ರೈಲ್ವೇ ಸಚಿವಾಲಯ
azadi ka amrit mahotsav

ಮಿಜೋರಾಂ ಮೊದಲ ಬಾರಿಗೆ ರೈಲಿನ ಮೂಲಕ ಸಾಗಿಸಿದ ಕಾರುಗಳನ್ನು ಸ್ವೀಕರಿಸಿದ್ದು, ಈ ಪ್ರದೇಶದ ಸಾರಿಗೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ


119 ಕಾರುಗಳು ರೈಲಿನ ಮೂಲಕ ಸೈರಾಂಗ್‌ ಗೆ ಬಂದವು. ಈ ಐತಿಹಾಸಿಕ ರೈಲು ಸಾಗಣೆಯು ಮಿಜೋರಾಂನ ಮೂಲಸೌಕರ್ಯ ಮತ್ತು ಆರ್ಥಿಕತೆಯನ್ನು ಬಲಪಡಿಸುತ್ತದೆ

प्रविष्टि तिथि: 14 DEC 2025 3:36PM by PIB Bengaluru

ಗುವಾಹಟಿ ಬಳಿಯ ಚಾಂಗ್ಸಾರಿಯಿಂದ 119 ಮಾರುತಿ ಕಾರುಗಳನ್ನು ಹೊತ್ತ ಆಟೋಮೊಬೈಲ್ ರೇಕ್‌ ನ ಮೊದಲ ನೇರ ಆಗಮನಕ್ಕೆ ಸೈರಾಂಗ್ ರೈಲು ನಿಲ್ದಾಣ ಸಾಕ್ಷಿಯಾಯಿತು. ಈ ಐತಿಹಾಸಿಕ ಕ್ರಮವು ಐಜ್ವಾಲ್‌ ನಲ್ಲಿ ವಾಹನ ಲಭ್ಯತೆಯನ್ನು ಹೆಚ್ಚಿಸುತ್ತದೆ, ದೀರ್ಘ ರಸ್ತೆ ಸಾರಿಗೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಡೀಲರ್‌ ಗಳು, ಸೇವಾ ಪೂರೈಕೆದಾರರು ಮತ್ತು ಗ್ರಾಹಕರು ಸೇರಿದಂತೆ ಮಿಜೋರಾಂನ ಆಟೋಮೊಬೈಲ್ ವಲಯಕ್ಕೆ ಪ್ರಯೋಜನವನ್ನು ನೀಡುತ್ತದೆ, ಇದು ರಾಜ್ಯದ ಮೂಲಸೌಕರ್ಯ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ. ಈ ಸಾಧನೆಯು ಸಂಪರ್ಕವನ್ನು ಹೆಚ್ಚಿಸುವ, ಪ್ರಾದೇಶಿಕ ಅಭಿವೃದ್ಧಿಯನ್ನು ಬೆಂಬಲಿಸುವ ಮತ್ತು ದೇಶಾದ್ಯಂತ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ಭಾರತೀಯ ರೈಲ್ವೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಬೈರಾಬಿ-ಸೈರಾಂಗ್ ರೈಲು ಮಾರ್ಗವು ಮಿಜೋರಾಂಗೆ ಪ್ರಮುಖ ಮೂಲಸೌಕರ್ಯ ಮೈಲಿಗಲ್ಲು. ಕಷ್ಟಕರವಾದ ಭೂಪ್ರದೇಶದ ಮೂಲಕ ಎಚ್ಚರಿಕೆಯಿಂದ ನಿರ್ಮಿಸಲಾದ ಈ ಮಾರ್ಗವು 51.38 ಕಿ.ಮೀ. ಗಳಿದ್ದು 45 ಸುರಂಗಗಳ ಮೂಲಕ ಹಾದುಹೋಗುತ್ತದೆ. ಈ ರೈಲು ಮಾರ್ಗವು ಈ ಪ್ರದೇಶವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಈ ಮಾರ್ಗವನ್ನು ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 13, 2025 ರಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಅವರು ಐಜ್ವಾಲ್ (ಸೈರಾಂಗ್) ಮತ್ತು ದೆಹಲಿ (ಆನಂದ ವಿಹಾರ್ ಟರ್ಮಿನಲ್) ನಡುವಿನ ರಾಜಧಾನಿ ಎಕ್ಸ್‌ಪ್ರೆಸ್, ಐಜ್ವಾಲ್ (ಸೈರಾಂಗ್) ಮತ್ತು ಗುವಾಹಟಿ ನಡುವಿನ ಮಿಜೋರಾಂ ಎಕ್ಸ್‌ಪ್ರೆಸ್ ಮತ್ತು ಐಜ್ವಾಲ್ (ಸೈರಾಂಗ್) ಮತ್ತು ಕೋಲ್ಕತ್ತಾ ನಡುವಿನ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು. ಇದು ಮಿಜೋರಾಂ ಅನ್ನು ಭಾರತದ ರಾಷ್ಟ್ರೀಯ ರೈಲು ಜಾಲಕ್ಕೆ ಸಂಪೂರ್ಣವಾಗಿ ಸಂಪರ್ಕಿಸಿತು.

ಹೊಸ ರೈಲು ಸೇವೆಗಳಿಗೆ ಪ್ರಯಾಣಿಕರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ರೈಲುಗಳು ಪೂರ್ಣ ಸಾಮರ್ಥ್ಯದಲ್ಲಿ ಓಡುತ್ತಿವೆ: ಸೈರಾಂಗ್-ಆನಂದ್ ವಿಹಾರ್ ಟರ್ಮಿನಲ್ ರಾಜಧಾನಿ ಎಕ್ಸ್‌ಪ್ರೆಸ್ ಶೇ.147, ಸೈರಾಂಗ್-ಗುವಾಹಟಿ-ಮಿಜೋರಾಮ್ ಎಕ್ಸ್‌ಪ್ರೆಸ್ ಶೇ.115, ಮತ್ತು ಸೈರಾಂಗ್-ಕೋಲ್ಕತ್ತಾ ಎಕ್ಸ್‌ಪ್ರೆಸ್ ಶೇ.139 ಪ್ರಯಾಣಿಕರ ಸಾಮರ್ಥ್ಯದಲ್ಲಿ ಸಂಚರಿಸುತ್ತಿವೆ. ಪ್ರಯಾಣಿಕರಿಗೆ ಈ ರೈಲುಗಳು ಅನುಕೂಲಕರ, ಕೈಗೆಟುಕುವ ಮತ್ತು ಸಮಯ ಉಳಿತಾಯವೆಂದು ಸಾಬೀತಾಗಿವೆ. ರೈಲು ಸಂಪರ್ಕವು ಪ್ರಮುಖ ನಗರಗಳು ಮತ್ತು ಆರ್ಥಿಕ ಕೇಂದ್ರಗಳಿಗೆ ಪ್ರಯಾಣವನ್ನು ಸುಲಭಗೊಳಿಸಿದೆ. ನೆರೆಯ ರಾಜ್ಯಗಳಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ಪ್ರವೇಶವನ್ನು ಇದು ಸುಧಾರಿಸಿದೆ.

ಉದ್ಘಾಟನೆಯಾದ ಕೂಡಲೇ ಬೈರಾಬಿ-ಸೈರಾಂಗ್ ಮಾರ್ಗದಲ್ಲಿ ಸರಕು ಸಾಗಣೆ ಪ್ರಾರಂಭವಾಯಿತು. ಮೊದಲ ಸರಕು ರೈಲು ಸೆಪ್ಟೆಂಬರ್ 14, 2025 ರಂದು ಅಸ್ಸಾಂನಿಂದ ಐಜ್ವಾಲ್‌ ಗೆ 21 ವ್ಯಾಗನ್‌ ಗಳ ಸಿಮೆಂಟ್ ಅನ್ನು ಸಾಗಿಸಿತು. ಅಂದಿನಿಂದ, ಈ ಮಾರ್ಗವನ್ನು ಸಿಮೆಂಟ್, ನಿರ್ಮಾಣ ಸಾಮಗ್ರಿಗಳು, ಆಟೋಮೊಬೈಲ್‌, ಮರಳು ಮತ್ತು ಕಲ್ಲಿನ ಚಿಪ್‌ ಗಳಂತಹ ಅಗತ್ಯ ಸರಕುಗಳನ್ನು ಸಾಗಿಸಲು ಬಳಸಲಾಗುತ್ತಿದೆ.

ಸೈರಾಂಗ್‌ ನಿಂದ ಮೊದಲ ಪಾರ್ಸೆಲ್ ಸರಕನ್ನು ಸೆಪ್ಟೆಂಬರ್ 19, 2025 ರಂದು ಬುಕ್ ಮಾಡಲಾಯಿತು, ಆಂಥೂರಿಯಂ ಹೂವುಗಳನ್ನು ಪಾರ್ಸೆಲ್ ವ್ಯಾನ್ (ಸೈರಾಂಗ್-ಆನಂದ ವಿಹಾರ್ ಟರ್ಮಿನಲ್ ರಾಜಧಾನಿ ಎಕ್ಸ್‌ಪ್ರೆಸ್) ಮೂಲಕ ಆನಂದ ವಿಹಾರ್ ಟರ್ಮಿನಲ್‌ಗೆ ಸಾಗಿಸಲಾಯಿತು. ಸೆಪ್ಟೆಂಬರ್ 17 ಮತ್ತು ಡಿಸೆಂಬರ್ 12, 2025 ರ ನಡುವೆ ಒಟ್ಟು 17 ರೇಕ್‌ ಗಳನ್ನು ನಿರ್ವಹಿಸಲಾಗಿದೆ. ಈ ಬೆಳವಣಿಗೆಗಳು ಈ ಮಾರ್ಗವು ವಿಶ್ವಾಸಾರ್ಹ ಲಾಜಿಸ್ಟಿಕ್ಸ್ ಕಾರಿಡಾರ್ ಆಗುತ್ತಿದೆ, ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಮಿಜೋರಾಂನ ಆರ್ಥಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಎಂಬುದನ್ನು ತೋರಿಸುತ್ತವೆ.

 

*****


(रिलीज़ आईडी: 2203726) आगंतुक पटल : 17
इस विज्ञप्ति को इन भाषाओं में पढ़ें: English , Urdu , हिन्दी , Nepali , Bengali-TR , Assamese , Odia , Tamil