ಗೃಹ ವ್ಯವಹಾರಗಳ ಸಚಿವಾಲಯ
ಗೋವಾ ವಿಮೋಚನಾ ದಿನದಂದು ಗೋವಾ ಜನತೆಗೆ ಶುಭಾಶಯ ಕೋರಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
1961 ರವರೆಗೆ ಭಾರತೀಯರು ಗೋವಾಕ್ಕೆ ಭೇಟಿ ನೀಡಲು ಅನುಮತಿ ಪಡೆಯಬೇಕಾಗಿತ್ತು ಎಂಬುದು ಇಂದಿನ ಪೀಳಿಗೆಗೆ ತಿಳಿದಿಲ್ಲದಿರಬಹುದು, ಅನೇಕ ಮಹಾನ್ ಚೇತನಗಳು ಇದನ್ನು ವಿರೋಧಿಸಿ ಗೋವಾದ ವಿಮೋಚನೆಗೆ ಹೋರಾಡಿದ್ದರು
ನಮ್ಮ ದೇಶಭಕ್ತರು ಮಾಡಿದ ಮಹಾನ್ ತ್ಯಾಗಗಳ ನಂತರ ಗೋವಾ ಭಾರತದ ಅವಿಭಾಜ್ಯ ಅಂಗವಾಯಿತು
ಗೋವಾದ ಸ್ವಾತಂತ್ರ್ಯಕ್ಕಾಗಿ ಅಪಾರ ನೋವು ಸಹಿಸಿಕೊಂಡ ಎಲ್ಲಾ ಉದಾತ್ತ ಚೇತನಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳೊಂದಿಗೆ ನನ್ನ ಗೌರವ ನಮನಗಳು
प्रविष्टि तिथि:
19 DEC 2025 11:58AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗೋವಾ ವಿಮೋಚನಾ ದಿನದಂದು ಗೋವಾ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್‌ನಲ್ಲಿ, ”ಗೋವಾ ವಿಮೋಚನಾ ದಿನದಂದು ಗೋವಾದ ಜನತೆಗೆ ಶುಭಾಶಯಗಳು. 1961 ರವರೆಗೆ ಭಾರತೀಯರು ಗೋವಾಕ್ಕೆ ಭೇಟಿ ನೀಡಲು ಅನುಮತಿ ಪಡೆಯಬೇಕಾಗಿತ್ತು ಎಂಬುದು ಇಂದಿನ ಪೀಳಿಗೆಗೆ ತಿಳಿದಿಲ್ಲದಿರಬಹುದು. ಪ್ರಭಾಕರ್ ವೈದ್ಯ, ಬಾಲರಾಯ ಮಾಪಾರಿ, ನಾನಾಜಿ ದೇಶಮುಖ್ ಜಿ ಮತ್ತು ಜಗನ್ನಾಥ ರಾವ್ ಜೋಶಿ ಅವರಂತಹ ಅನೇಕ ಮಹಾನ್ ಚೇತನಗಳು ಇದನ್ನು ವಿರೋಧಿಸಿ ಗೋವಾದ ವಿಮೋಚನೆಗಾಗಿ ಹೋರಾಡಿದರು. ನಮ್ಮ ದೇಶಭಕ್ತರು ಮಾಡಿದ ಮಹಾನ್ ತ್ಯಾಗಗಳ ನಂತರ ಗೋವಾ ಭಾರತದ ಅವಿಭಾಜ್ಯ ಅಂಗವಾಯಿತು. ಗೋವಾದ ಸ್ವಾತಂತ್ರ್ಯಕ್ಕಾಗಿ ಅಪಾರ ನೋವು ಸಹಿಸಿಕೊಂಡ ಎಲ್ಲಾ ಉದಾತ್ತ ಚೇತನಗಳಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯಿಂದ ನಮಸ್ಕರಿಸುತ್ತೇನೆ.’’
*****
(रिलीज़ आईडी: 2206462)
आगंतुक पटल : 6