ಪ್ರಧಾನ ಮಂತ್ರಿಯವರ ಕಛೇರಿ
ನಮ್ಮ ರಾಷ್ಟ್ರೀಯ ಗೀತೆಯಾದ 'ವಂದೇ ಮಾತರಂ' ಆತ್ಮವಿಶ್ವಾಸ, ಸ್ವಾವಲಂಬಿ ಮತ್ತು ಪುನರುಜ್ಜೀವನಗೊಂಡ 'ವಿಕಸಿತ ಭಾರತ 2047'ರ ನಮ್ಮ ದೃಷ್ಟಿಕೋನವನ್ನು ಹೇಗೆ ಪ್ರೇರೇಪಿಸುತ್ತದೆ ಎಂಬುದರ ಕುರಿತಾಗಿ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
07 NOV 2025 2:54PM by PIB Bengaluru
ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಅವರು ಬರೆದ ಭಾರತ ಸ್ವಾತಂತ್ರ್ಯದ ಅವಿಸ್ಮರಣೀಯ ಗೀತೆಯಾದ, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರವರ ವಿರಚಿತ 'ವಂದೇ ಮಾತರಂ' ಗೀತೆಯ ಕುರಿತಾದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ. "ವಂದೇ ಮಾತರಂ ನಮ್ಮ ಆತ್ಮವಿಶ್ವಾಸ, ಸ್ವಾವಲಂಬಿ ಮತ್ತು ಪುನರುಜ್ಜೀವಿತ 'ವಿಕಸಿತ ಭಾರತ 2047'ರ ದೃಷ್ಟಿಕೋನವನ್ನು ನಿರಂತರವಾಗಿ ಪ್ರೇರೇಪಿಸುತ್ತಿದೆ ಎಂಬುದು ಶ್ರೀ ಅಮಿತ್ ಶಾ ಅವರ ಅಭಿಪ್ರಾಯ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಎಕ್ಸ್ ನಲ್ಲಿ ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಅವರ ಪೊಸ್ಟ್ ಗೆ ಪ್ರಧಾನಮಂತ್ರಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ:
"ವಂದೇ ಮಾತರಂನ 150ನೇ ವಾರ್ಷಿಕೋತ್ಸವದಂದು, ಕೇಂದ್ರ ಸಚಿವರಾದ ಶ್ರೀ @AmitShah ಅವರು, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ ಭಾರತದ ರಾಷ್ಟ್ರೀಯ ಗೀತೆಯ ಬಗ್ಗೆ ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ. ಇದು ಭಾರತದ ಸ್ವಾತಂತ್ರ್ಯದ ಅವಿಸ್ಮರಣೀಯ ಗೀತೆಯಾಗಿದೆ. ವಸಾಹತುಶಾಹಿ ಆಳ್ವಿಕೆಯ ಕರಾಳ ದಿನಗಳಲ್ಲಿ ಬರೆಯಲ್ಪಟ್ಟ ಈ ಗೀತೆಯು ಜಾಗೃತಿಯ ಉದಯಗೀತೆಯಾಗಿ ಮಾರ್ಪಟ್ಟಿದ್ದು, ಸಾಂಸ್ಕೃತಿಕ ಹೆಮ್ಮೆಯನ್ನು ನಾಗರಿಕ ರಾಷ್ಟ್ರೀಯತೆಯೊಂದಿಗೆ ಬೆರೆಸಿತು ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ.
ವಂದೇ ಮಾತರಂ ಆತ್ಮವಿಶ್ವಾಸ, ಸ್ವಾವಲಂಬಿ ಮತ್ತು ಪುನರುಜ್ಜೀವನಗೊಂಡ 'ವಿಕಸಿತ ಭಾರತ 2047'ರ ನಮ್ಮ ದೃಷ್ಟಿಕೋನವನ್ನು ಮತ್ತಷ್ಟು ಪ್ರೇರೇಪಿಸುತ್ತದೆ ಎಂದು ಅವರು ಗಮನಿಸುತ್ತಾರೆ. ಲೇಖನವನ್ನು ಓದಿ"
*****
(ಪ್ರಕಟಣೆ ಐ.ಡಿ.: 2187922)
ವಿಸಿಟರ್ ಕೌಂಟರ್ : 48
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam