ಗೃಹ ವ್ಯವಹಾರಗಳ ಸಚಿವಾಲಯ
ಲಚಿತ್ ಬರ್ಫುಕನ್ ಅವರ ಜಯಂತಿ ದಿನವಾದ ಇಂದು ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ನಮ್ಮ ಇತಿಹಾಸದ ಶ್ರೇಷ್ಠ ಯೋಧರಲ್ಲಿ ಒಬ್ಬರಾದ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು
ಲಚಿತ್ ಅವರ ಅಚಲ ದೇಶಭಕ್ತಿ, ಅಸಾಧಾರಣ ಶೌರ್ಯ ಮತ್ತು ಅಪ್ರತಿಮ ಮಿಲಿಟರಿ ನಾಯಕತ್ವವು ಅಸ್ಸಾಂ ಮತ್ತು ನಮ್ಮ ಈಶಾನ್ಯದ ಉಳಿದ ಭಾಗಗಳನ್ನು ಮೊಘಲರ ದಾಳಿಯಿಂದ ರಕ್ಷಿಸಿದ್ದಲ್ಲದೆ, ಆ ಪ್ರದೇಶದ ಅಮೂಲ್ಯ ಸಾಂಸ್ಕೃತಿಕ ಪರಂಪರೆಯನ್ನೂ ಸಹ ಸಂರಕ್ಷಿಸಿತು
ಲಚಿತ್ ಬರ್ಫುಕನ್ ಅವರ ಜೀವನವು ದೇಶಭಕ್ತರಿಗೆ ಶಾಶ್ವತ ಸ್ಫೂರ್ತಿಯ ದೀಪಸ್ತಂಭವಾಗುಳಿದಿದೆ
Posted On:
24 NOV 2025 1:02PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನಮ್ಮ ಇತಿಹಾಸದ ಶ್ರೇಷ್ಠ ಯೋಧರಲ್ಲಿ ಒಬ್ಬರಾದ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ;
“ನಮ್ಮ ಇತಿಹಾಸದ ಶ್ರೇಷ್ಠ ಯೋಧರಲ್ಲಿ ಒಬ್ಬರಾದ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು. ಅವರ ಅಚಲ ದೇಶಭಕ್ತಿ, ಅಸಾಧಾರಣ ಶೌರ್ಯ ಮತ್ತು ಅಪ್ರತಿಮ ಮಿಲಿಟರಿ ನಾಯಕತ್ವವು ಅಸ್ಸಾಂ ಮತ್ತು ನಮ್ಮ ಈಶಾನ್ಯದ ಉಳಿದ ಭಾಗಗಳನ್ನು ಮೊಘಲರ ದಾಳಿಯಿಂದ ರಕ್ಷಿಸಿದ್ದಲ್ಲದೆ, ಈ ಪ್ರದೇಶದ ಅಮೂಲ್ಯ ಸಾಂಸ್ಕೃತಿಕ ಪರಂಪರೆಯನ್ನೂ ಸಹ ಸುರಕ್ಷಿತಗೊಳಿಸಿತು. ಅವರ ಜೀವನವು ದೇಶಭಕ್ತರಿಗೆ ಕಾಯಂ ಸ್ಫೂರ್ತಿಯ ದೀಪಸ್ತಂಭವಾಗಿ ಉಳಿಯುತ್ತದೆ.’’
*****
(Release ID: 2193559)
Visitor Counter : 6