ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

"ಕ್ರಿಸ್ಟಲ್ ಫೋರ್ಟ್ರೆಸ್" ಕಾರ್ಯಾಚರಣೆಯ ಅಡಿಯಲ್ಲಿ ಮೆಗಾ ಟ್ರಾನ್ಸ್‌ನ್ಯಾಷನಲ್ ಮೆಥಾಂಫೆಟಮೈನ್ ಜಾಲವನ್ನು ಭೇದಿಸಿದ್ದಕ್ಕಾಗಿ ಎನ್‌.ಸಿ.ಬಿ ಮತ್ತು ದೆಹಲಿ ಪೊಲೀಸರ ಜಂಟಿ ತಂಡವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಭಿನಂದಿಸಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾದಕವಸ್ತು ಮುಕ್ತ ಭಾರತದ ದೃಷ್ಟಿಕೋನವನ್ನು ಸಾಧಿಸಲು ಬಹು ಸಂಸ್ಥೆಗಳ ನಡುವಿನ ತಡೆರಹಿತ ಸಮನ್ವಯಕ್ಕೆ ಈ ಕಾರ್ಯಾಚರಣೆ ಒಂದು ಉಜ್ವಲ ಉದಾಹರಣೆಯಾಗಿದೆ

ನಮ್ಮ ಸರ್ಕಾರವು ಮಾದಕವಸ್ತು ಜಾಲಗಳನ್ನು ತ್ವರಿತವಾಗಿ ನಿರ್ಮೂಲನೆ ಮಾಡುತ್ತಿದೆ

ಮಾದಕವಸ್ತು ತನಿಖೆಗೆ ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ವಿಧಾನವನ್ನು ಬಲವಾಗಿ ಅಳವಡಿಸಿಕೊಂಡು, ₹262 ಕೋಟಿ ಮೌಲ್ಯದ 328 ಕೆಜಿ ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಮತ್ತು ಇಬ್ಬರು ವ್ಯಕ್ತಿಗಳನ್ನು ಬಂಧಿಸುವ ಮೂಲಕ ನವದೆಹಲಿಯಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಲಾಗಿದೆ

ದೆಹಲಿಯಲ್ಲಿ ನಡೆದ ಅತಿದೊಡ್ಡ ಮೆಥಾಂಫೆಟಮೈನ್ ವಶಪಡಿಸಿಕೊಳ್ಳುವಿಕೆಗಳಲ್ಲಿ ಇದು ಒಂದಾಗಿದೆ

"ಕ್ರಿಸ್ಟಲ್ ಫೋರ್ಟ್ರೆಸ್" ಕಾರ್ಯಾಚರಣೆಯು ಸಿಂಥೆಟಿಕ್‌ ಮಾದಕವಸ್ತು ಕೂಟಗಳು ಮತ್ತು ಅವುಗಳ ಅಂತಾರಾಷ್ಟ್ರೀಯ ಜಾಲಗಳನ್ನು ಕಿತ್ತುಹಾಕುವಲ್ಲಿ ಎನ್‌.ಸಿ.ಬಿ ಯ ಅಚಲ ಗಮನವನ್ನು ಪ್ರದರ್ಶಿಸುತ್ತದೆ

Posted On: 23 NOV 2025 5:34PM by PIB Bengaluru

"ಕ್ರಿಸ್ಟಲ್ ಫೋರ್ಟ್ರೆಸ್" ಕಾರ್ಯಾಚರಣೆಯ ಅಡಿಯಲ್ಲಿ ಮೆಗಾ ಟ್ರಾನ್ಸ್-ನ್ಯಾಷನಲ್ ಮೆಥಾಂಫೆಟಮೈನ್ ಜಾಲವನ್ನು ಭೇದಿಸಿದ್ದಕ್ಕಾಗಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌.ಸಿ.ಬಿ) ಮತ್ತು ದೆಹಲಿ ಪೊಲೀಸರ ಜಂಟಿ ತಂಡವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಭಿನಂದಿಸಿದ್ದಾರೆ.

"ನಮ್ಮ ಸರ್ಕಾರವು ಮಾದಕ ವಸ್ತುಗಳ ಕಳ್ಳಸಾಗಣೆ ಜಾಲವನ್ನು ತ್ವರಿತವಾಗಿ ನಿರ್ಮೂಲನೆ ಮಾಡುತ್ತಿದೆ. ಮಾದಕ ವಸ್ತುಗಳ ತನಿಖೆಗೆ ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ವಿಧಾನವನ್ನು ತೀವ್ರವಾಗಿ ಅನುಸರಿಸುವ ಮೂಲಕ, ನವದೆಹಲಿಯಲ್ಲಿ ₹262 ಕೋಟಿ ಮೌಲ್ಯದ 328 ಕೆಜಿ ಮೆಥಾಂಫೆಟಮೈನ್ ವಶಪಡಿಸಿಕೊಳ್ಳುವುದರೊಂದಿಗೆ ಮತ್ತು ಇಬ್ಬರು ವ್ಯಕ್ತಿಗಳನ್ನು ಬಂಧಿಸುವುದರೊಂದಿಗೆ ಪ್ರಮುಖ ಪ್ರಗತಿಯನ್ನು ಸಾಧಿಸಲಾಗಿದೆ. ಪ್ರಧಾನಮಂತ್ರಿ ಮೋದಿ ಅವರ ಮಾದಕ ವಸ್ತು ಮುಕ್ತ ಭಾರತದ ದೃಷ್ಟಿಕೋನವನ್ನು ಸಾಧಿಸಲು ಈ ಕಾರ್ಯಾಚರಣೆಯು ಬಹು-ಸಂಸ್ಥೆಗಳ ಸಮನ್ವಯಕ್ಕೆ ಒಂದು ಉಜ್ವಲ ಉದಾಹರಣೆಯಾಗಿದೆ. ಎನ್‌.ಸಿ.ಬಿ ಮತ್ತು ದೆಹಲಿ ಪೊಲೀಸರ ಜಂಟಿ ತಂಡಕ್ಕೆ ಅಭಿನಂದನೆಗಳು." ಎಂದು ಶ್ರೀ ಅಮಿತ್‌ ಶಾ ಅವರು ʼಎಕ್ಸ್‌ʼ ಪ್ಲಾಟ್‌ಫಾರ್ಮ್‌ ನಲ್ಲಿ ಹೇಳಿದ್ದಾರೆ.

ಪ್ರಮುಖ ಪ್ರಗತಿಯಲ್ಲಿ, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಒ.ಪಿ.ಎಸ್ ಶಾಖೆ), ವಿಶೇಷ ಘಟಕ (ಸಿ.ಐ.) ದೆಹಲಿ ಪೊಲೀಸರ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲವನ್ನು ಭೇದಿಸಿದೆ. ಆಪರೇಷನ್ ಕ್ರಿಸ್ಟಲ್ ಫೋರ್ಟ್ರೆಸ್ ಅಡಿಯಲ್ಲಿ, 20.11.2025 ರಂದು ದೆಹಲಿಯ ಛತ್ತರಪುರದ ಮನೆಯಿಂದ ಸುಮಾರು 328 ಕೆಜಿ ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಳ್ಳಲಾಯಿತು. ಈ ಕಾರ್ಯಾಚರಣೆಯು ದೊಡ್ಡ ಪ್ರಮಾಣದ ಸಿಂಥೆಟಿಕ್‌ ಮಾದಕವಸ್ತು ಜಾಲವನ್ನು ಗುರಿಯಾಗಿಸಲು ನಡೆದ ಸಂಘಟಿತ ಗುಪ್ತಚರ-ಚಾಲಿತ ಕ್ರಮವಾಗಿತ್ತು.

ಕಳೆದ ಕೆಲವು ತಿಂಗಳುಗಳಿಂದ ಗುಪ್ತಚರ ಮತ್ತು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ನಡೆಸಿದ ನಿರಂತರ ಶೋಧದ ಫಲಿತಾಂಶವೇ ಈ ಮಹತ್ವದ ಕಾರ್ಯಾಚರಣೆಯಾಗಿದ್ದು, ಇದು ಸುಸಂಘಟಿತ ಕಳ್ಳಸಾಗಣೆ ಸರಪಳಿಯನ್ನು ಪತ್ತೆಹಚ್ಚಿತು, ಇದು ಅಂತಿಮವಾಗಿ ಈ ಪ್ರಮುಖ ಪ್ರಗತಿಗೆ ಕಾರಣವಾಗಿದೆ.

ನಾಗಾಲ್ಯಾಂಡ್ ಪೊಲೀಸರ ನೆರವಿನೊಂದಿಗೆ ವಶಕ್ಕೆ ಪಡೆಯಲಾದ ನಾಗಾಲ್ಯಾಂಡ್ ಮಹಿಳೆ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಮತ್ತು ವಿದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕಿಂಗ್‌ಪಿನ್ ಸೇರಿದಂತೆ ಇತರರನ್ನು ಗುರುತಿಸಲಾಗಿದೆ, ಕಳೆದ ವರ್ಷ ದೆಹಲಿಯಲ್ಲಿ ಎನ್‌.ಸಿ.ಬಿ 82.5 ಕಿಲೋಗ್ರಾಂಗಳಷ್ಟು ಹೈ-ಗ್ರೇಡ್ ಕೊಕೇನ್ ವಶಪಡಿಸಿಕೊಂಡ ಪ್ರಕರಣದಲ್ಲಿಯೂ ಈತ ಬೇಕಾಗಿದ್ದಾನೆ. ಕಾನೂನು ಕ್ರಮಗಳನ್ನು ಎದುರಿಸಲು ಆತನನ್ನು ಭಾರತಕ್ಕೆ ಗಡೀಪಾರು ಮಾಡಲು ಅಂತಾರಾಷ್ಟ್ರೀಯ ಜಾರಿ ಪಾಲುದಾರರೊಂದಿಗೆ ಸಮನ್ವಯದೊಂದಿಗೆ ಪ್ರಯತ್ನಗಳು ನಡೆಯುತ್ತಿವೆ.

ಇದು ದೆಹಲಿಯಲ್ಲಿ ನಡೆದ ಅತಿದೊಡ್ಡ ಮೆಥಾಂಫೆಟಮೈನ್ ವಶಪಡಿಸಿಕೊಳ್ಳುವಿಕೆಗಳಲ್ಲಿ ಒಂದಾಗಿದೆ. ಆರಂಭಿಕ ತನಿಖೆಗಳು ಈ ಜಾಲವು ಬಹು ಕೊರಿಯರ್‌ ಗಳು, ಅಡಗುದಾಣಗಳು ಮತ್ತು ಲೇಯರ್ಡ್ ಹ್ಯಾಂಡ್ಲರ್‌ ಗಳ ಮೂಲಕ ಕಾರ್ಯನಿರ್ವಹಿಸುತ್ತಿತ್ತು, ಭಾರತದೊಳಗೆ ಮತ್ತು ವಿದೇಶಿ ಮಾರುಕಟ್ಟೆಗಳಿಗೆ ವಿತರಣೆಗೆ ದೆಹಲಿಯನ್ನು ಪ್ರಮುಖ ಕೇಂದ್ರವಾಗಿ ಬಳಸಲಾಗುತ್ತಿತ್ತು ಎಂದು ಹೇಳಿವೆ.

"ಕ್ರಿಸ್ಟಲ್ ಫೋರ್ಟ್ರೆಸ್" ಕಾರ್ಯಾಚರಣೆಯು ಸಿಂಥೆಟಿಕ್ ಮಾದಕವಸ್ತು ದಂಧೆಗಳು ಮತ್ತು ಅವುಗಳ ಅಂತಾರಾಷ್ಟ್ರೀಯ ಜಾಲಗಳನ್ನು ನಿರ್ಮೂಲನೆ ಮಾಡುವತ್ತ ಎನ್‌.ಸಿ.ಬಿ ಗಮನಹರಿಸುವುದನ್ನು ಪ್ರದರ್ಶಿಸುತ್ತದೆ. ಮಾದಕವಸ್ತು ಕಳ್ಳಸಾಗಣೆಯನ್ನು ಎದುರಿಸಲು, ಎನ್‌.ಸಿ.ಬಿ ನಾಗರಿಕರ ಬೆಂಬಲವನ್ನು ಬಯಸುತ್ತದೆ. ಯಾವುದೇ ವ್ಯಕ್ತಿ ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾನಸ್- ರಾಷ್ಟ್ರೀಯ ಮಾದಕ ದ್ರವ್ಯ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ-1933ಗೆ ಕರೆ ಮಾಡುವ ಮೂಲಕ ಹಂಚಿಕೊಳ್ಳಬಹುದು.

 

*****


(Release ID: 2193241) Visitor Counter : 6