ಐ.ಎಫ್.ಎಫ್.ಐ ನಲ್ಲಿ ನೆನಪು, ಚೇತರಿಕೆ ಮತ್ತು ಬದುಕುಳಿಯುವಿಕೆಯ ಕಥೆಗಳು ಪ್ರಮುಖ ಭಾಗವಾಗಿವೆ
ಕಾಣೆಯಾದವರನ್ನು ನೆನಪಿಸಿಕೊಳ್ಳುವುದು: ʻಫಾರೆನ್ಸಿಕ್ಸ್ʼನಲ್ಲಿ ವೈಯಕ್ತಿಕ ನೋವು ರಾಜಕೀಯವಾಗುತ್ತದೆ
‘ಕು ಹಂಡ್ಜಾ’ದಲ್ಲಿ ಮೊಜಾಂಬಿಕ್ ನ ನೈಜ ಕಥೆಗಳು ಜೀವಂತವಾಗುತ್ತವೆ
ಇಂದು ಐ.ಎಫ್.ಎಫ್.ಐ ನಲ್ಲಿ, ಪ್ರೇಕ್ಷಕರಿಗೆ ಕೊಲಂಬಿಯಾ ಮತ್ತು ಮೊಜಾಂಬಿಕ್ ನ ಸಿನಿಮೀಯ ಮಸೂರಗಳ ಮೂಲಕ ಅಂಚಿನಲ್ಲಿರುವ ಜನರ ಜೀವನದ ಅಪರೂಪದ ನೋಟವನ್ನು ನೀಡಲಾಯಿತು. ‘ಫೊರೆನ್ಸಿಕ್ಸ್’ ಮತ್ತು ‘ಕು ಹಂಡ್ಜಾ’ ಸಿನಿಮಾ ತಯಾರಕರೊಂದಿಗಿನ ಪತ್ರಿಕಾಗೋಷ್ಠಿಯು ಕಲೆಯ ಬಗ್ಗೆ ಇರುವಂತೆಯೇ ನೆನಪು ಮತ್ತು ಚೇತರಿಕೆಯ ಬಗ್ಗೆಯೂ ಇರುವ ಕಥೆ ಹೇಳುವಿಕೆಯಲ್ಲಿ ಒಂದು ಮಾಸ್ಟರ್ಕ್ಲಾಸ್ ಅನ್ನು ನೀಡಿತು.
ಫೆಡೆರಿಕೊ ಅಟೆಹೋರ್ಟುವಾ ಆರ್ಟಿಯಾಗ ಅವರ ‘ಫೊರೆನ್ಸಿಕ್ಸ್’ ಒಂದು ದಿಟ್ಟ, ಪ್ರಾಯೋಗಿಕ ಚಲನಚಿತ್ರವಾಗಿದ್ದು, ಇದು ಮೂರು ನಿರೂಪಣೆಗಳನ್ನು ಒಟ್ಟಿಗೆ ಹೆಣೆದಿದೆ: ಮೃತ ಟ್ರಾನ್ಸ್ಜೆಂಡರ್ ಮಹಿಳೆಯ ಜೀವನವನ್ನು ಪುನರ್ನಿರ್ಮಿಸುವ ಮಹಿಳಾ ನಿರ್ದೇಶಕಿ, ಕಾಣೆಯಾದ ಸಂಬಂಧಿಯೊಂದಿಗೆ ಚಲನಚಿತ್ರ ನಿರ್ಮಾಪಕರ ಕುಟುಂಬವು ಹೋರಾಡುವುದು ಮತ್ತು ಫೋರೆನ್ಸಿಕ್ ರೋಗಶಾಸ್ತ್ರಜ್ಞ ಕರೆನ್ ಕ್ವಿಂಟೆರೊ ಅವರ ಸಾಕ್ಷ್ಯ. ಇದರ ಫಲಿತಾಂಶವೇ ವೈಯಕ್ತಿಕ ಚಿತ್ರವು ರಾಜಕೀಯವಾಗುವ, ಕೊಲಂಬಿಯಾದ ಪ್ರಕ್ಷುಬ್ಧ ಭೂತಕಾಲ ಮತ್ತು ಕಾಣೆಯಾದವರು ಉಳಿಸಿರುವ ಗಾಯಗಳನ್ನು ಅನ್ವೇಷಿಸುವ ಚಲನಚಿತ್ರವಾಗಿದೆ.

ಫೆಡೆರಿಕೊ ತಮ್ಮ ಕೆಲಸವನ್ನು ಪ್ರೇರೇಪಿಸುವ ನಿಜ ಜೀವನದ ಕೊಂಡಿಗಳ ಬಗ್ಗೆ ಉತ್ಸಾಹದಿಂದ ಮಾತನಾಡಿದರು. "ಇದು ಕೊಲಂಬಿಯಾದಲ್ಲಿರುವವರ ಅನೇಕರ ಕಥೆಯಾಗಿದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಕಾಣೆಯಾದ ಯಾರ ಬಗ್ಗೆಯಾದರೂ ತಿಳಿದಿದೆ. ಈ ಚಿತ್ರದ ಪ್ರದರ್ಶನದ ನಂತರ, ಜನರು ತಮ್ಮ ಕೈಗಳನ್ನು ಎತ್ತಿ 'ನನ್ನ ಚಿಕ್ಕಪ್ಪ, ನನ್ನ ಸಹೋದರ...' ಎಂದು ಹೇಳುತ್ತಿದ್ದರು, ಕೆಲವರು ಅಳುತ್ತಿದ್ದರು," ಎಂದು ಅವರು ನೆನಪಿಸಿಕೊಂಡರು. "ಒಂದು ಕಥೆಯು ಜನರನ್ನು ಇಷ್ಟು ಆಳವಾಗಿ ತಲುಪುವುದನ್ನು ನೋಡಿ ನನ್ನನ್ನು ವಿನೀತನನ್ನಾಗಿಸಿದೆ. ನೆನಪು ಬಹಳ ಅಗತ್ಯ, ಇದು ಸಂಘರ್ಷಕ್ಕೆ ಮಾನವ ತೆರುವ ಬೆಲೆಯ ಬಗ್ಗೆ ಯುವ ಪೀಳಿಗೆಗೆ ಕಲಿಸುತ್ತದೆ." ಫೆಡೆರಿಕೊಗೆ, ಚಿತ್ರಕ್ಕಾಗಿ ಮಾಡಿದ ಸಂಶೋಧನೆಯು ಅಷ್ಟೇ ಸವಾಲಿನದ್ದಾಗಿತ್ತು, ಮತ್ತು ಈ ಚಿತ್ರವು ಕಾಣೆಯಾದವರನ್ನು ಹುಡುಕುವವರಿಗೆ ಒಗ್ಗಟ್ಟಿನ ಭಾವನೆಯನ್ನು ಕಂಡುಕೊಳ್ಳಲು ವೇದಿಕೆಯಾಗುತ್ತದೆ.

ಜಗತ್ತಿನಾದ್ಯಂತ, ಜಸಿಂತಾ ಮಾರಿಯಾ ಡಿ ಬ್ಯಾರೋಸ್ ಡಾ ಮೋಟಾ ಪಿಂಟೊ ಮತ್ತು ರುಯಿ ಸೀಸರ್ ಡಿ ಒಲಿವೆರಾ ಸಿಮೋಸ್ ನಿರ್ಮಿಸಿದ 'ಕು ಹಂಡ್ಜಾ', ವಾಸ್ತವದ ವಿಭಿನ್ನ ರುಚಿಯನ್ನು ತಂದಿತು. ಮೊಜಾಂಬಿಕ್ನಲ್ಲಿ ನಡೆಯುವ ಈ ಚಿತ್ರವು ಸಾಮಾನ್ಯ ಜನರು ಅಸಾಧಾರಣ ಸಂದರ್ಭಗಳಲ್ಲಿ ಸಾಗುವುದನ್ನು ಅಂದರೆ ಬೆಂಜಮಿನ್ ತನ್ನ ಮಗನ ಹುಟ್ಟುಹಬ್ಬಕ್ಕೆ ಹಣ ಒದಗಿಸಲು ಪರದಾಡುವುದು, ಫಿಲಿಮೋನ್ ಕುಟುಂಬ ಮತ್ತು ಯುದ್ಧಕಾಲದ ಕರ್ತವ್ಯಗಳನ್ನು ಸಮತೋಲನಗೊಳಿಸುವುದು ಹಾಗು ಹೆರಿಗೆಯಾದ ಕೆಲವೇ ದಿನಗಳ ನಂತರ ಯುಲಾಲಿಯಾ ಭೂಕುಸಿತದಲ್ಲಿ ಕೆಲಸಕ್ಕೆ ಮರಳುವುದರ ಬಗ್ಗೆ ತೋರಿಸುತ್ತದೆ. ಚಿತ್ರದ ವಾಸ್ತವತೆ ಅದರ ಜನರಿಂದ ಬರುತ್ತದೆ ಎಂದು ಜೆಸಿಂತಾ ವಿವರಿಸಿದರು, ಏಕೆಂದರೆ ಅವರು ನಟರಲ್ಲ ಸಿನಿಮೀಯ ನಿರೂಪಣೆಯಲ್ಲಿ ಹೆಣೆಯಲಾದ ನೈಜ ಜೀವನಗಳು ಎಂದರು. "ಮೊಜಾಂಬಿಕ್ ದೇಶವು ನಿರ್ದೇಶಕರಿಗೆ ಎರಡನೇ ಮನೆಯಾಯಿತು., ನಾವು ಅವರಲ್ಲಿ ಒಬ್ಬರಾಗಿದ್ದೇವೆ ಎಂಬಂತೆ ನಾವು ಈ ಜೀವನಗಳನ್ನು ಪ್ರಾಮಾಣಿಕವಾಗಿ ಚಿತ್ರಿಸಲು ಬಯಸಿದ್ದೇವೆ " ಎಂದು ಅವರು ಹೇಳಿದರು.

ಎರಡೂ ಚಿತ್ರಗಳು ವಿಭಿನ್ನ ವಾಸ್ತವಗಳಲ್ಲಿ ಇದ್ದರೂ, ಕಡೆಗಣಿಸಲ್ಪಟ್ಟವರಿಗೆ ಇದ್ದವರಿಗೆ ಧ್ವನಿಯಾಗುವ ಸಾಮರ್ಥ್ಯದಲ್ಲಿ ಒಂದಾಗುತ್ತವೆ. 'ಫೋರೆನ್ಸಿಕ್ಸ್' ಕೊಲಂಬಿಯಾದ ದುಃಖ ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಬಿಚ್ಚಿಟ್ಟರೆ, 'ಕು ಹಂಡ್ಜಾ' ಮೊಜಾಂಬಿಕ್ ಜೀವನದ ಚೇತರಿಕೆ ಮತ್ತು ದೈನಂದಿನ ಪರಾಕ್ರಮವನ್ನು ಸೆರೆಹಿಡಿಯುತ್ತದೆ. ಒಟ್ಟಾಗಿ, ಚಲನಚಿತ್ರವು ಮನರಂಜನೆ ನೀಡುವ ಶಕ್ತಿಯನ್ನು ಮಾತ್ರವಲ್ಲ, ಗಡಿಗಳನ್ನು ಮೀರಿ ಮಾನವ ಅನುಭವವನ್ನು ದಾಖಲಿಸುವ, ಸಂಪರ್ಕಿಸುವ ಮತ್ತು ಬೆಳಗಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ಪ್ರೇಕ್ಷಕರಿಗೆ ನೆನಪಿಸುತ್ತಾರೆ.
ಈ ಚಲನಚಿತ್ರಗಳು ಕಥೆಗಳನ್ನು ಹೇಳುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತವೆ. ಅವು ದೇಶಗಳ ನಡುವೆ ಸೇತುವೆಗಳನ್ನು ಸೃಷ್ಟಿಸುತ್ತವೆ, ಪ್ರೇಕ್ಷಕರಿಗೆ ಅವರು ಎಂದಿಗೂ ಭೇಟಿ ನೀಡದ, ಆದರೆ ಆಳವಾಗಿ ಅನುಭವಿಸಬಹುದಾದ ಸ್ಥಳಗಳಲ್ಲಿ ಹೋರಾಟಗಳು, ಬದುಕುಳಿಯುವಿಕೆ ಮತ್ತು ಭರವಸೆಯನ್ನು ವೀಕ್ಷಿಸುವ ಅವಕಾಶವನ್ನು ನೀಡುತ್ತವೆ ಎನ್ನುವುದು ಅಧಿವೇಶನದ ಕೊನೆಯ ಹಂತದಲ್ಲಿ, ಇದು ಸ್ಪಷ್ಟವಾಗಿತ್ತು.
ಪ್ರೆಸ್ ಕಾನ್ಫರೆನ್ಸ್ ಲಿಂಕ್:
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಪ್ರಾರಂಭವಾದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಬೆಳೆದು ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ.ಎಸ್.ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ ಗಳ ಜೊತೆಗೆ ದಿಟ್ಟ ಪ್ರಯೋಗಗಳ ಚಿತ್ರಗಳು ಮತ್ತು ಅನುಭವಿ ದಂತಕಥೆಗಳು ನಿರ್ಭೀತ ಮೊದಲ ಬಾರಿಗೆ ಬರುವವರೊಂದಿಗೆ ಸ್ಥಳವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ ಅನ್ನು ನಿಜವಾಗಿಯೂ ಪ್ರಜ್ವಲಿಸುವಂತೆ ಮಾಡುವುದು ಅದರ ವಿದ್ವತ್ ಮಿಶ್ರಣ - ಅಂತರರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ ಕ್ಲಾಸ್ಗಳು, ಗೌರವಗಳು ಮತ್ತು ಹೆಚ್ಚಿನ ಚೈತನ್ಯದ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ನಡೆಯುತ್ತವೆ. ನವೆಂಬರ್ 20 ರಿಂದ 28 ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾದ 56 ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಅದ್ಭುತ ವರ್ಣಪಟಲದ ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2195271
| Visitor Counter:
2