ಥಾಯ್ಲೆಂಡ್‌ನ ವಿಶಿಷ್ಟ ರತ್ನ 'ಎ ಯೂಸ್‌ಫುಲ್ ಘೋಸ್ಟ್' ನೊಂದಿಗೆ ಐ.ಎಫ್.ಎಫ್.ಐ ಅಂತಾರಾಷ್ಟ್ರೀಯ ಚಿತ್ರ ವಿಭಾಗ ಅಂತ್ಯ
ವಿಚಿತ್ರವಾದ ಅಲೌಕಿಕ ಕಥೆಯ ಹಂದರ
ನಿರ್ದೇಶಕ ರಾಟ್ಚಪೂಮ್ ಮತ್ತು ತಂಡವು ಚಿತ್ರದ ದೃಶ್ಯ ಲವಲವಿಕೆ ಮತ್ತು ಭಾವನಾತ್ಮಕ ತಿರುಳು ಪ್ರಸ್ತುತಪಡಿಸಿದರು
#ಐ.ಎಫ್.ಎಫ್.ಐವುಡ್, 28 ನವೆಂಬರ್ 2025
ಐ.ಎಫ್.ಎಫ್.ಐ ಯಲ್ಲಿನ ಅಂತಾರಾಷ್ಟ್ರೀಯ ವಿಭಾಗ ಅತ್ಯಂತ ಸ್ಮರಣೀಯ ಅಂತ್ಯಕಂಡಿತು. ಬಹುಶಃ ಇದಕ್ಕಿಂತ ಸ್ಮರಣೀಯವಾದ ಅಂತಿಮ ಘಟ್ಟ ಸಾಧ್ಯವಿರಲಿಲ್ಲ ಎನಿಸುತ್ತದೆ. ಅಧಿಕೃತ ಆಸ್ಕರ್ ಪ್ರವೇಶ ಮತ್ತು ಕಾನ್‌ನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ವಿಜೇತ ಥೈಲ್ಯಾಂಡ್‌ನ 'ಎ ಯೂಸ್‌ಫುಲ್ ಘೋಸ್ಟ್' ಚಿತ್ರದ ತಂಡವು ಇಂದು ಪತ್ರಿಕಾಗೋಷ್ಠಿಗೆ ವಿಶಿಷ್ಟ, ಸಾಮಾಜಿಕ ವ್ಯಾಖ್ಯಾನ ಮತ್ತು ಹಾಸ್ಯದ ಅಪರೂಪದ ಮಿಶ್ರಣವನ್ನು ತಂದಿತು, ಇದು ಅವರ ಪ್ರಸಿದ್ಧ ಚಿತ್ರದ ಸ್ವರವನ್ನು ಪ್ರತಿಬಿಂಬಿಸುತ್ತದೆ.
ನಿರ್ದೇಶಕ ರಾಟ್ಚಪೂಮ್ ಬೂನ್‌ಬಂಚಚೋಕ್, ಸಹಾಯಕ ನಿರ್ಮಾಪಕ ತನಡೆ ಅಮೋರ್ನ್‌ಪಿಯಾಲೆರ್ಕ್, ನಟ ವಿಸಾರುತ್ ಹೊಮ್‌ಹುವಾನ್ ಮತ್ತು ಛಾಯಾಗ್ರಾಹಕ ಸಾಂಗ್ ಪಸಿತ್ ಅವರು ದುಃಖಿತ ಪತಿ ತನ್ನ ಮೃತ ಪತ್ನಿಯನ್ನು ವ್ಯಾಕ್ಯೂಮ್ ಕ್ಲೀನರ್‌ನಲ್ಲಿ ಪುನರ್ಜನ್ಮ ಪಡೆಯುವುದನ್ನ ಕಂಡುಕೊಳ್ಳುವ ಕಥೆಯು ನವಿರಾದ ಲೋಕವನ್ನು ಬಿಚ್ಚಿಡಲು ವೇದಿಕೆಯನ್ನು ಕಲ್ಪಿಸಿದೆ.

“ಒಂದು ಹುಚ್ಚು ಕಲ್ಪನೆ ಇಷ್ಟು ದೂರ ಪ್ರಯಾಣಿಸಬಹುದೆಂದು ಯಾರಿಗೆ ತಿಳಿದಿತ್ತು?” — ರಾಟ್ಚಪೂಮ್
ಚಿತ್ರದ ಜಾಗತಿಕ ಪ್ರಯಾಣದ ಬಗ್ಗೆ ಯೋಚಿಸುತ್ತಾ, ನಿರ್ದೇಶಕ ರಾಟ್ಚಪೂಮ್ ತಮ್ಮ ನಂಬಿಕೆ ಮತ್ತು ಸಂತೋಷವನ್ನು ಹಂಚಿಕೊಂಡರು.
“ಇಂತಹ ಕಲ್ಪನೆಯನ್ನು ಹೊಂದಿರುವ ಚಿತ್ರವು ಇಷ್ಟು ದೂರ ಪ್ರಯಾಣಿಸಿ ಅನೇಕ ಜನರನ್ನು ತಲುಪುತ್ತದೆ ಎಂದು ಯಾರು ಭಾವಿಸಿದ್ದರು?” ಚಿತ್ರವು ಆರಂಭದಲ್ಲಿ ಮಾನವ ರೂಪದಲ್ಲಿ ಕಾಣಿಸಿಕೊಳ್ಳುವ ಭೂತದ ಹೆಚ್ಚು ಸಾಂಪ್ರದಾಯಿಕ ಚಿತ್ರಣದೊಂದಿಗೆ ಪ್ರಾರಂಭವಾಯಿತು. ಆದರೆ ಈ ಕಲ್ಪನೆ ಪರಿಚಿತವಾಗಿದೆ, ಸಾಕಷ್ಟು ಸೃಜನಶೀಲವಾಗಿಲ್ಲ ಎಂದು ಭಾವಿಸಿತು.

ಈ ವಿಲಕ್ಷಣ ಆಯ್ಕೆಯು ಆಳವಾಗಿ ಸಾಂಕೇತಿಕವಾಗಿತ್ತು ಎಂದು ಅವರು ವಿವರಿಸಿದರು. “ಥೈಲ್ಯಾಂಡ್‌ನಲ್ಲಿ ಬಹಳ ನಿಜವಾದ ಸಮಸ್ಯೆಯಾದ ಧೂಳಿನ ಮಾಲಿನ್ಯವು ಚಿತ್ರದಲ್ಲಿನ ನಾಯಕಿಯ ಜೀವನವನ್ನು ಹೇಳುತ್ತದೆ ಮತ್ತು ನಿರ್ವಾಯು ಅವಳ ಸಾವಿಗೆ ಕಾರಣಕ್ಕೆ ಕಾವ್ಯಾತ್ಮಕ ಪ್ರತಿಕ್ರಿಯೆಯಾಗುತ್ತದೆ.” ಭಾರಿ ಮೇಕಪ್ ಬಳಸುವವರಿಂದ ಹಿಡಿದು ಸೂಕ್ಷ್ಮವಾದ ಅದೃಶ್ಯ ಉಪಸ್ಥಿತಿಗಳವರೆಗೆ, ಅಂತಿಮವಾಗಿ ಅಪರಿಚಿತ, ನಿಶ್ಯಬ್ದ ಮತ್ತು ಹೆಚ್ಚು ನಿಕಟವಾದ ಯಾವುದನ್ನಾದರೂ ಆಕರ್ಷಿಸುವವರೆಗೆ ವಿಶ್ವಾದ್ಯಂತ ಪ್ರೇತ ಚಿತ್ರಣಗಳನ್ನು ಅಧ್ಯಯನ ಮಾಡಲು ಸಾಕಷ್ಟು ಸಮಯವನ್ನು ಕಳೆದಿದ್ದೇನೆ ಎಂದು ರಾಟ್ಚಪೂಮ್ ಹಂಚಿಕೊಂಡರು. ಈ ನಿರ್ಧಾರವು ಅನಿರೀಕ್ಷಿತ ವೈಜ್ಞಾನಿಕ ಕಾಲ್ಪನಿಕ ಅಂಶಗಳನ್ನು ಪರಿಚಯಿಸಿತು, ಯಾವುದೇ ಪ್ರಜ್ಞಾಪೂರ್ವಕ ಯೋಜನೆಯ ಭಾಗವಲ್ಲ ಎಂದು ಒಪ್ಪಿಕೊಂಡರು.
"ಸಿನಿಮೀಯವಾಗಿರಲು ಹಿಂಜರಿಯಬೇಡಿ": ಛಾಯಾಗ್ರಾಹಕ ಸಾಂಗ್ ಪಸಿತ್
ಸಿನಿಮೀಯತೆ ಮತ್ತು ಮೂರ್ಖತನದ ನಡುವಿನ ಉದ್ದೇಶಪೂರ್ವಕ ನೃತ್ಯ ಎಂದು ಛಾಯಾಗ್ರಾಹಕ ಸಾಂಗ್ ಪಸಿತ್ ವಿವರಿಸಿದ್ದಾರೆ. "ನಮ್ಮ ಮಾರ್ಗದರ್ಶಿ ಚಿಂತನೆ 'ಸಿನಿಮೀಯವಾಗಿರಲು ಹಿಂಜರಿಯಬೇಡಿ'" ಎಂದು ಅವರು ಹೇಳಿದರು.

ತಂಡವು ವಿಚಿತ್ರ ಕೋನಗಳು, ತಮಾಷೆಯ ಸಂಯೋಜನೆಗಳು ಮತ್ತು ಆಕರ್ಷಣ ಬಣ್ಣಗಳನ್ನು, ವಿಶೇಷವಾಗಿ ಕೆಂಪು ಬಣ್ಣವನ್ನು ಅಳವಡಿಸಿಕೊಂಡಿದೆ ಎಂದು ಅವರು ಬಹಿರಂಗಪಡಿಸಿದರು, ನಿರ್ದೇಶಕರು ಈ ವರ್ಣವನ್ನು ಎದ್ದುಕಾಣುವಂತೆ ಪ್ರಸ್ತುತಪಡಿಸಿದ್ದಾರೆ. ಪ್ರೇಕ್ಷಕರನ್ನು ತಮಾಷೆಯ, ನಿಗೂಢ ಮತ್ತು ಯಾವಾಗಲೂ ಸ್ವಲ್ಪ ಕೇಂದ್ರದಿಂದ ಹೊರಗಿರುವ ಜಗತ್ತಿನಲ್ಲಿ ಮುಳುಗಿಸುವುದು ಗುರಿಯಾಗಿತ್ತು.
ಥೈಲ್ಯಾಂಡ್‌ನ ಚಲನಚಿತ್ರ ಭೂದೃಶ್ಯವನ್ನು ಮಾತನಾಡುವುದು
ಥೈಲ್ಯಾಂಡ್‌ನ ಚಲನಚಿತ್ರ ಭೂದೃಶ್ಯದ ಬಗ್ಗೆ ಮಾತನಾಡಿದ ಸಹ ನಿರ್ಮಾಪಕ ತನಡೆ ಅಮೋರ್ನ್‌ಪಿಯಾಲೆರ್ಕ್ ಥಾಯ್ ಸಿನೆಮಾದ ತೆರೆಮರೆಯ ಪ್ರಪಂಚದ ಮೇಲೆ ಬೆಳಕು ಚೆಲ್ಲಿದರು. ಹೊಸ ಚಲನಚಿತ್ರ ನಿರ್ಮಾಪಕರ ಹೊಸ ಅಲೆ ಹೊರಹೊಮ್ಮುತ್ತಿದ್ದರೂ, ಹಾಲಿವುಡ್ ಶೀರ್ಷಿಕೆಗಳಿಂದ ಹೆಚ್ಚು ಪ್ರಾಬಲ್ಯ ಹೊಂದಿರುವ ಏರಿಳಿತದ ಪರಿಸರ ವ್ಯವಸ್ಥೆಯು ಇನ್ನೂ ಚಿತ್ರಮಂದಿರಗಳಲ್ಲಿ ವರ್ಷಕ್ಕೆ ಸುಮಾರು 30 ಚಲನಚಿತ್ರಗಳನ್ನು ಮಾತ್ರ ಬಿಡುಗಡೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.

ಪ್ರಕಾರದ ವೈವಿಧ್ಯತೆ ಸೀಮಿತವಾಗಿದೆ ಮತ್ತು ಚಲನಚಿತ್ರಗಳು "ಶುದ್ಧ ಮನರಂಜನೆ" ಆಗಬಹುದಾದರೂ, ಸಿನೆಮಾ ಹೇಳಲು ಏನನ್ನಾದರೂ ಹೊಂದಿರಬೇಕು ಎಂದು ರಚ್ಚಪೂಮ್ ಹೇಳಿದರು.
"ಈ ಪಾತ್ರ ನನ್ನ ಜೀವನದಲ್ಲಿ ಬದಲಾವಣೆ ತಂದಿತು" - ನಟ ವಿಸಾರುತ್ ಹೊಮ್ಹುವಾನ್
ನಟ ವಿಸಾರುತ್ ಹೊಮ್ಹುವಾನ್ ಮಾತನಾಿ, "ಎ ಯೂಸ್ ಫುಲ್ ಘೋಸ್ಟ್" ಸವಾಲಿನ ಮತ್ತು ವೃತ್ತಿಜೀವನವನ್ನು ವ್ಯಾಖ್ಯಾನಿಸುವ ಚಿತ್ರವಾಗಿತ್ತು. "ಥೈಲ್ಯಾಂಡ್‌ನಲ್ಲಿ ನಟನಾಗುವುದು ಕಷ್ಟ," "ನಾನು ಟಿವಿ, ಟಿಕ್‌ಟಾಕ್, ಎಲ್ಲೆಡೆ ಕೆಲಸ ಮಾಡಿದ್ದೇನೆ. ಹೆಚ್ಚಿನ ಅವಕಾಶಗಳಿಲ್ಲ. ಈ ಚಿತ್ರ ನನಗೆ ಒಂದು ದೊಡ್ಡ ಮಾರ್ಗವಾಗಿತ್ತು, ಅಂತಿಮವಾಗಿ ಜನರು ನನ್ನನ್ನು ಚಲನಚಿತ್ರ ನಟ ಎಂದು ಗುರುತಿಸಲು ಅವಕಾಶ ಮಾಡಿಕೊಟ್ಟಿತು."

ಒಟ್ಟಾಗಿ, ತಂಡವು 'ಎ ಯೂಸ್‌ಫುಲ್ ಘೋಸ್ಟ್' ಅನ್ನು ವಿರೋಧಾಭಾಸಗಳ ಮೇಲೆ ಅಭಿವೃದ್ಧಿ ಹೊಂದುವ ಚಿತ್ರ, ಹಾಸ್ಯಮಯವಾದರೂ ಕಾಡುವ, ಅದ್ಭುತವಾದರೂ ನೈಜ ಪರಿಸರ ಸಮಸ್ಯೆಗಳಲ್ಲಿ ಬೇರೂರಿರುವ ಮತ್ತು ಎಂದಿಗೂ ತನ್ನ ವಿಲಕ್ಷಣ ಮನೋಭಾವವನ್ನು ಕಳೆದುಕೊಳ್ಳದೆ ಸ್ಪರ್ಶಿಸುವ ಚಿತ್ರ ಎಂದು ಬಣ್ಣಿಸಲಾಯಿತು.
ಪತ್ರಿಕಾಗೋಷ್ಠಿ ಮುಕ್ತಾಯಗೊಳ್ಳುತ್ತಿದ್ದಂತೆ, ಚಿತ್ರವು ಜಾಗತಿಕ ಗಮನವನ್ನು ಏಕೆ ಸೆಳೆಯಿತು ಎಂಬುದು ಸ್ಪಷ್ಟವಾಯಿತು: ಇದು ವಿಚಿತ್ರ, ಪ್ರಾಮಾಣಿಕ ಮತ್ತು ಸಾಮಾಜಿಕವಾಗಿ ಪ್ರತಿಧ್ವನಿಸುವ ಧೈರ್ಯವನ್ನು ಹೊಂದಿದೆ. ಇದು ಐ.ಎಫ್.ಎಫ್.ಐಯ ಅಂತಾರಾಷ್ಟ್ರೀಯ ವಿಭಾಗಕ್ಕೆ ಸಂತೋಷಕರ ಮತ್ತು ಮರೆಯಲಾಗದ ಮುಕ್ತಾಯದ ಟಿಪ್ಪಣಿ ನೀಡಿತು.
ಟ್ರೇಲರ್:
ಪಿಸಿ ಲಿಂಕ್:
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಆರಂಭವಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಹಬ್ಬವಗಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ.ಎಸ್.ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಪೂರೈಸುತ್ತವೆ ಮತ್ತು ದಂತಕಥೆಯ ಕಲಾವಿದರು, ಭರವಸೆಯ ನಾಯಕರು ಪ್ರತಿಭೆ ತೋರುತ್ತಿದ್ದಾರೆ. ಐ.ಎಫ್.ಎಫ್.ಐ ನಿಜವಾಗಿಯೂ ಮಿಂಚುವಂತೆ ಮಾಡುವುದು ಅದರ ಮಿಶ್ರಣವಾಗಿದೆ - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು ಮತ್ತು ಉನ್ನತ-ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಇವೆ. ನವೆಂಬರ್ 20–28 ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಯಲ್ ಪ್ರದರ್ಶಿಸಲಾದ 56 ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳು ಬೆರಗುಗೊಳಿತ್ತಿದೆ. ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ವಿಶೇಷ ಕಾರ್ಯಕ್ರಮವಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
ಐ.ಎಫ್.ಎಫ್.ಐ ವೆಬ್‌ಸೈಟ್: https://www.iffigoa.org/
ಪಿಐಬಿಸ್ ಐ.ಎಫ್.ಎಫ್.ಐ ಮೈಕ್ರೋಸೈಟ್: https://www.pib.gov.in/iffi/56/
ಪಿಐಬಿ ಐ.ಎಫ್.ಎಫ್.ಐವುಡ್ ಪ್ರಸಾರ ಚಾನೆಲ್:
https://whatsapp.com/channel/0029VaEiBaML2AU6gnzWOm3F
ಎಕ್ಸ್ ಹ್ಯಾಂಡಲ್‌ಗಳು: @IFFIGoa, @PIB_India, @PIB_Panaji
****
रिलीज़ आईडी:
2196105
| Visitor Counter:
3