ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಜವಳಿ ಪೂರಕ ಪರಿಸರ ವ್ಯವಸ್ಥೆಯಲ್ಲಿ 11 ವರ್ಷಗಳ ಐತಿಹಾಸಿಕ ಪರಿವರ್ತನೆಯನ್ನು ಉಲ್ಲೇಖಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 12 DEC 2025 4:30PM by PIB Bengaluru

ಕಳೆದ ಹನ್ನೊಂದು ವರ್ಷಗಳಲ್ಲಿ ಭಾರತದ ಜವಳಿ ಪೂರಕ ಪರಿಸರ ವ್ಯವಸ್ಥೆಯು ಅಭೂತಪೂರ್ವ ಬೆಳವಣಿಗೆ, ಆಧುನೀಕರಣ ಮತ್ತು ಮೌಲ್ಯ ಸರಪಳಿಯಾದ್ಯಂತ ಸೇರ್ಪಡೆಗೊಂಡಿರುವ ಗಮನಾರ್ಹ ಪರಿವರ್ತನೆಯನ್ನು ಒತ್ತಿಹೇಳುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರ ಎಕ್ಸ್‌ ತಾಣದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು ಹೀಗೆ ತಿಳಿಸಿದ್ದಾರೆ:

"ಕಳೆದ 11 ವರ್ಷಗಳಲ್ಲಿ, ಭಾರತದ ಜವಳಿ ಪೂರಕ ಪರಿಸರ ವ್ಯವಸ್ಥೆಯು ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ: ಬಲವಾದ ಮೂಲಸೌಕರ್ಯ, ವಿಸ್ತೃತ ಮಾರುಕಟ್ಟೆಗಳು, ವರ್ಧಿತ ಕೌಶಲ್ಯ, ವಿಶಾಲ ಸೇರ್ಪಡೆ ಮತ್ತು ಇನ್ನೂ ಹೆಚ್ಚಿನವು. ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಈಗ ಮೌಲ್ಯ ಸರಪಳಿ ಉತ್ತೇಜಿಸುತ್ತಿದೆ!

ಶ್ರೀ @girirajsinghbjp ಅವರ ಈ ಲೇಖನವು ವಿಕಾಸವನ್ನು ಮೂಲಭೂತವಾಗಿ ವಿವರಿಸುತ್ತದೆ, ಲೇಖನವನ್ನು ಓದಿ!"

 

*****


(रिलीज़ आईडी: 2203160) आगंतुक पटल : 6
इस विज्ञप्ति को इन भाषाओं में पढ़ें: Telugu , Malayalam , English , Urdu , Marathi , हिन्दी , Manipuri , Bengali , Gujarati , Tamil