ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ನ್ಯಾಯಯುತ ಸ್ಪರ್ಧೆ ಮತ್ತು ನಿಖರವಾದ ಟೆಲಿವಿಷನ್ ರೇಟಿಂಗ್‌ ಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರದಿಂದ ಕರಡು ಟಿ.ಆರ್.ಪಿ. ಮಾರ್ಗಸೂಚಿಗಳ ಪರಿಷ್ಕರಣೆ


ವೀಕ್ಷಕರ ವೈವಿಧ್ಯಮಯ ಮತ್ತು ವಿಕಸನಗೊಳ್ಳುತ್ತಿರುವ ಮಾಧ್ಯಮ ಬಳಕೆಯ ಅಭ್ಯಾಸಗಳನ್ನು ಪ್ರತಿಬಿಂಬಿಸಲಿರುವ ಹೊಸ ವ್ಯವಸ್ಥೆ

प्रविष्टि तिथि: 10 DEC 2025 3:45PM by PIB Bengaluru

ಭಾರತದಲ್ಲಿ ದೂರದರ್ಶನ ಕಾರ್ಯಕ್ರಮಗಳಿಗೆ ರೇಟಿಂಗ್‌ ನೀಡುವ ಪ್ರಕ್ರಿಯೆಯು ಭಾರತದಲ್ಲಿನ ಟೆಲಿವಿಷನ್ ರೇಟಿಂಗ್ ಏಜೆನ್ಸಿಗಳಿಗಾಗಿನ ನೀತಿ ಮಾರ್ಗಸೂಚಿ, 2014 ರನ್ವಯ ನಿಯಂತ್ರಿಸಲ್ಪಡುತ್ತವೆ.

ಸರ್ಕಾರವು ಸಾರ್ವಜನಿಕರ ಸಲಹೆ-ಕುಂದುಕೊರತೆಗಳಿಗಾಗಿ ದಿನಾಂಕ: 02.07.2025 ರಂದು, ಈ ಮಾರ್ಗಸೂಚಿಗಳ ಕರಡು ತಿದ್ದುಪಡಿಯನ್ನು ಪ್ರಕಟಿಸಿದೆ.

ಪ್ರಸ್ತಾವಿತ ತಿದ್ದುಪಡಿಗಳು, ನ್ಯಾಯಯುತ ಸ್ಪರ್ಧೆಯನ್ನು ಖಾತರಿಪಡಿಸುವ, ಹೆಚ್ಚು ನಿಖರವಾದ ಮತ್ತು ಪ್ರಾತಿನಿಧಿಕ ದತ್ತಾಂಶವನ್ನು ನೀಡುವ ಗುರಿಯನ್ನು ಹೊಂದಿದ್ದು ಟಿ.ಆರ್.ಪಿ. ವ್ಯವಸ್ಥೆಯು ದೇಶಾದ್ಯಂತ ವೀಕ್ಷಕರ ವೈವಿಧ್ಯಮಯ ಮತ್ತು ವಿಕಸನಗೊಳ್ಳುತ್ತಿರುವ ಮಾಧ್ಯಮ ಬಳಕೆಯ ಅಭ್ಯಾಸಗಳನ್ನು ಪ್ರತಿಬಿಂಬಿಸುವುದನ್ನು ಖಾತರಿಪಡಿಸಲಿದೆ.

ಸ್ವೀಕೃತ ಮಾಹಿತಿ ಪರಿಶೀಲಿಸಿದ ನಂತರ, ಸಾರ್ವಜನಿಕ ಸಮಾಲೋಚನೆಗಾಗಿ ದಿನಾಂಕ: 06.11.2025 ರಂದು ಪರಿಷ್ಕೃತ ಕರಡು ತಿದ್ದುಪಡಿಯನ್ನು ಪ್ರಕಟಿಸಲಾಗಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ.ಎಲ್.ಮುರುಗನ್ ಅವರು ಇಂದು ಲೋಕಸಭೆಯಲ್ಲಿ ಈ ಮಾಹಿತಿ ನೀಡಿ, ಡಾ. ಕಿರ್ಸನ್ ನಾಮದೇವ್ ಮತ್ತು ಶ್ರೀ ಚರಣ್ ಜಿತ್ ಸಿಂಗ್ ಚನ್ನಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

 

*****


(रिलीज़ आईडी: 2201667) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Tamil , Telugu