56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮುನ್ನ ಮಾಧ್ಯಮಕ್ಕಾಗಿ ಚಲನಚಿತ್ರ ಪರಿಚಯಿಸುವ ವಿಶೇಷ ಕೋರ್ಸ್ ಅನ್ನು ಪಿ.ಐ.ಬಿ. (ಮಹಾರಾಷ್ಟ್ರ ಮತ್ತು ಗೋವಾ ) ಆಯೋಜಿಸಿತು
#ಐ.ಎಫ್.ಎಫ್.ಐ.ವುಡ್ ( #IFFIWood ), 19 ನವೆಂಬರ್, 2025
ಪಿಐಬಿ (ಮಹಾರಾಷ್ಟ್ರ ಮತ್ತು ಗೋವಾ), ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್.ಟಿ.ಐ.ಐ.) ಸಹಯೋಗದೊಂದಿಗೆ, 56 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ಕ್ಕೆ ಪೂರ್ವಭಾವಿಯಾಗಿ ಗೋವಾದಲ್ಲಿ ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳಿಗಾಗಿ ವಿಶೇಷ ಚಲನಚಿತ್ರ ಮೆಚ್ಚುಗೆ ಕೋರ್ಸ್ ಅನ್ನು ಮಂಗಳವಾರದಂದು ಆಯೋಜಿಸಿತು. 56 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಗೆ ಮುಂಚಿತವಾಗಿ ನಡೆದ ಈ ವಿಶೇಷ ಕಾರ್ಯಕ್ರಮವು ಪತ್ರಕರ್ತರಿಗೆ ಹೆಚ್ಚು ಮಾಹಿತಿಯುಕ್ತ ಮತ್ತು ಒಳನೋಟವುಳ್ಳ ಉತ್ಸವ ವರದಿಯನ್ನು ತಯಾರಿಸಲು ಪೂರಕವಾದ ಚಲನಚಿತ್ರ ಕುರಿತಾದ ಆಳವಾದ ತಿಳುವಳಿಕೆಯನ್ನು ನೀಡುವ ಗುರಿಯನ್ನು ಹೊಂದಿತ್ತು.

ಈ ವಿಶೇಷ ಕೋರ್ಸ್ ಅನ್ನು ಎಫ್.ಟಿ.ಐ.ಐ. ಅಧ್ಯಾಪಕ ಸದಸ್ಯರಾದ ಸ್ಕ್ರೀನ್ ಸ್ಟಡೀಸ್ & ರಿಸರ್ಚ್ ಪ್ರೊಫೆಸರ್ ಡಾ. ಇಂದ್ರನೀಲ್ ಭಟ್ಟಾಚಾರ್ಯ ಮತ್ತು ಚಲನಚಿತ್ರ ನಿರ್ದೇಶನದ ಅಸೋಸಿಯೇಟ್ ಪ್ರೊಫೆಸರ್ ವೈಭವ್ ಅಬ್ನವೆ ಅವರು ನಡೆಸಿಕೊಟ್ಟರು. ಚಲನಚಿತ್ರ ವಿಷಯ ತಜ್ಞರು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಧ್ಯಮದವರಿಗೆ ಉಪನ್ಯಾಸಗಳು, ಚಲನಚಿತ್ರ ಪ್ರದರ್ಶನಗಳು, ಚರ್ಚೆಗಳು ಮತ್ತು ವಿಶ್ಲೇಷಣಾತ್ಮಕ ವ್ಯಾಯಾಮಗಳ ಮೂಲಕ, ಚಲನಚಿತ್ರ ರೂಪ, ಸಿನಿಮಾ ಇತಿಹಾಸ ಮತ್ತು ಜಾಗತಿಕ ಚಲನಚಿತ್ರ ನಿರ್ಮಾಣ ಸಂಪ್ರದಾಯಗಳನ್ನು ರೂಪಿಸುವ ಚಲನಚಿತ್ರ ಸೌಂದರ್ಯಶಾಸ್ತ್ರ ಮಂತಾದ ವಿಷಯಗಳನ್ನು ಪರಿಚಯಿಸಿದರು.

ಈ ಅಧಿವೇಶನದಲ್ಲಿ ಪಿ.ಐ.ಬಿಯ ಮಹಾನಿರ್ದೇಶಕಿ ಶ್ರೀಮತಿ ಸ್ಮಿತಾ ವತ್ಸ್ ಶರ್ಮಾ; ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್ ಕುಮಾರ್; ಮತ್ತು ಎನ್.ಎಫ್.ಡಿ.ಸಿ.ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶ್ ಮಗ್ದುಮ್ ಸೇರಿದಂತೆ ಹಿರಿಯ ಗಣ್ಯರು ಭಾಗವಹಿಸಿದರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಚಲನಚಿತ್ರ ನಿರ್ಮಾಪಕರು ಮತ್ತು ಪ್ರೇಕ್ಷಕರ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮಾಹಿತಿಯುಕ್ತ ಮತ್ತು ಸಂವೇದನಾಶೀಲ ಮಾಧ್ಯಮದ ಪಾತ್ರ ಬಹಳ ಮುಖ್ಯವಾಗಿದೆ. ಚಲನಚಿತ್ರ ಕಲೆಯ ಸೂಕ್ಷ್ಮ ಗ್ರಹಿಕೆಯು ಪತ್ರಕರ್ತರಿಗೆ ಉತ್ಕೃಷ್ಟ ಮತ್ತು ಹೆಚ್ಚು ಅರ್ಥಪೂರ್ಣ ನಿರೂಪಣೆಗಳನ್ನು ತಿಳಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ತಿಳಿಸಿದರು.

ಎಲ್ಲರ ಪಾಲ್ಗೊಳ್ಳುವಿಕೆ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ಪೂರ್ಣಗೊಂಡಿತು. ಶ್ರೀ ಪ್ರಭಾತ್ ಕುಮಾರ್, ಶ್ರೀ ಪ್ರಕಾಶ್ ಮಗ್ದುಮ್ ಮತ್ತು ಶ್ರೀಮತಿ ಸ್ಮಿತಾ ವತ್ಸ್ ಶರ್ಮಾ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರಮಾಣಪತ್ರಗಳನ್ನು ನೀಡಿದರು. ಉತ್ತಮ ಹಾಗೂ ಬಲವರ್ಧಿತ ವಿಮರ್ಶಾತ್ಮಕ ದೃಷ್ಟಿಕೋನಗಳು ಹೊರಹೊಮ್ಮಿದವು. ಚಲನಚಿತ್ರದ ಬಗ್ಗೆ ಇಂತಹ ಕಾರ್ಯಕ್ರಮದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ. 56 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ವೈವಿಧ್ಯಮಯ ಸೃಜನಾತ್ಮಕ ಸಿನಿಮೀಯ ಕೊಡುಗೆಗಳಲ್ಲಿ ಈ ಮೂಲಕ ತಮ್ಮನ್ನು ತೊಡಗಿಸಿಕೊಳ್ಳಲು ಮಾಧ್ಯಮ ಪ್ರತಿನಿಧಿಗಳು ಉತ್ತಮ ರೀತಿಯಲ್ಲಿ ಸಿದ್ಧರಾಗಿದ್ದಾರೆ.

****
Release ID:
2191843
| Visitor Counter:
6