ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪತ್ರಕರ್ತರ ಕಲ್ಯಾಣ ಸೌಲಭ್ಯಗಳಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ


ಇತ್ತೀಚೆಗೆ ಮುದ್ರಣ ಮಾಧ್ಯಮ ಜಾಹೀರಾತು ದರಗಳು 26% ರಷ್ಟು ಹೆಚ್ಚಿಸಲಾಗಿದೆ

प्रविष्टि तिथि: 10 DEC 2025 4:27PM by PIB Bengaluru

ಭಾರತ ಸರ್ಕಾರವು ಪತ್ರಕರ್ತರ ಕಲ್ಯಾಣಕ್ಕೆ ಬದ್ಧವಾಗಿದೆ. ಪತ್ರಿಕಾ ಮಾಹಿತಿ ಬ್ಯೂರೋ (ಪಿ.ಐ.ಬಿ) ಯಿಂದ ಮಾನ್ಯತೆ ಪಡೆದ ಪತ್ರಕರ್ತರು, ಇನ್ನು ಮುಂದೆ ದೇಶಾದ್ಯಂತ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿ.ಜಿ.ಹೆಚ್.ಎಸ್.) ಸೌಲಭ್ಯಗಳ ಅಡಿಯಲ್ಲಿ ತಮ್ಮನ್ನು ಮತ್ತು ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ಸೇವೆಗೆ ಒಳಪಡುತ್ತಾರೆ.

ಆರೋಗ್ಯ ಯೋಜನೆಯಡಿಯಲ್ಲಿ ಸರ್ಕಾರಿ ವ್ಯವಸ್ಥೆಯಡಿ / ಸಿ.ಜಿ.ಹೆಚ್.ಎಸ್ ವ್ಯವಸ್ಥೆಯಡಿ ಎಂಪನೇಲ್ ಮಾಡಿದ ಖಾಸಗಿ ಆಸ್ಪತ್ರೆಗಳಲ್ಲಿ ಕೂಡಾ ಸಿ.ಜಿ.ಹೆಚ್.ಎಸ್. ದರಗಳಲ್ಲಿ ಚಿಕಿತ್ಸೆಯನ್ನು ಒಳಗೊಂಡಿದೆ.

ಪತ್ರಕರ್ತರ ಕಲ್ಯಾಣ ಯೋಜನೆ (ಜೆ.ಡಬ್ಲ್ಯೂ.ಎಸ್)

ಪತ್ರಕರ್ತರ ಮರಣದಿಂದಾಗಿ ಅವರನ್ನು ಅವಲಂಭಿತ ತೀವ್ರ ತೊಂದರೆಗೊಳಗಾದ ಸಂದರ್ಭಗಳಲ್ಲಿ ಪತ್ರಕರ್ತರು/ಮಾಧ್ಯಮ ಸಿಬ್ಬಂದಿ ಅಥವಾ ಅವರ ಕುಟುಂಬಗಳಿಗೆ ಒಂದು ಬಾರಿಯ ಪರಿಹಾರ ಮೊತ್ತವನ್ನು ಒದಗಿಸಲು ಕೇಂದ್ರ ಸರ್ಕಾರ ಪತ್ರಕರ್ತರ ಕಲ್ಯಾಣ ಯೋಜನೆ (ಜೆ.ಡಬ್ಲ್ಯೂ.ಎಸ್) ಅನ್ನು ಜಾರಿಗೊಳಿಸಿದೆ.

ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿರುವ ಅಥವಾ ಪ್ರಮುಖ ಪಟ್ಟಿ ಮಾಡಲಾದ ಕಾಯಿಲೆಗಳಿಂದ ಬಳಲುತ್ತಿರುವ ಪತ್ರಕರ್ತರಿಗೂ ಪರಿಹಾರವನ್ನು ವಿಸ್ತರಿಸಲಾಗುತ್ತದೆ. ಆಸ್ಪತ್ರೆಗೆ ದಾಖಲಾಗಬೇಕಾದ ಅಪಘಾತಗಳಿಂದ ಗಂಭೀರ ಗಾಯಗಳನ್ನು ಎದುರಿಸುವ ಪತ್ರಕರ್ತರಿಗೆ ಹಣಕಾಸಿನ ನೆರವು ನೀಡಲಾಗುತ್ತದೆ.

ಪಿ.ಐ.ಬಿ ಮತ್ತು ರಾಜ್ಯ/ಕೇಂದ್ರಾಡಳಿತ ಸರ್ಕಾರಗಳಿಂದ ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಮಾನ್ಯತೆ ಪಡೆಯದ ಪತ್ರಕರ್ತರು ಕೂಡಾ ಈ ಯೋಜನೆಯ ಅಡಿಯಲ್ಲಿ ಒಳಗೊಳ್ಳುತ್ತಾರೆ.

ಪತ್ರಕರ್ತರ ಕಲ್ಯಾಣ ಯೋಜನೆ (ಜೆ.ಡಬ್ಲ್ಯೂ.ಎಸ್) ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರವು 2014-15 ರಿಂದ 2024-25 ರವರೆಗೆ 402 ಪತ್ರಕರ್ತರು/ಮಾಧ್ಯಮ ಸಿಬ್ಬಂದಿ ಅಥವಾ ಅವರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದೆ.

"ಮಾನ್ಯತೆ ಪಡೆದ ಪತ್ರಕರ್ತರ ಕಲ್ಯಾಣ ಸಮಿತಿ (ಮಾನ್ಯತಾ ಪ್ರಾಪ್ತ್ ಪತ್ರಕಾರ್ ಕಲ್ಯಾಣ ಸಮಿತಿ), ದೆಹಲಿ" ಯಿಂದ ಪಡೆದ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ, ಭಾರತದಲ್ಲಿನ ಪತ್ರಿಕೆಗಳು ಪತ್ರಿಕಾ ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯ್ದೆ, 2023 ಮತ್ತು ಅದರ 2024 ನಿಯಮಗಳ ಅಡಿಯಲ್ಲಿ ನೋಂದಾಯಿಸಲ್ಪಟ್ಟಿವೆ, ಪತ್ರಿಕಾ ಸೇವಾ ಪೋರ್ಟಲ್ ನಲ್ಲಿ ನೋಂದಣಿಗಾಗಿ ಸುಲಭ, ಹಾಗೂ ಪ್ರವೇಶಿಸಬಹುದಾದ ಆನ್ ಲೈನ್ ವ್ಯವಸ್ಥೆ ಹೊಂದಿದೆ.

ಕೇಂದ್ರೀಯ ಸಂವಹನ ಬ್ಯೂರೋ (ಸಿ.ಬಿ.ಸಿ) ಮುದ್ರಣ ಮಾಧ್ಯಮ ಜಾಹೀರಾತುಗಳನ್ನು ಪಾರದರ್ಶಕವಾಗಿ ಬಿಡುಗಡೆ ಮಾಡುತ್ತದೆ ಮತ್ತು ಜಾಹೀರಾತು ದರಗಳನ್ನು ಇತ್ತೀಚೆಗೆ 26% ರಷ್ಟು ವರೆಗೆ ಹೆಚ್ಚಿಸಿದೆ.

ಸಿ.ಬಿ.ಸಿ, ಪಿ.ಐ.ಬಿ ಮತ್ತು ಭಾರತೀಯ ಪತ್ರಿಕಾ ಮಂಡಳಿಯ ಸಮಿತಿಗಳಿಗೆ ನಾಮನಿರ್ದೇಶನಗಳನ್ನು ಅನುಗುಣವಾದ ನೀತಿ ಮಾರ್ಗಸೂಚಿಗಳ ಪ್ರಕಾರ ಮಾಡಲಾಗುತ್ತದೆ.

ಶ್ರೀ ಅರವಿಂದ್ ಗಣಪತ್ ಸಾವಂತ್ ಮತ್ತು ಶ್ರೀ ಸಂಜಯ್ ಉತ್ತಮರಾವ್ ದೇಶಮುಖ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ಲೋಕಸಭೆಯಲ್ಲಿ ಈ ಮಾಹಿತಿಯನ್ನು ಸಲ್ಲಿಸಿದ್ದಾರೆ.

 

****


(रिलीज़ आईडी: 2201818) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Assamese , Punjabi , Odia , Tamil , Telugu