ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತೀಯ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಉತ್ತೇಜಿಸುವ ದೂರದರ್ಶನದ 'ಸುಪ್ರಭಾತಂ' ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ಶ್ಲಾಘನೆ

प्रविष्टि तिथि: 08 DEC 2025 9:03AM by PIB Bengaluru

ದೂರದರ್ಶನದಲ್ಲಿ ಪ್ರಸಾರವಾಗುವ ಸುಪ್ರಭಾತಂ ಕಾರ್ಯಕ್ರಮವು ಮುಂಜಾನೆಗೆ ಉಲ್ಲಾಸಕರ ಆರಂಭ ತರುತ್ತಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಯೋಗಾಭ್ಯಾಸದಿಂದ ಹಿಡಿದು ಭಾರತೀಯ ಜೀವನ ವಿಧಾನದವರೆಗೆ ವಿವಿಧ ವಿಚಾರಧಾರೆಗಳನ್ನು ಪ್ರಸ್ತುತಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಕಾರ್ಯಕ್ರಮವು ಭಾರತೀಯ ಸಂಪ್ರದಾಯಗಳು ಮತ್ತು ಮೌಲ್ಯಗಳಲ್ಲಿ ಬೇರೂರಿರುವ ಜ್ಞಾನ, ಸ್ಫೂರ್ತಿ ಮತ್ತು ಸಕಾರಾತ್ಮಕತೆಯ ವಿಶಿಷ್ಟ ಹೂರಣವಾಗಿದೆ ಎಂದು ಪ್ರಧಾನಮಂತ್ರಿ ಬಣ್ಣಿಸಿದ್ದಾರೆ.

ಸುಪ್ರಭಾತಂ ಕಾರ್ಯಕ್ರಮದ ವಿಶೇಷ ವಿಭಾಗವಾದ ‘ಸಂಸ್ಕೃತ ಸುಭಾಷಿತ’ ದ ಬಗ್ಗೆಯೂ ಪ್ರಧಾನಮಂತ್ರಿ ಗಮನ ಸೆಳೆದಿದ್ದಾರೆ. ಈ ವಿಭಾಗವು ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ನವ ಜಾಗೃತಿ ಮೂಡಿಸಲು ಪೂರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಮಂತ್ರಿಗಳು ಇಂದಿನ ಸುಭಾಷಿತವನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ.

 ಪ್ರತ್ಯೇಕ ಎಕ್ಸ್ ಪೋಸ್ಟ್ ಗಳಲ್ಲಿ ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ:

“दूरदर्शन पर प्रसारित होने वाला सुप्रभातम् कार्यक्रम सुबह-सुबह ताजगी भरा एहसास देता है। इसमें योग से लेकर भारतीय जीवन शैली तक अलग-अलग पहलुओं पर चर्चा होती है। भारतीय परंपराओं और मूल्यों पर आधारित यह कार्यक्रम ज्ञान, प्रेरणा और सकारात्मकता का अद्भुत संगम है।

https://www.youtube.com/watch?v=vNPCnjgSBqU
 


“सुप्रभातम् कार्यक्रम में एक विशेष हिस्से की ओर आपका ध्यान आकर्षित करना चाहूंगा। यह है संस्कृत सुभाषित। इसके माध्यम से भारतीय संस्कृति और विरासत को लेकर एक नई चेतना का संचार होता है। यह है आज का सुभाषित…”
 

 

*****

 


(रिलीज़ आईडी: 2200315) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Tamil , Telugu , Malayalam