ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಎಲ್.ಎನ್.ಜೆ.ಪಿ ಆಸ್ಪತ್ರೆಯಲ್ಲಿ ಸ್ಫೋಟಕ್ಕೆ ತುತ್ತಾದ ಸಂತ್ರಸ್ತರನ್ನು ಭೇಟಿಯಾದರು


ಸಂಚಿನ ಹಿಂದಿರುವವರನ್ನು ನ್ಯಾಯಾಂಗದ ಮುಂದೆ ತರಲಾಗುವುದು ಎಂದು ಪ್ರಧಾನಮಂತ್ರಿ ಅವರು ಭರವಸೆ ನೀಡಿದರು

Posted On: 12 NOV 2025 3:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ದೆಹಲಿಯಲ್ಲಿನ ಎಲ್.ಎನ್.ಜೆ.ಪಿ ಆಸ್ಪತ್ರೆಗೆ ತೆರಳಿ, ಇತ್ತೀಚೆಗೆ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡವರನ್ನು ಭೇಟಿಯಾದರು. ಸಂತ್ರಸ್ತರು ಹಾಗೂ ಅವರ ಕುಟುಂಬದವರೊಂದಿಗೆ ಅವರು ಮಾತುಕತೆ ನಡೆಸಿದರು, ಅವರ ಚಿಕಿತ್ಸೆಯ ಕುರಿತು ವಿಚಾರಿಸಿದರು ಮತ್ತು ಅವರ ಶೀಘ್ರ ಹಾಗೂ ಸಂಪೂರ್ಣ ಚೇತರಿಕಗೆ ಹೃದಯಪೂರ್ವಕವಾಗಿ ಪ್ರಾರ್ಥಿಸಿದರು. 

ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ, ಪ್ರಧಾನಮಂತ್ರಿ ಅವರು ನ್ಯಾಯ ದೊರಕಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. 

ಶ್ರೀ ಮೋದಿ ಅವರು ಎಕ್ಸ್‍ ಪೋಸ್ಟ್‍ ನಲ್ಲಿ ಹೀಗೆ ಹೇಳಿದ್ದಾರೆ: 

"ದೆಹಲಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಎಲ್.ಎನ್.ಜೆ.ಪಿ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. 

ಈ ಸಂಚಿನ ಹಿಂದಿರುವವರನ್ನು ನ್ಯಾಯಾಂಗದ ಮುಂದೆ ತರಲಾಗುವುದು!"

 

*****


(Release ID: 2189189) Visitor Counter : 10