ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಅಮೆರಿಕದೊಂದಿಗೆ ಮೊದಲ ಪ್ರಮುಖ ಅಡುಗೆ ಅನಿಲ (ಎಲ್.ಪಿ.ಜಿ.) ಆಮದು ಒಪ್ಪಂದವನ್ನು ಅಂತಿಮಗೊಳಿಸಿದ ಭಾರತ

Posted On: 17 NOV 2025 2:11PM by PIB Bengaluru

ಐತಿಹಾಸಿಕ ಬೆಳವಣಿಗೆಯೊಂದರಲ್ಲಿ, ಭಾರತೀಯ ಸಾರ್ವಜನಿಕ ವಲಯದ ತೈಲ ಕಂಪನಿಗಳು ಯು.ಎಸ್. ಗಲ್ಫ್ ಕರಾವಳಿಯಿಂದ ಸುಮಾರು 2.2 ಎಂ.ಟಿ.ಪಿ.ಎ. ಅಡುಗೆ ಅನಿಲ (ಎಲ್.ಪಿ.ಜಿ.)ವನ್ನು ಆಮದು ಮಾಡಿಕೊಳ್ಳಲು ಒಂದು ವರ್ಷದ ರಚನಾತ್ಮಕ ಒಪ್ಪಂದವನ್ನು ಯಶಸ್ವಿಯಾಗಿ 2026ರ ಒಪ್ಪಂದ ವರ್ಷದಲ್ಲಿ ಮುಕ್ತಾಯಗೊಳಿಸಿವೆ ಎಂದು ಕೇಂದ್ರ  ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್‌ದೀಪ್ ಸಿಂಗ್ ಪುರಿ ಅವರು ಇಂದು ತಿಳಿಸಿದರು. ಇದು ಭಾರತದ ವಾರ್ಷಿಕ ಎಲ್.ಪಿ.ಜಿ. ಆಮದಿನ ಹತ್ತು ಪ್ರತಿಶತವನ್ನು ಪ್ರತಿನಿಧಿಸುತ್ತದೆ ಮತ್ತು ಭಾರತೀಯ ಮಾರುಕಟ್ಟೆಗೆ ಅಂತಹ ಮೊದಲ ರಚನಾತ್ಮಕ ಯು.ಎಸ್. ಎಲ್.ಪಿ.ಜಿ. ಒಪ್ಪಂದವನ್ನು ಮಾಡಿಕೊಂಡಂತಾಗುತ್ತದೆ.  ಈ ನಿರ್ಧಾರವನ್ನು ಐತಿಹಾಸಿಕ ಬೆಳವಣಿಗೆಯಾಗಿದೆ. ವಿಶ್ವದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಎಲ್.ಪಿ.ಜಿ. ಮಾರುಕಟ್ಟೆಗಳಲ್ಲಿ ಒಂದನ್ನು ಈಗ ಯುನೈಟೆಡ್ ಸ್ಟೇಟ್ಸ್ ಬಾಗಿಲು ತೆರೆದು ಬರಮಾಡಿಕೊಂಡಿದೆ ಎಂದು ಕೇಂದ್ರ  ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್‌ದೀಪ್ ಸಿಂಗ್ ಪುರಿ ಅವರು ಹೇಳಿದರು.

ಭಾರತವು ತನ್ನ ಮೂಲ ಆಯ್ಕೆಗಳನ್ನು ವೈವಿಧ್ಯಗೊಳಿಸುವ ಮೂಲಕ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಎಲ್.ಪಿ.ಜಿ. ಪೂರೈಕೆಗಳನ್ನು ಪಡೆಯಲು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಪ್ರಯತ್ನದ ಭಾಗವಾಗಿ, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿ.ಪಿ.ಸಿ.ಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಹೆಚ್‌.ಪಿ.ಸಿ.ಎಲ್) ಅಧಿಕಾರಿಗಳ ತಂಡವು ಜುಲೈ 21 ರಿಂದ 24, 2025 ರವರೆಗೆ ಅಮೆರಿಕಕ್ಕೆ ಭೇಟಿ ನೀಡಿ, ಅಮೆರಿಕದ ಪ್ರಮುಖ ಉತ್ಪಾದಕರೊಂದಿಗೆ ಚರ್ಚೆಯಲ್ಲಿ ತೊಡಗಿತ್ತು. ಎಲ್‌.ಪಿ.ಜಿ ಖರೀದಿಗೆ ಮಾನದಂಡವಾಗಿ ಮೌಂಟ್ ಬೆಲ್ವಿಯು ಆಧರಿಸಿದ ಈ ಚರ್ಚೆಗಳು, ಅಂತಿಮವಾಗಿ ಒಪ್ಪಂದವನ್ನು ಅಂತಿಮಗೊಳಿಸುವುದರೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ದೇಶದ ಪಿ.ಎಸ್‌.ಯು ತೈಲ ಕಂಪನಿಗಳು ದೇಶಾದ್ಯಂತ ಮನೆಗಳಿಗೆ ಕಡಿಮೆ ಜಾಗತಿಕ ಬೆಲೆಯಲ್ಲಿ ಎಲ್‌.ಪಿ.ಜಿ ಒದಗಿಸುವುದನ್ನು ಖಚಿತಪಡಿಸಿವೆ ಎಂದು ಕೇಂದ್ರ ಸಚಿವರಾದ ಶ್ರೀ ಪುರಿ ಅವರು ಈ ಸಂದರ್ಭದಲ್ಲಿ ಹೇಳಿದರು. ಕಳೆದ ವರ್ಷ ಜಾಗತಿಕ ಎಲ್‌.ಪಿ.ಜಿ ಬೆಲೆಗಳು ಶೇಕಡಾ 60 ಕ್ಕಿಂತ ಹೆಚ್ಚು ಏರಿಕೆಯಾಗಿದ್ದರೂ, ವಾಸ್ತವಿಕ ವೆಚ್ಚ ₹1100 ಮೀರಿದ್ದರೂ ಸಹ ಉಜ್ವಲ ಫಲಾನುಭವಿಗಳು ಸುಮಾರು ₹500–550 ಸಬ್ಸಿಡಿ ಬೆಲೆಯಲ್ಲಿ ಅನಿಲ ಸಿಲಿಂಡರ್ ಗಳನ್ನು ಪಡೆಯುವುದನ್ನು ಮುಂದುವರೆಸಿದರು. ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಎಲ್‌.ಪಿ.ಜಿ ಬೆಲೆಗಳ ಪರಿಣಾಮದಿಂದ ಕುಟುಂಬಗಳನ್ನು - ವಿಶೇಷವಾಗಿ ತಾಯಂದಿರು ಮತ್ತು ಸಹೋದರಿಯರನ್ನು - ರಕ್ಷಿಸಲು ಭಾರತ ಸರ್ಕಾರವು ಹಿಂದಿನ ವರ್ಷದಲ್ಲಿ ₹40,000 ಕೋಟಿಗೂ ಹೆಚ್ಚು ವೆಚ್ಚ ಮಾಡಿದೆ.

2026ರ ಈ ಹೊಸ ಸಂಗ್ರಹಣಾ ವ್ಯವಸ್ಥೆಯು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ಮತ್ತೊಂದು ಹೆಜ್ಜೆಯಾಗಿದ್ದು, ಲಕ್ಷಾಂತರ ಮನೆಗಳಿಗೆ ಶುದ್ಧ ಅಡುಗೆ ಇಂಧನವು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವುದನ್ನು ಹಾಗೂ ಜನ ಸಾಮಾನ್ಯರಿಗೆ ಲಭ್ಯತೆಯ ಅವಕಾಶವನ್ನು ಇದು ಖಚಿತಪಡಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

ಉಲ್ಲೇಖಕ್ಕಾಗಿ:

 

*****


(Release ID: 2190824) Visitor Counter : 7