ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಒಡಿಎಫ್+ ಮಾದರಿ ವಿಭಾಗವನ್ನು ಸಾಧಿಸಿದ್ದಕ್ಕಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 01 APR 2023 9:18AM by PIB Bengaluru

ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿಯು ಸ್ವಚ್ಛ ಭಾರತ ನಿರ್ಮಿಸುವಲ್ಲಿ ತೋರಿಸಿದ ಗಮನಾರ್ಹ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಕೇವಲ ಒಂದು ವರ್ಷದಲ್ಲಿ ಒಡಿಎಫ್+ ಗ್ರಾಮಗಳ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚಳವಾಗಿರುವ ಕುರಿತು ಮಾಡಿದ ಟ್ವೀಟ್‌ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

"ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ, ಮತ್ತು ದಮನ್ ಮತ್ತು ದಿಯು ಜನರ ಬಗ್ಗೆ ನನಗೆ ಹೆಮ್ಮೆಯಿದೆ. ಅವರು ಸ್ವಚ್ಛ ಭಾರತವನ್ನು ನಿರ್ಮಿಸಲು ಗಮನಾರ್ಹ ಬದ್ಧತೆಯನ್ನು ತೋರಿಸಿದ್ದಾರೆ."

 

*****

 


(Release ID: 2188303) Visitor Counter : 8