ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಯಪುರದಲ್ಲಿ ನಡೆದ ಡಿ.ಜಿ.ಪಿ/ಐ.ಜಿ.ಪಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಪ್ರಧಾನಮಂತ್ರಿ

प्रविष्टि तिथि: 29 NOV 2025 8:24PM by PIB Bengaluru

ರಾಯಪುರದಲ್ಲಿ ಇಂದು ನಡೆದ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಸಮ್ಮೇಳನದ ಮೊದಲ ದಿನದ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಹಿಸಿದರು. ಭಾರತದ ಭದ್ರತಾ ವ್ಯವಸ್ಥೆಯ ವಿವಿಧ ಅಂಶಗಳ ಕುರಿತು ಸಮ್ಮೇಳನವು ವ್ಯಾಪಕ ಫಲಪ್ರದ ಚರ್ಚೆಗಳಿಗೆ ಸಾಕ್ಷಿಯಾಯಿತು ಎಂದು ಅವರು ಹೇಳಿದರು. ರಾಷ್ಟ್ರೀಯ ಭದ್ರತಾ ಕ್ಷೇತ್ರದಲ್ಲಿ ಉತ್ತಮ ಅಭ್ಯಾಸಗಳು ಮತ್ತು ನಾವೀನ್ಯತೆಗಳನ್ನು ಹಂಚಿಕೊಳ್ಳಲು ಈ ಸಮ್ಮೇಳನವು ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು  ಪ್ರಧಾನಮಂತ್ರಿ ಅವರು ಹೇಳಿದರು.

ಎಕ್ಸ್ ತಾಣದ ಸಂದೇಶದಲ್ಲಿ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

"ರಾಯಪುರದಲ್ಲಿ ನಡೆದ ಡಿ.ಜಿ.ಪಿ / ಐ.ಜಿ.ಪಿ ಸಮ್ಮೇಳನದ ಮೊದಲ ದಿನವು ಭಾರತದ ಭದ್ರತಾ ವ್ಯವಸ್ಥೆಯ ವಿವಿಧ ಅಂಶಗಳ ಕುರಿತು ವ್ಯಾಪಕ ಚರ್ಚೆಗಳಿಗೆ ಸಾಕ್ಷಿಯಾಯಿತು. ಈ ಕ್ಷೇತ್ರದಲ್ಲಿ ಉತ್ತಮ ಅಭ್ಯಾಸಗಳು ಮತ್ತು ನಾವೀನ್ಯತೆಗಳನ್ನು ಹಂಚಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ."

****


(रिलीज़ आईडी: 2196472) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Gujarati , Odia , Malayalam