ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಕಸಿತ ಭಾರತ ಜಿ ರಾಮ್ ಜಿ ಮಸೂದೆ ಕುರಿತು ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 20 DEC 2025 3:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾನ್ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದು, ಅದರಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಮಸೂದೆಯ ಉದ್ದೇಶಗಳನ್ನು ವಿವರಿಸಲಾಗಿದೆ.

ಲೇಖನವು, ಉದ್ಯೋಗ ಭರವಸೆಯನ್ನು ಬಲಪಡಿಸುವುದು, ಸ್ಥಳೀಯ ಯೋಜನೆಗಳನ್ನು ಅಳವಡಿಸುವುದು, ಕಾರ್ಮಿಕರ ಭದ್ರತೆ ಮತ್ತು ಕೃಷಿ ಉತ್ಪಾದಕತೆ ನಡುವಿನ ಸಮತೋಲನ ಸಾಧಿಸುವುದು, ವಿವಿಧ ಯೋಜನೆಗಳನ್ನು ಸಮನ್ವಯಗೊಳಿಸುವುದು, ಮುಂಚೂಣಿ ಕಾರ್ಯಕರ್ತರ ಸಾಮರ್ಥ್ಯವನ್ನು ಬಲಪಡಿಸುವುದು ಮತ್ತು ಆಡಳಿತವನ್ನು ಆಧುನೀಕರಿಸುವುದರ ಮೂಲಕ ಗ್ರಾಮೀಣ ಜೀವನೋಪಾಯಗಳನ್ನು ಪರಿವರ್ತಿಸಲು ವಿಕಸಿತ ಭಾರತ ಜಿ ರಾಮ್ ಜಿ ಮಸೂದೆ ಹೇಗೆ ಉದ್ದೇಶ ಹೊಂದಿದೆ ಎಂಬುದನ್ನು ವಿವರಿಸುತ್ತದೆ. ಜೊತೆಗೆ, ಈ ಮಸೂದೆ ಸಾಮಾಜಿಕ ರಕ್ಷಣೆಯಿಂದ ಹಿಂದೆ ಸರಿಯುವುದಲ್ಲ, ಬದಲಾಗಿ ಅದನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿದೆ ಎಂಬುದನ್ನೂ ಲೇಖನವು ಉಲ್ಲೇಖಿಸುತ್ತದೆ.

ಕೇಂದ್ರ ಸಚಿವರ ಲೇಖನಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ: “ಇದು ಅವಶ್ಯಕವಾಗಿ ಓದಬೇಕಾದ ಲೇಖನವಾಗಿದ್ದು, ಕೇಂದ್ರ ಸಚಿವರಾದ ಶ್ರೀ @ChouhanShivraj ಅವರು, ಉದ್ಯೋಗ ಭರವಸೆಯನ್ನು ವೃದ್ಧಿಸುವುದು, ಸ್ಥಳೀಯ ಯೋಜನೆಗಳನ್ನು ಅಳವಡಿಸುವುದು, ಕಾರ್ಮಿಕರ ಭದ್ರತೆ ಮತ್ತು ಕೃಷಿ ಉತ್ಪಾದಕತೆ ನಡುವಿನ ಸಮತೋಲನ ಸಾಧಿಸುವುದು, ವಿವಿಧ ಯೋಜನೆಗಳನ್ನು ಏಕೀಕರಿಸುವುದು, ಮುಂಚೂಣಿ ಸಾಮರ್ಥ್ಯವನ್ನು ಬಲಪಡಿಸುವುದು ಮತ್ತು ಆಡಳಿತವನ್ನು ಆಧುನೀಕರಿಸುವುದರ ಮೂಲಕ ವಿಕಸಿತ ಭಾರತ ಜಿ ರಾಮ್ ಜಿ ಮಸೂದೆ ಗ್ರಾಮೀಣ ಜೀವನೋಪಾಯಗಳನ್ನು ಹೇಗೆ ಪರಿವರ್ತಿಸಲು ಉದ್ದೇಶಿಸಿದೆ ಎಂಬುದನ್ನು ವಿವರಿಸಿದ್ದಾರೆ.

ಈ ಮಸೂದೆ, ಜನರಿಗೆ ಸಾಮಾಜಿಕ ರಕ್ಷಣೆಯಿಂದ ಹಿಂದೆ ಸರಿಯುವುದಲ್ಲ — ಅದರ ಪುನರುಜ್ಜೀವನವಾಗಿದೆ'' ಎಂದು ಉಲ್ಲೇಖಿಸಿದ್ದಾರೆ.

 

*****


(रिलीज़ आईडी: 2207065) आगंतुक पटल : 6
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Gujarati , Tamil , Telugu , Malayalam , Malayalam