ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕವಿ ಮತ್ತು ಚಿಂತಕ ಅಂದೇ ಶ್ರೀ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 10 NOV 2025 3:02PM by PIB Bengaluru

ತೆಲಂಗಾಣದ ಹಿರಿಯ ಪ್ರತಿಭಾನ್ವಿತ ಕವಿ ಮತ್ತು ಚಿಂತಕ ಅಂದೇ ಶ್ರೀ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಂದೇ ಶ್ರೀ ಅವರ ನಿಧನವು ನಮ್ಮ ಸಾಂಸ್ಕೃತಿಕ ಮತ್ತು ಬೌದ್ಧಿಕ ಭೂದೃಶ್ಯದಲ್ಲಿ ಆಳವಾದ ಶೂನ್ಯವನ್ನು ಬಿಟ್ಟುಹೋಗಿದ್ದಾರೆ ಎಂದು ಶ್ರೀ ಮೋದಿ ಹೇಳಿದ್ದಾರೆ. 

"ಅಂದೇ ಶ್ರೀ ಅವರ ಆಲೋಚನೆಗಳು ತೆಲಂಗಾಣದ ಆತ್ಮವನ್ನು ಪ್ರತಿಬಿಂಬಿಸುತ್ತವೆ. ಒಬ್ಬ ಪ್ರತಿಭಾನ್ವಿತ ಕವಿ ಮತ್ತು ಚಿಂತಕರಾಗಿದ್ದ ಅವರು ಜನರ ಧ್ವನಿಯಾಗಿದ್ದರು, ಅವರ ಹೋರಾಟಗಳು, ಆಕಾಂಕ್ಷೆಗಳು ಮತ್ತು ಅವಿನಾಭಾವ ಚೈತನ್ಯವನ್ನು ವ್ಯಕ್ತಪಡಿಸುತ್ತಿದ್ದರು. ಅವರ ಮಾತುಗಳು ಹೃದಯಗಳನ್ನು ಕಲಕುವ, ಧ್ವನಿಗಳನ್ನು ಒಂದುಗೂಡಿಸುವ ಮತ್ತು ಸಮಾಜದ ಸಾಮೂಹಿಕ ನಾಡಿಮಿಡಿತಕ್ಕೆ ಆಕಾರ ನೀಡುವ ಶಕ್ತಿಯನ್ನು ಹೊಂದಿದ್ದವು. ಅವರು ಸಾಮಾಜಿಕ ಪ್ರಜ್ಞೆಯನ್ನು ಸಾಹಿತ್ಯ ಸೌಂದರ್ಯದೊಂದಿಗೆ ಬೆರೆಸಿದ ರೀತಿ ಅತ್ಯುತ್ತಮವಾಗಿತ್ತು" ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: 

"ಅಂದೇ ಶ್ರೀಗಳ ನಿಧನವು ನಮ್ಮ ಸಾಂಸ್ಕೃತಿಕ ಮತ್ತು ಬೌದ್ಧಿಕ ಭೂದೃಶ್ಯದಲ್ಲಿ ಆಳವಾದ ಶೂನ್ಯವನ್ನು ಬಿಟ್ಟುಹೋಗಿದೆ. ಅವರ ಆಲೋಚನೆಗಳು ತೆಲಂಗಾಣದ ಆತ್ಮವನ್ನು ಪ್ರತಿಬಿಂಬಿಸುತ್ತವೆ. ಒಬ್ಬ ಪ್ರತಿಭಾನ್ವಿತ ಕವಿ ಮತ್ತು ಚಿಂತಕರಾಗಿದ್ದ ಅವರು ಜನರ ಧ್ವನಿಯಾಗಿದ್ದರು, ಅವರ ಹೋರಾಟಗಳು, ಆಕಾಂಕ್ಷೆಗಳು ಮತ್ತು ಅವಿನಾಭಾವ ಚೈತನ್ಯವನ್ನು ವ್ಯಕ್ತಪಡಿಸುತ್ತಿದ್ದರು. ಅವರ ಮಾತುಗಳು ಹೃದಯಗಳನ್ನು ಕಲಕುವ, ಧ್ವನಿಗಳನ್ನು ಒಂದುಗೂಡಿಸುವ ಮತ್ತು ಸಮಾಜದ ಸಾಮೂಹಿಕ ನಾಡಿಮಿಡಿತಕ್ಕೆ ಆಕಾರ ನೀಡುವ ಶಕ್ತಿಯನ್ನು ಹೊಂದಿದ್ದವು. ಅವರು ಸಾಮಾಜಿಕ ಪ್ರಜ್ಞೆಯನ್ನು ಸಾಹಿತ್ಯ ಸೌಂದರ್ಯದೊಂದಿಗೆ ಬೆರೆಸುವ ರೀತಿ ಅತ್ಯುತ್ತಮವಾಗಿತ್ತು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ಹೊತ್ತಿನಲ್ಲಿ ನನ್ನ ಸಂತಾಪಗಳು, ಓಂ ಶಾಂತಿ."

“అందె శ్రీ మరణం మన సాంస్కృతిక, మేధో ప్రపంచంలో పూడ్చలేని లోటు. ఆయన ఆలోచనలు తెలంగాణ ఆత్మను ప్రతిబింబిస్తాయి. ఒక గొప్ప కవి, మేధావి అయిన ఆయన, ప్రజల పోరాటాలకు , ఆకాంక్షలకు ,అకుంఠిత స్ఫూర్తికి గొంతుకగా నిలిచారు. ఆయన పదాలకు హృదయాలను కదిలించే శక్తి, అన్ని వర్గాల ప్రజల ఆకాంక్షలను ఏకం చేసే శక్తి,ప్రజల సాంఘిక హృదయస్పందనకి రూపం ఇచ్చే శక్తి ఉన్నాయి. ఆయన సామాజిక స్పృహను,సాహితీ సౌందర్యంతో మిళితం చేసిన విధానం అద్వితీయం. వారి కుటుంబసభ్యులకు,అభిమానులకు నా ప్రగాఢ సంతాపం తెలియజేస్తున్నాను. ఓం శాంతి."

 

*****


(Release ID: 2188529) Visitor Counter : 4