ಚಲನಚಿತ್ರ ನಿರ್ಮಾಪಕರ ದಿಗ್ಗಜರ ಪಯಣ ಜೀವಂತಗೊಳಿಸಿದ ‘ದಸ್ತಾನ್-ಎ-ಗುರು ದತ್’ ಸಂಗೀತದ ಹಿನ್ನೋಟ
ಸಂಗೀತ ಮತ್ತು ನೆನಪುಗಳೊಂದಿಗೆ ಐ ಎಫ್ ಎಫ್ ಐನಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ‘ದಸ್ತಾನ್-ಎ-ಗುರು ದತ್’
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ)ದ ಐದನೇ ದಿನದಂದು ಗೋವಾದ ಕಲಾ ಅಕಾಡೆಮಿಯಲ್ಲಿ ‘ದಸ್ತಾನ್-ಎ-ಗುರು ದತ್’ ಎಂಬ ವಿಶೇಷ ಸಂಗೀತದ ಹಿನ್ನೋಟ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು. ಫೌಜಿಯಾ ಮತ್ತು ಅವರ ತಂಡವು ಪ್ರದರ್ಶಿಸಿದ ಈ ಕಾರ್ಯಕ್ರಮವು ಪ್ರೇಕ್ಷಕರಿಗೆ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಗುರು ದತ್ ಅವರ ಜೀವನ ಮತ್ತು ಸೃಜನಶೀಲ ಪರಂಪರೆಯ ಬಗ್ಗೆ ಒಂದು ಸ್ಮರಣೀಯ ನಿರೂಪಣೆಯನ್ನು ನೀಡಿತು.
ಕಾರ್ಯಕ್ರಮವು ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ಅನುಭವಿ ನಿರ್ದೇಶಕ ರಾಹುಲ್ ರಾವೈಲ್ ಅವರು, ಭಾರತೀಯ ಚಿತ್ರರಂಗಕ್ಕೆ ಗುರು ದತ್ ಅವರು ನೀಡಿರುವ ಕೊಡುಗೆಯ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಆನಂತರ ಫೌಜಿಯಾ ಪ್ರೇಕ್ಷಕರನ್ನು ಆಕರ್ಷಕ ನಿರೂಪಣೆಯ ಮೂಲಕ ಮುನ್ನಡೆಸಿದರು, ಗಾಯನದಲ್ಲಿ ಗಾಯಕಿ ಲತಿಕಾ ಜೈನ್, ಸುದೀಪ್ ತಬಲಾದಲ್ಲಿ, ರಿಷಭ್ ಗಿಟಾರ್‌ನಲ್ಲಿ ಮತ್ತು ಅಂಕಿತ್ ಗಿಟಾರ್‌ನಲ್ಲಿ ಸಾಥ್ ನೀಡುವ ಮೂಲಕ ಕಾರ್ಯಕ್ರಮ ಮುನ್ನೆಡೆಸಿದರು. ಆಶಾ ಬಾತ್ರಾ ಅವರ ಸಂಶೋಧನಾ ಬೆಂಬಲದೊಂದಿಗೆ ವಿಕಾಸ್ ಜಲನ್ ನಿರ್ಮಾಣವನ್ನು ಮುನ್ನಡೆಸಿದರು.
ಗುರುದರ್ ಅವರ ಆರಂಭಿಕ ಜೀವನ ಪತ್ತೆ ಹೆಚ್ಚುವುದು
ಫೌಜಿಯಾ ಅವರು ಕೋಲ್ಕತ್ತಾದಲ್ಲಿ ಗುರುದತ್ ಅವರ ಬಾಲ್ಯದ ಆರಂಭದೊಂದಿಗೆ ನಿರೂಪಣೆಯನ್ನು ಆರಂಭಿಸಿದರು, ಇದು ಅವರ ತಾಯಿಯ ಕುಟುಂಬದಿಂದ ಅವರು ಪಡೆದ ಸೃಜನಶೀಲ ಪ್ರಭಾವಗಳು ಮತ್ತು ಮಾರ್ಗದರ್ಶನವನ್ನು ಎತ್ತಿ ತೋರಿಸಿತು. ಅವರು 16 ನೇ ವಯಸ್ಸಿನಲ್ಲಿ ಅಲ್ಮೋರಾದ ಉದಯ್ ಶಂಕರ್ ಸಾಂಸ್ಕೃತಿಕ ಕೇಂದ್ರಕ್ಕೆ ಸೇರಿದಾಗ ಅವರ ಬಾಲ್ಯದ ವರ್ಷಗಳನ್ನು ವಿವರಿಸಿದರು. ಅವರ ಕಲಾತ್ಮಕ ಸಾಮರ್ಥ್ಯಗಳು ಮತ್ತು ಪ್ರದರ್ಶನ ಕಲೆಗಳ ಮೇಲಿನ ಪ್ರೀತಿಯನ್ನು ರೂಪಿಸುವಲ್ಲಿ ಅವರ ಸಮಯವು ಪ್ರಮುಖ ಪಾತ್ರ ವಹಿಸಿತು.

ದೇವ್ ಆನಂದ್ ಜೊತೆಗಿನ ಬಾಂಧವ್ಯ
ಪುಣೆಯ ಪ್ರಭಾತ್ ಸ್ಟುಡಿಯೋದಲ್ಲಿ ತಮ್ಮ ಆರಂಭಿಕ ದಿನಗಳಲ್ಲಿ ಶುರುವಾದ ದೇವ್ ಆನಂದ್ ಜೊತೆ ಗುರುದತ್ ಅವರ ಮಹತ್ವದ ಸ್ನೇಹವನ್ನು ಈ ಹಿನ್ನೋಟವು ಎತ್ತಿ ತೋರಿಸಿತು. ಇಬ್ಬರು ಕಲಾವಿದರು ಆಳವಾದ ಬಾಂಧವ್ಯವನ್ನು ಬೆಳೆಸಿಕೊಂಡರು ಮತ್ತು ಅಂತಿಮವಾಗಿ ನಿರ್ಮಾಣದಲ್ಲಿ ತೊಡಗಿದಾಗ ಸಹಕರಿಸುವುದಾಗಿ ಭರವಸೆ ನೀಡಿದರು. ಈ ಪರಸ್ಪರ ಭರವಸೆಯು ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಸೃಜನಶೀಲ ಪಾಲುದಾರಿಕೆಗಳಲ್ಲಿ ಒಂದರ ಆರಂಭವನ್ನು ಗುರುತಿಸಿತು.
ಮುಂಬೈನಲ್ಲಿ ಪಯಣ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಉದಯ
ದೇವಾನಂದ್ ನವಕೇತನ್ ಚಲನಚಿತ್ರ ಕಂಪನಿಯನ್ನು ಸ್ಥಾಪಿಸಿದರು, ಆ ವೇಳೆ ಮುಂಬೈಗೆ ಗುರುದತ್ ಅವರ ಸ್ಥಳಾಂತರವನ್ನು ಫೌಜಿಯಾ ವಿವರಿಸಿದರು. ತಮ್ಮ ಭರವಸೆಯನ್ನು ಈಡೇರಿಸುತ್ತಾ, ದೇವಾನಂದ್, ಗುರುದತ್ ಅವರನ್ನು ತಮ್ಮ ಕಂಪನಿಯ ಮೊದಲ ಚಿತ್ರ "ಬಾಜಿ"ಯನ್ನು ನಿರ್ದೇಶಿಸಲು ಆಹ್ವಾನಿಸಿದರು. ಇದು ಗುರುದತ್ ಅವರ ಪ್ರಸಿದ್ಧ ವೃತ್ತಿಜೀವನದ ಆರಂಭವನ್ನು ಗುರುತಿಸಿತು. ಈ ಚಿತ್ರದ ಸಮಯದಲ್ಲಿಯೇ ಗುರುದತ್ ನಟ ಬದ್ರುದ್ದೀನ್ ಜಮಾಲುದ್ದೀನ್ ಕಾಜಿಗೆ ತಮ್ಮ ಪರದೆ ಮೇಲಿನ ಪ್ರಸಿದ್ಧ ಜಾನಿ ವಾಕರ್ ಎಂದು ಹೆಸರನ್ನು ನೀಡಿದರು.
ಬಾಜಿಯ ಯಶಸ್ಸಿನ ನಂತರ, ಗುರುದತ್ ಜಾಗತಿಕ ಸಿನಿಮಾದಲ್ಲಿ ಒಂದು ಹೆಗ್ಗುರುತಾಗಿ ಉಳಿದಿರುವ ಐಕಾನಿಕ್ "ಪ್ಯಾಸಾ" ಸೇರಿದಂತೆ ಕಾಲಾತೀತ ಶ್ರೇಷ್ಠ ಕೃತಿಗಳನ್ನು ನಿರ್ದೇಶಿಸಲು ಮುಂದಾದರು.
ವೈಯಕ್ತಿಕ ಜೀವನದ ಒಳನೋಟಗಳು
ಈ ನಿರೂಪಣೆಯು ಗುರುದತ್ ಅವರ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಿತು. ಇದು ಕಾಗಜ್ ಕೆ ಫೂಲ್ ಚಿತ್ರದ ವಾಣಿಜ್ಯ ವೈಫಲ್ಯದ ನಂತರದ ಚಲನಚಿತ್ರ ನಿರ್ಮಾಪಕರ ಭಾವನಾತ್ಮಕ ಹೋರಾಟಗಳನ್ನು ಮತ್ತಷ್ಟು ಪ್ರತಿಬಿಂಬಿಸುತ್ತದೆ, ಇದು ಅವರ ಅಂತಿಮ ವರ್ಷಗಳಲ್ಲಿ ಖಿನ್ನತೆ ಮತ್ತು ಒಂಟಿತನಕ್ಕೆ ಕಾರಣವಾಯಿತು.

ಪ್ರೇಕ್ಷಕರ ಆತ್ಮೀಯ ಸ್ಪಂದನೆ
ಈ ಸಂಗೀತ ಸಿಂಹಾವಲೋಕನ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಉತ್ಸಾಹದ ಸ್ಪಂದನೆ ದೊರಕಿತು. ಲತಿಕಾ ಜೈನ್ ಅವರ ಭಾವಪೂರ್ಣ ಮಧ್ಯಂತರ ಸಂಭಾಷಣೆ ಪ್ರದರ್ಶನಕ್ಕೆ ತೀವ್ರತೆಯನ್ನು ತಂದುಕೊಟ್ಟವು ಮತ್ತು ಕಥೆ ಹೇಳುವ ಅನುಭವವನ್ನು ಶ್ರೀಮಂತಗೊಳಿಸಿದವು.

ಕಾರ್ಯಕ್ರಮದ ಕೊನೆಯಲ್ಲಿ, ನಿರ್ಮಾಪಕ ರವಿ ಕೊಟ್ಟಾರಕರ ಅವರು ಭಾರತದ ಅತ್ಯಂತ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರ ಪರಂಪರೆಯನ್ನು ಸಂರಕ್ಷಿಸಲು ಮತ್ತು ಪ್ರಸ್ತುತಪಡಿಸಲು ನೀಡಿದ ಕೊಡುಗೆಗಾಗಿ ದಸ್ತಾನ್-ಎ-ಗುರು ದತ್ ಅವರ ಸಂಪೂರ್ಣ ತಂಡವನ್ನು ಸನ್ಮಾನಿಸಿದರು.
ಐ ಎಫ್ ಎಫ್ ಐ ಕುರಿತು
1952 ರಲ್ಲಿ ಆರಂಭವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿ ಮುಂಚೂಣಿಯಲ್ಲಿ ನಿಂತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯಡಿ ಬರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ ಎಸ್ ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಒಳಗೊಂಡಿವೆ ಮತ್ತು ಕಲಾವಿದ ದಿಗ್ಗಜರು ಭಯವಿಲ್ಲದ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐಎಫ್ ಎಫ್ ಐ ನಿಜವಾಗಿಯೂ ಮಿಂಚುವಂತೆ ಮಾಡುವುದು ಅದರಲ್ಲಿನ ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮೊದಲಾದ ಅದ್ಭುತ ಸಮ್ಮಿಶ್ರಣಗಳು ಮತ್ತು ಅಧಿಕ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹೊಸ ಎತ್ತರಕ್ಕೆ ಏರುತ್ತವೆ. ನವೆಂಬರ್ 20ರಿಂದ 28ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಇರುವ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತಿರುವ 56 ನೇ ಆವೃತ್ತಿಯ ಚಲನಚಿತ್ರೋತ್ಸವದಲ್ಲಿ ನಾನಾ ಭಾಷೆಗಳ, ಪ್ರಕಾರಗಳ, ನಾವೀನ್ಯತೆಗಳ ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲಕ್ಕೆ ಭರವಸೆ ನೀಡುವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ- ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಸಂಭ್ರಮದ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ:
https://www.pib.gov.in/PressReleasePage.aspx?PRID=2191742
https://www.pib.gov.in/PressReleasePage.aspx?PRID=2190381
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
रिलीज़ आईडी:
2194060
| Visitor Counter:
28
इस विज्ञप्ति को इन भाषाओं में पढ़ें:
English
,
Konkani
,
Manipuri
,
Gujarati
,
Telugu
,
Marathi
,
Urdu
,
हिन्दी
,
Assamese
,
Tamil
,
Malayalam