ಪ್ರಧಾನ ಮಂತ್ರಿಯವರ ಕಛೇರಿ
ಫಲಿತಾಂಶಗಳ ಪಟ್ಟಿ: ಪ್ರಧಾನಮಂತ್ರಿ ಅವರ ಓಮನ್ ಭೇಟಿ
प्रविष्टि तिथि:
18 DEC 2025 4:57PM by PIB Bengaluru
1) ಸಮಗ್ರ ಆರ್ಥಿಕ ಪಾಲುದಾರಿತ್ವ ಒಪ್ಪಂದ
- ನಿಕಟ ಆರ್ಥಿಕ ಮತ್ತು ವಾಣಿಜ್ಯ ಏಕೀಕರಣವನ್ನು ಬಲಪಡಿಸುವುದು ಮತ್ತು ಮತ್ತಷ್ಟು ಅಭಿವೃದ್ಧಿಪಡಿಸುವುದು.
- ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಸ್ಥಿರವಾದ ಚೌಕಟ್ಟನ್ನು ಸೃಷ್ಟಿಸುವ ಮೂಲಕ ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಹೆಚ್ಚಿಸುವುದು.
-ಆರ್ಥಿಕತೆಯ ಎಲ್ಲಾ ಪ್ರಮುಖ ವಲಯಗಳಲ್ಲಿನ ಅವಕಾಶಗಳನ್ನು ಬಳಸಿಕೊಳ್ಳುವುದು, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವುದು, ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಉಭಯ ದೇಶಗಳ ನಡುವಿನ ಹೂಡಿಕೆಯ ಹರಿವನ್ನು ಉತ್ತೇಜಿಸುವುದು.
2) ಕಡಲ ಪರಂಪರೆ ಮತ್ತು ವಸ್ತು ಸಂಗ್ರಹಾಲಯಗಳ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದ
-ಲೋಥಲ್ ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣ ಸೇರಿದಂತೆ ಕಡಲ ವಸ್ತುಸಂಗ್ರಹಾಲಯಗಳನ್ನು ಬೆಂಬಲಿಸಲು ಸಹಯೋಗದ ಪಾಲುದಾರಿತ್ವವನ್ನು ಸ್ಥಾಪಿಸುವುದು.
- ಹಂಚಿಕೆಯ ಕಡಲ ಪರಂಪರೆಯನ್ನು ಉತ್ತೇಜಿಸಲು, ಪ್ರವಾಸೋದ್ಯಮವನ್ನು ಹೆಚ್ಚಿಸಲು ಮತ್ತು ದ್ವಿಪಕ್ಷೀಯ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಲು ಕಲಾಕೃತಿಗಳು ಮತ್ತು ಪರಿಣತಿಯ ವಿನಿಮಯ, ಜಂಟಿ ಪ್ರದರ್ಶನಗಳು, ಸಂಶೋಧನೆ ಮತ್ತು ಸಾಮರ್ಥ್ಯ ವೃದ್ಧಿಯನ್ನು ಸುಗಮಗೊಳಿಸುವುದು.
3) ಕೃಷಿ ಮತ್ತು ಸಂಬಂಧಿತ ವಲಯಗಳ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದ
- ಕೃಷಿ ಹಾಗೂ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಂಬಂಧಿತ ವಲಯಗಳ ಕ್ಷೇತ್ರದ ಚೌಕಟ್ಟಿನ ಸಮೂಹ ದಾಖಲೆ.
- ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಗಳು, ತೋಟಗಾರಿಕೆಯ ವರ್ಧನೆ, ಸಮಗ್ರ ಕೃಷಿ ಪದ್ಧತಿಗಳು ಮತ್ತು ಸಣ್ಣ ನೀರಾವರಿಯಲ್ಲಿ ಸಹಕಾರ.
4) ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದ
-ಮಾನವ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ಅಗತ್ಯವಿರುವ ಹೊಸ ಜ್ಞಾನ ಮತ್ತು ನವೀನ ಪದ್ಧತಿಗಳನ್ನು ಸೃಷ್ಟಿಸಲು ಅಧ್ಯಾಪಕರು, ಸಂಶೋಧಕರು ಮತ್ತು ವಿದ್ವಾಂಸರ ವಿನಿಮಯವನ್ನು ಸುಗಮಗೊಳಿಸುವುದು, ಜೊತೆಗೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ, ವಿಶೇಷವಾಗಿ ಅನ್ವಯಿಕ ಸಂಶೋಧನೆಯನ್ನು ಕೈಗೊಳ್ಳುವುದು.
5) ಸಿರಿಧಾನ್ಯಗಳ ಕೃಷಿ ಮತ್ತು ಕೃಷಿ-ಆಹಾರ ನಾವೀನ್ಯತೆಯಲ್ಲಿ ಸಹಕಾರಕ್ಕಾಗಿ ಕಾರ್ಯಕಾರಿ ಕಾರ್ಯಕ್ರಮ
-ಸಿರಿಧಾನ್ಯಗಳ ಉತ್ಪಾದನೆ, ಸಂಶೋಧನೆ ಮತ್ತು ಪ್ರೋತ್ಸಾಹವನ್ನು ಮುನ್ನಡೆಸಲು ಭಾರತದ ವೈಜ್ಞಾನಿಕ ಪರಿಣತಿ ಮತ್ತು ಓಮನ್ ನ ಅನುಕೂಲಕರ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಸಹಕಾರ ಚೌಕಟ್ಟನ್ನು ಸ್ಥಾಪಿಸುವುದು.
6) ಕಡಲ ಸಹಕಾರದ ಕುರಿತಾದ ಜಂಟಿ ವಿಷನ್ ಡಾಕ್ಯುಮೆಂಟ್ ಅಳವಡಿಕೆ
- ಪ್ರಾದೇಶಿಕ ಕಡಲ ಭದ್ರತೆ, ನೀಲಿ ಆರ್ಥಿಕತೆ ಮತ್ತು ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆಯ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವುದು.
*****
(रिलीज़ आईडी: 2206202)
आगंतुक पटल : 11
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam