ಪ್ರಧಾನ ಮಂತ್ರಿಯವರ ಕಛೇರಿ
ಅಂತಾರಾಷ್ಟ್ರೀಯ ವಿಶೇಷಚೇತನರ ದಿನದಂದು ದಿವ್ಯಾಂಗರಿಗೆ ಘನತೆ, ಲಭ್ಯತೆ ಮತ್ತು ಅವಕಾಶಗಳನ್ನು ಖಾತ್ರಿಪಡಿಸುವ ಬದ್ಧತೆ ಪುನರುಚ್ಚರಿಸಿದ ಪ್ರಧಾನಮಂತ್ರಿ
प्रविष्टि तिथि:
03 DEC 2025 4:09PM by PIB Bengaluru
ಅಂತಾರಾಷ್ಟ್ರೀಯ ವಿಶೇಷಚೇತನರ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದಿವ್ಯಾಂಗ ಸಹೋದರ ಸಹೋದರಿಯರಿಗೆ ಘನತೆ, ಲಭ್ಯತೆ ಮತ್ತು ಅವಕಾಶಗಳನ್ನು ಒದಗಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ದಿವ್ಯಾಂಗರು ತಮ್ಮ ಸೃಜನಶೀಲತೆ ಮತ್ತು ದೃಢಸಂಕಲ್ಪದಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಮತ್ತು ನಮ್ಮ ರಾಷ್ಟ್ರೀಯ ಪ್ರಗತಿಯನ್ನು ಗಮನಾರ್ಹವಾಗಿ ಶ್ರೀಮಂತಗೊಳಿಸಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. “ಕಳೆದ ಕೆಲವು ವರ್ಷಗಳಲ್ಲಿ ಭಾರತವು ಕಾನೂನುಗಳು, ಲಭ್ಯವಾಗಬಹುದಾದ ಮೂಲಸೌಕರ್ಯ, ಸಮಗ್ರ ಶಿಕ್ಷಣ ನೀತಿಗಳು ಮತ್ತು ಸಹಾಯಕ ತಂತ್ರಜ್ಞಾನಗಳಲ್ಲಿನ ನಾವೀನ್ಯತೆಗಳ ಮೂಲಕ ದಿವ್ಯಾಂಗ ಕಲ್ಯಾಣದತ್ತ ಪ್ರಮುಖ ಹೆಜ್ಜೆಗಳನ್ನಿಟ್ಟಿದೆ. ಮುಂಬರುವ ದಿನಗಳಲ್ಲಿ ನಾವು ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡುವುದನ್ನು ಮುಂದುವರಿಸುತ್ತೇವೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಅಂತಾರಾಷ್ಟ್ರೀಯ ವಿಶೇಷಚೇತನರ ದಿನದಂದು, ನಮ್ಮ ದಿವ್ಯಾಂಗ ಸಹೋದರ ಸಹೋದರಿಯರಿಗೆ ಘನತೆ,;ಲಭ್ಯತೆ ಮತ್ತು ಅವಕಾಶಗಳನ್ನು ಸದಾ ಖಾತ್ರಿಪಡಿಸಿಕೊಳ್ಳುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ಅವರು ತಮ್ಮ ಸೃಜನಶೀಲತೆ ಮತ್ತು ದೃಢಸಂಕಲ್ಪದಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅದೇ ವೇಳೆ ಅವರು ನಮ್ಮ ರಾಷ್ಟ್ರೀಯ ಪ್ರಗತಿಯನ್ನು ಗಮನಾರ್ಹವಾಗಿ ಶ್ರೀಮಂತಗೊಳಿಸಿದ್ದಾರೆ. ಕಳೆದ ಕಲವು ವರ್ಷಗಳಿಂದೀಚೆಗೆ ಭಾರತವು ಕಾನೂನುಗಳು, ಲಭ್ಯವಾಗಬಹುದಾದ ಮೂಲಸೌಕರ್ಯ, ಸಮಗ್ರ ಶಿಕ್ಷಣ ನೀತಿಗಳು ಮತ್ತು ಸಹಾಯಕ ತಂತ್ರಜ್ಞಾನಗಳಲ್ಲಿನ ನಾವೀನ್ಯತೆಗಳ ಮೂಲಕ ದಿವ್ಯಾಂಗರ ಕಲ್ಯಾಣದತ್ತ ಪ್ರಮುಖ ಹೆಜ್ಜೆಗಳನ್ನಿಟ್ಟಿದೆ. ಮುಂಬರುವ ದಿನಗಳಲ್ಲಿ ನಾವು ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡುವುದನ್ನು ಮುಂದುವರಿಸುತ್ತೇವೆ".
*****
(रिलीज़ आईडी: 2198227)
आगंतुक पटल : 4