ಮುಂದಿನ ಒಂಬತ್ತು ದಿನಗಳವರೆಗೆ ಗೋವಾ ಮತ್ತೆ ಉತ್ಸಾಹಪೂರಿತ ‘ಐ.ಎಫ್.ಎಫ್.ಐ.’ ಉತ್ಸವಕ್ಕೆ ಸಜ್ಜಾಗಿದೆ
ಐ.ಎಫ್.ಎಫ್.ಐ. 2025 ಅನ್ನು ಐತಿಹಾಸಿಕ ಅದ್ದೂರಿ ವೈಭವೋಪೇತ ಮೆರವಣಿಗೆ ಮೂಲಕ ಉದ್ಘಾಟಿಸಲಾಗುವುದು
ಐ.ಎಫ್.ಎಫ್.ಐ. ಹಬ್ಬ, ಐ.ಎಫ್.ಎಫ್.ಐ. 25 ಚಲನಚಿತ್ರ ಮತ್ತು ಎಐ ಚಾಲಿತ ನಾವೀನ್ಯತೆಗಳು ಕಲಾ ಪ್ರೇಮಿಗಳಿಗೆ ಪರಿಪೂರ್ಣ ತಾಣವಾಗಲಿದೆ, ನಾಳೆಯ ಯುವ ಸೃಜನಶೀಲ ಮನಸ್ಸುಗಳನ್ನು ಪ್ರೋತ್ಸಾಹಿಸಲಿದೆ
ನವೆಂಬರ್ 20 ರಿಂದ 28, 2025 ರವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ತನ್ನ 56ನೇ ವರ್ಷದ ಪ್ರಯಾಣದ ಉದ್ಘಾಟನೆಯ ಅಂತಿಮ ದಿನಕ್ಕೆ ಕಾಲಿಟ್ಟಿರುವುದರಿಂದ, ಗೋವಾದ ಸಮುದ್ರ ತೀರದ ಗಾಳಿಯಲ್ಲಿ ‘ಸೌಂಡ್ ಆಫ್ ಸಿನಿಮಾ’ ಅತ್ಯುನ್ನತ ಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ. ಹಿಂದಿನ ವರ್ಷಗಳಲ್ಲಿ ನಿಗದಿಪಡಿಸಿದ ವಿಶೇಷತೆ ಮತ್ತು ಒಳಗೊಳ್ಳುವಿಕೆಯ ಜೊತೆಗೆ ತನ್ನದೇ ಆದ ವಿಶೇಷ ಮಾನದಂಡಗಳನ್ನು ಮೀರಿಸುವ ದೃಷ್ಟಿಕೋನದೊಂದಿಗೆ, ಈ ಬಾರಿಯ ಐ.ಎಫ್.ಎಫ್.ಐ.2025 ಅನ್ನು ಮರೆಯಲಾಗದ ಸಿನಿಮೀಯ ಆಚರಣೆಯಾಗಿ ಅತ್ಯಂತ ಸೂಕ್ಷ್ಮವಾಗಿ ರೂಪಿಸಲಾಗಿದೆ. ಈ ವರ್ಷದ ಆವೃತ್ತಿಯು ಇಂದು ಊಹಿಸಬಹುದಾದ ಕೆಲವು ಅತ್ಯುತ್ತಮ ಮನರಂಜನಾ ಅನುಭವಗಳನ್ನು ಖಂಡಿತಾ ನೀಡುತ್ತದೆ - ಸಮಕಾಲೀನ ತೇಜಸ್ಸು, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಭಾರತೀಯ ಮತ್ತು ಜಾಗತಿಕ ಸಿನಿಮಾವನ್ನು ವ್ಯಾಖ್ಯಾನಿಸುವ ಕಥೆ ಹೇಳುವ ಅಪರಿಮಿತ ಚೈತನ್ಯದೊಂದಿಗೆ ರಚಿಸಲಾದ ಘಟನೆಗಳು ಈ ಬಾರಿ ಹಮ್ಮಿಕೊಳ್ಳಲಾಗಿದೆ.

ಈ ವರ್ಷದ ಐ.ಎಫ್.ಎಫ್.ಐ. 2025, ನಾಳೆ ಗೋವಾದ ಬೀದಿಬೀದಿಗಳನ್ನು ಭಾರತದ ಸಿನಿಮಾ ಜೀವಾತ್ಮದ ಜೀವಂತ ಕಲಾರೂಪವಾಗಿ ಪರಿವರ್ತಿಸುವ ಹಾಗೂ ಮೋಡಿಮಾಡುವ ಉದ್ಘಾಟನಾ ಮೆರವಣಿಗೆಯೊಂದಿಗೆ ತೆರೆದುಕೊಳ್ಳುತ್ತದೆ. ಆಂಧ್ರಪ್ರದೇಶ, ಹರಿಯಾಣ ಮತ್ತು ಗೋವಾದ ಭವ್ಯವಾದ ಆಕರ್ಷಕ ಸ್ತಬ್ಧಚಿತ್ರಗಳು ಮೆರವಣಿಗೆಯನ್ನು ಮುನ್ನಡೆಸಲಿವೆ, ನಂತರ ಭಾರತದ ಹೆಸರಾಂತ ಐಕಾನಿಕ್ ಸ್ಟುಡಿಯೋಗಳಿಂದ ಮನಪುಳಕಗೊಳಿಸುವ, ಕಲಾ ಸೃಷ್ಟಿಗಳು ಮತ್ತು ಎನ್.ಎಫ್.ಡಿ.ಸಿ.ಯ 50 ವರ್ಷಗಳ ಗೌರವ ನಿಮಿತ್ತ ವಿಶೇಷ ಸ್ತಬ್ಧಚಿತ್ರಗಳು... ರಾಷ್ಟ್ರದ ಪ್ರತಿಯೊಂದು ಮೂಲೆಯಿಂದ ನೃತ್ಯಗಳನ್ನು ಒಂದೇ ಲಯಕ್ಕೆ ಹೆಣೆಯುವ ನೂರು ಜಾನಪದ ಕಲಾವಿದರೊಂದಿಗೆ "ಭಾರತ್ ಏಕ್ ಸೂರ್". ಆಕರ್ಷಣೆಗಳು, ಬಣ್ಣ ವರ್ಣದ ಹೊಳಪು ಮತ್ತು ಹಳೆ ನೆನಪುಗಳ ಕಲಾರೂಪ, ಛೋಟಾ ಭೀಮ್, ಚುಟ್ಕಿ, ಮೋಟು ಪಟ್ಲು ಮತ್ತು ಬಿಟ್ಟು ಬಹನೇಬಾಜ್ ಇತ್ಯಾದಿ ಹತ್ತು ಹಲವು ವಿಷಯಗಳು ಜನಸಮೂಹವನ್ನು ಮೋಡಿ ಮಾಡಲಿದೆ. ನಾಳೆ, ಐ.ಎಫ್.ಎಫ್.ಐ. 2025 ವಿಶೇಷ ಬಣ್ಣ ಮತ್ತು ಕಲ್ಪನೆಯ ಚಲಿಸುವ ಕವಿತೆಯಾಗಿ ಪ್ರಾರಂಭವಾಗಲಿದೆ.
ಗೋವಾದಾದ್ಯಂತ ಸಮುದ್ರ ತೀರದ ತಂಪಾದ ಗಾಳಿ ಬೀಸುತ್ತಿದ್ದಂತೆ, ಮೆರವಣಿಗೆ ವೈಭವೋಪೇತವಾಗಿ ಸಾಗಲಿದೆ - ಇದು ಕೇವಲ ಉತ್ಸವದ ಆರಂಭವನ್ನು ಗುರುತಿಸುವುದಿಲ್ಲ ಬದಲಾಗಿ ಕಲಾತ್ಮಕ ಜಾಗೃತಿಯ ಕ್ಷಣವನ್ನು ಘೋಷಿಸಲಿವೆ. ಪ್ರತಿಯೊಂದು ಸ್ತಬ್ಧಚಿತ್ರಗಳು ತನ್ನ ಪ್ರದೇಶದ ನಾಡಿಮಿಡಿತವನ್ನು ಹೊತ್ತೊಯ್ಯುಲಿವೆ. ಪ್ರತಿ ಪ್ರದರ್ಶನವು ತನ್ನ ಜನರ ಹೃದಯ ಬಡಿತವನ್ನು ಉಸಿರಾಡುತ್ತವೆ ಮತ್ತು ಪ್ರತಿ ಚೌಕಟ್ಟು-ಪ್ರೇರಿತ ಸೃಷ್ಟಿಯು ಭಾರತದ ಕಾಲಾತೀತ ಪ್ರಣಯವನ್ನು ಕಥೆ ಹೇಳುವಿಕೆಯೊಂದಿಗೆ ಪ್ರತಿಧ್ವನಿಸಲಿವೆ. ಸಮುದ್ರದ ತಂಗಾಳಿಯಂತೆ ಸಂಗೀತವು ಏರುಇಳಿತದ ಇಂಪು ನೀಡಲಿವೆ ಮತ್ತು ಕನಸಿನ ದೃಶ್ಯದಂತೆ ಬಣ್ಣಗಳು ಅರಳಲಿವೆ, ಈ ಬಾರಿಯ ಉದ್ಘಾಟನಾ ಮೆರವಣಿಗೆಯು ಭಾರತದ ಸೃಜನಶೀಲತೆ ಎಂದಿಗಿಂತಲೂ ಪ್ರಕಾಶಮಾನವಾಗಿ ಹೊಳೆಯುವ ಐ.ಎಫ್.ಎಫ್.ಐ. ಆವೃತ್ತಿಯ ಭರವಸೆ ನೀಡಲಿದೆ.
ಅಲ್ಲದೆ, ಪುಷ್ಪಗುಚ್ಛವು ಅಂತರರಾಷ್ಟ್ರೀಯ ಸ್ಪರ್ಧೆ, ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ, ಐ.ಸಿ.ಎಫ್.ಟಿ-ಯುನೆಸ್ಕೊ ಗಾಂಧಿ ಪದಕ ಮತ್ತು ಮಕಾಬ್ರೆ ಡ್ರೀಮ್ಸ್, ಡಾಕ್ಯು-ಮಾಂಟೇಜ್, ಪ್ರಾಯೋಗಿಕ ಚಲನಚಿತ್ರಗಳು, ಯುನಿಸೆಫ್ ಮತ್ತು ಪುನಃಸ್ಥಾಪಿಸಿದ ಕ್ಲಾಸಿಕ್‌ಗಳಂತಹ ವಿಶೇಷ ವಿಭಾಗಗಳನ್ನು ಒಳಗೊಂಡಂತೆ 15 ಸ್ಪರ್ಧಾತ್ಮಕ ಮತ್ತು ಕ್ಯುರೇಟೆಡ್ ವಿಭಾಗಗಳನ್ನು ಐ.ಎಫ್.ಎಫ್.ಐ. ಒಳಗೊಂಡಿದೆ. 56 ನೇ ಐ.ಎಫ್.ಎಫ್.ಐ. ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ (ಸಿಮೊಟ್), ವೇವ್ಸ್ ಫಿಲ್ಮ್ ಬಜಾರ್ (19 ನೇ ಆವೃತ್ತಿ), ದಿ ನಾಲೆಡ್ಜ್ ಸೀರೀಸ್, ಸಿನಿಮಾಎಐ ಹ್ಯಾಕಥಾನ್, ಐ.ಎಫ್.ಎಫ್.ಐ.ಫಿಸ್ಟಾ - ಸಾಂಸ್ಕೃತಿಕ ಪ್ರದರ್ಶನ ಮತ್ತು ಮಾಸ್ಟರ್‌ಕ್ಲಾಸ್‌ಗಳು, ಪ್ಯಾನೆಲ್‌ಗಳು ಮತ್ತು ಸಂವಾದಾತ್ಮಕ ಕಾರ್ಯಕ್ರಮಗಳನ್ನು ವಿಶೇಷವಾಗಿ ಪಟ್ಟಿ ಮಾಡಲಾಗಿದೆ.
- ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ (ಸಿಮೊಟ್): 799 ನಮೂದುಗಳಿಂದ, 124 ಯುವ ಸೃಷ್ಟಿಕರ್ತರನ್ನು 13 ಚಲನಚಿತ್ರ ನಿರ್ಮಾಣ ಕರಕುಶಲ ವಸ್ತುಗಳಿಂದ ಆಯ್ಕೆ ಮಾಡಲಾಯಿತು, ಇದರಲ್ಲಿ 56ನೇ ಐ.ಎಫ್.ಎಫ್.ಐ. ಗೋವಾದಲ್ಲಿ ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋದ ಭಾಗವಾಗಿ ವೇವ್ಸ್ 2025 ರಲ್ಲಿ ಸಿಐಸಿ ಚಾಲೆಂಜ್ ನಿಂದ 24 ವೈಲ್ಡ್‌ಕಾರ್ಡ್ ವಿಜೇತರು ಕೂಡ ಸೇರಿದ್ದಾರೆ.
- ವೇವ್ಸ್ ಫಿಲ್ಮ್ ಬಜಾರ್ (19ನೇ ಆವೃತ್ತಿ): ಭಾರತದ ಪ್ರಮುಖ ಚಲನಚಿತ್ರ ಮಾರುಕಟ್ಟೆಯು ಈ ಕೆಳಗಿನ ಉಪವರ್ಗ ಹೊಂದಿರುತ್ತದೆ:
§ ಸ್ಕ್ರೀನ್‌ರೈಟರ್ಸ್ ಲ್ಯಾಬ್, ಮಾರುಕಟ್ಟೆ ಪ್ರದರ್ಶನಗಳು, ವೀಕ್ಷಣಾ ಕೊಠಡಿ ಮತ್ತು ಸಹ-ನಿರ್ಮಾಣ ಮಾರುಕಟ್ಟೆಗಳಲ್ಲಿ 300+ ಚಲನಚಿತ್ರ ಯೋಜನೆಗಳು
§ ಸಹ-ನಿರ್ಮಾಣ ಮಾರುಕಟ್ಟೆಯಲ್ಲಿ 22 ವೈಶಿಷ್ಟ್ಯ ಚಲನಚಿತ್ರಗಳು ಮತ್ತು 5 ಸಾಕ್ಷ್ಯಚಿತ್ರಗಳು
§ ಒಟ್ಟು 20,000 ಯು.ಎಸ್. ಡಾಲರ್ ನಗದು ಅನುದಾನಗಳು
§ ವೇವ್ಸ್ ಫಿಲ್ಮ್ ಬಜಾರ್ ಶಿಫಾರಸುಗಳು (ಡಬ್ಲ್ಯೂ.ಎಸ್.ಡಿ.ಆರ್.): ಬಹು ಸ್ವರೂಪಗಳಲ್ಲಿ 22 ಆಯ್ದ ಚಲನಚಿತ್ರಗಳು
§ 7+ ದೇಶಗಳಿಂದ ನಿಯೋಗಗಳು ಮತ್ತು 10+ ಭಾರತೀಯ ರಾಜ್ಯಗಳಿಂದ ಚಲನಚಿತ್ರ ಪ್ರೋತ್ಸಾಹಕ ಪ್ರದರ್ಶನಗಳು
§ ಅತ್ಯಾಧುನಿಕ ವಿ.ಎಫ್.ಎಕ್ಸ್, ಸಿಜಿಐ , ಅನಿಮೇಷನ್ ಮತ್ತು ಡಿಜಿಟಲ್ ನಿರ್ಮಾಣ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಮೀಸಲಾದ ಟೆಕ್ ಪೆವಿಲಿಯನ್.
· ಸಿನೆಮ್ಎಐ ಹ್ಯಾಕಥಾನ್: ಐ.ಎಫ್.ಎಫ್.ಐ. 2025 ರಲ್ಲಿ ಹೊಸ ಉಪಕ್ರಮವಾದ ಸಿನೇಮ್ಎಐ ಹ್ಯಾಕಥಾನ್ ಅನ್ನು ಎಲ್.ಟಿ.ಐ. ಮೈಂಡ್ ಟ್ರೀ ಮತ್ತು ವೇವ್ಸ್ ಫಿಲ್ಮ್ ಬಜಾರ್ ಸಹಯೋಗದೊಂದಿಗೆ ಆಯೋಜಿಸಲಾಗುವುದು. ಈ ಕಾರ್ಯಕ್ರಮವು ಚಲನಚಿತ್ರ ನಿರ್ಮಾಣದಲ್ಲಿ ಎಐ -ಚಾಲಿತ ನಾವೀನ್ಯತೆಯ ಮೇಲೆ ಕೇಂದ್ರೀಕರಿಸುತ್ತದೆ - ಸಿನಿಮೀಯ ತಂತ್ರಜ್ಞಾನವನ್ನು ಮುಂದುವರೆಸಲು ಐ.ಎಫ್.ಎಫ್.ಐ. ಯ ಬದ್ಧತೆಯನ್ನು ಬಲಪಡಿಸುವುದು, ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಸರಳೀಕರಿಸುವುದು ಮತ್ತು ಪೈರಸಿ ವಿರೋಧಿ ಚೌಕಟ್ಟುಗಳನ್ನು ಬಲಪಡಿಸುವುದು.
· ಐ.ಎಫ್.ಎಫ್.ಐ.ಇಸ್ಟಾ - ಸಾಂಸ್ಕೃತಿಕ ಪ್ರದರ್ಶನ: ಐ.ಎಫ್.ಎಫ್.ಐ.ಇಸ್ಟಾ, ಸಂಗೀತ, ಪ್ರದರ್ಶನ ಮತ್ತು ಸೃಜನಶೀಲ ಕಲೆಗಳ ನಾಲ್ಕು ದಿನಗಳ ಆಚರಣೆ, ನವೆಂಬರ್ 21–24, ಸಂಜೆ 6–8 ರವರೆಗೆ ಶ್ಯಾಮ ಪ್ರಸಾದ್ ಮುಖರ್ಜಿ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಕಲಾವಿದರು ಮತ್ತು ಪ್ರೇಕ್ಷಕರನ್ನು ನೇರ ಸಾಂಸ್ಕೃತಿಕ ಅನುಭವಗಳ ಮೂಲಕ ಒಟ್ಟುಗೂಡಿಸುವ ಮೂಲಕ ಭಾರತದ ರೋಮಾಂಚಕ ಸೃಜನಶೀಲ ಆರ್ಥಿಕತೆಯನ್ನು ಉಲ್ಲೇಖಿಸಿದರು.
ಐ.ಎಫ್.ಎಫ್.ಐ.2025 ಈ ಆವೃತ್ತಿಯಲ್ಲಿ ಗುರುದತ್, ರಾಜ್ ಖೋಸ್ಲಾ, ಋತ್ವಿಕ್ ಘಾಟಕ್, ಪಿ. ಭಾನುಮತಿ, ಭೂಪೇನ್ ಹಜಾರಿಕಾ ಮತ್ತು ಸಲೀಲ್ ಚೌಧರಿ ಸೇರಿದಂತೆ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು ಮತ್ತು ಕಲಾವಿದರ ಜನ್ಮದಿನಾಚರಣೆ ಶತಮಾನೋತ್ಸವಗಳಿಗೆ ಗೌರವ ನಮನ ಸಲ್ಲಿಸಲಿದೆ. ಸಲೀಲ್ ಚೌಧರಿ ಅವರ ಮುಸಾಫಿರ್ ಮತ್ತು ಋತ್ವಿಕ್ ಘಟಕ್ ಅವರ ಸುವರ್ಣರೇಖಾವನ್ನು ಐ.ಎಫ್.ಎಫ್.ಐ. 2025ರಲ್ಲಿ ಪ್ರದರ್ಶಿಸಲಾಗುವುದು. ಈ ವರ್ಷ, ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ಕ್ಷೇತ್ರದ ದಂತಕಥೆ ನಟ ಶ್ರೀ ರಜನಿಕಾಂತ್ ಅವರನ್ನು ವಿಶೇಷವಾಗಿ ಗೌರವಿಸಲಾಗುವುದು.

ಎಲ್ಲಾ ಕಡೆಯಿಂದ, ಎಲ್ಲಾ ರೀತಿಯ ಹಾಗೂ ಎಲ್ಲಾ ಉಪಕ್ರಮಗಳು ಮತ್ತು ಎಲ್ಲಾ ಯೋಜನೆಗಳು ಅತ್ಯಂತ ಎಚ್ಚರಿಕೆಯಿಂದ ಮತ್ತು ಕ್ರಮ ಬದ್ಧತೆಯಿಂದ ನಡೆಯುವುದನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ (ಎಂ.ಐ.ಬಿ) ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಸಚಿವಾಲಯದ ಇತರ ಅಧಿಕಾರಿಗಳು ಇಂದು ಗೋವಾದ ಪಣಜಿಯಲ್ಲಿರುವ ಐ.ಎಫ್.ಎಫ್.ಐ. ಸ್ಥಳಗಳಿಗೆ ಭೇಟಿ ನೀಡಿ ಕಾರ್ಯಕ್ರಮ ಪೂರ್ವ ಅಂತಿಮ ಪರಿಶೀಲನೆ ನಡೆಸಿದರು.
ಇದನ್ನೆಲ್ಲ ಒಂದೇ ವಾಕ್ಯದಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ, ‘ಮುಂದಿನ ಒಂಬತ್ತು ದಿನಗಳವರೆಗೆ ಗೋವಾ ಮತ್ತೆ ‘ಐ.ಎಫ್.ಎಫ್.ಐ.’ ಆಕರ್ಷಣೆಗಳು, ಗೌರವ, ಮಾನ್ಯತೆ, ಹೆಗ್ಗಳಿಕೆ ಪಡೆಯಲು ಸಿದ್ಧವಾಗಿದೆ’ ಎಂದು ಹೇಳುವುದು ಅರ್ಥಪೂರ್ಣವಾಗಿರುತ್ತದೆ.
ಐ.ಎಫ್.ಎಫ್.ಐ. ಬಗ್ಗೆ
1952 ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಅತ್ಯಂತ ಗೌರವದಿಂದ ಹೆಮ್ಮೆಯಾಗಿ ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ ಜಂಟಿಯಾಗಿ ಆಯೋಜಿಸಿರುವ ಈ ಚಲನಚಿತ್ರ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಎದುರಿಸುತ್ತವೆ ಮತ್ತು ಪೌರಾಣಿಕ ಕಲಾವಿದರು ನಿರ್ಭೀತ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ. ಅನ್ನು ನಿಜವಾಗಿಯೂ ಹೊಳೆಯುವಂತೆ ಮಾಡುವುದು ಅದರ ಸೃಜನಶೀಲ ಮಿಶ್ರಣ - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮತ್ತು ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹಾರುವ ಉನ್ನತ-ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್. ನವೆಂಬರ್ 20 ರಿಂದ 28, 2025 ರವರೆಗೆ ಗೋವಾದ ಬೆರಗುಗೊಳಿಸುವ ಅತ್ಯಾಕರ್ಷಕ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗುವ 56 ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಅದ್ಭುತ ವರ್ಣಪಟಲವನ್ನು ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ವಿಶೇಷ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಈ ವಿಶೇಷ ಕೊಂಡಿಗಳನ್ನು ಕ್ಲಿಕ್ ಮಾಡಿ:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
रिलीज़ आईडी:
2191939
| Visitor Counter:
4