ʼ ಅನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮವು 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗಾಗಿ(ಐಡಿವೈ) ಅಧಿಕೃತವಾಗಿ 100 ದಿನಗಳ ಕ್ಷಣಗಣನೆಯ ಆರಂಭವನ್ನು ಸೂಚಿಸಿತು. ಈ ಕಾರ್ಯಕ್ರಮವು ʻಯೋಗ ಸಂಗಮʼ ಮತ್ತು ʻಯೋಗ ಉದ್ಯಾನʼಳಿಂದ ಹಿಡಿದು ʻಹರಿತ್ ಯೋಗʼ ಮತ್ತು ʻಯೋಗ ಅನ್‌ಪ್ಲೆಗ್ಡ್ʼವರೆಗೆ 10 ವಿಶಿಷ್ಟ ಉಪಕ್ರಮಗಳನ್ನು ಅನಾವರಣಗೊಳಿಸಿತು. ʻಅಂತಾರಾಷ್ಟ್ರೀಯ ಯೋಗದಿನ-2025ʼ ಅನ್ನು ಅತ್ಯಂತ ವಿಸ್ತಾರವಾದ ಮತ್ತು ಎಲ್ಲರನ್ನೂ ಒಳಗೊಂಡ ಆಚರಣೆಯನ್ನಾಗಿ ಮಾಡುವ ಗುರಿಯನ್ನು ಈ ಕಾರ್ಯ್ರಕಮ ಹೊಂದಿತ್ತು. ʻಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕೈಪಿಡಿ-2025ʼ ಅನ್ನು ಬಿಡುಗಡೆ ಮಾಡಿದ ಸಚಿವರು ಮಾನಸಿಕ ಮತ್ತು ದೈಹಿಕ ಯೋಗಕ್ಷೇಮದಲ್ಲಿ ಯೋಗದ ಪ್ರಮುಖ ಪಾತ್ರ ಮತ್ತು ಕಳೆದ ದಶಕದಲ್ಲಿ ಅದರ ಜಾಗತಿಕ ಪ್ರಭಾವವನ್ನು ಎತ್ತಿ ತೋರಿದರು. ಪ್ರಖ್ಯಾತ ಯೋಗ ಗುರುಗಳು, ವಿದ್ವಾಂಸರು ಮತ್ತು ಸಾಮಾನ್ಯ ಯೋಗ ಶಿಷ್ಟಾಚಾರವನ್ನು ಪ್ರದರ್ಶಿಸುವ 1,000ಕ್ಕೂ ಹೆಚ್ಚು ಉತ್ಸಾಹಿಗಳ ಭಾಗವಹಿಸುವಿಕೆ ಜೊತೆಗೆ ಯೋಗದ ಚಿಕಿತ್ಸಕ ಮೌಲ್ಯವನ್ನು ಪ್ರದರ್ಶಿಸುವ ವೈಜ್ಞಾನಿಕ ಮತ್ತು ವಿಷಯಾಧಾರಿತ ಅಧಿವೇಶನಗಳನ್ನು ಸಹ ಈ ಕಾರ್ಯಕ್ರಮವು ಹೊಂದಿತತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ಅಡಿಯಲ್ಲಿ ಭಾರತವು ಜಾಗತಿಕ ಸ್ವಾಸ್ಥ್ಯದಲ್ಲಿ ತನ್ನ ನಾಯಕತ್ವವನ್ನು ಬಲಪಡಿಸಿತು. 2025ನೇ ಸಾಲಿನ ಅಂತಾರಾಷ್ಟ್ರೀಯ ಯೋಗದಿನʼದಂದು ವಿಶ್ವಾದ್ಯಂತ ಆರೋಗ್ಯ, ಸಾಮರಸ್ಯ ಮತ್ತು ಏಕತೆಯ ಆಚರಣೆಗೆ ʻಯೋಗ ಮಹೋತ್ಸವʼವು ವೇಗ ಒದಗಿಸಿತು.
https://www.pib.gov.in/PressReleasePage.aspx?PRID=2119571
ʻಬಿಮ್‌ಸ್ಟಿಕ್ ಶೃಂಗಸಭೆʼಯಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಉತ್ಕೃಷ್ಟತಾ ಕೇಂದ್ರವನ್ನು ಘೋಷಿಸಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬ್ಯಾಂಕಾಕ್‌ನಲ್ಲಿ ನಡೆದ ʻಬಿಮ್‌ಸ್ಟಿಕ್ʼ ಶೃಂಗಸಭೆಯಲ್ಲಿ, ಸಾಂಪ್ರದಾಯಿಕ ಔಷಧದ ಸಂಶೋಧನೆ ಮತ್ತು ಪ್ರಸಾರವನ್ನು ಉತ್ತೇಜಿಸಲು ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದರು. ʻಬಿಮ್‌ಸ್ಟಿಕ್ʼ ರಾಷ್ಟ್ರಗಳಾದ್ಯಂತ ಕ್ಯಾನ್ಸರ್ ಆರೈಕೆಯಲ್ಲಿ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ಭಾರತದ ಬೆಂಬಲವನ್ನು ಪ್ರಧಾನಿ ಘೋಷಿಸಿದರು. ಆ ಮೂಲಕ ಪ್ರಾದೇಶಿಕ ಸಹಕಾರದ ಪ್ರಮುಖ ಆಧಾರಸ್ತಂಭವಾಗಿ ಸಾರ್ವಜನಿಕ ಆರೋಗ್ಯದ ಪಾತ್ರವನ್ನು ಬಲಪಡಿಸಿದರು. ಈ ಉಪಕ್ರಮವು ಸಾಂಪ್ರದಾಯಿಕ ಔಷಧದಲ್ಲಿ ಭಾರತ-ಥೈಲ್ಯಾಂಡ್ ಸಹಯೋಗವನ್ನು ಬಲಪಡಿಸಲು ಸಜ್ಜಾಗಿದೆ, ಅಸ್ತಿತ್ವದಲ್ಲಿರುವ ಶೈಕ್ಷಣಿಕ ಸಹಭಾಗಿತ್ವ ಮತ್ತು ಆಯುಷ್ ವಿದ್ಯಾರ್ಥಿವೇತನ ಯೋಜನೆಯನ್ನು ಒಳಗೊಂಡಿದೆ. ಇದು ಕಳೆದ ಐದು ವರ್ಷಗಳಲ್ಲಿ ʻಬಿಮ್‌ಸ್ಟಿಕ್ʼ ದೇಶಗಳ 175 ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡಿದೆ. ಹೊಸ ಉತ್ಕೃಷ್ಟತಾ ಕೇಂದ್ರವು ಆಯುರ್ವೇದ, ಥಾಯ್ ಸಾಂಪ್ರದಾಯಿಕ ಔಷಧ ಮತ್ತು ಇತರ ಸಾಂಪ್ರದಾಯಿಕ ವ್ಯವಸ್ಥೆಗಳಲ್ಲಿ ಜಂಟಿ ಸಂಶೋಧನೆ, ಅಭಿವೃದ್ಧಿ ಹಾಗೂ ಜ್ಞಾನ ವಿನಿಮಯವನ್ನು ವೇಗಗೊಳಿಸುವ ನಿರೀಕ್ಷೆಯಿದೆ.
https://www.pib.gov.in/PressReleasePage.aspx?PRID=2119063
ಗಾಂಧಿನಗರದಲ್ಲಿ ವಿಶ್ವ ಹೋಮಿಯೋಪತಿ ದಿನಾಚರಣೆ ಸಮಾವೇಶವನ್ನು ಉದ್ಘಾಟಿಸಲಿರುವ ಶ್ರೀ ಪ್ರತಾಪರಾವ್ ಜಾಧವ್
ಕೇಂದ್ರ ಆಯುಷ್ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಪ್ರತಾಪರಾವ್ ಜಾಧವ್ ಅವರು ಏಪ್ರಿಲ್ 10ರಂದು ಗಾಂಧಿನಗರದಲ್ಲಿ ʻವಿಶ್ವ ಹೋಮಿಯೋಪತಿ ದಿನ-2025ʼ ಸಮಾವೇಶವನ್ನು ಉದ್ಘಾಟಿಸಿದರು. ʻಶಿಕ್ಷಣ, ಅಭ್ಯಾಸ ಮತ್ತು ಸಂಶೋಧನೆ' ಎಂಬ ವಿಷಯದ ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮವು ಸುಮಾರು 10,000 ಪ್ರತಿನಿಧಿಗಳಿಗೆ ಆತಿಥ್ಯ ನೀಡಿತು. ಇದು ಹೋಮಿಯೋಪತಿಯ ಇತಿಹಾಸದಲ್ಲಿ ಅತಿದೊಡ್ಡ ಸಭೆಯಾಗಿದೆ. ʻಸಿಸಿಆರ್‌ಎಚ್ʼ, ʻಎನ್‌ಸಿಎಚ್ʼ ಮತ್ತು ʻಎನ್ಐಎಚ್ʼ ಆಯೋಜಿಸಿದ ಈ ಸಮಾವೇಶವು ಜಾಗತಿಕ ತಜ್ಞರು, ಸಂಶೋಧಕರು, ನೀತಿ ನಿರೂಪಕರು ಹಾಗೂ ವಿದ್ಯಾರ್ಥಿಗಳನ್ನು ವ್ಯಾಪಕ ಚರ್ಚೆಗಳು, ಶೈಕ್ಷಣಿಕ ಅಧಿವೇಶನಗಳು ಮತ್ತು ಭಾರತದ ಅತಿದೊಡ್ಡ "ಲೈವ್ ಮೆಟೀರಿಯಾ ಮೆಡಿಕಾ" ಸ್ಪರ್ಧೆಗಾಗಿ ಒಟ್ಟುಗೂಡಿಸಿತು. ಪ್ರಮುಖ ಸಂಸ್ಥೆಗಳ ಭಾಗವಹಿಸುವಿಕೆ ಮತ್ತು ಶಿಕ್ಷಣ ಕ್ಷೇತ್ರದ ಬಲವಾದ ಪ್ರಾತಿನಿಧ್ಯದೊಂದಿಗೆ, ಈ ಕಾರ್ಯಕ್ರಮವು ಹೋಮಿಯೋಪತಿ ಸಂಶೋಧನೆ, ಕಲಿಕೆ ಮತ್ತು ಅಂತರರಾಷ್ಟ್ರೀಯ ಸಹಯೋಗವನ್ನು ಮುನ್ನಡೆಸುವ ಗುರಿಯನ್ನು ಹೊಂದಿತ್ತು. ಸಾಂಪ್ರದಾಯಿಕ ಔಷಧದ ಕೇಂದ್ರವಾಗಿ ಗುಜರಾತ್ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿತು.
https://www.pib.gov.in/PressReleasePage.aspx?PRID=2120080
ಆಯುಷ್ ಸಚಿವಾಲಯವು ಗಾಂಧಿನಗರದಲ್ಲಿ ಬೃಹತ್ ಜಾಗತಿಕ ಸಮಾವೇಶದೊಂದಿಗೆ 2025ನೇ ಸಾಲಿನ ʻವಿಶ್ವ ಹೋಮಿಯೋಪತಿ ದಿನʼವನ್ನು ಆಚರಿಸಿತು
ಆಯುಷ್ ಸಚಿವಾಲಯವು ಗಾಂಧಿನಗರದಲ್ಲಿ ಎರಡು ದಿನಗಳ ಭವ್ಯ ಸಮಾವೇಶದೊಂದಿಗೆ ʻವಿಶ್ವ ಹೋಮಿಯೋಪತಿ ದಿನ-2025ʼ ಅನ್ನು ಆಚರಿಸಿತು. ಇದು ಭಾರತ ಮತ್ತು ವಿದೇಶಗಳ 8,000ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಒಟ್ಟುಗೂಡಿಸಿತು. ʻಸಿಸಿಆರ್‌ಎಚ್ʼ, ʻಎನ್‌ಸಿಎಚ್ʼ ಮತ್ತು ʻಎನ್ಐಎಚ್ʼ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವು 'ಹೋಮಿಯೋಪತಿಯಲ್ಲಿ ಶಿಕ್ಷಣ, ಅಭ್ಯಾಸ ಮತ್ತು ಸಂಶೋಧನೆ' ಎಂಬ ವಿಷಯಾಧಾರಿತವಾಗಿತ್ತು. ಚರ್ಚಾಗೋಷ್ಠಿಗಳು, ಪ್ರದರ್ಶನಗಳು, ವೈಜ್ಞಾನಿಕ ಅಧಿವೇಶನಗಳು ಮತ್ತು ದೇಶದ ಅತಿದೊಡ್ಡ ಉದ್ಯಮ ಪ್ರದರ್ಶನವನ್ನು ಇದು ಒಳಗೊಂಡಿತ್ತು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಆಯುಷ್ ಸಚಿವ ಶ್ರೀ ಪ್ರತಾಪರಾವ್ ಜಾಧವ್ ಅವರೂ ಉಪಸ್ಥಿತರಿದ್ದ ಈ ಸಮಾವೇಶವು ಪುರಾವೆ-ಆಧರಿತ ಸಂಶೋಧನೆ, ಶಿಕ್ಷಣ ಮತ್ತು ಸಾರ್ವಜನಿಕ ಸಂಪರ್ಕದ ಮೂಲಕ ಹೋಮಿಯೋಪತಿಯನ್ನು ವಿಸ್ತರಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿತು. ಕಾರ್ಯಕ್ರಮದಲ್ಲಿ ಮಾಡಲಾದ ಪ್ರಮುಖ ಬಿಡುಗಡೆಗಳಲ್ಲಿ ʻಕನ್ವೆನ್ಷನ್ ಸ್ಮಾರಕʼ, ಎಂಟು ಪ್ರಕಟಣೆಗಳು, ಹೊಸ ʻಸಿಸಿಆರ್‌ಎಚ್ ಇ-ಪೋರ್ಟಲ್ʼ ಹಾಗೂ ಮತ್ತು ಔಷಧ ಸಾಕ್ಷ್ಯಚಿತ್ರ ಸೇರಿವೆ. ಈ ಕಾರ್ಯಕ್ರಮವು ಹೋಮಿಯೋಪತಿ ವಿಜ್ಞಾನ ಮತ್ತು ಜಾಗತಿಕ ಸಹಯೋಗವನ್ನು ಬಲಪಡಿಸುವ ಸಚಿವಾಲಯದ ಪ್ರಯತ್ನಗಳನ್ನು ಒತ್ತಿಹೇಳುತ್ತದೆ.
https://www.pib.gov.in/PressReleasePage.aspx?PRID=2120741
ಜಾಗತಿಕ ಆರೋಗ್ಯ ಚರ್ಚೆಯಲ್ಲಿ ಸಾಂಪ್ರದಾಯಿಕ ಔಷಧವನ್ನು ಉನ್ನತೀಕರಿಸಿದ ʻಡಬ್ಲ್ಯುಎಚ್ಎಸ್ ಪ್ರಾದೇಶಿಕ ಸಭೆ-2025ʼ
ನವದೆಹಲಿಯಲ್ಲಿ ನಡೆದ ʻವಿಶ್ವ ಆರೋಗ್ಯ ಶೃಂಗಸಭೆಯ ಪ್ರಾದೇಶಿಕ ಸಮಾವೇಶ-2025ʼ ಸಾಂಪ್ರದಾಯಿಕ ವೈದ್ಯವನ್ನು ಜಾಗತಿಕ ಆರೋಗ್ಯ ಸಮಾನತೆಯ ಪ್ರಮುಖ ಆಧಾರಸ್ತಂಭವಾಗಿ ಗುರುತಿಸಿತು. ಸಮಗ್ರ, ಪುರಾವೆ-ಆಧಾರಿತ ಸಾಂಪ್ರದಾಯಿಕ ಅಭ್ಯಾಸಗಳಿಗೆ ಪ್ರವೇಶವನ್ನು ಹೆಚ್ಚಿಸುವ ಕುರಿತು ಪ್ರಮುಖ ಚರ್ಚಾ ಅಧಿವೇಶನವನ್ನು ಇದು ಒಳಗೊಂಡಿತ್ತು. ಡಿಸೆಂಬರ್‌ನಲ್ಲಿ ನಡೆದ 2ನೇ ʻಡಬ್ಲ್ಯುಎಚ್ಒ ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆʼಗೆ ಮುನ್ನ ಈ ಸಭೆಯು ಸಮಯೋಚಿತ ವೇದಿಕೆ ಎಂದು ಕೇಂದ್ರ ಸಚಿವ ಶ್ರೀ ಪ್ರತಾಪರಾವ್ ಜಾಧವ್ ಅವರು ಒತ್ತಿ ಹೇಳಿದರು. ಜಾಗತಿಕ ಆರೋಗ್ಯ ಕ್ಷೇಥ್ರದ ಪ್ರಮುಖರನ್ನು ಒಟ್ಟುಗೂಡಿಸುವ ಈ ಕಾರ್ಯಕ್ರಮವು ಸಾಂಪ್ರದಾಯಿಕ ಜ್ಞಾನ, ತಾಂತ್ರಿಕ ನಾವೀನ್ಯತೆ ಮತ್ತು ಬಲವಾದ ನಿಯಂತ್ರಕ ಚೌಕಟ್ಟುಗಳು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಹೇಗೆ ಮುನ್ನಡೆಸಬಹುದು ಎಂಬುದನ್ನು ಅನ್ವೇಷಿಸಿತು. ʻಸಾಂಪ್ರದಾಯಿಕ ಔಷಧಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕೇಂದ್ರʼದ ಬೆಂಬಲದೊಂದಿಗೆ, ಈ ಸಭೆಯು ಅಂತರರಾಷ್ಟ್ರೀಯ ಸಹಯೋಗವನ್ನು ಬಲಪಡಿಸಿತು. ಜೊತೆಗೆ ವಿಶ್ವಾದ್ಯಂತ ಸುಸ್ಥಿರ, ಜನಕೇಂದ್ರಿತ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುವಲ್ಲಿ ಭಾರತದ ಪಾತ್ರವನ್ನು ಬಲಪಡಿಸಿದೆ.
https://www.pib.gov.in/PressReleasePage.aspx?PRID=2123865
ಪುರಾವೆ ಆಧಾರಿತ ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಜಾಗತಿಕ ವೇಗವನ್ನು ಹೆಚ್ಚಿಸಿದ 6ನೇ ʻಜಿಎಫ್‌ಟಿಎಂʼ ಸಭೆ
ಜಿನೀವಾದಲ್ಲಿ ನಡೆದ ಸಾಂಪ್ರದಾಯಿಕ ಔಷಧದ ಸ್ನೇಹಿತರ ಗುಂಪಿನ (ಜಿಎಫ್‌ಟಿಎಂ) ಆರನೇ ಸಭೆಯು ಜಾಗತಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಸಾಂಪ್ರದಾಯಿಕ ಔಷಧದ ಏಕೀಕರಣವನ್ನು ಮುನ್ನಡೆಸಲು ಅನೇಕ ದೇಶಗಳ ಪ್ರತಿನಿಧಿಗಳಿಗೆ ಕರೆ ನೀಡಿತು. ಸಭಿಕರನ್ನುದ್ದೇಶಿಸಿ ಮಾತನಾಡಿದ ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಅವರು ರಾಷ್ಟ್ರೀಯ ʻಆಯುಷ್ ಮಿಷನ್ʼ, ʻಆಯುಷ್ ಆರೋಗ್ಯ ಮಂದಿರʼಗಳು, ವಿಸ್ತೃತ ವಿಮಾ ರಕ್ಷಣೆ ಮತ್ತು ಸಂಶೋಧನಾ ಸಹಯೋಗಗಳಂತಹ ಉಪಕ್ರಮಗಳ ಮೂಲಕ ಪುರಾವೆ ಆಧಾರಿತ ಸಾಂಪ್ರದಾಯಿಕ ಔಷಧಕ್ಕೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಕೃತಕ ಬುದ್ಧಿಮತ್ತೆ ಮತ್ತು ʻಜೀನೋಮಿಕ್ಸ್ʼನಂತಹ ಉದಯೋನ್ಮುಖ ಕ್ಷೇತ್ರಗಳನ್ನು ಎತ್ತಿ ತೋರಿಸಿದ ಅವರು, ಸಾರ್ವತ್ರಿಕ ಆರೋಗ್ಯ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಸಾಂಪ್ರದಾಯಿಕ ಔಷಧದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. 23 ಮೇ 2025ರಂದು ನಡೆದ ʻಡಬ್ಲ್ಯುಎಚ್ಎ 78ʼ ಸಮಾವೇಶದಲ್ಲಿ `ಜಿಎಫ್‌ಟಿಎಂʼ ವತಿಯಿಂದ ಉನ್ನತ ಮಟ್ಟದ ಸಮಾವೇಶ ಆಯೋಜಿಸುವ ಬಗ್ಗೆ ಇದೇ ಸಭೆಯಲ್ಲಿ ಘೋಷಿಸಲಾಯಿತು. "ಸಾಂಪ್ರದಾಯಿಕ ಔಷಧ: ಸಾಂಪ್ರದಾಯಿಕ ಪರಂಪರೆಯಿಂದ ಗಡಿನಾಡು ವಿಜ್ಞಾನದವರೆಗೆ, ಎಲ್ಲರಿಗೂ ಆರೋಗ್ಯಕ್ಕಾಗಿ" ಎಂಬ ವಿಷಯಾಧರಿತವಾಗಿ ಈ ಸಭೆಯು ನಡೆಯಿತು.
https://www.pib.gov.in/PressReleasePage.aspx?PRID=2128142
ಭಾರತವು 11ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದ ವೇಳೆ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದಾಖಲೆಯ ಯೋಗ ಕೂಟ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶಾಖಪಟ್ಟಣಂನಲ್ಲಿ 3 ಲಕ್ಷ ಮಂದಿ ಭಾಗವಹಿಸಿದ ವಿಶ್ವದ ಅತಿದೊಡ್ಡ ಯೋಗ ಸಭೆಯ ನೇತೃತ್ವ ವಹಿಸಿದ್ದರು. ಇದು ಯೋಗದ ಏಕೀಕರಣ ಶಕ್ತಿ ಮತ್ತು ಜಾಗತಿಕ ವ್ಯಾಪ್ತಿಯನ್ನು ಉಲ್ಲೇಖಿಸಿದರು. ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಭಾಗವಹಿಸಿದ ಈ ಕಾರ್ಯಕ್ರಮವು ʻಯೋಗಾಂಧ್ರʼ ಅಭಿಯಾನದಂತಹ ಉಪಕ್ರಮಗಳನ್ನು ಪ್ರದರ್ಶಿಸಿತು. ಈ ಅಭಿಯಾನದಲ್ಲಿ 2 ಕೋಟಿಗೂ ಹೆಚ್ಚು ನಾಗರಿಕರನ್ನು ತೊಡಗಿಸಿಕೊಂಡರು ಮತ್ತು ಬುಡಕಟ್ಟು ವಿದ್ಯಾರ್ಥಿಗಳ ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶನ ಸೇರಿದಂತೆ ಅನೇಕ ವಿಶ್ವ ದಾಖಲೆಗಳನ್ನು ನಿರ್ಮಿಸಲಾಯಿತು. ಆಯುಷ್ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ಅವರು 180ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುವ ಜಾಗತಿಕ ಸಾರ್ವಜನಿಕ ಆರೋಗ್ಯ ಆಂದೋಲನವಾಗಿ ಯೋಗದ ವಿಕಾಸವನ್ನು ಒತ್ತಿ ಹೇಳಿದರು ಮತ್ತು 10 ರಾಷ್ಟ್ರೀಯ ಕಾರ್ಯಕ್ರಮಗಳನ್ನು ಘೋಷಿಸಿದರು. ಭಾರತದಾದ್ಯಂತ ನಡೆದ ಆಚರಣೆಗಳಲ್ಲಿ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್, ಗೃಹ ಸಚಿವರಾದ ಶ್ರೀ ಅಮಿತ್ ಶಾ ಮತ್ತು ಆರೋಗ್ಯ ಸಚಿವರಾದ ಶ್ರೀ ಜೆ.ಪಿ.ನಡ್ಡಾ ಸೇರಿದಂತೆ ಕೇಂದ್ರ ಸಚಿವರು ಭಾಗವಹಿಸಿದ್ದರು. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ನಾಯಕರು ಬಲಪಡಿಸಿದರು.
https://www.pib.gov.in/PressReleasePage.aspx?PRID=2138431
ಭಾರತದ ಕೃತಕ ಬುದ್ಧಿಮತ್ತೆ-ಚಾಲಿತ ಆಯುಷ್ ಆವಿಷ್ಕಾರಗಳನ್ನು ಜಾಗತಿಕ ಮಾನದಂಡಗಳಾಗಿ ಗುರುತಿಸಿದ ವಿಶ್ವ ಆರೋಗ್ಯ ಸಂಸ್ಥೆ
"ಸಾಂಪ್ರದಾಯಿಕ ಔಷಧದಲ್ಲಿ ಕೃತಕ ಬುದ್ಧಿಮತ್ತೆ" ಕುರಿತಾದ ವಿಶ್ವ ಆರೋಗ್ಯ ಸಂಸ್ಥೆಯ ಹೆಗ್ಗುರುತಿನ ತಾಂತ್ರಿಕ ವರದಿಯು ಆಯುಷ್ ವ್ಯವಸ್ಥೆಗಳೊಂದಿಗೆ ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವಲ್ಲಿ ಭಾರತದ ಪ್ರವರ್ತಕ ಪಾತ್ರವನ್ನು ಎತ್ತಿ ತೋರಿಸಿದೆ. ʻಆಯುಷ್ ಗ್ರಿಡ್ʼ, ʻಆಯುರ್‌ಜೆನೊಮಿಕ್ಸ್ʼ, ಮುನ್ಸೂಚಕ ರೋಗನಿರ್ಣಯ ಸಾಧನಗಳು; ಹಾಗೂ ʻಸಾಹಿʼ, ʻನಮಸ್ತೆʼ ಮತ್ತು ʻಆಯುಷ್ ಸಂಶೋಧನಾ ಪೋರ್ಟಲ್ʼನಂತಹ ಡಿಜಿಟಲ್ ವೇದಿಕೆಗಳನ್ನು ಅಂಗೀಕರಿಸಿದೆ. ʻಸಾಂಪ್ರದಾಯಿಕ ಜ್ಞಾನದ ಡಿಜಿಟಲ್ ಗ್ರಂಥಾಲಯʼವನ್ನು(ಟಿಕೆಡಿಎಲ್) ಪ್ರಾರಂಭಿಸಿದ ಮೊದಲ ದೇಶ ಎಂದು ಭಾರತವನ್ನು ವರದಿಯಲ್ಲಿ ಶ್ಲಾಘಿಸಲಾಗಿದೆ. ʻಪ್ರಕೃತಿʼ-ಆಧಾರಿತ ರೋಗನಿರ್ಣಯದಿಂದ ಹಿಡಿದು ಗಿಡಮೂಲಿಕೆಗಳ ಜೀನೋಮಿಕ್ ಡಿಕೋಡಿಂಗ್ ವರೆಗೆ ಎಐ-ಚಾಲಿತ ಅನ್ವಯಿಕೆಗಳು ಸಾಂಪ್ರದಾಯಿಕ ಔಷಧವನ್ನು ಹೇಗೆ ಆಧುನೀಕರಿಸುತ್ತಿವೆ ಮತ್ತು ಅದರ ಜಾಗತಿಕ ಪ್ರಸ್ತುತತೆಯನ್ನು ವಿಸ್ತರಿಸುತ್ತಿವೆ ಎಂಬುದನ್ನು ವರದಿಯು ಒತ್ತಿಹೇಳಿದೆ. ಭಾರತದ ಆಯುಷ್ ಮಾರುಕಟ್ಟೆಯ ಮೌಲ್ಯವು 43.4 ಶತಕೋಟಿ ಅಮೆರಿಕನ್ ಡಾಲರ್ ಆಗಿದ್ದು, ಈ ಮಾನ್ಯತೆಯು ಪುರಾವೆ-ಆಧರಿತ, ತಂತ್ರಜ್ಞಾನ-ಶಕ್ತ ಸಾಂಪ್ರದಾಯಿಕ ಔಷಧದಲ್ಲಿ ರಾಷ್ಟ್ರದ ನಾಯಕತ್ವ ಹಾಗೂ ಎಲ್ಲರನ್ನೂ ಒಳಗೊಂಡ, ಡಿಜಿಟಲ್ ಸಶಕ್ತ ಆರೋಗ್ಯ ಆವಿಷ್ಕಾರಕ್ಕೆ ದೇಶದ ಬದ್ಧತೆಯನ್ನು ದೃಢಪಡಿಸುತ್ತದೆ.
https://www.pib.gov.in/PressReleasePage.aspx?PRID=2144184
ಜೈವಿಕ ಸುರಕ್ಷತಾ ತರಬೇತಿ ಮತ್ತು ಸಂಶೋಧನಾ ಪಾಲುದಾರಿಕೆಯ ಮೂಲಕ ಸಾರ್ವಜನಿಕ ಆರೋಗ್ಯ ಸನ್ನದ್ಧತೆಯನ್ನು ಬಲಪಡಿಸಲು ಕೈಜೋಡಿಸಿದ ʻಹೋಮಿಯೋಪತಿ ಕೇಂದ್ರೀಯ ಸಂಶೋಧನಾ ಮಂಡಳಿʼ ಮತ್ತು ʻಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿʼ
ಆಯುಷ್ ಸಚಿವಾಲಯದ ʻಹೋಮಿಯೋಪತಿ ಸಂಶೋಧನಾ ಕೇಂದ್ರೀಯ ಮಂಡಳಿʼ (ಸಿಸಿಆರ್‌ಎಚ್), ʻಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿʼ(ಎಂಐವಿ) ಸಹಯೋಗದೊಂದಿಗೆ ಮಣಿಪಾಲದ ಮಾಹೆ ಕ್ಯಾಂಪಸ್‌ನಲ್ಲಿ 2025ರ ಅಕ್ಟೋಬರ್ 6-10 ರವರೆಗೆ "ಜೈವಿಕ ಸುರಕ್ಷತೆ ಮತ್ತು ಅಣಕು ಸಾಂಕ್ರಾಮಿಕ ತರಬೇತಿ-2025" ಎಂಬ ಶೀರ್ಷಿಕೆಯ ಐದು ದಿನಗಳ ವಸತಿ ಕಾರ್ಯಾಗಾರವನ್ನು ನಡೆಸಲಾಯಿತು. ಈ ಕಾರ್ಯಕ್ರಮವು ಜೈವಿಕ ಸುರಕ್ಷತಾ ಜಾಗೃತಿ, ಸಾಂಕ್ರಾಮಿಕ ಸನ್ನದ್ಧತೆ ಮತ್ತು ʻಸಿಸಿಆರ್‌ಎಚ್ʼ ಸಂಶೋಧನಾ ವಿಜ್ಞಾನಿಗಳ ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು. 14 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 30 ವಿಜ್ಞಾನಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಾಗಾರವನ್ನು ʻಸಿಸಿಆರ್‌ಎಚ್ʼನ ಮಹಾನಿರ್ದೇಶಕ ಡಾ. ಸುಭಾಷ್ ಕೌಶಿಕ್ ಉದ್ಘಾಟಿಸಿದರು. ಅಂತರ-ಸಾಂಸ್ಥಿಕ ಸಹಯೋಗ ಮತ್ತು ಸಾಂಕ್ರಾಮಿಕ ರೋಗಗಳನ್ನು ನಿರ್ವಹಿಸುವಲ್ಲಿ ಹೋಮಿಯೋಪತಿಯ ಪಾತ್ರವನ್ನು ಅವರು ಒತ್ತಿ ಹೇಳಿದರು. ʻಎಂಎಎಚ್ಇʼ ನಾಯಕತ್ವ ಮತ್ತು ತಜ್ಞ ಅಧ್ಯಾಪಕರ ಸಕ್ರಿಯ ಬೆಂಬಲದೊಂದಿಗೆ ಸಂಶೋಧನೆ, ಶಿಕ್ಷಣ ಮತ್ತು ತರಬೇತಿಯಲ್ಲಿ ಸಹಕಾರವನ್ನು ಬಲಪಡಿಸಲು ʻಸಿಸಿಆರ್‌ಎಚ್ʼ ಮತ್ತು ʻಎಂಎಎಚ್ಇʼ ನಡುವೆ ಒಪ್ಪಂದವನ್ನು ವಿನಿಮಯ ಮಾಡಿಕೊಳ್ಳಲಾಯಿತು.
https://www.pib.gov.in/PressReleasePage.aspx?PRID=2175775®=3&lang=2
ʻವಿಶ್ವ ಮಾನಸಿಕ ಆರೋಗ್ಯ ದಿನ-2025ʼರ ಅಂಗವಾಗಿ ʻಮಾನಸಿಕ ಆರೋಗ್ಯ ಕುರಿತ ರಾಷ್ಟ್ರೀಯ ಹೋಮಿಯೋಪತಿ ಸಂಶೋಧನಾ ಸಂಸ್ಥೆʼಯು ಎರಡು ದಿನಗಳ ʻರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನʼವನ್ನು ಆಯೋಜಿಸಿತು
ಆಯುಷ್ ಸಚಿವಾಲಯದ ಹೋಮಿಯೋಪತಿ ಸಂಶೋಧನಾ ಕೇಂದ್ರೀಯ ಮಂಡಳಿ (ಸಿಸಿಆರ್‌ಎಚ್) ಅಡಿಯಲ್ಲಿ ಕಾರ್ಯನಿರ್ವಹಿಸುವ ಕೊಟ್ಟಾಯಂನ ʻಮಾನಸಿಕ ಆರೋಗ್ಯ ಕುರಿತಾದ ರಾಷ್ಟ್ರೀಯ ಹೋಮಿಯೋಪತಿ ಸಂಶೋಧನಾ ಸಂಸ್ಥೆʼಯು (ಎನ್ಎಚ್ಆರ್‌ಐಎಂಎಚ್) ʻವಿಶ್ವ ಮಾನಸಿಕ ಆರೋಗ್ಯ ದಿನʼದ ಅಂಗವಾಗಿ 2025ರ ಅಕ್ಟೋಬರ್ 10-11 ರಂದು ಎರಡು ದಿನಗಳ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನವನ್ನು ಆಯೋಜಿಸಿತ್ತು. "ಸೇವೆಗಳ ಲಭ್ಯತೆ - ವಿಪತ್ತುಗಳು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಮಾನಸಿಕ ಆರೋಗ್ಯ" ಎಂಬ ವಿಷಯಾಧಾರಿತವಾಗಿ ನಡೆದ ಈ ಸಮ್ಮೇಳನವು ಭಾರತದಾದ್ಯಂತದ ಹೋಮಿಯೋಪತಿ ತಜ್ಞರು, ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಸಂಶೋಧಕರನ್ನು ಒಟ್ಟುಗೂಡಿಸಿತು. ಉದ್ಘಾಟನಾ ಅಧಿವೇಶನದಲ್ಲಿ ʻಸಿಸಿಆರ್‌ಎಚ್ʼ ಮಹಾನಿರ್ದೇಶಕ ಡಾ. ಸುಭಾಷ್ ಕೌಶಿಕ್ ಮತ್ತು ಕೊಟ್ಟಾಯಂ ಜಿಲ್ಲಾಧಿಕಾರಿ ಶ್ರೀ ಚೇತನ್ ಕುಮಾರ್ ಮೀನಾ(ಐಎಎಸ್) ಉಪಸ್ಥಿತರಿದ್ದರು. ಸಾಂಕ್ರಾಮಿಕದ ವೇಳೆ ಮಾನಸಿಕ ಆರೋಗ್ಯ, ಮಾನಸಿಕ ತುರ್ತುಸ್ಥಿತಿಗಳು, ಆರೋಗ್ಯ ಸದೃಢತೆ, ಸಂಶೋಧನಾ ನೀತಿಗಳು ಮತ್ತು ವಿವಿಧ ಮಾನಸಿಕ ಅಸ್ವಸ್ಥತೆಗಳ ಪ್ರಕರಣ ಆಧಾರಿತ ಹೋಮಿಯೋಪತಿಕ್ ನಿರ್ವಹಣೆಯ ಮೇಲೆ ವೈಜ್ಞಾನಿಕ ಚರ್ಚೆಗಳು ಗಮನ ಕೇಂದ್ರೀಕರಿಸಿದವು. ಸ್ನಾತಕೋತ್ತರ ಸಂಶೋಧನಾ ಪ್ರಸ್ತುತಿಗಳು ಶೈಕ್ಷಣಿಕ ಚರ್ಚೆಗಳನ್ನು ಶ್ರೀಮಂತಗೊಳಿಸಿದವು. ಸಮ್ಮೇಳನವು ಪುರಾವೆ-ಆಧರಿತ, ಸಮಗ್ರ ಮತ್ತು ಪ್ರವೇಶಿಸಬಹುದಾದ ಮಾನಸಿಕ ಆರೋಗ್ಯ ಸೇವೆಗಳ ಮಹತ್ವವನ್ನು ಪುನರುಚ್ಚರಿಸಿತು. ಸಾಂಕ್ರಾಮಿಕ ವಿಪತ್ತು ಮತ್ತು ತುರ್ತು ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಹೋಮಿಯೋಪತಿಯನ್ನು ಪೂರಕ ಅಂಶವಾಗಿ ಉಲ್ಲೇಖಿಸಲಾಗಿದೆ.
https://www.pib.gov.in/PressReleasePage.aspx?PRID=2178395®=3&lang=2
ಕೋಲ್ಕತ್ತಾದ ʻಎನ್ಐಎಚ್ʼನಲ್ಲಿ 400 ಆಸನಗಳ ಬಾಲಕರ ಹಾಸ್ಟೆಲ್ ಉದ್ಘಾಟಿಸಿದ ಶ್ರೀ ಪ್ರತಾಪರಾವ್ ಜಾಧವ್
ಕೇಂದ್ರ ಆಯುಷ್ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಪ್ರತಾಪರಾವ್ ಜಾಧವ್ ಅವರು ಕೋಲ್ಕತ್ತಾದ ʻನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹೋಮಿಯೋಪತಿʼಯಲ್ಲಿ (ಎನ್ಐಎಚ್) 400 ಆಸನಗಳ ಹೊಸ ಪದವಿ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದರು. ಇದು ಸಂಸ್ಥೆಯು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸಂಸ್ಥೆಯ ಮೂಲಸೌಕರ್ಯಕ್ಕೆ ಗಮನಾರ್ಹ ಸೇರ್ಪಡೆಯಾಗಿದೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಉತ್ಕೃಷ್ಟತೆಯ ಕೇಂದ್ರವಾಗಿ ʻಎನ್ಐಎಚ್ʼನ ವಿಕಾಸವನ್ನು ಉಲ್ಲೇಖಿಸಿದರು. ಜೊತೆಗೆ ಹೆಚ್ಚುತ್ತಿರುವ ಶೈಕ್ಷಣಿಕ ಮತ್ತು ರೋಗಿಗಳ ಆರೈಕೆಯ ಅಗತ್ಯಗಳನ್ನು ಪೂರೈಸಲು ನಡೆಯುತ್ತಿರುವ ಯೋಜನೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವಂತೆ ಒತ್ತಿ ಹೇಳಿದರು. ಸಾಂಸ್ಥಿಕ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಹಳೆಯ ವಿದ್ಯಾರ್ಥಿಗಳ ಕೊಠಡಿಯನ್ನು ರಚಿಸಲು ಅವರು ಪ್ರೋತ್ಸಾಹಿಸಿದರು. ಇದೇವೇಳೆ, ಆರೋಗ್ಯ ರಕ್ಷಣೆಯಲ್ಲಿ ನಾವೀನ್ಯತೆ ಮತ್ತು ಸಹಾನುಭೂತಿ ಹೊಂದಿರುವಂತೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಒತ್ತಾಯಿಸಿದರು. ಶಿಕ್ಷಣ ಖಾತೆ ಸಹಾಯಕ ಸಚಿವರಾದ ಡಾ. ಸುಕಾಂತ ಮಜುಂದಾರ್ ಅವರು ʻಎನ್ಐಎಚ್ʼ ಅನ್ನು ಭಾರತದ ಆರೋಗ್ಯ ಶ್ರೇಷ್ಠತೆಯ ಸಂಕೇತವೆಂದು ಶ್ಲಾಘಿಸಿದರು. "ಏಕ ಭಾರತ, ಶ್ರೇಷ್ಠ ಭಾರತ"ದಲ್ಲಿ ಸಂಸ್ಥೆಯ ಅದರ ಪಾತ್ರವನ್ನು ಉಲ್ಲೇಖಿಸಿದರು. ಲಭ್ಯತೆ ಮತ್ತು ಎಲ್ಲರನ್ನೂ ಒಳಗೊಂಡ ಆರೈಕೆಗೆ ಸಂಸ್ಥೆಯ ಕೊಡುಗೆಯನ್ನು ಒತ್ತಿ ಹೇಳಿದರು. ಸಂಸದ ಶ್ರೀ ಜ್ಯೋತಿರ್ಮಯ್ ಸಿಂಗ್ ಮಹತೋ ಸೇರಿದಂತೆ ಇತರ ಗಣ್ಯರು ʻಎನ್ಐಎಚ್ʼನ ಪ್ರಭಾವವನ್ನು ಶ್ಲಾಘಿಸಿದರು. ಇದೇವೇಳೆ, ಪ್ರತಿದಿನ ಸುಮಾರು 3,000 ರೋಗಿಗಳಿಗೆ ಸಂಸ್ಥೆಯ ಸೇವೆ ಮತ್ತು ಉತ್ಕೃಷ್ಟತೆಯ ಕೇಂದ್ರವಾಗಿ ಜಾಗತಿಕ ಮಾನ್ಯತೆ ಪಡೆಯುವ ಆಕಾಂಕ್ಷೆಯನ್ನು ನಿರ್ದೇಶಕರು ಒತ್ತಿ ಹೇಳಿದರು.
https://www.pib.gov.in/PressReleasePage.aspx?PRID=2145373
ಬಲವಾದ ಜಾಗತಿಕ ಸಹಯೋಗದೊಂದಿಗೆ ಸಂಪನ್ನಗೊಂಡ ʻವಿಶ್ವ ಆರೋಗ್ಯ ಸಂಸ್ಥೆ-ಐಆರ್‌ಸಿಎಚ್ ಗಿಡಮೂಲಿಕೆ ಔಷಧಗಳ ಕಾರ್ಯಾಗಾರʼ
ಗಾಜಿಯಾಬಾದ್‌ನಲ್ಲಿ ಆಯುಷ್ ಮತ್ತು ಪಿಸಿಐಎಂಎಚ್ ಸಚಿವಾಲಯ ಆಯೋಜಿಸಿದ್ದ ಮೂರು ದಿನಗಳ ʻಡಬ್ಲ್ಯುಎಚ್ಒ-ಐಆರ್‌ಸಿಎಚ್ʼ ಕಾರ್ಯಾಗಾರವು 17 ದೇಶಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಮುಕ್ತಾಯಗೊಂಡಿತು. ತಾಂತ್ರಿಕ ಅಧಿವೇಶನಗಳು, ತರಬೇತಿ ಮತ್ತು ಗಿಡಮೂಲಿಕೆ ಔಷಧಗಳ ಸುರಕ್ಷತೆ, ನಿಯಂತ್ರಣ ಮತ್ತು ಪರಿಣಾಮಕಾರಿತ್ವದ ಮೇಲೆ ಕೇಂದ್ರೀಕರಿಸಿದ ಸಾಂಸ್ಕೃತಿಕ ವಿನಿಮಯಗಳನ್ನು ಕಾರ್ಯಕ್ರಮವು ಒಳಗೊಂಡಿತ್ತು. ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಮತ್ತು ಡಬ್ಲ್ಯುಎಚ್ಒ-ಐಆರ್‌ಸಿಎಚ್ ಅಧ್ಯಕ್ಷ ಡಾ. ಕಿಮ್ ಸುಂಗ್ಚೋಲ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ʻಡಬ್ಲ್ಯುಎಚ್ಒ-ಐಆರ್‌ಸಿಎಚ್ʼ ಕಾರ್ಯಪಡೆಗಳಲ್ಲಿ ಭಾರತದ ನಾಯಕತ್ವವನ್ನು ಬಿಂಬಿಸಿದ ಈ ಕಾರ್ಯಕ್ರಮವು ʻಆಯುಷ್ ಸುರಕ್ಷಾ ಪೋರ್ಟಲ್ʼ ಮತ್ತು ʻಇ-ಔಷಧಿʼಯಂತಹ ಪ್ರಮುಖ ಡಿಜಿಟಲ್ ನಿಯಂತ್ರಕ ಸಾಧನಗಳನ್ನು ಪ್ರದರ್ಶಿಸಿತು. ಕಾರ್ಯಾಗಾರದಲ್ಲಿ ಭಾಗವಹಿಸಿದವರು ಪ್ರಮಾಣೀಕರಣ, ಔಷಧ ಜಾಗೃತಿ, ಕ್ಲಿನಿಕಲ್ ಪ್ರಯೋಗಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಟಿಎಂ ಕಾರ್ಯತಂತ್ರ 2025-2034 ಕುರಿತಾದ ಕುರಿತು ತಜ್ಞರ ಉಪನ್ಯಾಸಗಳಲ್ಲಿ ತೊಡಗಿಸಿಕೊಂಡರು. ಜೊತೆಗೆ ʻಪಿಸಿಐಎಂಎಚ್ʼ ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕವಾಗಿ ತೊಡಗಿಸಿಕೊಂಡರು ಮತ್ತು ಆಯುಷ್ ಸಂಸ್ಥೆಗಳಿಗೆ ಭೇಟಿ ನೀಡಿದರು. ಸುರಕ್ಷಿತ ಮತ್ತು ಪರಿಣಾಮಕಾರಿ ಗಿಡಮೂಲಿಕೆ ಔಷಧ ನಿಯಂತ್ರಣಕ್ಕಾಗಿ ಜಾಗತಿಕ ಸಹಕಾರವನ್ನು ಬಲಪಡಿಸುವ ಸದಸ್ಯ ರಾಷ್ಟ್ರಗಳ ಬದ್ಧತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
https://www.pib.gov.in/PressReleasePage.aspx?PRID=2154348
2025ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಯೋಗ ತಜ್ಞರು ಮತ್ತು ಔಷಧೀಯ ಸಸ್ಯ ರೈತರನ್ನು ಗೌರವಿಸಿದ ಆಯುಷ್ ಸಚಿವಾಲಯ
ಆಯುಷ್ ಸಚಿವಾಲಯವು ಕೆಂಪು ಕೋಟೆಯಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ 200 ಪ್ರತಿಷ್ಠಿತ ಆಹ್ವಾನಿತರಿಗೆ ವಿಶೇಷ ಸ್ವಾಗತವನ್ನು ಆಯೋಜಿಸಿತ್ತು - 100 ಯೋಗ ಸಾಧಕರು ಮತ್ತು 100 ಪ್ರಮುಖ ಔಷಧ ಸಸ್ಯ ಕೃಷಿಕರಿಗೆ ವಿಶೇಷ ಆಹ್ವಾನ ನೀಡಲಾಯಿತು. ಕೇಂದ್ರ ಸಚಿವರಾದ ಪ್ರತಾಪ್ ರಾವ್ ಜಾಧವ್ ಮತ್ತು ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಅವರು ಯೋಗ ಪ್ರಚಾರ ಮತ್ತು ಸುಸ್ಥಿರ ಔಷಧೀಯ ಸಸ್ಯ ಕೃಷಿಗೆ ಅತಿಥಿಗಳ ಪ್ರಮುಖ ಕೊಡುಗೆಗಳನ್ನು ಶ್ಲಾಘಿಸಿದರು. ಆರೋಗ್ಯಕರ, ಸ್ವಾವಲಂಬಿ ಭಾರತವನ್ನು ಮುನ್ನಡೆಸುವಲ್ಲಿ ಅವರ ಪಾತ್ರವನ್ನು ಕೊಂಡಾಡಿದರು. ಹಿರಿಯ ಆಯುಷ್ ಅಧಿಕಾರಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮವು ಈ ಗಣ್ಯರನ್ನು ರಾಷ್ಟ್ರೀಯ ಹೆಮ್ಮೆಯ ಸಂಕೇತಗಳಾಗಿ ಗುರುತಿಸಿದ್ದಲ್ಲದೆ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಗಳು ಮತ್ತು ಸಮಗ್ರ ಅಭಿವೃದ್ಧಿಯನ್ನು ಬಲಪಡಿಸುವಲ್ಲಿ ಅಗತ್ಯ ಪಾಲುದಾರರು ಎಂದು ಗುರುತಿಸಿತು.
https://www.pib.gov.in/PressReleasePage.aspx?PRID=2156460
ಗಿಡಮೂಲಿಕೆ ಔಷಧಿಗಳಿಗೆ ʻಜಿಎಂಪಿʼ ಮಾನದಂಡಗಳನ್ನು ಬಲಪಡಿಸಿದ ಡಬ್ಲ್ಯುಎಚ್ಒ-ಸಿಸಿಆರ್‌ಎಸ್ʼ ಪ್ರಾದೇಶಿಕ ಕಾರ್ಯಾಗಾರ
ಆಯುಷ್ ಸಚಿವಾಲಯ ಮತ್ತು ʻಡಬ್ಲ್ಯುಎಚ್ಒ-ಎಸ್ಇಎಆರ್‌ಒʼ ಜಂಟಿಯಾಗಿ ಮುಂಬೈನಲ್ಲಿ ಗಿಡಮೂಲಿಕೆ ಔಷಧಗಳಿಗಾಗಿ ಉತ್ತಮ ಉತ್ಪಾದನಾ ಅಭ್ಯಾಸಗಳ (ಜಿಎಂಪಿ) ನಾಲ್ಕು ದಿನಗಳ ಪ್ರಾದೇಶಿಕ ಕಾರ್ಯಾಗಾರವನ್ನು ಆಯೋಜಿಸಿದ್ದವು. ಭೂತಾನ್, ಥೈಲ್ಯಾಂಡ್, ಶ್ರೀಲಂಕಾ, ನೇಪಾಳ ಮತ್ತು ಭಾರತದ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. ʻಸಿಸಿಆರ್‌ಎಸ್ʼ ಆಯೋಜಿಸಿದ್ದ ಈ ಕಾರ್ಯಕ್ರಮವು ತಜ್ಞರ ನೇತೃತ್ವದ ತಾಂತ್ರಿಕ ಅಧಿವೇಶನಗಳು ಮತ್ತು ಡಬ್ಲ್ಯುಎಚ್ಒ-ಜಿಎಂಪಿ-ಪ್ರಮಾಣೀಕೃತ ಸೌಲಭ್ಯಗಳಿಗೆ ಕ್ಷೇತ್ರ ಭೇಟಿಗಳನ್ನು ಒಳಗೊಂಡಿತ್ತು. ಇದು ಉತ್ತಮ-ಗುಣಮಟ್ಟದ, ಸುರಕ್ಷಿತ ಮತ್ತು ಪರಿಣಾಮಕಾರಿ ಗಿಡಮೂಲಿಕೆ ಔಷಧಿಗಳನ್ನು ಉತ್ಪಾದಿಸುವಲ್ಲಿ ಭಾರತದ ಬಲವಾದ ಸಾಮರ್ಥ್ಯಗಳನ್ನು ಉಲ್ಲೇಖಿಸಿತು. ಗುಣಮಟ್ಟದ ಮಾನದಂಡಗಳನ್ನು ಮುನ್ನಡೆಸುವಲ್ಲಿ ಭಾರತದ ನಾಯಕತ್ವವನ್ನು ʻಡಬ್ಲ್ಯುಎಚ್ಒʼ ಅಧಿಕಾರಿಗಳು ಶ್ಲಾಘಿಸಿದರು. ಗಿಡಮೂಲಿಕೆ ಔಷಧ ಅಭಿವೃದ್ಧಿಯನ್ನು ಆಧುನೀಕರಿಸಲು ಮತ್ತು ಬಲಪಡಿಸಲು ಆಯುಷ್ ಸಚಿವಾಲಯದ ವ್ಯಾಪಕ ಪ್ರಯತ್ನಗಳಿಗೆ ಅನುಗುಣವಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
https://www.pib.gov.in/PressReleasePage.aspx?PRID=2158141
ʻನಾಮ್ʼ ಅನುಷ್ಠಾನ ಮತ್ತು ವಲಯಾದ್ಯಂತ ಸಾಮರ್ಥ್ಯ ವರ್ಧನೆಗೆ ಮಾರ್ಗಸೂಚಿಯನ್ನು ರೂಪಿಸಿದ ಆಯುಷ್ ಶೃಂಗಸಭೆ
ನವದೆಹಲಿಯಲ್ಲಿ ನಡೆದ ಎರಡು ದಿನಗಳ ʻರಾಷ್ಟ್ರೀಯ ಆಯುಷ್ ಮಿಷನ್ ಮತ್ತು ಸಾಮರ್ಥ್ಯ ವರ್ಧನೆ ಶೃಂಗಸಭೆʼಯು ಆಯುಷ್ ಕ್ಷೇತ್ರದಾದ್ಯಂತ ಏಕೀಕರಣ, ನಾವೀನ್ಯತೆ ಮತ್ತು ಸಾಂಸ್ಥಿಕ ಬಲಪಡಿಸುವಿಕೆಯನ್ನು ಮುನ್ನಡೆಸಲು ನೀತಿ ನಿರೂಪಕರು, ತಜ್ಞರು ಮತ್ತು ರಾಜ್ಯ ಪ್ರತಿನಿಧಿಗಳನ್ನು ಒಟ್ಟುಗೂಡಿಸಿತು. ಕೇಂದ್ರ ಸಚಿವರಾದ ಪ್ರತಾಪ್ ರಾವ್ ಜಾಧವ್ ಅವರ ನೇತೃತ್ವದಲ್ಲಿ ನಡೆದ ಶೃಂಗಸಭೆಯು ಹಣಕಾಸು ನಿರ್ವಹಣೆ ಮತ್ತು ಸೇವಾ ವಿತರಣೆಯಿಂದ ಡಿಜಿಟಲ್ ಆರೋಗ್ಯ, ಗುಣಮಟ್ಟ ಭರವಸೆ ಮತ್ತು ಆಧುನಿಕ ಆರೋಗ್ಯ ರಕ್ಷಣೆಯೊಂದಿಗೆ ಏಕೀಕರಣದವರೆಗೆ ಆರು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳ ಬಗ್ಗೆ ಚರ್ಚೆಗಳನ್ನು ಒಳಗೊಂಡಿತ್ತು. ರಾಷ್ಟ್ರೀಯ ಅಭಿಯಾನಗಳು, ದೊಡ್ಡ ಪ್ರಮಾಣದ ನಡವಳಿಕೆ ಬದಲಾವಣೆ, ವರ್ಧಿತ ಮೂಲಸೌಕರ್ಯ ಮತ್ತು ʻವಿಕಸಿತ ಭಾರತ@2047ʼ ಜೊತೆ ಹೊಂದಿಕೆಯಾಗುವ ಭವಿಷ್ಯದ ಪ್ರಸ್ತಾಪಗಳ ನಡುವಿನ ಸಮನ್ವಯವನ್ನು ಡಾ.ವಿ.ಕೆ. ಪಾಲ್ ಮತ್ತು ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಸೇರಿದಂತೆ ಹಿರಿಯ ನಾಯಕರು ಒತ್ತಿ ಹೇಳಿದರು. ರಾಷ್ಟ್ರವ್ಯಾಪಿ ಆಯುಷ್ ಸೇವೆಗಳ ಬೆಳವಣಿಗೆ, ಗುಣಮಟ್ಟ ಮತ್ತು ಲಭ್ಯತೆಯನ್ನು ವೇಗಗೊಳಿಸುವ ಏಕೀಕೃತ ಬದ್ಧತೆಯೊಂದಿಗೆ ಶೃಂಗಸಭೆಯು ಮುಕ್ತಾಯಗೊಂಡಿತು.
https://www.pib.gov.in/PressReleasePage.aspx?PRID=2162389
ಪ್ರಮುಖ ಉಪಕ್ರಮಗಳು, ಜಾಗತಿಕ ಭಾಗವಹಿಸುವಿಕೆ ಮತ್ತು ಮನುಕುಲ-ಭೂಮಿ ಯೋಗಕ್ಷೇಮದ ಬಗ್ಗೆ ನವೀಕೃತ ಗಮನದೊಂದಿಗೆ 10ನೇ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸಲಾಯಿತು
ʻಆಯುಷ್ ಸಚಿವಾಲಯವು ಗೋವಾದ ʻಎಐಐಎʼನಲ್ಲಿ 10ನೇ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಯೋಜಿಸಿತ್ತು. "ಮನುಕುಲ ಮತ್ತು ಭೂಗ್ರಹಕ್ಕಾಗಿ ಆಯುರ್ವೇದ" ಎಂಬ ವಿಷಯಾಧಾರಿತವಾಗಿ ಇದನ್ನು ಆಚರಿಸಲಾಯಿತು. ಇದು ಹೆಚ್ಚುತ್ತಿರುವ ಆಯುರ್ವೇದದ ಜಾಗತಿಕ ಹೆಜ್ಜೆಗುರುತನ್ನು ಒತ್ತಿ ಹೇಳಿದ್ದರ ಜತೆಗೆ ಆಧುನಿಕ ಆರೋಗ್ಯ ಮತ್ತು ಪರಿಸರ ಸವಾಲುಗಳಿಗೆ ಆಯುರ್ವೇದದ ಪ್ರಸ್ತುತತೆಯನ್ನು ಎತ್ತಿ ತೋರಿಸಿತು. ಗೋವಾದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ಮತ್ತು ಶ್ರೀ ಶ್ರೀಪಾದ್ ನಾಯಕ್ ಸೇರಿದಂತೆ ಗಣ್ಯರು ಭಾಗವಹಿಸಿದರು. ರೋಗತಡೆ ಆರೋಗ್ಯ ರಕ್ಷಣೆ, ಯೋಗಕ್ಷೇಮ ಪ್ರವಾಸೋದ್ಯಮ, ಜೀವವೈವಿಧ್ಯ ಸಂರಕ್ಷಣೆ ಮತ್ತು ಸಮಗ್ರ ಔಷಧದಲ್ಲಿ ಆಯುರ್ವೇದದ ಪಾತ್ರವನ್ನು ಗಣ್ಯರು ಒತ್ತಿ ಹೇಳಿದರು. ʻದ್ರಾವ್ಯʼ ಪೋರ್ಟಲ್, ʻದೇಶ್ ಕಾ ಸ್ವಾಸ್ಥ್ಯ ಪರೀಕ್ಷಣ್ʼ ಅಭಿಯಾನದ ವಿಸ್ತರಣೆ, ಸಮಗ್ರ ಆಂಕೊಲಾಜಿ ಘಟಕ ಆರಂಭ ಮತ್ತು ಬಹು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಹಯೋಗಗಳಂತಹ ಹೊಸ ಉಪಕ್ರಮಗಳು ಕಾರ್ಯಕ್ರಮದ ಪ್ರಮುಖ ಘೋಷಣೆಗಳಲ್ಲಿ ಸೇರಿವೆ. ಈ ಕಾರ್ಯಕ್ರಮದಲ್ಲಿ ʻರಾಷ್ಟ್ರೀಯ ಧನ್ವಂತರಿ ಆಯುರ್ವೇದ ಪ್ರಶಸ್ತಿಗಳು-2025ʼ ಅನ್ನು ಸಹ ಪ್ರದಾನ ಮಾಡಿತು. ಇದು ಸುಸ್ಥಿರತೆ, ಸಂಶೋಧನೆ ಮತ್ತು ಸಮಗ್ರ ಯೋಗಕ್ಷೇಮದಲ್ಲಿ ಬೇರೂರಿರುವ ಜಾಗತಿಕ ಆಂದೋಲನವಾಗಿ ಆಯುರ್ವೇದದ ವಿಕಾಸವನ್ನು ಒತ್ತಿಹೇಳುತ್ತದೆ.
https://www.pib.gov.in/PressReleasePage.aspx?PRID=2170053
ಸಾಂಪ್ರದಾಯಿಕ ಔಷಧ ಕುರಿತ 2ನೇ ಜಾಗತಿಕ ಶೃಂಗಸಭೆಗೆ ವೇದಿಕೆ ಕಲ್ಪಿಸಿದ ಆಯುಷ್-ಡಬ್ಲ್ಯುಎಚ್ಒ ಒಪ್ಪಂದ
2025ರ ಡಿಸೆಂಬರ್ 17ರಿಂದ 19ರವರೆಗೆ ನವದೆಹಲಿಯಲ್ಲಿ ಸಾಂಪ್ರದಾಯಿಕ ಔಷಧದ ಕುರಿತ 2ನೇ ಡಬ್ಲ್ಯುಎಚ್ಒ ಜಾಗತಿಕ ಶೃಂಗಸಭೆಯನ್ನು ಆಯೋಜಿಸಲು ಆಯುಷ್ ಸಚಿವಾಲಯವು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಕೇಂದ್ರ ಆಯುಷ್ ಖಾತೆ ಸಹಾಯಕ ಸಚಿವ ಶ್ರೀ ಪ್ರತಾಪರಾವ್ ಜಾಧವ್ ಮತ್ತು ಆಯುಷ್ ಕಾರ್ಯದರ್ಶಿ ಅವರ ಉಪಸ್ಥಿತಿಯಲ್ಲಿ ಔಪಚಾರಿಕವಾಗಿ ಈ ಒಪ್ಪಂದಕ್ಕೆ 2ನೇ ಶೃಂಗಸಭೆ ಯೋಜನಾ ಗುಂಪಿನ ಸಭೆಯಲ್ಲಿ ಸಹಿ ಹಾಕಲಾಯಿತು. ಈ ಶೃಂಗಸಭೆಯು ಜಾಗತಿಕ ತಜ್ಞರು, ನೀತಿ ನಿರೂಪಕರು ಮತ್ತು ಮಧ್ಯಸ್ಥಗಾರರನ್ನು ಒಟ್ಟುಗೂಡಿಸಿತು. ಪುರಾವೆ-ಆಧರಿತ ಸಾಂಪ್ರದಾಯಿಕ ಔಷಧ ಹಾಗೂ ಮಾನವ ಮತ್ತು ಭೂಗ್ರಹದ ಯೋಗಕ್ಷೇಮಕ್ಕೆ ಆಯುರ್ವೇದದ ಕೊಡುಗೆಯನ್ನು ಒತ್ತಿ ಹೇಳಿತು.
https://www.pib.gov.in/PressReleasePage.aspx?PRID=2171378
ಎಐಐಎಗೆ ಭೇಟಿ ನೀಡಿದ ಬ್ರೆಜಿಲ್ ಉಪಾಧ್ಯಕ್ಷರು ಆಯುರ್ವೇದವನ್ನು ಶ್ಲಾಘಿಸಿದರು
ಬ್ರೆಜಿಲ್‌ನ ಉಪಾಧ್ಯಕ್ಷರಾದ ಘನತೆವೆತ್ತ ಶ್ರೀ ಗೆರಾಲ್ಡೊ ಅಲ್ಕ್‌ಮಿನ್ ಅವರು ನವದೆಹಲಿಯ ʻಅಖಿಲ ಭಾರತ ಆಯುರ್ವೇದ ಸಂಸ್ಥೆʼಗೆ (ಎಐಐಎ) ಭೇಟಿ ನೀಡಿದರು. ಆಯುರ್ವೇದವು ಸಮಗ್ರ, ರೋಗತಡೆಗಟ್ಟುವ ಮತ್ತು ಸುಸ್ಥಿರ ಆರೋಗ್ಯ ರಕ್ಷಣೆಯನ್ನು ಒದಗಿಸುವ 5,000 ವರ್ಷಗಳಷ್ಟು ಪುರಾತನ ಸಂಪತ್ತು ಎಂದು ಶ್ಲಾಘಿಸಿದರು. ಶಿಕ್ಷಣ, ಸಂಶೋಧನೆ ಮತ್ತು ಕ್ಲಿನಿಕಲ್ ಉತ್ಕೃಷ್ಟತೆಗೆ ʻಎಐಐಎʼ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದ ಅವರು, ನೈಸರ್ಗಿಕ ಆರೋಗ್ಯ ವ್ಯವಸ್ಥೆಗಳಿಗೆ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯನ್ನು ಎತ್ತಿ ತೋರಿದರು. ತಮ್ಮ ಭೇಟಿ ಹೆಚ್ಚು ಸಮಯದವರೆಗೆ ಇದ್ದಿದ್ದರೆ ತಮ್ಮ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ಲಘು ಧಾಟಿಯಲ್ಲಿ ಹೇಳಿದರು. ಉನ್ನತ ಮಟ್ಟದ ಬ್ರೆಜಿಲಿಯನ್ ನಿಯೋಗವು ʻಎಐಐಎʼನ ಸಮಗ್ರ ಆರೋಗ್ಯ ಉಪಕ್ರಮಗಳು, ಪ್ರಸ್ತುತ ನಡೆಯುತ್ತಿರುವ ಸಹಯೋಗಗಳು ಮತ್ತು ಬ್ರೆಜಿಲಿಯನ್ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಪರಿಶೀಲಿಸಿತು. ಸಾಂಪ್ರದಾಯಿಕ ವೈದ್ಯ, ಜಂಟಿ ಸಂಶೋಧನೆ ಮತ್ತು ಪುರಾವೆ ಆಧಾರಿತ ಜಾಗತಿಕ ಆರೋಗ್ಯ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಭಾರತ-ಬ್ರೆಜಿಲ್ ಸಹಕಾರವನ್ನು ಪುನರುಚ್ಚರಿಸಿತು.
https://www.pib.gov.in/PressReleasePage.aspx?PRID=2180089
ರಾಯಭಾರಿಗಳ ಸ್ವಾಗತದೊಂದಿಗೆ 2ನೇ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧ ಶೃಂಗಸಭೆಗೆ ವಿಧ್ಯುಕ್ತ ಚಾಲನೆ
ಆಯುಷ್ ಸಚಿವಾಲಯವು ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ, ಡಿಸೆಂಬರ್ 2025ರಲ್ಲಿ ನಿಗದಿಯಾಗಿದ್ದ ʻಸಾಂಪ್ರದಾಯಿಕ ಔಷಧ ಕುರಿತಾದ 2ನೇ ಡಬ್ಲ್ಯುಎಚ್ಒ ಜಾಗತಿಕ ಶೃಂಗಸಭೆʼಯ ಆಶಯ, ಆದ್ಯತೆಗಳು ಮತ್ತು ಜಾಗತಿಕ ಮಹತ್ವವನ್ನು ವಿವರಿಸಲು ನವದೆಹಲಿಯಲ್ಲಿ ರಾಯಭಾರಿಗಳಿಗೆ ಸ್ವಾಗತ ಕೋರಿತು. ಕೇಂದ್ರ ಸಚಿವ ಶ್ರೀ ಪ್ರತಾಪರಾವ್ ಜಾಧವ್, ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ, ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಮತ್ತು ಡಬ್ಲ್ಯುಎಚ್ಒ ಉನ್ನತ ಅಧಿಕಾರಿಗಳು ಸೇರಿದಂತೆ ಹಲವು ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು. ಸಂಶೋಧನೆ, ಜಾಗತಿಕ ಸಹಯೋಗ ಮತ್ತು ವರ್ಧಿತ ಗುಣಮಟ್ಟ ಹಾಗೂ ಸುರಕ್ಷತಾ ನೀತಿಗಳ ಮೂಲಕ ಪುರಾವೆ-ಆಧರಿತ ಸಾಂಪ್ರದಾಯಿಕ ಔಷಧವನ್ನು ಮುನ್ನಡೆಸುವಲ್ಲಿ ಭಾರತದ ಹೆಚ್ಚುತ್ತಿರುವ ಪಾತ್ರವನ್ನು ನಾಯಕರು ಒತ್ತಿ ಹೇಳಿದರು. ಸಮಾನ, ಎಲ್ಲರಿಗೂ ಲಭ್ಯವಾಗುವ ಮತ್ತು ಜನ-ಕೇಂದ್ರಿತ ಆರೋಗ್ಯ ವ್ಯವಸ್ಥೆಗಳಿಗಾಗಿ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುವ ಅಂತರರಾಷ್ಟ್ರೀಯ ಬದ್ಧತೆಯನ್ನು ಈ ಕಾರ್ಯಕ್ರಮವು ಪುನರುಚ್ಚರಿಸಿತು. ಶೃಂಗಸಭೆಯಲ್ಲಿ ಉನ್ನತ ಮಟ್ಟದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರಗಳನ್ನು ಒತ್ತಾಯಿಸಲಾಯಿತು.
https://www.pib.gov.in/PressReleasePage.aspx?PRID=2188383
ನೈಸರ್ಗಿಕ ಜೀವನವಿಧಾನ ಮತ್ತು ಗಾಂಧಿ ಆದರ್ಶಗಳ ಮೇಲೆ ಗಮನ ಕೇಂದ್ರೀಕರಿಸಿ ʻ8ನೇ ಪ್ರಕೃತಿ ಚಿಕಿತ್ಸೆ ದಿನʼವನ್ನು ಆಚರಿಸಿದ ಭಾರತ
ಭಾರತವು ಪುಣೆಯ ʻನಿಸರ್ಗ್ ಗ್ರಾಮʼದಲ್ಲಿ 8ನೇ ʻಪ್ರಕೃತಿ ಚಿಕಿತ್ಸೆ ದಿನʼವನ್ನು ಆಚರಿಸಿತು. ಪ್ರಕೃತಿ ಮತ್ತು ಗಾಂಧಿ ಮೌಲ್ಯಗಳೊಂದಿಗೆ ಸಾಮರಸ್ಯದಿಂದ ಬೇರೂರಿರುವ ಸಮಗ್ರ ಜೀವನಶೈಲಿಯಾಗಿ ಪ್ರಕೃತಿ ಚಿಕಿತ್ಸೆಯನ್ನು ಎತ್ತಿ ತೋರಿಸಲಾಯಿತು. ಮಹಾರಾಷ್ಟ್ರ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್ ಅವರು ಪ್ರಕೃತಿ ಚಿಕಿತ್ಸೆಯನ್ನು ಸ್ವಯಂ-ಗುಣಪಡಿಸಲು ಅನುವು ಮಾಡಿಕೊಡುವ ಮತ್ತು ರಾಷ್ಟ್ರೀಯ ಆರೋಗ್ಯ ಗುರಿಗಳನ್ನು ಬೆಂಬಲಿಸುವ ಜೀವನ ವಿಧಾನವಾಗಿದೆ ಎಂದು ಒತ್ತಿ ಹೇಳಿದರು. ಕೇಂದ್ರ ಆಯುಷ್ ಸಚಿವ ಶ್ರೀ ಪ್ರತಾಪರಾವ್ ಜಾಧವ್ ಅವರು ಆರೋಗ್ಯವನ್ನು ಪ್ರಕೃತಿ ಆಧಾರಿತ ಜೀವನದ ಮೂಲಕ ಗಳಿಸಬಹುದೇ ವಿನಃ ಖರೀದಿಸಲಾಗುವುದಿಲ್ಲ ಎಂದು ಒತ್ತಿ ಹೇಳಿದರು. ʻನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ನ್ಯಾಚುರೋಪತಿʼ ಆಯೋಜಿಸಿದ್ದ ಮೂರು ದಿನಗಳ ʻನೈಸರ್ಗಿಕ ಆಹಾರ ಉತ್ಸವʼದಲ್ಲಿ ವ್ಯಾಪಕ ಭಾಗವಹಿಸುವಿಕೆ ಕಂಡುಬಂದಿತು. ಪುಸ್ತಕ ಬಿಡುಗಡೆ, ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ, ಪ್ರಶಸ್ತಿ ಪ್ರದಾನದ ಜೊತೆಗೆ ಮಹಾತ್ಮ ಗಾಂಧಿಯವರ ನೈಸರ್ಗಿಕ ಆರೋಗ್ಯ ಮತ್ತು ಸ್ವಾವಲಂಬನೆಯ ಪರಂಪರೆಗೆ ಗೌರವ ಸಲ್ಲಿಸಲಾಯಿತು.
https://www.pib.gov.in/PressReleasePage.aspx?PRID=2191471®=3&lang=1
ಬರ್ಲಿನ್‌ನಲ್ಲಿ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಸಹಕಾರವನ್ನು ಆಳಗೊಳಿಸಿದ ಭಾರತ-ಜರ್ಮನಿ
ಬರ್ಲಿನ್‌ನಲ್ಲಿ ನಡೆದ ಪರ್ಯಾಯ ಔಷಧ ಕುರಿತ 3ನೇ ಜಂಟಿ ಕಾರ್ಯಪಡೆಯ ಸಭೆಯಲ್ಲಿ ಭಾರತ ಮತ್ತು ಜರ್ಮನಿ ಸಾಂಪ್ರದಾಯಿಕ ಮತ್ತು ಸಮಗ್ರ ಔಷಧದ ಕುರಿತು ದ್ವಿಪಕ್ಷೀಯ ಸಹಕಾರಕ್ಕೆ ಸಹಮತ ವ್ಯಕ್ತಪಡಿಸಿದವು. ಸಾಂಪ್ರದಾಯಿಕ ಔಷಧವನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಸಂಯೋಜಿಸುವುದು, ಮರುಪಾವತಿ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಿಯಂತ್ರಕ ಚೌಕಟ್ಟುಗಳನ್ನು ಬಲಪಡಿಸುವತ್ತ ಸಭೆಯು ಗಮನ ಹರಿಸಿತು. ಆಯುಷ್ ಸಚಿವಾಲಯ ಮತ್ತು ಜರ್ಮನಿಯ ಫೆಡರಲ್ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಚರ್ಚೆಗಳು ಪುರಾವೆ-ಆಧರಿತ, ಜನ ಕೇಂದ್ರಿತ ಆರೋಗ್ಯ ರಕ್ಷಣೆಗೆ ಸಮಾನ ಬದ್ಧತೆಯನ್ನು ಪ್ರತಿಬಿಂಬಿಸಿದವು. ಸಂಶೋಧನಾ ಸಹಯೋಗ ಮತ್ತು ನೀತಿ ಜೋಡಣೆಯನ್ನು ಅನ್ವೇಷಿಸಲು ಭಾರತೀಯ ನಿಯೋಗವು ಪ್ರಮುಖ ಜರ್ಮನ್ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ನಿಯಂತ್ರಕ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡಿತು. ಈ ಕಾರ್ಯಕ್ರಮವು ಆಯುಷ್ ವ್ಯವಸ್ಥೆಗಳನ್ನು ಜಾಗತೀಕರಣಗೊಳಿಸುವ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ಆರೋಗ್ಯ ರಕ್ಷಣೆಗೆ ಸುರಕ್ಷಿತ, ನಿಯಂತ್ರಿತ ಪ್ರವೇಶವನ್ನು ವಿಸ್ತರಿಸುವ ಭಾರತದ ಪ್ರಯತ್ನಗಳನ್ನು ಬಲಪಡಿಸಿತು.
https://www.pib.gov.in/PressReleasePage.aspx?PRID=2192305®=3&lang=1
ʻಐಐಟಿಎಫ್-2025ʼರಲ್ಲಿ ಆಯುಷ್ ಪೆವಿಲಿಯನ್‌ಗೆ ಹರಿದುಬಂದ ಭಾರಿ ಜನಸಮೂಹ
ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ-2025ರಲ್ಲಿ ʻಆಯುಷ್ ಪೆವಿಲಿಯನ್ʼ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿತು. ಇಲ್ಲಿ ಭಾರತದ ಶ್ರೀಮಂತ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಗಳನ್ನು "ಆಯುಷ್ ಕೆ ಸಾಥ್ - ಸ್ವಸ್ಥ ಭಾರತ, ಶ್ರೇಷ್ಠ ಭಾರತ" ಎಂಬ ವಿಷಯದ ಅಡಿಯಲ್ಲಿ ಪ್ರದರ್ಶಿಸಲಾಯಿತು. ಸಂದರ್ಶಕರು ಉಚಿತ ಸಮಾಲೋಚನೆಗಳು, ಔಷಧಗಳು, ನೇರ ಪ್ರದರ್ಶನಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ, ಸೋವಾ-ರಿಗ್ಪಾ ಮತ್ತು ಹೋಮಿಯೋಪತಿಯೊಂದಿಗೆ ತೊಡಗಿಸಿಕೊಂಡರು. ಸಂಸ್ಥೆಗಳು ಆಯುಷ್ ಆಧಾರಿತ ಪೌಷ್ಠಿಕಾಂಶ, ಸಾತ್ವಿಕ ಆಹಾರ, ರೋಗತಡೆ ಆರೋಗ್ಯ ಆಹಾರಗಳು, ಯೋಗ ಅಧಿವೇಶನಗಳು ಮತ್ತು ಡಿಜಿಟಲ್ ಮೌಲ್ಯಮಾಪನಗಳನ್ನು ಎತ್ತಿ ತೋರಿದವು. ಔಷಧೀಯ ಸಸಿಗಳು, ಸ್ವಾಸ್ಥ್ಯ ನವೋದ್ಯಮಗಳು ಮತ್ತು ಮಕ್ಕಳ ಸ್ನೇಹಿ ಚಟುವಟಿಕೆಗಳು ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದವು. ಸಮಗ್ರ, ರೊಗ ತಡೆಗಟ್ಟುವ ಮತ್ತು ಜನ ಕೇಂದ್ರಿತ ಆರೋಗ್ಯ ರಕ್ಷಣೆಗೆ ಆಯುಷ್ ಸಚಿವಾಲಯದ ಬದ್ಧತೆಯನ್ನು ಪೆವಿಲಿಯನ್ ಪ್ರತಿಬಿಂಬಿಸಿತು.
https://www.pib.gov.in/PressReleasePage.aspx?PRID=2192428®=3&lang=1
ನವದೆಹಲಿಯಲ್ಲಿ ಸಾಂಪ್ರದಾಯಿಕ ಔಷಧ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ಎರಡನೇ ಜಾಗತಿಕ ಶೃಂಗಸಭೆ
ಸಮತೋಲಿತ ಮತ್ತು ಎಲ್ಲರನ್ನೂ ಒಳಗೊಂಡ ಆರೋಗ್ಯ ವ್ಯವಸ್ಥೆಗಳನ್ನು ಮುನ್ನಡೆಸಲು ಜಾಗತಿಕ ನೀತಿ ನಿರೂಪಕರು, ವಿಜ್ಞಾನಿಗಳು ಮತ್ತು ವೈದ್ಯರನ್ನು ಒಟ್ಟುಗೂಡಿಸುವ ಸಾಂಪ್ರದಾಯಿಕ ಔಷಧದ ಎರಡನೇ ವಿಶ್ವ ಆರೋಗ್ಯ ಶೃಂಗಸಭೆಯು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಿತು. ಕೇಂದ್ರ ಆಯುಷ್ ಸಚಿವ ಶ್ರೀ ಪ್ರತಾಪರಾವ್ ಜಾಧವ್ ಅವರ ಉಪಸ್ಥಿತಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಶ್ರೀ ಜೆ.ಪಿ.ನಡ್ಡಾ ಅವರು ಶೃಂಗಸಭೆಯನ್ನು ಉದ್ಘಾಟಿಸಿದರು. ವಿಜ್ಞಾನ ಮತ್ತು ಮಾನದಂಡಗಳ ಮೂಲಕ ಸಾಂಪ್ರದಾಯಿಕ ವೈದ್ಯವನ್ನು ಮುಖ್ಯವಾಹಿನಿಗೆ ತರುವಲ್ಲಿ ಭಾರತ-ಡಬ್ಲ್ಯುಎಚ್ಒ ಸಹಯೋಗವನ್ನು ಇದು ಒತ್ತಿಹೇಳಿತು. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಭಾರತದ ನಾಯಕತ್ವ ಮತ್ತು ಹೊಸ ಜಾಗತಿಕ ಸಾಂಪ್ರದಾಯಿಕ ಔಷಧ ಕಾರ್ಯತಂತ್ರ 2025-2034 ಅನ್ನು ಶ್ಲಾಘಿಸಿದರು. ಅಶ್ವಗಂಧ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಮಗ್ರ ಅಧಿವೇಶನಗಳು ಮತ್ತು ತಜ್ಞರ ಚರ್ಚೆಗಳು ಜಾಗತಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಪುರಾವೆ ಆಧಾರಿತ ಚಿಕಿತ್ಸೆಯ ಏಕೀಕರಣ, ನಿಯಂತ್ರಣ ಮತ್ತು ಸುಸ್ಥಿರತೆಯನ್ನು ಎತ್ತಿ ತೋರಿಸಿದವು.
https://www.pib.gov.in/PressReleasePage.aspx?PRID=2205535®=3&lang=1
ನವದೆಹಲಿಯಲ್ಲಿ ನಡೆದ ಸಾಂಪ್ರದಾಯಿಕ ಔಷಧ ಕುರಿತಾದ ಡಬ್ಲ್ಯುಎಚ್ಒ ಜಾಗತಿಕ ಶೃಂಗಸಭೆಯ ಎರಡನೇ ದಿನದಂದು, ಸಭೆಯಲ್ಲಿ ಪಾಲ್ಗೊಂಡ ರಾಷ್ಟ್ರಗಳೊಂದಿಗೆ ಉನ್ನತ ಮಟ್ಟದ ಕಾರ್ಯಕ್ರಮಗಳು ಮತ್ತು ಹದಿನಾರು ದ್ವಿಪಕ್ಷೀಯ ಸಭೆಗಳ ಮೂಲಕ ಭಾರತವು ತನ್ನ ಜಾಗತಿಕ ನಾಯಕತ್ವವನ್ನು ಬಲಪಡಿಸಿತು. ಕೇಂದ್ರ ಆಯುಷ್ ಸಚಿವ ಶ್ರೀ ಪ್ರತಾಪರಾವ್ ಜಾಧವ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರನ್ನು ಭೇಟಿ ಮಾಡಿ, ಸಾಂಪ್ರದಾಯಿಕ, ಪೂರಕ ಮತ್ತು ಸಮಗ್ರ ಔಷಧಕ್ಕೆ ʻಡಬ್ಲ್ಯೂಎಚ್‌ಒʼ ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ಸಮಗ್ರ ಮತ್ತು ಸಮಾನಾಂತರ ಅಧಿವೇಶನಗಳು ʻಡಬ್ಲ್ಯುಎಚ್ಒʼ ಜಾಗತಿಕ ಸಾಂಪ್ರದಾಯಿಕ ಔಷಧ ಕಾರ್ಯತಂತ್ರ 2025-2034ಕ್ಕೆ ಹೊಂದಿಕೆಯಾಗುವ ಸಂಶೋಧನೆ, ನಿಯಂತ್ರಣ, ಹೂಡಿಕೆ ಮತ್ತು ಆರೋಗ್ಯ ವ್ಯವಸ್ಥೆಯ ಏಕೀಕರಣವನ್ನು ಎತ್ತಿ ತೋರಿಸಿದವು. ಆಯುರ್ವೇದ, ಅಂತಾರಾಷ್ಟ್ರೀಯ ಸಹಕಾರ ಹೆಚ್ಚಳ, ಪುರಾವೆ ಆಧರಿತ ಚಕಿತ್ಸಾ ಪದ್ಧತಿಗಳು ಮತ್ತು ಸದೃಢ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಒಪ್ಪಂದದ ಮೂಲಕ ಭಾರತ ಮತ್ತು ಕ್ಯೂಬಾ ಸಹಯೋಗವನ್ನು ವಿಸ್ತರಿಸಿದವು.
https://www.pib.gov.in/PressReleasePage.aspx?PRID=2206253®=3&lang=1
ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧ ಶೃಂಗಸಭೆ ಸಂಪನ್ನ; ಪುರಾವೆ ಆಧಾರಿತ ಜಾಗತಿಕ ಕ್ರಮಕ್ಕೆ ಪ್ರಧಾನಿ ಮೋದಿ ಕರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಸಾಂಪ್ರದಾಯಿಕ ಔಷಧ ಕುರಿತ ಎರಡನೇ ಡಬ್ಲ್ಯುಎಚ್ಒ ಜಾಗತಿಕ ಶೃಂಗಸಭೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಪುರಾವೆ ಆಧಾರಿತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಾಂಪ್ರದಾಯಿಕ ಔಷಧದ ಮೂಲಕ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಸಮತೋಲನವನ್ನು ಪುನಃಸ್ಥಾಪಿಸಲು ಜಾಗತಿಕ ಕ್ರಮಕ್ಕೆ ಅವರು ಕರೆ ನೀಡಿದರು. ಭಾರತದ ನಾಯಕತ್ವವನ್ನು ಎತ್ತಿ ತೋರಿದ ಅವರು, ವಿಜ್ಞಾನ, ತಂತ್ರಜ್ಞಾನ ಮತ್ತು ಪ್ರಾಚೀನ ಜ್ಞಾನದ ಒಮ್ಮುಖವನ್ನು ಒತ್ತಿ ಹೇಳಿದರು. ಸಾಂಪ್ರದಾಯಿಕ ಔಷಧವು ಸಂಶೋಧನೆ, ನಿಯಂತ್ರಣ ಮತ್ತು ವಿಶ್ವಾಸಾರ್ಹತೆಯ ಜಾಗತಿಕ ಮಾನದಂಡಗಳನ್ನು ಪೂರೈಸಬೇಕು ಎಂದು ಹೇಳಿದರು. ಅಶ್ವಗಂಧವು ವೈಜ್ಞಾನಿಕ ಮೌಲ್ಯೀಕರಣದ ಮೂಲಕ ವಿಶ್ವಾದ್ಯಂತ ಸ್ವೀಕಾರವನ್ನು ಗಳಿಸಿದ ಸಮಯಾತೀತ ಗಿಡಮೂಲಿಕೆ ಎಂದು ಅವರು ಉಲ್ಲೇಖಿಸಿದರು.
ಸಂಶೋಧನೆ, ನಿಯಂತ್ರಣ ಮತ್ತು ಸಾಮರ್ಥ್ಯ ವರ್ಧನೆಯ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿರುವ ಜಾಮ್‌ನಗರದಲ್ಲಿ ʻಸಾಂಪ್ರದಾಯಿಕ ಔಷಧ ಕುರಿತಾದ ಡಬ್ಲ್ಯುಎಚ್ಒ ಜಾಗತಿಕ ಶೃಂಗಸಭೆʼ ಆಯೋಜಿಸುತ್ತಿರುವುದಕ್ಕೆ ಪ್ರಧಾನಮಂತ್ರಿಯವರು ಹೆಮ್ಮೆ ವ್ಯಕ್ತಪಡಿಸಿದರು. ಮೌಲ್ಯೀಕರಿಸಿದ ಜ್ಞಾನ ಮತ್ತು ನೀತಿ ಸಂಪನ್ಮೂಲಗಳಿಗೆ ಸಮಾನ ಜಾಗತಿಕ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಸಾಂಪ್ರದಾಯಿಕ ಔಷಧ ಜಾಗತಿಕ ಗ್ರಂಥಾಲಯದ ಪ್ರಾರಂಭದಂತಹ ಉಪಕ್ರಮಗಳನ್ನು ಅವರು ಒತ್ತಿ ಹೇಳಿದರು.
ಸಮಾರಂಭದಲ್ಲಿ ಪ್ರಧಾನಮಂತ್ರಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ವರ್ಚುವಲ್ ಮಾದರಿಯಲ್ಲಿ ಜಂಟಿಯಾಗಿ ನವದೆಹಲಿಯಲ್ಲಿ ʻವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿʼಯನ್ನು ಉದ್ಘಾಟಿಸಿದರು. ಈ ವೇಳೆ ಹಲವು ಆಯುಷ್ ಉಪಕ್ರಮಗಳಿಗೆ ಚಾಲನೆ ನೀಡಲಾಯಿತು. ಆಯುಷ್ ಗ್ರಿಡ್‌ನ ಮಾಸ್ಟರ್ ಡಿಜಿಟಲ್ ಪೋರ್ಟಲ್ ಆಗಿರುವ ʻಮೈ ಆಯುಷ್ ಇಂಟಿಗ್ರೇಟೆಡ್ ಸರ್ವೀಸಸ್ ಪೋರ್ಟಲ್ʼ(ಎಂಎಐಎಸ್‌ಪಿ), ಗುಣಮಟ್ಟದ ಆಯುಷ್ ಉತ್ಪನ್ನಗಳು ಮತ್ತು ಸೇವೆಗಳಿಗೆ ಜಾಗತಿಕ ಮಾನದಂಡವಾಗಿ ʻಆಯುಷ್ ಮಾರ್ಕ್ʼ, ಅಶ್ವಗಂಧದ ಸ್ಮರಣಾರ್ಥ ಅಂಚೆ ಚೀಟಿ, ಯೋಗ ತರಬೇತಿ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ವರದಿ ಮತ್ತು "ಫ್ರಮ್ ರೂಟ್ಸ್ ಟು ಗ್ಲೋಬಲ್ ರೀಚ್: ಆಯುಷ್‌ನಲ್ಲಿ ಪರಿವರ್ತನೆಯ 11 ವರ್ಷಗಳು." ಪುಸ್ತಕ ಬಿಡುಗಡೆ ಸೇರಿವೆ. ʻಯೋಗದ ಉತ್ತೇಜನ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿʼಗಳನ್ನು ಪ್ರಧಾನಿ ಮೋದಿ ಅವರು ಪ್ರದಾನ ಮಾಡಿದರು.
ಸಾಂಪ್ರದಾಯಿಕ ಔಷಧವನ್ನು ಪರಂಪರೆ ಮಟ್ಟದಿಂದ ಮುಖ್ಯವಾಹಿನಿಯ ಆರೋಗ್ಯ ರಕ್ಷಣೆ ಮಟ್ಟಕ್ಕೆ ಎತ್ತರಿಸಿದ್ದಕ್ಕಾಗಿ ಡಾ. ಟೆಡ್ರೊಸ್ ಅವರು ಭಾರತವನ್ನು ಶ್ಲಾಘಿಸಿದರು. ಕೇಂದ್ರ ಸಚಿವರಾದ ಶ್ರೀ ಜೆ.ಪಿ.ನಡ್ಡಾ ಮತ್ತು ಶ್ರೀ ಪ್ರತಾಪರಾವ್ ಜಾಧವ್ ಅವರು ಸಮಗ್ರ, ಜನ ಕೇಂದ್ರಿತ ಆರೋಗ್ಯ ರಕ್ಷಣೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ʻದೆಹಲಿ ಘೋಷಣೆʼಯನ್ನು ಅಂಗೀಕರಿಸುವುದರೊಂದಿಗೆ ಶೃಂಗಸಭೆಯು ಸಂಪನ್ನಗೊಂಡಿತು. ಸಾಕ್ಷ್ಯ, ಏಕೀಕರಣ ಮತ್ತು ಸಮಾನತೆಯ ಬಗ್ಗೆ ಬಲವಾದ ಜಾಗತಿಕ ಒಮ್ಮತವನ್ನು ಇದು ಸೂಚಿಸುತ್ತದೆ.
https://www.pib.gov.in/PressReleasePage.aspx?PRID=2206859®=3&lang=1
ʻವಿಶ್ವ ಧ್ಯಾನ ದಿನʼವನ್ನು ಆಚರಿಸಿದ ʻಎಂಡಿಎನ್ಐವೈʼ, ಧ್ಯಾನದ ವೈಜ್ಞಾನಿಕ ಪ್ರಯೋಜನಗಳಿಗೆ ಒತ್ತು
ʻಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಯೋಗʼ(ಎಂಡಿಎನ್ಐವೈ) ಸಂಸ್ಥೆಯು ʻವಿಶ್ವ ಧ್ಯಾನ ದಿನʼವನ್ನು ಆಚರಿಸುವ ಮೂಲಕ ಒತ್ತಡ ನಿರ್ವಹಣೆ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಧ್ಯಾನವನ್ನು ವೈಜ್ಞಾನಿಕ ಮತ್ತು ಪರಿಣಾಮಕಾರಿ ಸಾಧನವಾಗಿ ಎತ್ತಿ ತೋರಿಸಿತು. ಭಾವನಾತ್ಮಕ ನಿಯಂತ್ರಣ ಮತ್ತು ಒತ್ತಡ-ಸಂಬಂಧಿತ ಅಸ್ವಸ್ಥತೆಗಳನ್ನು ಕಡಿಮೆ ಮಾಡುವಲ್ಲಿ ಧ್ಯಾನದ ಪಾತ್ರವನ್ನು ತಜ್ಞರು ಒತ್ತಿಹೇಳಿದರು. ಈ ಬಗ್ಗೆ ಯೋಗ ಪಠ್ಯಗಳು ಮತ್ತು ಆಧುನಿಕ ವೈದ್ಯಕೀಯ ಸಂಶೋಧನೆಗಳಿಂದ ಈ ಬಗ್ಗೆ ಉಲ್ಲೇಖಗಳನ್ನು ನೀಡಿದರು. ಔದ್ಯೋಗಿಕ ಮತ್ತು ಜೀವನಶೈಲಿಯ ಒತ್ತಡವನ್ನು ಪರಿಹರಿಸಲು ಪ್ರಾಚೀನ ಯೋಗ ಜ್ಞಾನವನ್ನು ಸಮಕಾಲೀನ ವಿಜ್ಞಾನದೊಂದಿಗೆ ಸಂಯೋಜಿಸಲು ಭಾಷಣಕಾರರು ಒತ್ತಿ ಹೇಳಿದರು. ಕಾರ್ಯಕ್ರಮವು ʻಗೈಡೆಡ್ ಮೆಡಿಟೇಷನ್ʼ ಶಿಬಿರಗಳು ಮತ್ತು ಪ್ರಾಯೋಗಿಕ ಪ್ರದರ್ಶನಗಳನ್ನು ಒಳಗೊಂಡಿತ್ತು. ಇವುಗಳ ದೈನಂದಿನ ಅಭ್ಯಾಸವನ್ನು ಪ್ರೋತ್ಸಾಹಿಸಲಾಯಿತು. ಪುರಾವೆ ಆಧಾರಿತ ಯೋಗ ಮತ್ತು ಧ್ಯಾನ ಅಭ್ಯಾಸಗಳ ಮೂಲಕ ಸಮಗ್ರ ಆರೋಗ್ಯವನ್ನು ಉತ್ತೇಜಿಸುವ ಆಯುಷ್ ಸಚಿವಾಲಯದ ಬದ್ಧತೆಯನ್ನು ಈ ಕಾರ್ಯಕ್ರಮವು ಬಲಪಡಿಸಿತು.
https://www.pib.gov.in/PressReleasePage.aspx?PRID=2207225®=3&lang=1
ನವದೆಹಲಿಯ ವಾಣಿಜ್ಯ ಭವನದಲ್ಲಿ ನಡೆದ ʻಆಯುಷ್-ಉದ್ಯಮದ ಸಭೆʼಯಲ್ಲಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ಶ್ರೀ ಪ್ರತಾಪರಾವ್ ಜಾಧವ್ ಅವರು ʻಆಯುಷ್ ನಿವೇಶ್ ಸಾರಥಿʼಯನ್ನು ಅನಾವರಣಗೊಳಿಸಿದರು.
ಭಾರತವನ್ನು ಸಾಂಪ್ರದಾಯಿಕ ಔಷಧ ಮತ್ತು ಯೋಗಕ್ಷೇಮದ ಜಾಗತಿಕ ಕೇಂದ್ರವನ್ನಾಗಿ ಮಾಡುವ ಮಹತ್ವದ ಹೆಜ್ಜೆಯ ಭಾಗವಾಗಿ, ಇನ್‌ವೆಸ್ಟ್ ಇಂಡಿಯಾದ ಸಹಯೋಗದೊಂದಿಗೆ ʻಆಯುಷ್ ಗ್ರಿಡ್ʼ ಅಭಿವೃದ್ಧಿಪಡಿಸಿದ ʻಆಯುಷ್ ನಿವೇಶ್ ಸಾರಥಿʼ ಪೋರ್ಟಲ್ ಅನ್ನು 29 ಮೇ 2025 ರಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಹಾಗೂ ಕೇಂದ್ರ ರಾಜ್ಯ ಸಚಿವ(ಸ್ವತಂತ್ರ ನಿರ್ವಹಣೆ) ಶ್ರೀ ಪ್ರತಾಪರಾವ್ ಜಾಧವ್ ಅವರು ಪ್ರಾರಂಭಿಸಿದರು. ನವದೆಹಲಿಯ ವಾಣಿಜ್ಯ ಭವನದಲ್ಲಿ ಆಯುಷ್ ಪಾಲುದಾರರು/ಉದ್ಯಮ ಸಂವಾದ ಸಭೆಯಲ್ಲಿ ಇದಕ್ಕೆ ಚಾಲನೆ ನೀಡಲಾಯಿತು. ಈ ಪೋರ್ಟಲ್ ಭಾರತದ ಪ್ರಾಚೀನ ಸ್ವಾಸ್ಥ್ಯ ವ್ಯವಸ್ಥೆಗಳನ್ನು ಆಧುನಿಕ, ಹೂಡಿಕೆ-ಸಿದ್ಧ ವಲಯವಾಗಿ ಪರಿವರ್ತಿಸುವ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ.
ನೀತಿ ಚೌಕಟ್ಟುಗಳು, ಪ್ರೋತ್ಸಾಹಕಗಳು, ಹೂಡಿಕೆ-ಸಿದ್ಧ ಯೋಜನೆಗಳು ಮತ್ತು ನೈಜ-ಸಮಯದ ಸೌಲಭ್ಯವನ್ನು ಒಳಗೊಂಡಿರುವ ಏಕೀಕೃತ ಇಂಟರ್ಫೇಸ್ ಅನ್ನು ವೇದಿಕೆ ನೀಡುತ್ತದೆ. ಜಾಗತಿಕ ಮತ್ತು ದೇಶೀಯ ಹೂಡಿಕೆದಾರರಿಗೆ ಕಾರ್ಯತಂತ್ರದ ಸಾಧನವಾಗಿ ಸ್ಥಾನ ಪಡೆದಿರುವ ಇದು ಭಾರತದ ಬೆಳೆಯುತ್ತಿರುವ ಆಯುಷ್ ಉದ್ಯಮವನ್ನು ಮತ್ತಷ್ಟು ಬಲಪಡಿಸುತ್ತದೆ.
ʻಆಯುಷ್ ನಿವೇಶ್ ಸಾರಥಿʼ ಮೂಲಕ ಹೂಡಿಕೆಯನ್ನು ವೇಗಗೊಳಿಸಲು, ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಜೊತೆಗೆ ಸಾಂಪ್ರದಾಯಿಕ ಔಷಧ ಮತ್ತು ಯೋಗಕ್ಷೇಮದಲ್ಲಿ ಭಾರತದ ನಾಯಕತ್ವವನ್ನು ಪ್ರದರ್ಶಿಸುವ ಗುರಿಯನ್ನು ಸರ್ಕಾರ ಹೊಂದಿದೆ.
https://www.pib.gov.in/PressReleasePage.aspx?PRID=2134202®=3&lang=2
*****
(ಪ್ರಕಟಣೆ ಐ.ಡಿ.: 2208871)
ವಿಸಿಟರ್ ಕೌಂಟರ್ : 50