ಐಎಫ್ ಎಫ್ ಐ 2025: 'ನನ್ನ ಸ್ಟಾಂಪ್' ಕ್ರೇಜ್ - ಚಲನಚಿತ್ರ ಉತ್ಸಾಹಿಗಳಿಗೆ ಸ್ಮರಣೀಯ ಸಂಗ್ರಹ..!
ಕಲೆ, ಸಿನಿಮಾ ಮತ್ತು ವೈಯಕ್ತಿಕ ನೆನಪುಗಳ ಸುಂದರ ಮಿಶ್ರಣ
ಐಎಫ್ ಎಫ್ ಐನಲ್ಲಿ 'Personalised My Stamp' ನೊಂದಿಗೆ ನಿಮ್ಮ ಫೋಟೋವನ್ನು ಅಂಚೆ ಚೀಟಿಯಾಗಿ ಪರಿವರ್ತಿಸಲು ಒಂದು ಅನನ್ಯ ಅವಕಾಶ ನೀಡಿದ ಭಾರತೀಯ ಅಂಚೆ
ಗೋವಾದಲ್ಲಿ ನಡೆಯುತ್ತಿರುವ 56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ ಎಫ್ ಐ) ಮುಕ್ತಾಯಗೊಳ್ಳುತ್ತಿದ್ದು, ಈ ವರ್ಷದ ಕಾರ್ಯಕ್ರಮವು ಕೇವಲ ಸಿನಿಮಾದ ಮೇರುಕೃತಿಗಳಿಗೆ ಸೀಮಿತವಾಗಿಲ್ಲ; ಇದು ವೈಯಕ್ತಿಕ ನೆನಪುಗಳ ಸಂಗ್ರಹಯೋಗ್ಯ ಆಚರಣೆಯಾಗಿಯೂ ಸಹ ಮಾರ್ಪಟ್ಟಿದೆ.
ಐಎಫ್ ಎಫ್ ಐನ 56ನೇ ಆವೃತ್ತಿಯಲ್ಲಿ ಭಾರತೀಯ ಅಂಚೆ ಇಲಾಖೆ ತನ್ನ 'ಮೈ ಸ್ಟಾಂಪ್' ಸೇವೆಯನ್ನು ಲಭ್ಯವಾಗುವಂತೆ ಮಾಡಿದೆ. ಇಂಡಿಯಾ ಪೋಸ್ಟ್ ಹೊರಡಿಸಿದ 'Personalised My Stamp' ಟೆಂಪ್ಲೇಟ್' ಗಾಗಿ ಚಲನಚಿತ್ರ ಪ್ರೇಮಿಗಳು ಮತ್ತು ಸ್ಟಾಂಪ್ ಸಂಗ್ರಹಕಾರರಲ್ಲಿ ಅಪಾರ ಕ್ರೇಜ್ ಉಂಟಾಗಿದೆ.

ಚಲನಚಿತ್ರೋತ್ಸವದ ಸಮಯದಲ್ಲಿ ಭಾರತೀಯ ಅಂಚೆ ಇಲಾಖೆಯ ಮಳಿಗೆ ಸಂದರ್ಶಕರ ಆಕರ್ಷಣೆಯ ಕೇಂದ್ರವಾಗಿತ್ತು, ಜನರು ತಮ್ಮ ಛಾಯಾಚಿತ್ರಗಳನ್ನು ಅಧಿಕೃತ ಐಎಫ್ ಎಫ್ ಐ-ವಿಷಯದ ಅಂಚೆ ಚೀಟಿಗಳಾಗಿ ಪರಿವರ್ತಿಸುವ ಅವಕಾಶವನ್ನು ನೀಡಿತು.
ಐಎಫ್ ಎಫ್ ಐನ 56 ನೇ ಆವೃತ್ತಿಗಾಗಿ ಇಂಡಿಯಾ ಪೋಸ್ಟ್ ಉತ್ಸವಕ್ಕೆ ಮೀಸಲಾಗಿರುವ ವಿಶೇಷ 'ಮೈ ಸ್ಟಾಂಪ್' ಟೆಂಪ್ಲೇಟ್ ಅನ್ನು ಬಿಡುಗಡೆ ಮಾಡಿದೆ. ಈ ವೈಯಕ್ತಿಕಗೊಳಿಸಿದ ಸ್ಟಾಂಪ್ ಎಂದರೆ ಭಾಗವಹಿಸುವವರು ಈ ವಿಶೇಷ ಐಎಫ್ ಎಫ್ ಐ ವಿಷಯದ ಅಂಚೆ ಚೀಟಿ ಟೆಂಪ್ಲೇಟ್‌ನಲ್ಲಿ ತಮ್ಮ ಚಿತ್ರವನ್ನು ಮುದ್ರಿಸಬಹುದು ಮತ್ತು ಅಂಚೆ-ಮಾನ್ಯ ಅಂಚೆ ಚೀಟಿಗಳ ಹಾಳೆಯನ್ನು ಪಡೆಯಬಹುದು. ಈ 'ಮೈ ಸ್ಟಾಂಪ್' ಚಲನಚಿತ್ರ ಪ್ರಿಯರು, ಅಂಚೆ ಚೀಟಿ ಸಂಗ್ರಹಕಾರರು ಮತ್ತು ಚಿತ್ರೋತ್ಸವಕ್ಕೆ ಭೇಟಿ ನೀಡುವವರಿಗೆ ಐಎಫ್ ಎಫ್ ಐ 2025 ರ ಅಮೂಲ್ಯ ಸ್ಮಾರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದೊಂದು ಅದ್ಭುತ ಸ್ಮರಣಿಕೆಯಾಗಿದೆ.

ಭಾರತೀಯ ಅಂಚೆ ಇಲಾಖೆಯು ಚಿತ್ರೋತ್ಸವದಲ್ಲಿ ವಿಶೇಷ ಕೌಂಟರ್ ಅನ್ನು ಸ್ಥಾಪಿಸಿದ್ದು, ಸಂದರ್ಶಕರು ತಮ್ಮ ವೈಯಕ್ತಿಕಗೊಳಿಸಿದ 'ಮೈ ಸ್ಟಾಂಪ್' ಅನ್ನು ಸುಲಭವಾಗಿ ಸೃಷಿಸಿಕೊಳ್ಳಬಹುದಾಗಿದೆ.

ಭಾರತೀಯ ಸಿನಿಮಾ ಪರಂಪರೆಯನ್ನು ಉತ್ತೇಜಿಸುವ ಭಾರತೀಯ ಅಂಚೆ ಇಲಾಖೆಯ ಬದ್ಧತೆಯನ್ನು ಪ್ರದರ್ಶಿಸುವ ಈ ಉಪಕ್ರಮವು ಕಲೆ ಮತ್ತು ಸಂಸ್ಕೃತಿಯ ಉತ್ಸಾಹಿಗಳನ್ನು ಆಕರ್ಷಿಸುತ್ತಿದೆ.
ಐಎಫ್‌ಎಫ್‌ಐ 'ಮೈ ಸ್ಟಾಂಪ್' ಕೇವಲ ಅಂಚೆ ಚೀಟಿಯಲ್ಲ; ಇದು ಸಿನಿಮಾ, ಕಲೆ ಮತ್ತು ವೈಯಕ್ತಿಕ ನೆನಪುಗಳ ಸುಂದರ ಸಂಗಮವಾಗಿದ್ದು, ಉತ್ಸವದಲ್ಲಿ ಹೆಚ್ಚು ಚರ್ಚಿಸಲ್ಪಡುವ ಮತ್ತು ಬೇಡಿಕೆಯ ವಸ್ತುಗಳಲ್ಲಿ ಒಂದಾಗಿದೆ.
*****
रिलीज़ आईडी:
2195840
| Visitor Counter:
6