ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸರ್ಕಾರಕ್ಕೆ ಸಂಬಂಧಿಸಿದ ಶಂಕಿತ ನಕಲಿ ಸುದ್ದಿಗಳ ಬಗ್ಗೆ 8799711259 ಗೆ ಹಂಚಿಕೊಳ್ಳುವಂತೆ ಪಿಐಬಿ ಸತ್ಯ ಪರಿಶೀಲನಾ ಘಟಕದಿಂದ ಸಾರ್ವಜನಿಕರಿಗೆ ಆಹ್ವಾನ
ಡಿಜಿಟಲ್ ವೇದಿಕೆಗಳ ಮೂಲಕ ಅಧಿಕೃತ ಮಾಹಿತಿ ಸಾರ್ವಜನಿಕರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಘಟಕ
प्रविष्टि तिथि:
19 DEC 2025 8:00PM by PIB Bengaluru
ಭಾರತ ಸರ್ಕಾರಕ್ಕೆ ಸಂಬಂಧಿಸಿದಂತೆ ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯ ಪ್ರಸರಣವನ್ನು ತಡೆಯುವ ಉದ್ದೇಶದಿಂದ 2019 ರ ನವೆಂಬರ್ ನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವಾರ್ತಾ ಶಾಖೆ ಅಡಿಯಲ್ಲಿ ಸತ್ಯ ಪರಿಶೀಲನಾ ಘಟಕ (ಫ್ಯಾಕ್ಟ್ ಚೆಕ್ ಯೂನಿಟ್ - ಎಫ್ ಸಿ ಯು) ಅನ್ನು ಸ್ಥಾಪಿಸಲಾಗಿದೆ.
ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಸಾರವಾಗುವ ಸುದ್ದಿ/ಮಾಹಿತಿ ಕುರಿತು ಯಾವುದೇ ದೂರುಗಳು/ವಾಸ್ತವಾಂಶ ಪರಿಶೀಲನೆ ವಿನಂತಿಗಳನ್ನು ವಾಟ್ಸ್ ಅಪ್ ಹಾಟ್ ಲೈನ್ ಸಂಖ್ಯೆ- +918799711259, ಇಮೇಲ್ ವಿಳಾಸ- factcheck@pib.gov.in ಮತ್ತು ಪಿಐಬಿಯ ಸತ್ಯ ಪರಿಶೀಲನಾ ಘಟಕದ ಜಾಲತಾಣ - https://factcheck.pib.gov.in ಮೂಲಕ ಕಳುಹಿಸಬಹುದು.
ಪಿಐಬಿಯ ಸತ್ಯ ಪರಿಶೀಲನಾ ಘಟಕವು ವರದಿಯಾದ ಸುದ್ದಿ/ವಿಷಯದ ಕುರಿತು ಈ ಕೆಳಗಿನಂತೆ ಪರಿಶೀಲಿಸಲಿದೆ:
ಪಿಐಬಿ ಫ್ಯಾಕ್ಟ್ ಚೆಕ್ ಘಟಕವು ಸತ್ಯ ಪರಿಶೀಲನೆಗೆ ಸ್ವಯಂಪ್ರೇರಿತವಾಗಿ ಗಮನಹರಿಸುತ್ತದೆ ಮತ್ತು ತನ್ನ ಜಾಲತಾಣ ಅಥವಾ ವಾಟ್ಸ್ ಅಪ್ ಹಾಟ್ ಲೈನ್ ನಲ್ಲಿ ದೂರುಗಳನ್ನು ಸ್ವೀಕರಿಸುತ್ತದೆ.
ಸ್ವೀಕೃತ ಮಾಹಿತಿಯು ಸತ್ಯ ಪರಿಶೀಲನಾ ಘಟಕದ ವ್ಯಾಪ್ತಿಗೆ ಬರುತ್ತದೆಯೇ ಎಂದು ಖಚಿತಪಡಿಸಿಕೊಂಡು ಅದನ್ನು ಪ್ರತ್ಯೇಕಿಸುತ್ತದೆ.
ಸ್ವೀಕೃತ ಮಾಹಿತಿಯ ಸತ್ಯಾಸತ್ಯತೆಯನ್ನು ಅಧಿಕೃತ ಮೂಲಗಳಿಂದ ಪರಿಶೀಲಿಸಿದ ನಂತರ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರಕ್ಕೆ ಸೂಕ್ತವಾದ ಸೃಜನಾತ್ಮಕ ವಿಚಾರದ ಮೂಲಕ ಜಾಗೃತಿ ಮೂಡಿಸಲು ಫ್ಯಾಕ್ಟ್ ಚೆಕ್ ಘಟಕವು ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ತಂತ್ರವನ್ನು ಅವಲಂಬಿಸಿದೆ.
ವಾಸ್ತವಾಂಶ ಪರಿಶೀಲಿಸಿದ ಮತ್ತು ಸಮರ್ಪಕ ಮಾಹಿತಿಯನ್ನು FCU ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಲ್ಲಿ ಪೋಸ್ಟ್ ಮಾಡಲಿದೆ.
ಭಾರತ ಸರ್ಕಾರಕ್ಕೆ ಸಂಬಂಧಿಸಿದ ಆನ್ ಲೈನ್ ವಿಷಯಗಳ ಮೇಲ್ವಿಚಾರಣೆ ಮಾಡುವಲ್ಲಿ ಪಿಐಬಿ ಸತ್ಯ ಪರಿಶೀಲನಾ ಘಟಕ (ಎಫ್ ಸಿ ಯು) ಪ್ರಮುಖ ಪಾತ್ರ ವಹಿಸಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ, ಪಿಐಬಿಯ ಫ್ಯಾಕ್ಟ್ ಚೆಕ್ ಘಟಕವು ತ್ವರಿತ ಸತ್ಯ-ಪರಿಶೀಲನೆ ಮೂಲಕ ಅಧಿಕೃತ ಮಾಹಿತಿ ಪ್ರಸಾರ ಮಾಡುತ್ತಾ ನಿಖರವಾದ ಸಾರ್ವಜನಿಕ ಸಂವಹನವನ್ನು ಖಚಿತಪಡಿಸಿಕೊಳ್ಳುವ ಮೂಲಕ ಆನ್ ಲೈನ್ ನಲ್ಲಿ ತಪ್ಪು ಮಾಹಿತಿ ಮತ್ತು ಪ್ರತಿಕೂಲ ನಿರೂಪಣೆಗಳ ಪ್ರಸಾರವನ್ನು ತಡೆಯಿತು. ಇದು ದಾರಿತಪ್ಪಿಸುವ ಮತ್ತು ಭಾರತ ವಿರೋಧಿ ಹೇಳಿಕೆಗಳ ಹರಡುವಿಕೆ ತಡೆಯಲು ನೆರವಾಯಿತು.
ರಾಜ್ಯಸಭೆಯಲ್ಲಿ ಶ್ರೀ ಸುಜೀತ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ಈ ಮಾಹಿತಿ ನೀಡಿದರು.
*****
(रिलीज़ आईडी: 2206943)
आगंतुक पटल : 6