ಐ.ಎಫ್.ಎಫ್.ಐ ನಲ್ಲಿ ಇರಾನ್ ಮತ್ತು ಇರಾಕ್ ಚಲನಚಿತ್ರ ನಿರ್ಮಾತೃಗಳಿಂದ ಒತ್ತಡದ ಜೀವನದ ರೋಮಾಂಚಕಾರಿ ಸಿನಿಮಾ ಅನುಭವ ಹಂಚಿಕೆ
ಇರಾನಿನ ಸಾಮಾಜಿಕ ವಾಸ್ತವಗಳನ್ನು ಮನಮುಟ್ಟುವಂತೆ ಚಿತ್ರಿಸಿರುವ 'ಮೈ ಡಾಟರ್ಸ್ ಹೇರ್'
ಸರ್ವಾಧಿಕಾರದ ಆಡಳಿತದಲ್ಲಿನ ಜೀವನ ತೆರೆದಿಡುವ 'ಪ್ರೆಸಿಡೆಂಟ್ಸ್ ಕೇಕ್'
#ಐ.ಎಫ್.ಎಫ್.ಐವುಡ್, 26 ನವೆಂಬರ್ 2025
ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ - ಐ.ಎಫ್.ಎಫ್.ಐ ನ ಇಂದಿನ ಪತ್ರಿಕಾಗೋಷ್ಠಿಯಲ್ಲಿ, ಇರಾನ್ ಮತ್ತು ಇರಾಕ್ ಚಿತ್ರ ನಿರ್ಮಾತೃಗಳು ಒಟ್ಟಾಗಿ ವೇದಿಕೆ ಹಂಚಿಕೊಂಡು, ಅಸಾಧಾರಣ ಸಂದರ್ಭಗಳಲ್ಲಿ ಬದುಕುಳಿಯಲು ಜನಸಾಮಾನ್ಯರ ಬವಣೆಯ ಕಥೆಗಳನ್ನು ಪ್ರಸ್ತುತಪಡಿಸಿದರು. ಪ್ರಕ್ಷುಬ್ಧ ಇತಿಹಾಸಗಳನ್ನು ಹೊಂದಿರುವ ಎರಡು ರಾಷ್ಟ್ರಗಳು, ರಾಜಕೀಯ ಒತ್ತಡಗಳ ಎರಡು ಚಲನಚಿತ್ರಗಳು ಮತ್ತು ಸಾಮಾನ್ಯ ನಂಬಿಕೆಯಿಂದ ಒಗ್ಗೂಡಿದ ಎರಡು ತಂಡಗಳು ಸಾಮೂಹಿಕ ಕಹಿ ಅನುಭವದ ತಮ್ಮ ರಾಷ್ಟ್ರಗಳ ಭಾವನಾತ್ಮಕ ಭೂಪಟದ ಜಾಡು ಹಿಡಿಯಲು ಒಟ್ಟುಗೂಡಿದವು.
ಐ.ಎಫ್.ಎಫ್.ಐ ನಲ್ಲಿ 'ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ' ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಇರಾನಿನ ಚಲನಚಿತ್ರ 'ಮೈ ಡಾಟರ್ಸ್ ಹೇರ್ (ರಹಾ)' ಅನ್ನು ಪ್ರತಿನಿಧಿಸುತ್ತಾ, ನಿರ್ದೇಶಕರಾದ ಸಯೀದ್ ಹೆಸಮ್ ಫರಾಹ್ಮಂಡ್ ಜೂ ಮತ್ತು ನಿರ್ಮಾಪಕರಾದ ಸಯೀದ್ ಖಾನಿನಾಮಘಿ ಸಂವಾದದಲ್ಲಿ ಭಾಗಿಯಾದರು. ICFT ಯುನೆಸ್ಕೋ ಗಾಂಧಿ ಪದಕಕ್ಕಾಗಿ ಸ್ಪರ್ಧಿಸುತ್ತಿರುವ ಇರಾಕ್ ನ 'ದಿ ಪ್ರೆಸಿಡೆಂಟ್ಸ್ ಕೇಕ್' ಚಿತ್ರದ ಬಗ್ಗೆ ಮಾತನಾಡಿದ ಎಡಿಟರ್ಪ ಅಲೆಕ್ಸಾಂಡ್ರು-ರಾಡು ರಾಡು ಅವರು ಚಿತ್ರದ ವಿಶಿಷ್ಟ ರೂಪ ಮತ್ತು ಸರ್ವಾಧಿಕಾರದ ಅಡಿಯಲ್ಲಿನ ಜೀವನದ ಬಗ್ಗೆ ಮಾತನಾಡಿದರು.

ಬಿಕ್ಕಟ್ಟಿನಲ್ಲಿ ಮಧ್ಯಮ ವರ್ಗದ ಕುಟುಂಬ; ದೇಶದ ಪ್ರತಿಬಿಂಬ
'ಮೈ ಡಾಟರ್ಸ್ ಹೇರ್' ಚಿತ್ರವು ತಮ್ಮ ಸ್ವಂತ ಜೀವನದ ಅನುಭವಗಳಿಂದ ಹುಟ್ಟಿಕೊಂಡಿದೆ ಎಂದು ಹೆಸಾಮ್ ವಿವರಿಸಿದರು. ಲ್ಯಾಪ್ ಟಾಪ್ ಗಾಗಿ ತನ್ನ ಕೂದಲನ್ನು ಮಾರುವ ರಾಹಾ ಕಥೆಯು ಆರ್ಥಿಕ ಸಂಕಷ್ಟದಲ್ಲಿ ಅಸಂಖ್ಯಾತ ಮಹಿಳೆಯರು ಮಾಡಿದ ಮೌನ ತ್ಯಾಗಗಳನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದನ್ನು ವಿವರಿಸುತ್ತಾ "ನನ್ನ ದೇಶದಲ್ಲಿನ ಮಹಿಳೆಯರ ಪರಿಸ್ಥಿತಿಯನ್ನು ಚಿತ್ರಿಸಲು ನಾನು ಬಯಸಿದ್ದೆ" ಎಂದು ಹೇಳಿದರು.
ಇರಾನ್ ನಲ್ಲಿ ಇತ್ತೀಚಿನ ಅಂತಾರಾಷ್ಟ್ರೀಯ ನಿರ್ಬಂಧಗಳು ಜೀವನ ಪರಿಸ್ಥಿತಿಯನ್ನು ಹೇಗೆ ತೀವ್ರವಾಗಿ ಹದಗೆಡಿಸಿವೆ ಎಂಬುದನ್ನು ವಿವರಿಸುವ ಮೂಲಕ ನಿರ್ಮಾಪಕ ಖನಿನಮಘಿ ಅವರು, ಸನ್ನಿವೇಶವನ್ನು ಮತ್ತಷ್ಟು ವಿಸ್ತೃತವಾಗಿ ವಿವರಿಸಿದರು.
"ಜನರು ಆರ್ಥಿಕವಾಗಿ ಕುಸಿಯುತ್ತಿದ್ದಾರೆ. ಮಧ್ಯಮ ವರ್ಗ ಬಡವರಾಗುತ್ತಿದ್ದಾರೆ" ಎಂದು ಅವರು ಹೇಳಿದರು. "ನಮ್ಮ ಚಿತ್ರದಲ್ಲಿ, ಒಂದು ಲ್ಯಾಪ್ ಟಾಪ್ ನಿಂದಾಗಿ ಒಂದು ಕುಟುಂಬದ ಇಡೀ ಆರ್ಥಿಕತೆ ಕುಸಿಯುತ್ತದೆ. ನಮ್ಮ ಸಮಾಜದಲ್ಲಿ ನಿಖರವಾಗಿ ಅದೇ ಆಗುತ್ತಿದೆ" ಎಂದು ಅವರು ತಿಳಿಸಿದರು.

ಚಲನಚಿತ್ರದ ದೃಶ್ಯ ಭಾಷೆಯ ಬಗೆಗಿನ ಪ್ರಶ್ನೆಗೆ, ಕಾರ್ಮಿಕ ವರ್ಗದ ಕಥೆಗಳ ಮೇಲೆ ಹೆಚ್ಚಾಗಿ ಹೇರಲಾಗುವ "ಕಳಪೆ ಬಡತನ" ಪರಿಕಲ್ಪನೆಯನ್ನು ಹೆಸಮ್ ತಿರಸ್ಕರಿಸಿದರು." ಜೀವನದಂತೆಯೇ ಚೌಕಟ್ಟುಗಳು ಕಾಣಬೇಕೆಂದು ನಾನು ಬಯಸಿದ್ದೆ" ಎಂದು ಉತ್ತರಿಸಿದರು. "ಬಡ ಕುಟುಂಬಗಳು ಸಹ ವರ್ಣರಂಜಿತ, ಸಂತೋಷದ ಕ್ಷಣಗಳನ್ನು ಹೊಂದಿವೆ. ಅವರು ನಗುತ್ತಾರೆ, ಸಂಭ್ರಮಿಸುತ್ತಾರೆ, ತಮ್ಮ ಜೀವನದಲ್ಲಿ ರಂಗನ್ನು ಕಂಡುಕೊಳ್ಳುತ್ತಾರೆ. ನನ್ನ ಚಿತ್ರದಲ್ಲಿ ಆ ಸತ್ಯವನ್ನು ತೋರಿಸಲು ನಾನು ಬಯಸಿದ್ದೆ” ಎಂದು ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಇಂತಹ ಸಾಮಾಜಿಕವಾಗಿ ಬೇರೂರಿರುವ ಕಥೆಗಳನ್ನು ವಾಣಿಜ್ಯ ಸಿನಿಮಾಗಳಿಗೆ ಅಳವಡಿಸುವ ತಮ್ಮ ಬಯಕೆಯ ಬಗ್ಗೆಯೂ ಹೆಸಮ್ ಮಾತನಾಡಿದರು. "ಈ ಮೊದಲು, ಇಂತಹ ಚಲನಚಿತ್ರಗಳನ್ನು ವಾಣಿಜ್ಯ ಚಿತ್ರಗಳೆಂದು ಪರಿಗಣಿಸಲಾಗುತ್ತಿರಲಿಲ್ಲ. ನಾನು ಅದನ್ನು ಬದಲಾಯಿಸಲು ಬಯಸುತ್ತೇನೆ" ಎಂದು ಹೇಳಿದ ಅವರು, ತಮ್ಮ ಮುಂದಿನ ಚಿತ್ರವು ಅದೇ ತತ್ವವನ್ನಾಧರಿಸಲಿದೆ ಎಂದು ಸುಳಿವು ನೀಡಿದರು.
ಖನಿನಾಮಘಿ ಅವರು ಇರಾನಿನ ಚಿತ್ರರಂಗದ ಪ್ರಸ್ತುತ ಸನ್ನಿವೇಶವದ ಬಗ್ಗೆ ಮಾತನಾಡುತ್ತಾ, ಚಲನಚಿತ್ರ ನಿರ್ಮಾತೃಗಳಾಗಿ ಎಲ್ಲೆ ಮೀರಿದರೂ, ತಮ್ಮ ಚಲನಚಿತ್ರೋದ್ಯಮವು ಸೆನ್ಸಾರ್ ಶಿಪ್‌ನೊಂದಿಗೆ ಮಿತಿ ಹಾಕುತ್ತಲಿದೆ ಎಂದು ತಿಳಿಸಿದರು. "ಚಲನಚಿತ್ರದ ಕೆಲವು ಭಾಗಗಳಿಗೆ ಕತ್ತರಿ ಹಾಕಲ್ಪಡುವುದರಿಂದ ಪ್ರೇಕ್ಷಕರು ಪೂರ್ಣ ಕಥೆಯನ್ನು ಅರ್ಥಮಾಡಿಕೊಳ್ಳಲು ಪರದಾಡುವರು" ಎಂದು ಅವರು ಹೇಳಿದರು.
ಭಯದಲ್ಲಿ ಹುಟ್ಟಿದ ಕಾಲ್ಪನಿಕ ಕಥೆ
ಇರಾಕ್ ನ 1990ರ ದಶಕದ ಬಗ್ಗೆ ಸಂಭಾಷಣೆಯಲ್ಲಿ ಪ್ರಸ್ತಾಪಿಸುತ್ತಾ, ಅಲೆಕ್ಸಾಂಡ್ರು-ರಾಡು ರಾಡು ಅವರು 'ದಿ ಪ್ರೆಸಿಡೆಂಟ್ಸ್ ಕೇಕ್' ಅನ್ನು "ಬೀದಿ-ಪಾತ್ರವರ್ಗ" ದವರೊಂದಿಗೆ ತೆರೆಗೆ ತರಲಾದ ಚಲನಚಿತ್ರ ಎಂದು ಬಣ್ಣಿಸಿದರು. ಎಲ್ಲಾ ನಟರು ವೃತ್ತಿಪರರಲ್ಲದವರು, ದೈನಂದಿನ ಜೀವನದಿಂದ ಆಯ್ಕೆ ಮಾಡಲ್ಪಟ್ಟವರು, ಇದು ಚಿತ್ರಕ್ಕೆ ಅದರ ವಿಶಿಷ್ಟವಾದ ಲಕ್ಷಣವನ್ನು ನೀಡಿದೆ ಎಂದು ಹೇಳಿದರು.

ನಿರ್ಬಂಧಗಳು ಮತ್ತು ಸರ್ವಾಧಿಕಾರಿ ಆಡಳಿತವು ಕೆಳವರ್ಗದವರನ್ನು ಹೇಗೆ ಹತ್ತಿಕ್ಕುತ್ತದೆ ಎಂಬುದರ ಮೇಲೆ ಈ ಚಿತ್ರ ಕೇಂದ್ರೀಕರಿಸುತ್ತದೆ ಎಂದು ರಾಡು ವಿವರಿಸಿದರು. "ಅಂತಹ ಸನ್ನಿವೇಶಗಳು ಎದುರಾದಾಗ ಜನರು ಬಳಲುತ್ತಾರೆ, ಸರ್ವಾಧಿಕಾರಿಗಳಲ್ಲ" ಎಂದು ತಿಳಿಸಿದ ಅವರು, ಒಬ್ಬ ಸರ್ವಾಧಿಕಾರಿಯು ತನ್ನ ಹುಟ್ಟುಹಬ್ಬವನ್ನು ಆಚರಿಸುವಂತೆ ನಾಗರಿಕರನ್ನು ಒತ್ತಾಯಿಸುವುದು ಚಿತ್ರದ ಕಥಾವಸ್ತುವಾಗಿ ಪ್ರೇರಿತವಾಗಿದೆ ಎಂದು ವಿವರಿಸಿದರು. ಸದ್ದಾಂ ಹುಸೇನ್ ಗಾಗಿ ಕೇಕ್ ತಯಾರಿಸುವ ಕೆಲಸವನ್ನು ವಹಿಸಿಕೊಂಡ ಲಾಮಿಯಾ ಎಂಬ ಬಾಲಕಿಯ ಕಥೆಯು ಅಸಂಬದ್ಧತೆ ಮತ್ತು ವಾಸ್ತವದ ನಡುವಿನ ತೊಳಲಾಟವನ್ನು ತೆರೆದಿಟ್ಟಿದೆ ಎಂದು ಅವರು ಹೇಳಿದರು.
ನಿರ್ದೇಶಕ ಹಸನ್ ಹಾದಿ ಅವರು ತಮ್ಮ ಚಿತ್ರವನ್ನು ಕಾಲ್ಪನಿಕ ಕಥೆ ಎಂದು ಹೇಳಿದರು.
"ಲಮಿಯಾ ಪಾತ್ರವು ಇರಾಕ್ ನ ಸಂಕೇತವಾಗಬೇಕೆಂದು ಹಸನ್ ಬಯಸಿದ್ದರು" ಎಂದು ರಾಡು ವಿವರಿಸಿದರು. "ಅವಳಿಗೆ ಆಗುವ ಎಲ್ಲವೂ ದೇಶಕ್ಕೆ ಆಗುವ ಎಲ್ಲವನ್ನೂ ಪ್ರತಿಬಿಂಬಿಸುತ್ತದೆ” ಎಂದು ಹೇಳಿದ ರಾಡು ಅವರು, ಇರಾಕಿನ ಯುವ ಮತ್ತು ಉದಯೋನ್ಮುಖ ಚಲನಚಿತ್ರೋದ್ಯಮದ ಬಗ್ಗೆಯೂ ಪ್ರಸ್ತಾಪಿಸಿದರು. "ಇರಾನ್ ಗಿಂತ ಭಿನ್ನವಾಗಿ, ಇರಾಕ್ ಶ್ರೀಮಂತ ಚಲನಚಿತ್ರ ಪರಂಪರೆಯನ್ನು ಹೊಂದಿಲ್ಲ. 'ದಿ ಪ್ರೆಸಿಡೆಂಟ್ಸ್ ಕೇಕ್' ಚಿತ್ರವು ಇರಾನಿನ ಮೊದಲ ಕಲಾತ್ಮಕ ಚಲನಚಿತ್ರವಾಗಿದೆ. ಹಸನ್ ಅವರಂತಹ ನಿರ್ದೇಶಕರು ಈಗ ಚಿತ್ರರಂಗವನ್ನು ರೂಪಿಸುತ್ತಿದ್ದಾರೆ" ಎಂದು ಅವರು ಹೇಳಿದರು.
ವಿಭಿನ್ನ ದೇಶಗಳು ಮತ್ತು ಸಿನಿಮಾ ಸಂಪ್ರದಾಯಗಳಿಂದ ಬಂದಿದ್ದರೂ, ಎರಡೂ ಚಲನಚಿತ್ರಗಳು ಒಂದೇ ರೀತಿಯ ಸತ್ಯದ ಸುತ್ತ ಸುತ್ತುತ್ತವೆ: ನಿರ್ಬಂಧಗಳ ಹೊರೆ, ಸಾಮಾನ್ಯ ಜನರು ಅಂತಹ ಸಂಕಷ್ಟದಿಂದ ಹೊರ ಬಂದು ದೃಢವಾಗಿ ನಿಲ್ಲುವ ಸ್ಥಿತಿಸ್ಥಾಪಕತ್ವ ಮತ್ತು ರಾಜಕೀಯ ಒತ್ತಡದಲ್ಲಿ ಘನತೆಯ ಸಂಧಾನದ ದೈನಂದಿನ ಮಾತುಕತೆಗಳು. ಸಂವಾದ ಮುಕ್ತಾಯವಾಗುವ ಹೊತ್ತಿಗೆ, ಸಂಭಾಷಣೆಯು ಟೆಹ್ರಾನ್ ನಿಂದ ಬಾಗ್ದಾದ್ ವರೆಗೆ ವಿಸ್ತರಿಸಲ್ಪಟ್ಟ ಸೇತುವೆಯಂತೆ ಭಾಸವಾಯಿತು. ಇದು ರಾಜಕೀಯದ ಆಧಾರದಿಂದಲ್ಲ, ಬದಲಿಗೆ ಕಥಾ ನಿರೂಪಣೆಯೊಂದಿಗೆ ನಿರ್ಮಿಸಲ್ಪಟ್ಟಿತ್ತು.
ಪತ್ರಿಕಾಗೋಷ್ಠಿ ಲಿಂಕ್:
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿದೆ. ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮತ್ತು ಗೋವಾ ಸರ್ಕಾರದ ಗೋವಾ ಮನರಂಜನಾ ಸೊಸೈಟಿ ಜಂಟಿಯಾಗಿ ಆಯೋಜಿಸುತ್ತವೆ. ಈ ಉತ್ಸವವು ಜಾಗತಿಕ ಸಿನಿಮಾ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ ಗಳು ದಿಟ್ಟ ಪ್ರಯೋಗಗಳನ್ನು ಸಂಧಿಸುತ್ತವೆ ಮತ್ತು ಹೆಸರಾಂತ ಕಲಾವಿದರು ಮೊದಲ ಬಾರಿಯ ಧೈರ್ಯಶಾಲಿಗಳೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ ಅನ್ನು ನಿಜವಾಗಿಯೂ ಅದ್ಭುತವಾಗಿಸುವುದು ಅದರ ಅದ್ಭುತವಾದ ಸಮ್ಮಿಲನಗಳು - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್ ಗಳು, ಗೌರವಗಳು ಮತ್ತು ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ವ್ಯವಹಾರಗಳು ಮತ್ತು ಸಹಯೋಗಗಳು ಹುಟ್ಟುತ್ತವೆ. ಗೋವಾದ ಬೆರಗುಗೊಳಿಸುವ ಕಡಲತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುವ 56ನೇ ಆವೃತ್ತಿಯು ಬೆರಗುಗೊಳಿಸುವ ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಒಂದು ಅದ್ಭುತ ಶ್ರೇಣಿಯನ್ನು ಆಚರಿಸುವ ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
****
Release ID:
2194981
| Visitor Counter:
3