ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲಚಿತ್ ದಿವಸ್ ಸಂದರ್ಭದಲ್ಲಿ ಲಚಿತ್ ಬೋರ್ಫುಕನ್ ಅವರಿಗೆ ಪ್ರಧಾನಮಂತ್ರಿ ಅವರು ಗೌರವ ಸಲ್ಲಿಸಿದರು

Posted On: 24 NOV 2025 11:31AM by PIB Bengaluru

ಲಚಿತ್ ದಿವಸ್ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಚಿತ್ ಬೋರ್ಫುಕನ್ ಅವರನ್ನು ಸ್ಮರಿಸಿ, ಅವರನ್ನು ಧೈರ್ಯ, ದೇಶಭಕ್ತಿ ಮತ್ತು ನಿಜವಾದ ನಾಯಕತ್ವದ ಸಂಕೇತ ಎಂದು ಬಣ್ಣಿಸಿದರು.

ಲಚಿತ್ ಬೋರ್ಫುಕನ್ ಅವರ ಶೌರ್ಯವು ರಾಷ್ಟ್ರದಾದ್ಯಂತ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಶ್ರೀ ಮೋದಿ ಹೇಳಿದರು. ಅಸ್ಸಾಂನ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಮತ್ತು ಏಕತೆ ಮತ್ತು ಚೈತನ್ಯದ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಲಚಿತ್ ಬೋರ್ಫುಕನ್ ಅವರ ಪ್ರಮುಖ ಪಾತ್ರವನ್ನು ಅವರು ಉಲ್ಲೇಖಿಸಿದರು.

ಎಕ್ಸ್‌ ನಲ್ಲಿ ಮಾಡಿದ ಪ್ರತ್ಯೇಕ ಪೋಸ್ಟ್ ಗಳಲ್ಲಿ, ಶ್ರೀ ಮೋದಿ ಹೀಗೆ ಹೇಳಿದ್ದಾರೆ:

"ಲಚಿತ್ ದಿವಸ್ನಲ್ಲಿ, ಧೈರ್ಯ, ದೇಶಭಕ್ತಿ ಮತ್ತು ನಿಜವಾದ ನಾಯಕತ್ವದ ಸಂಕೇತವಾದ ಲಚಿತ್ ಬೋರ್ಫುಕನ್ ಅವರನ್ನು ನಾವು ಸ್ಮರಿಸುತ್ತೇವೆ. ಅವರ ಶೌರ್ಯವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ. ಅಸ್ಸಾಂನ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ."

“লাচিত দিৱসৰ দিনা আমি সাহস, দেশপ্ৰেম আৰু প্ৰকৃত নেতৃত্বৰ প্ৰতীক লাচিত বৰফুকনক স্মৰণ কৰো।  তেওঁৰ বীৰত্বই প্ৰতিটো প্ৰজন্মক অনুপ্ৰাণিত কৰি আহিছে।  অসমৰ অনন্য সংস্কৃতি ৰক্ষাৰ ক্ষেত্ৰত তেওঁ গুৰুত্বপূৰ্ণ ভূমিকা পালন কৰিছিল।”

 

*****


(Release ID: 2193514) Visitor Counter : 4