ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಚಕ್ರವರ್ತಿ ಪೆರುಂಬಿಡುಗು ಮುತ್ತರೈಯರ್ II ಅವರ ಗೌರವಾರ್ಥ ಸ್ಮಾರಕ ಅಂಚೆಚೀಟಿ ಬಿಡುಗಡೆ ಮಾಡಿದ್ದನ್ನು ಸ್ವಾಗತಿಸಿದ ಪ್ರಧಾನಮಂತ್ರಿ

प्रविष्टि तिथि: 14 DEC 2025 10:05PM by PIB Bengaluru

ಭಾರತದ ಉಪರಾಷ್ಟ್ರಪತಿ ತಿರು ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಚಕ್ರವರ್ತಿ ಪೆರುಂಬಿಡುಗು ಮುತ್ತರೈಯರ್ II (ಸುವರನ್ ಮಾರನ್) ಅವರ ಗೌರವಾರ್ಥ ಸ್ಮಾರಕ ಅಂಚೆಚೀಟಿ ಬಿಡುಗಡೆ ಮಾಡಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಚಕ್ರವರ್ತಿ ಪೆರುಂಬಿಡುಗು ಮುತ್ತರೈಯರ್ II ಅವರು ಗಮನಾರ್ಹ ದೂರದೃಷ್ಟಿ, ಮುನ್ನೋಟ ಮತ್ತು ಕಾರ್ಯತಂತ್ರದ ಪ್ರತಿಭೆಯನ್ನು ಹೊಂದಿದ್ದ ಅಸಾಧಾರಣ ಆಡಳಿತಗಾರರಾಗಿದ್ದರು ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದ್ದಾರೆ. ನ್ಯಾಯಕ್ಕಾಗಿ ಚಕ್ರವರ್ತಿಯ ಅಚಲ ಬದ್ಧತೆ ಮತ್ತು ತಮಿಳು ಸಂಸ್ಕೃತಿಯ ಮಹಾನ್ ಪೋಷಕರಾಗಿ ಅವರ ವಿಶಿಷ್ಟ ಪಾತ್ರವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಗೌರವಾನ್ವಿತ ಚಕ್ರವರ್ತಿಯ ಅಸಾಧಾರಣ ಜೀವನ ಮತ್ತು ಪರಂಪರೆಯ ಬಗ್ಗೆ  ಜನತೆ ವಿಶೇಷವಾಗಿ ಯುವಕರಿಗೆ ಮನ್ನಷ್ಟು ತಿಳಿದುಕೊಳ್ಳಲು ರಾಷ್ಟ್ರಕ್ಕೆ ಕರೆ ನೀಡಿರುವ ಪ್ರಧಾನಿ ಅವರು, ಚಕ್ರವರ್ತಿಯ ಕೊಡುಗೆಗಳು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.

ಶ್ರೀ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಚಕ್ರವರ್ತಿ ಪೆರುಂಬಿಡುಗು ಮುತ್ತರೈಯರ್ II (ಸುವರನ್ ಮಾರನ್) ಅವರ ಗೌರವಾರ್ಥವಾಗಿ ಸ್ಮಾರಕ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆಂದು ತಿಳಿದು ಸಂತೋಷವಾಯಿತು. ಅವರು ಗಮನಾರ್ಹ ದೂರದೃಷ್ಟಿ, ಮುನ್ನೋಟ ಮತ್ತು ಕಾರ್ಯತಂತ್ರದ ಪ್ರತಿಭೆಯಿಂದ ಕೂಡಿದ್ದ ಅಸಾಧಾರಣ ಆಡಳಿತಗಾರರಾಗಿದ್ದರು. ಅವರು ನ್ಯಾಯದ ಬದ್ಧತೆಗೆ ಹೆಸರುವಾಸಿಯಾಗಿದ್ದರು. ಅವರು ತಮಿಳು ಸಂಸ್ಕೃತಿಯ ಮಹಾನ್ ಪೋಷಕರಾಗಿದ್ದರು. ಅವರ ಅಸಾಧಾರಣ ಜೀವನದ ತಿಳಿದುಕೊಳ್ಳಬೇಕೆಂದು ನಾನು ಹೆಚ್ಚಿನ ಯುವಕರಿಗೆ ಕರೆ ನೀಡುತ್ತೇನೆ.’’

@VPIndia 

@CPR_VP”

“பேரரசர் இரண்டாம் பெரும்பிடுகு  முத்தரையரை (சுவரன் மாறன்)  கௌரவிக்கும் வகையில் சிறப்பு அஞ்சல் தலையைக் குடியரசு துணைத்தலைவர் திரு சி.பி. ராதாகிருஷ்ணன் அவர்கள் வெளியிட்டது மகிழ்ச்சி அளிக்கிறது. ஆற்றல்மிக்க நிர்வாகியான  அவருக்குப் போற்றத்தக்க தொலைநோக்குப்  பார்வையும், முன்னுணரும் திறனும்,  போர்த்தந்திர ஞானமும் இருந்தன. நீதியை நிலைநாட்டுவதில் அவர் உறுதியுடன் செயல்பட்டவர். அதேபோல் தமிழ் கலாச்சாரத்திற்கும் அவர் ஒரு மகத்தான பாதுகாவலராக  இருந்தார். அவரது அசாதாரண வாழ்க்கையைப் பற்றி அதிகமான இளைஞர்கள் படிக்க வேண்டும் என்று நான் கேட்டுக்கொள்கிறேன்.

@VPIndia 

@CPR_VP”

 

*****


(रिलीज़ आईडी: 2204023) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Telugu , Malayalam