ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸಮಿತಿಯ ಶಿಫಾರಸುಗಳನ್ನಾಧರಿಸಿ ಪರಿಷ್ಕೃತ ಜಾಹೀರಾತು ದರಗಳೊಂದಿಗೆ ಸರ್ಕಾರದಿಂದ ಮುದ್ರಣ ಮಾಧ್ಯಮಕ್ಕೆ ಹೆಚ್ಚಿನ ಬೆಂಬಲ


ಹೆಚ್ಚುತ್ತಿರುವ ಇನ್‌ ಪುಟ್ ವೆಚ್ಚವನ್ನು ಸರಿದೂಗಿಸಲು ಮತ್ತು ಡಿಜಿಟಲ್ ಯುಗದಲ್ಲಿ ಪತ್ರಿಕೆಗಳು ಸ್ಪರ್ಧಿಸಲು ನೆರವಾಗಲು ದರಗಳ ಪರಿಷ್ಕರಣೆ

प्रविष्टि तिथि: 10 DEC 2025 3:43PM by PIB Bengaluru

ಮುದ್ರಣ ಮಾಧ್ಯಮದ ಜಾಹೀರಾತು ದರಗಳಲ್ಲಿನ ಪರಿಷ್ಕರಣೆಗಳನ್ನು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಸರ್ಕಾರವು 2021 ರ ನವೆಂಬರ್ 11 ರಂದು 9ನೇ ದರ ರಚನೆ ಸಮಿತಿಯನ್ನು (ಅರ್.‌ಎಸ್.ಸಿ) ರಚಿಸಿತು.

ಭಾರತೀಯ ವೃತ್ತಪತ್ರಿಕೆ ಸಂಘ (ಐ.ಎನ್.ಎಸ್), ಅಖಿಲ ಭಾರತ ಕಿರು ವೃತ್ತಪತ್ರಿಕೆ ಸಂಘ (AISNA), ಸಣ್ಣ-ಮಧ್ಯಮ-ದೊಡ್ಡ ವೃತ್ತಪತ್ರಿಕೆ ಸಂಘ (ಎಸ್.‌ಎಂ.ಬಿ.ಎನ್.‌ಎಸ್) ಸೇರಿದಂತೆ ಬೃಹತ್, ಮಧ್ಯಮ ಮತ್ತು ಸಣ್ಣ ಪ್ರಕಟಣೆಗಳ ಪ್ರತಿನಿಧಿಗಳನ್ನೊಳಗೊಂಡಂತೆ ವ್ಯಾಪಕ ಶ್ರೇಣಿಯ ಸಂಬಂಧಿತ ಪಾಲುದಾರರೊಂದಿಗೆ ಸಮಿತಿಯು ಸಮಾಲೋಚನೆ ನಡೆಸಿತು.

ಸಮಿತಿಯು ಮುದ್ರಣ ಮಾಧ್ಯಮದ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರುವ ಬಹು ವೆಚ್ಚದ ಅಂಶಗಳ ಪರಾಮರ್ಶೆ ನಡೆಸಿದೆ, ಉದಾಹರಣೆಗೆ ವೃತ್ತಪತ್ರಿಕೆ ಮುದ್ರಣ ವೆಚ್ಚದಲ್ಲಿ ಏರಿಕೆ, ಹಣದುಬ್ಬರ ಪ್ರವೃತ್ತಿಗಳು, ಸಂಸ್ಕರಣೆ ಮತ್ತು ಉತ್ಪಾದನಾ ವೆಚ್ಚ, ಉದ್ಯೋಗಿ ವೇತನ ಹೊಣೆಗಾರಿಕೆ, ಆಮದು ಮಾಡಿದ ಕಾಗದದ ದರ ಮತ್ತು ಇತರ ಸಂಬಂಧಿತ ಇನ್ ಪುಟ್ (ಪತ್ರಿಕೆ ಹೊರತರಲು ಮಾಡಬೇಕಾದ ವೆಚ್ಚ) ವೆಚ್ಚಗಳನ್ನು ಸಮಿತಿಯು ಮೌಲ್ಯಮಾಪನ ಮಾಡಿದೆ.

ಈ ಮೌಲ್ಯಮಾಪನಗಳ ಆಧಾರದ ಮೇಲೆ, ಸಮಿತಿ ಸಲ್ಲಿಸಿದ ಸರ್ವಾನುಮತದ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ.

ವರ್ಣಮಯ ಜಾಹೀರಾತುಗಳಿಗೆ ಮತ್ತು ಆದ್ಯತೆಯ ನಿರ್ದಿಷ್ಟ ಪುಟಗಳಲ್ಲಿ ನೀಡಲಾಗುವ ಜಾಹೀರಾತುಗಳಿಗೆ ಪ್ರೀಮಿಯಂ ದರಗಳಿಗೆ ಸಂಬಂಧಿಸಿದ ಸಮಿತಿಯ ಶಿಫಾರಸುಗಳಿಗೆ ಸರ್ಕಾರ ಸಮ್ಮತಿ ನೀಡಿದೆ.

ಜಾಹೀರಾತು ದರಗಳ ಪರಿಷ್ಕರಣೆಯು ಹೆಚ್ಚುತ್ತಿರುವ ಇನ್‌ ಪುಟ್ (ಮುದ್ರಣಕ್ಕೆ ತಗುಲುವ) ವೆಚ್ಚಗಳು ಮತ್ತು ಡಿಜಿಟಲ್ ವೇದಿಕೆಗಳಿಂದ ಮುದ್ರಣ ಮಾಧ್ಯಮಕ್ಕೆ ಹೆಚ್ಚುತ್ತಿರುವ ಸ್ಪರ್ಧೆಗೆ ಅನುಗುಣವಾಗಿದೆ.

ಆದಾಯ ಹರಿವು ಹೆಚ್ಚಳದಿಂದ ಕಾರ್ಯಾಚರಣೆ ಸ್ಥಿರವಾಗಿಸಲು ಮತ್ತು ಸ್ಥಳೀಯ ಸುದ್ದಿ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಾಗಲಿದೆ. ಸುಧಾರಿತ ಆರ್ಥಿಕ ಸ್ಥಿರತೆಯು ಮುದ್ರಣ ಮಾಧ್ಯಮ ಸಂಸ್ಥೆಗಳು, ಉತ್ತಮ ವಿಷಯ ನಿರೂಪಣೆಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತಾ ಸಾರ್ವಜನಿಕ ಹಿತಾಸಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಪೂರೈಸಲಿದೆ.

ವೈವಿಧ್ಯಮಯ ಮಾಧ್ಯಮ ಪರಿಸರದಲ್ಲಿ ಮುದ್ರಣ ಮಾಧ್ಯಮದ ನಿರಂತರ ಪ್ರಸ್ತುತತೆಯನ್ನು ಗುರುತಿಸುವ ಮೂಲಕ, ಸರ್ಕಾರವು ನಾಗರಿಕರಿಗೆ ತನ್ನ ಸಂವಹನ ಮತ್ತು ಮಾಹಿತಿಯ ಹೆಚ್ಚು ಪರಿಣಾಮಕಾರಿ ಪ್ರಸರಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಶ್ರೀ ಸುರೇಶ್ ಕುಮಾರ್ ಶೆಟ್ಕರ್, ಶ್ರೀ ವಿಜಯಕುಮಾರ್ ಅಲಿಯಾಸ್ ವಿಜಯ್ ವಸಂತ್ ಮತ್ತು ಶ್ರೀ ಮಾಣಿಕ್ಕಂ ಟ್ಯಾಗೋರ್ ಬಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ಲೋಕಸಭೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

 

****


(रिलीज़ आईडी: 2201826) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Punjabi , Odia , Telugu