ಅಭಿವೃದ್ಧಿ ಪಥದಲ್ಲಿ ಭಾರತ ಮುಂದಕ್ಕೆ ಚಲಿಸಿದಾಗ, ಇಡೀ ವಿಶ್ವವೇ ವೀಕ್ಷಿಸುತ್ತದೆ - ಐತಿಹಾಸಿಕ ಅತ್ಯಾಕರ್ಷಕ ವೈಭವಪೂರ್ಣ ಮೆರವಣಿಗೆಯೊಂದಿಗೆ ಐ.ಎಫ್.ಎಫ್.ಐ. 2025 ಉದ್ಘಾಟನೆಗೊಳ್ಳಲಿದೆ
#ಐ.ಎಫ್.ಎಫ್.ಐ.ವುಡ್ ( #IFFIWood ), 19 ನವೆಂಬರ್ 2025
ಭಾರತದ 56ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಹೇಗೆ ಪ್ರಾರಂಭವಾಗುತ್ತದೆ ಎಂಬುದು ಚಲನಚಿತ್ರೋತ್ಸವ ಇತಿಹಾಸದ ಅತ್ಯಂತ ವಿಶೇಷ ಘಟನಾವಳಿಯಾಗಲಿದೆ. ಚಲನಚಿತ್ರೋತ್ಸವಗಳನ್ನು ಮರು ವ್ಯಾಖ್ಯಾನಿಸುವ, ಈ ನಿಟ್ಟಿನಲ್ಲಿ ಭರವಸೆ ಮೂಡಿಸುವ, ಒಂದು ಚೇತೋಹಾರಿ ದೃಶ್ಯವನ್ನು ಅನಾವರಣಗೊಳಿಸುವ - ಒಂದು ಭವ್ಯವಾದ, ಮನಪುಳಕಿತಗೊಳಿಸಿ ತಲ್ಲೀನಗೊಳಿಸುವ ಉದ್ಘಾಟನಾ ಮೆರವಣಿಗೆ ಸಜ್ಜಾಗಿದೆ. ಮೊದಲ ಬಾರಿಗೆ, ಐ.ಎಫ್.ಎಫ್.ಐ. ತನ್ನ ಪ್ರೇಕ್ಷಕರನ್ನು ಹೃದಯಸ್ಪರ್ಶಿ ಆಚರಣೆಯೊಂದಿಗೆ ಸ್ವಾಗತಿಸುತ್ತದೆ, ಅಲ್ಲಿ ಕಥೆಗಳು ಹರಿದು ಬರುತ್ತವೆ, ಸಂಗೀತ ಉಸಿರಾಡುತ್ತವೆ, ಪಾತ್ರಗಳು ಪರದೆಯಿಂದ ಹೊರಬರುತ್ತವೆ ಮತ್ತು ನವಭಾರತವು ಲಯ, ಬಣ್ಣ, ಹೆಮ್ಮೆ ಮತ್ತು ಉಸಿರುಕಟ್ಟುವ ಕಲ್ಪನೆಯ ಮೂಲಕ ತನ್ನನ್ನು ತಾನು ಬಹಿರಂಗಪಡಿಸುತ್ತದೆ. ನವೆಂಬರ್ 20, 2025 ರಂದು ಮಧ್ಯಾಹ್ನ 03.30ಕ್ಕೆ ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾ ಕಚೇರಿಯಿಂದ ಕಲಾ ಅಕಾಡೆಮಿಯವರೆಗೆ ಈ ವಿಹಂಗಮನ ಮೆರವಣಿಗೆಯನ್ನು ನಡೆಸಲು ನಿರ್ಧರಿಸಲಾಗಿದೆ. ಈ ರೀತಿಯ ಮೆರವಣಿಗೆ ಗೋವಾದ ಬೀದಿಗಳನ್ನು ಭಾರತದ ಸಿನಿಮೀಯ ಮತ್ತು ಸಾಂಸ್ಕೃತಿಕ ಪ್ರತಿಭೆಯ ಜೀವಂತ ಭಿತ್ತಿಚಿತ್ರಾಲಂಕಾರವಾಗಿ ಪರಿವರ್ತಿಸಲಿದೆ.

ಆಂಧ್ರಪ್ರದೇಶ, ಹರಿಯಾಣ ಮತ್ತು ಗೋವಾದ ಭವ್ಯವಾದ ರಾಜ್ಯ ಸ್ಥಬ್ದಚಿತ್ರ (ಟ್ಯಾಬ್ಲೋ)ಗಳು ಮೆರವಣಿಗೆಯನ್ನು ಮುನ್ನಡೆಸಲಿದ್ದು, ಪ್ರತಿಯೊಂದೂ ಗುರುತು ಮತ್ತು ಕಲ್ಪನೆಯ ಎದ್ದುಕಾಣುವ ಭಾವಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಆಂಧ್ರಪ್ರದೇಶವು ವಿಶಾಖಪಟ್ಟಣದ ಚಿನ್ನದ ಸಮುದ್ರ ತೀರಗಳ ಮೋಡಿ, ಅರಕುವಿನ ಅತೀಂದ್ರಿಯ ಕಣಿವೆಗಳು ಮತ್ತು ಟಾಲಿವುಡ್ ನ ಮಿಡಿಯುವ ಚೈತನ್ಯವನ್ನು ಕಣ್ಣೆದುರಿಗೆ ತರಲಿದೆ. ಹರಿಯಾಣವು ಜಾನಪದ, ರಂಗಭೂಮಿ, ಸಂಸ್ಕೃತಿ ಮತ್ತು ಸಿನಿಮಾ ಹೆಮ್ಮೆಯ ವರ್ಣರಂಜಿತ ಸಮ್ಮಿಲನವನ್ನು ನೀಡಲಿದೆ. ಉತ್ಸವದ ದೀರ್ಘಕಾಲೀನ ನೆಲೆಯಾಗಿರುವ ಗೋವಾ, ಈ ಮೂಲಕ ಮೆರವಣಿಗೆಯ ಭಾವನಾತ್ಮಕ ಹೃದಯವನ್ನು ರೂಪಿಸುತ್ತದೆ, ವಿಶ್ವ ಸಿನೆಮಾದೊಂದಿಗೆ ಅದರ ವಿಶ್ವಮಾನವ ಉತ್ಕೃಷ್ಟತೆ ಮತ್ತು ಕಾಲಾತೀತ ಬಾಂಧವ್ಯವನ್ನು ಆಚರಿಸಲಿದೆ.
ಭಾರತದ ಪ್ರಮುಖ ನಿರ್ಮಾಣ ಸಂಸ್ಥೆಗಳಿಂದ ಭವ್ಯವಾದ ಸಿನಿಮಾ ಟ್ಯಾಬ್ಲೋಗಳು ಕೂಡಾ ಇದರ ಜೊತೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಪ್ರತಿಯೊಂದೂ, ತನ್ನದೇ ಆದ ಕಥೆ ಹೇಳುವ ಶ್ರೇಷ್ಠತೆಯ ಚಲಿಸುವ ವಿಶ್ವ ರೂಪಿಸಲಿದೆ. ಅಖಂಡ 2 ರ ಪೌರಾಣಿಕ ಶಕ್ತಿ, ರಾಮ್ ಚರಣ್ ಅವರ ಪೆಡ್ಡಿಯ ಭಾವನಾತ್ಮಕ ಆಳ, ಮೈತ್ರಿ ಮೂವಿ ಮೇಕರ್ಸ್ನ ಸೃಜನಶೀಲ ಶಕ್ತಿ, ಜೀ ಸ್ಟುಡಿಯೋಸ್ನ ಐಕಾನಿಕ್ ಪರಂಪರೆ, ಹೊಂಬಾಳೆ ಫಿಲ್ಮ್ಸ್ನ ಜಾಗತಿಕ ದೃಷ್ಟಿಕೋನ, ಬಿಂದುಸಾಗರ್ ನ ಒಡಿಯಾ ಪರಂಪರೆ, ಗುರುದತ್ ಗೆ ಅಲ್ಟ್ರಾ ಮೀಡಿಯಾದ ಶತಮಾನೋತ್ಸವದ ಗೌರವ ಮತ್ತು ವೇವ್ಸ್ ಒಟಿಟಿಯ ರೋಮಾಂಚಕ ಕಥಾಹಂದರ ಕ್ಷೇತ್ರ - ಇವೆಲ್ಲವೂ ಭಾರತೀಯ ಸಿನೆಮಾದ ಮಿತಿಯಿಲ್ಲದ ವೈವಿಧ್ಯತೆಯನ್ನು ಪ್ರದರ್ಶಿಸಲು ಸಿದ್ಧವಾಗಿ ಗೋವಾದ ಮೆರವಣಿಗೆಯಲ್ಲಿ ಒಮ್ಮುಖವಾಗಲಿವೆ. ಐತಿಹಾಸಿಕ ಆಯಾಮವನ್ನು ಸೇರಿಸುವುದು ಎನ್ಎಫ್ಡಿಸಿ 50 ಇಯರ್ಸ್ ಟ್ಯಾಬ್ಲೋ, ಐದು ದಶಕಗಳ ಚಲನಚಿತ್ರ ನಿರ್ಮಾಪಕರನ್ನು ಪೋಷಿಸುವ ಮತ್ತು ರಾಷ್ಟ್ರದಾದ್ಯಂತ ಸಿನಿಮಾ ನಾವೀನ್ಯತೆಯನ್ನು ಬೆಳೆಸುವುದನ್ನು ಇದು ಗೌರವಿಸಲಿದೆ.
ಹದಿನಾರು ರಾಜ್ಯಗಳ ನೂರಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ನ "ಭಾರತ್ ಏಕ್ ಸೂರ್" ಎಂಬ ಜಾನಪದ ಸಿಂಫನಿಯು ಉಸಿರುಕಟ್ಟುವ ಉತ್ಸಾಹದಿಂದ ಮೆರವಣಿಗೆಯನ್ನು ತೆರೆಯುತ್ತದೆ. ಭಾಂಗ್ರಾ ಗರ್ಬಾವನ್ನು ಭೇಟಿ ಮಾಡುತ್ತದೆ, ಲಾವಣಿ ಘೂಮರ್ ಗೆ ಹರಿಯುತ್ತದೆ, ಬಿಹು ಛೌ ಮತ್ತು ನಾಟಿಯ ಪಕ್ಕದಲ್ಲಿ ಉಸಿರಾಡುತ್ತದೆ, ಭಾರತದ ಏಕೀಕೃತ ಸಾಂಸ್ಕೃತಿಕ ಹೃದಯ ಬಡಿತವನ್ನು ಸಾಕಾರಗೊಳಿಸುವ ಭವ್ಯವಾದ ತ್ರಿವರ್ಣ ರಚನೆಯಲ್ಲಿ ಪರಾಕಾಷ್ಠೆಯಾಗುತ್ತದೆ.
ಮೋಡಿ ಮಾಡಲಿರುವ, ಉತ್ತಮ ಹಳೆನೆನಪು ಮರುಕಳಿಸಲಿರುವ ಮತ್ತು ಆನಂದವನ್ನು ಸೇರಿಸುವ ಮೂಲಕ ಭಾರತದ ಪ್ರೀತಿಯ ಅನಿಮೇಷನ್ ಮೆಚ್ಚಿನವುಗಳು - ಛೋಟಾ ಭೀಮ್ ಮತ್ತು ಚುಟ್ಕಿ, ಮತ್ತು ಮೋಟು ಪಟ್ಲು ಮತ್ತು ಬಿಟ್ಟು ಬಹನೇಬಾಜ್ - ಪ್ರೇಕ್ಷಕರನ್ನು ನಗು, ಉಷ್ಣತೆ ಮತ್ತು ತಮಾಷೆಯ ಮನೋಭಾವದಿಂದ ಸ್ವಾಗತಿಸಲು ಬೃಹತ್ ಪರದೆಯಿಂದ ಇಳಿದು ಕಣ್ಣೆದುರು ಬರಲಿವೆ.
IFFI 2025ರ ಉದ್ಘಾಟನಾ ಮೆರವಣಿಗೆ ಉದ್ಘಾಟನೆಗಿಂತ ಹೆಚ್ಚಿನದಾಗಿದೆ; ಇದು ಸಿನಿಮೀಯ ಪ್ರಸ್ತಾಪ ಮತ್ತು ಸಾಂಸ್ಕೃತಿಕ ಭರವಸೆಯಾಗಿದೆ. ಗೋವಾ ಈ ಅಸಾಧಾರಣ ಆರಂಭಕ್ಕೆ ತಯಾರಿ ನಡೆಸುತ್ತಿರುವಾಗ, IFFI ಭಾರತವನ್ನು ಕೇವಲ ಕಥೆಗಳ ರಾಷ್ಟ್ರವಾಗಿ ಅಲ್ಲ - ಆದರೆ ಚಲನೆಯಲ್ಲಿರುವ ರಾಷ್ಟ್ರವಾಗಿ, ಒಂದು ಮರೆಯಲಾಗದ ಲಯದಲ್ಲಿ ಮುಂದುವರಿಯಲು ಜಗತ್ತನ್ನು ಆಹ್ವಾನಿಸುತ್ತದೆ.
ಏಕೆಂದರೆ ಭಾರತ ಚಲಿಸಿದಾಗ, ಜಗತ್ತು ನಿಜವಾಗಿಯೂ ವೀಕ್ಷಿಸುತ್ತದೆ!
ಐ.ಎಫ್.ಎಫ್.ಐ. ಬಗ್ಗೆ
195 ರಲ್ಲಿ ಪ್ರಾರಂಭವಾದ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವಾಚರಣೆಯಾಗಿ ಉದಾತ್ತವಾಗಿ ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರಗಳು, ಗೋವಾ ಮನರಂಜನಾ ಸೊಸೈಟಿ (ಇ.ಎಸ್.ಜಿ) ಜಂಟಿಯಾಗಿ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ವನ್ನು ಆಯೋಜಿಸುತ್ತಿವೆ. ಈ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಪುನಃಸ್ಥಾಪಿಸಲಾದ ಸಾಂಪ್ರದಾಯಿಕ ವ್ಯವಸ್ಥೆಗಳು ದಿಟ್ಟ ಹಾಗೂ ಪ್ರಭಾವೀ ಪ್ರಯೋಗಗಳನ್ನು ಪೂರೈಸುತ್ತವೆ ಮತ್ತು ದಂತಕಥೆಯ ಕಲಾವಿದರು ನಿರ್ಭೀತ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ.. ನಿಜವಾಗಿಯೂ ಮನರೋಮಾಂಚನ ಹಾಗೂ ಸೃಜನಶೀಲತೆ ಮಿಂಚುವಂತೆ ಮಾಡುತ್ತದೆ. ಇದು ಅಂತರರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ಕ್ಲಾಸ್ಗಳು, ಗೌರವಗಳು ಮತ್ತು ಹೆಚ್ಚಿನ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು - ಎಲ್ಲದರ ಮಿಶ್ರಣವಾಗಿದೆ. ನವೆಂಬರ್ 20–28 ರವರೆಗೆ ಗೋವಾದ ಆಕರ್ಷಕವಾಗಿ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ಇದರ 56 ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲವನ್ನು ಭರವಸೆ ನೀಡುತ್ತದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ: https://www.pib.gov.in/PressReleasePage.aspx?PRID=2190381
ಐ.ಎಫ್.ಎಫ್.ಐ. ವೆಬ್ಸೈಟ್: https://www.iffigoa.org/
ಪಿಐಬಿಯ ಐ.ಎಫ್.ಎಫ್.ಐ. ಮೈಕ್ರೋಸೈಟ್: https://www.pib.gov.in/iffi/56new/
ಪಿಐಬಿ ಐ.ಎಫ್.ಎಫ್.ಐ.ವುಡ್ ಪ್ರಸಾರ ಚಾನೆಲ್: https://whatsapp.com/channel/0029VaEiBaML2AU6gnzWOm3F
ಎಕ್ಸ್ ಹ್ಯಾಂಡಲ್ಗಳು: @IFFIGoa, @PIB_India, @PIB_Panaji
****
Release ID:
2191884
| Visitor Counter:
4