ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪೂಜ್ಯ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು


ಸರಳತೆ, ಸೇವೆ ಮತ್ತು ಕರುಣೆಯ ಸಂಕೇತವಾದ ಪೂಜ್ಯ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಚಿಂತನೆಗಳು ಮತ್ತು ಜ್ಞಾನದ ವ್ಯಾಪ್ತಿಯು ಬಹಳಷ್ಟು ವಿಶಾಲವಾಗಿತ್ತು

ಅವರೊಂದಿಗಿನ ಪ್ರತಿಯೊಂದು ಸಂಭಾಷಣೆಯು ಹೊಸ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡಿತು

ಪ್ರಮುಖ್ ಸ್ವಾಮಿ ಮಹಾರಾಜ್ ಮಾನವ ಸಮಾಜವನ್ನು ದೇವರ ಮೇಲಿನ ನಂಬಿಕೆ ಮತ್ತು ಭಕ್ತಿಯೊಂದಿಗೆ ಸಂಪರ್ಕಿಸಲು ಕೆಲಸ ಮಾಡಿದರು

ಪ್ರತಿಯೊಬ್ಬ ವ್ಯಕ್ತಿಗೂ ಭಗವಾನ್ ಸ್ವಾಮಿನಾರಾಯಣ ಅವರ ಬೋಧನೆಗಳನ್ನು ಹರಡಿದ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಸ್ಮರಣೆಯು ಮನಸ್ಸನ್ನು ಶಾಂತಿಗೋಳಿಸುತ್ತದೆ ಮತ್ತು ಮನವನ್ನು ಭಕ್ತಿಯಿಂದ ತುಂಬುತ್ತದೆ

प्रविष्टि तिथि: 07 DEC 2025 3:07PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪೂಜ್ಯ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು.

ಎಕ್ಸ್ ತಾಣದ ಪೊಸ್ಟ್‌ ನಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಹೀಗೆ ಹೇಳಿದ್ದಾರೆ, “ಸರಳತೆ, ಸೇವೆ ಮತ್ತು ಕರುಣೆಯ ಸಂಕೇತವಾದ ಪೂಜ್ಯ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಜನ್ಮ ವಾರ್ಷಿಕೋತ್ಸವದಂದು, ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆ ಮತ್ತು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಸ್ವಾಮಿ ಅವರ ಆಲೋಚನೆಗಳು ಮತ್ತು ಜ್ಞಾನದ ವ್ಯಾಪ್ತಿಯು ತುಂಬಾ ವಿಶಾಲವಾಗಿದ್ದು, ಅವರೊಂದಿಗಿನ ಪ್ರತಿಯೊಂದು ಸಂಭಾಷಣೆಯು ಹೊಸ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡಿತು. ಅವರನ್ನು ಭೇಟಿ ಮಾಡಲು, ಅವರೊಂದಿಗೆ ಮಾತನಾಡಲು ಮತ್ತು ಅವರೊಂದಿಗೆ ಸಮಯ ಕಳೆಯಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಪ್ರಮುಖ್ ಸ್ವಾಮಿ ಮಹಾರಾಜ್ ಮಾನವ ಸಮಾಜವನ್ನು ದೇವರ ಮೇಲಿನ ನಂಬಿಕೆ ಮತ್ತು ಭಕ್ತಿಯೊಂದಿಗೆ ಸಂಪರ್ಕಿಸಲು ಶ್ರಮಿಸಿದರು. ಭಗವಾನ್ ಸ್ವಾಮಿನಾರಾಯಣ ಅವರ ಬೋಧನೆಗಳನ್ನು ಪ್ರತಿಯೊಬ್ಬ ವ್ಯಕ್ತಿಗೂ ಹರಡಿದ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಕೇವಲ ಸ್ಮರಣೆಯು ಮನಸ್ಸನ್ನು ಶಾಂತಿ ಮತ್ತು ಭಕ್ತಿಯಿಂದ ತುಂಬುತ್ತದೆ.”

 

****


(रिलीज़ आईडी: 2200019) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Assamese , Punjabi , Gujarati , Tamil