ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ನವೆಂಬರ್ 29-30 ರಂದು ರಾಯ್‌ಪುರದಲ್ಲಿ ನಡೆಯಲಿರುವ ಅಖಿಲ ಭಾರತ ಪೊಲೀಸ್ ಮಹಾನಿರ್ದೇಶಕರ/ಇನ್‌ಸ್ಪೆಕ್ಟರ್ ಜನರಲ್‌ಗಳ 60 ನೇ ಸಮ್ಮೇಳನದಲ್ಲಿ ಭಾಗಿ
ಸಮ್ಮೇಳನದ ವಿಷಯ: ‘ವಿಕಸಿತ ಭಾರತ: ಭದ್ರತಾ ಆಯಾಮಗಳು’
ಈವರೆಗಿನ ಪ್ರಮುಖ ಪೊಲೀಸ್ ಸವಾಲುಗಳನ್ನು ಎದುರಿಸುವಲ್ಲಿ ಸಾಧಿಸಿದ ಪ್ರಗತಿ ಪರಿಶೀಲನೆ ಮತ್ತು ’ಸುರಕ್ಷಿತ ಭಾರತ’ ನಿರ್ಮಿಸಲು ಭವಿಷ್ಯದ ನೀಲನಕ್ಷೆ ರೂಪಿಸಲಿರುವ ಸಮ್ಮೇಳನ
ಎಡಪಂಥೀಯ ಉಗ್ರವಾದ, ಭಯೋತ್ಪಾದನೆ ನಿಗ್ರಹ, ವಿಪತ್ತು ನಿರ್ವಹಣೆ, ಮಹಿಳಾ ಸುರಕ್ಷತೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ವಿಧಿವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಸೇರಿ ಪ್ರಮುಖ ವಿಷಯಗಳ ಕುರಿತು ಚರ್ಚೆ
ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನೂ ಸಹ ಪ್ರದಾನ ಮಾಡಲಿರುವ ಪ್ರಧಾನಮಂತ್ರಿ
प्रविष्टि तिथि:
27 NOV 2025 12:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ನವೆಂಬರ್ 29-30ರಂದು ಛತ್ತೀಸ್‌ಗಢದ ರಾಯ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ನಡೆಯಲಿರುವ ಅಖಿಲ ಭಾರತ ಪೊಲೀಸ್ ಮಹಾನಿರ್ದೇಶಕರು/ಇನ್‌ಸ್ಪೆಕ್ಟರ್ ಜನರಲ್‌ಗಳ 60 ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ನವೆಂಬರ್ 28 ರಿಂದ 30 ರವರೆಗೆ ನಡೆಯಲಿರುವ ಮೂರು ದಿನಗಳ ಸಮ್ಮೇಳನದಲ್ಲಿ ಈವರೆಗಿನ ಪ್ರಮುಖ ಪೊಲೀಸ್ ಸವಾಲುಗಳನ್ನು ಪರಿಹರಿಸುವಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸುವ ಮತ್ತು 'ವಿಕಸಿತ ಭಾರತ'ದ ರಾಷ್ಟ್ರೀಯ ದೂರದೃಷ್ಟಿಗೆಸ ಅನುಗುಣವಾಗಿ 'ಸುರಕ್ಷಿತ ಭಾರತ'ವನ್ನು ನಿರ್ಮಿಸಲು ಭವಿಷ್ಯದ ನೀಲನಕ್ಷೆಯನ್ನು ರೂಪಿಸುವ ಗುರಿಯನ್ನು ಹೊಂದಿದೆ.
'ವಿಕಸಿತ ಭಾರತ: ಭದ್ರತಾ ಆಯಾಮಗಳು' ಎಂಬ ಪ್ರಮುಖ ವಿಷಯದ ಅಡಿಯಲ್ಲಿ ನಡೆಯುವ ಸಮ್ಮೇಳನದಲ್ಲಿ ಎಡಪಂಥೀಯ ಉಗ್ರವಾದ, ಭಯೋತ್ಪಾದನೆ ನಿಗ್ರಹ, ವಿಪತ್ತು ನಿರ್ವಹಣೆ, ಮಹಿಳಾ ಸುರಕ್ಷತೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ವಿಧಿವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯಂತಹ ಪ್ರಮುಖ ಭದ್ರತಾ ವಿಷಯಗಳ ಕುರಿತು ಸಮಗ್ರ ಚರ್ಚೆಗಳನ್ನು ನಡೆಸಲಾಗುವುದು. ಪ್ರಧಾನಮಂತ್ರಿ ಅವರು ರಾಷ್ಟ್ರಪತಿಗಳ ವಿಶಿಷ್ಟ ಸೇವೆಗಾಗಿ ಪೊಲೀಸ್ ಪದಕಗಳನ್ನು ಸಹ ಪ್ರದಾನ ಮಾಡಲಿದ್ದಾರೆ.
ದೇಶಾದ್ಯಂತದ ಹಿರಿಯ ಪೊಲೀಸ್ ನಾಯಕರು ಮತ್ತು ಭದ್ರತಾ ಆಡಳಿತಾಧಿಕಾರಿಗಳು ವ್ಯಾಪಕ ಶ್ರೇಣಿಯ ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ಮುಕ್ತ ಮತ್ತು ಅರ್ಥಪೂರ್ಣ ವಿನಿಮಯದಲ್ಲಿ ತೊಡಗಿಸಿಕೊಳ್ಳಲು ಸಮ್ಮೇಳನವು ಒಂದು ಪ್ರಮುಖ ಸಂವಾದಾತ್ಮಕ ವೇದಿಕೆಯನ್ನು ಒದಗಿಸುತ್ತದೆ. ಅಪರಾಧ ಕೃತ್ಯಗಳನ್ನು ಹತ್ತಿಕ್ಕುವುದರಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಆಂತರಿಕ ಭದ್ರತಾ ಬೆದರಿಕೆಗಳಿಗೆ ಪ್ರತಿಕ್ರಿಯಿಸುವಲ್ಲಿ ವೃತ್ತಿಪರ ಪದ್ದತಿಗಳ ಅಳವಡಿಕೆ ಮತ್ತು ಹಂಚಿಕೆಯೊಂದಿಗೆ ಪೊಲೀಸ್ ಪಡೆಗಳು ಎದುರಿಸುತ್ತಿರುವ ಕಾರ್ಯಾಚರಣೆ ಮೂಲಸೌಕರ್ಯ ಮತ್ತು ಕಲ್ಯಾಣ-ಸಂಬಂಧಿತ ಸವಾಲುಗಳ ಚರ್ಚೆಯನ್ನು ಇದು ಸುಗಮಗೊಳಿಸುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ವಾರ್ಷಿಕ ಸಮ್ಮೇಳನದಲ್ಲಿ ಖುದ್ದು ಆಸಕ್ತಿ ವಹಿಸುತ್ತಿದ್ದಾರೆ, ಪ್ರಾಮಾಣಿಕ ಚರ್ಚೆಗಳನ್ನೂ ಸಹ ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಪೊಲೀಸ್ ವ್ಯವಸ್ಥೆ ಕುರಿತು ಹೊಸ ವಿಚಾರಗಳು ಹೊರಹೊಮ್ಮಬಹುದಾದ ವಾತಾವರಣವನ್ನು ಬೆಳೆಸುತ್ತಿದ್ದಾರೆ. ವಾಣಿಜ್ಯ ಗೋಷ್ಠಿಗಳು, ಸಂವಾದಗಳು ಮತ್ತು ವಿಷಯಾಧಾರಿತ ದಂಡು ಮೇಜಿನ ಚರ್ಚೆಗಳು ನಡೆಯಲಿವೆ. ಅಲ್ಲದೆ, ಸಮ್ಮೇಳನದಲ್ಲಿ ಭಾಗವಹಿಸುವವರು ನಿರ್ಣಾಯಕ ಆಂತರಿಕ ಭದ್ರತೆ ಮತ್ತು ನೀತಿ ವಿಷಯಗಳಲ್ಲಿ ಪ್ರಧಾನಮಂತ್ರಿ ಅವರೊಂದಿಗೆ ನೇರವಾಗಿ ತಮ್ಮ ದೂರದೃಷ್ಠಿಗಳನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡುತ್ತವೆ.
ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ 2014 ರಿಂದ ಸಮ್ಮೇಳನದ ಸ್ವರೂಪವು ನಿರಂತರವಾಗಿ ಮೇಲ್ದರ್ಜೆಗೇರಿದೆ. ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಇಂತಹ ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ಸಮ್ಮೇಳನವನ್ನು ಗುವಾಹಟಿ (ಅಸ್ಸಾಂ), ರಣ್ ಆಫ್ ಕಛ್ (ಗುಜರಾತ್), ಹೈದರಾಬಾದ್ (ತೆಲಂಗಾಣ), ತೇಕನ್ಪುರ್ (ಗ್ವಾಲಿಯರ್, ಮಧ್ಯಪ್ರದೇಶ), ಏಕತಾ ಪ್ರತಿಮೆ (ಕೆವಾಡಿಯಾ, ಗುಜರಾತ್), ಪುಣೆ (ಮಹಾರಾಷ್ಟ್ರ), ಲಕ್ನೋ (ಉತ್ತರ ಪ್ರದೇಶ), ನವದೆಹಲಿ ಮತ್ತು ಜೈಪುರ (ರಾಜಸ್ಥಾನ) ಮತ್ತು ಭುವನೇಶ್ವರ (ಒಡಿಶಾ)ಗಳಲ್ಲಿ ನಡೆಸಲಾಗಿದೆ. ಈ ಸಂಪ್ರದಾಯವನ್ನು ಮುಂದುವರೆಸುತ್ತಾ ಈ ವರ್ಷ 60ನೇ ಡಿಜಿಎಸ್‌ಪಿ/ಐಜಿಎಸ್‌ಪಿ ಸಮ್ಮೇಳನವನ್ನು ಛತ್ತೀಸ್‌ಗಢದ ರಾಯ್‌ಪುರದಲ್ಲಿ ಆಯೋಜಿಸಲಾಗುತ್ತಿದೆ.
ಈ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ರಾಜ್ಯ ಸಚಿವರು (ಗೃಹ ವ್ಯವಹಾರಗಳು), ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಹೊಸ ಮತ್ತು ನವೀನ ವಿಚಾರಗಳನ್ನು ಮಂಡಿಸಲು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಗೃಹ ಇಲಾಖೆಯ ಮುಖ್ಯಸ್ಥರು ಮತ್ತು ಡಿಐಜಿ ಮತ್ತು ಎಸ್‌ಪಿ ಶ್ರೇಣಿಯ ಕೆಲವು ಆಯ್ದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಸಹ ಈ ವರ್ಷ ಸಮ್ಮೇಳನದಲ್ಲಿ ನೇರವಾಗಿ ಭಾಗವಹಿಸಲಿದ್ದಾರೆ.
*****
(रिलीज़ आईडी: 2195321)
आगंतुक पटल : 5