ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸ್ವಚ್ಛತಾ ಅಭಿಯಾನ ಮತ್ತು ಬಾಕಿ ಇರುವ ವಿಷಯಗಳ ವಿಲೇವಾರಿ ಕುರಿತ ವಿಶೇಷ ಅಭಿಯಾನ 5.0 ಅನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ


ವಿಶೇಷ ಅಭಿಯಾನ 5.0 ರ ಅಡಿಯಲ್ಲಿ ಸಚಿವಾಲಯವು ಕೈಗೊಂಡ ಚಟುವಟಿಕೆಗಳನ್ನು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಶ್ರೀ ಡಾ. ಎಲ್. ಮುರುಗನ್ ಅವರು ಪರಿಶೀಲಿಸಿದರು

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವಿಶೇಷ ಅಭಿಯಾನ 5.0 ಅಡಿಯಲ್ಲಿ 2.6 ಲಕ್ಷ ಕೆಜಿಗೂ ಹೆಚ್ಚು ತ್ಯಾಜ್ಯ ವಿಲೇವಾರಿ ಮತ್ತು 77,000 ಚದರ ಅಡಿ ಕಚೇರಿ ಸ್ಥಳವನ್ನು ಮುಕ್ತಗೊಳಿಸಿದೆ

Posted On: 04 NOV 2025 7:52PM by PIB Bengaluru

ಭಾರತದ ಮಾನ್ಯ ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ಅಭಿಯಾನದ ದೃಷ್ಟಿಕೋನದಿಂದ ಪ್ರೇರಿತವಾಗಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು "ಸ್ವಚ್ಛತೆ ಮತ್ತು ಬಾಕಿ ಇರುವ ವಿಷಯಗಳ ವಿಲೇವಾರಿ" ಕುರಿತ ವಿಶೇಷ ಅಭಿಯಾನ 5.0 ಅನ್ನು ಅಕ್ಟೋಬರ್ 2 ರಿಂದ ಅಕ್ಟೋಬರ್ 31, 2025 ರವರೆಗೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸ್ವಚ್ಛತೆಯನ್ನು ಸಾಂಸ್ಥೀಕರಿಸುವುದು, ಕಚೇರಿ ಆವರಣಗಳನ್ನು ಸುಂದರಗೊಳಿಸುವುದು ಮತ್ತು ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ದಕ್ಷತೆಯನ್ನು ಹೆಚ್ಚಿಸುವುದೇ ಈ ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು.

ವಿಶೇಷ ಅಭಿಯಾನ 5.0 ರ ಸಾಧನೆಗಳ ಮುಖ್ಯಾಂಶಗಳು ಈ ಕೆಳಗಿನಂತಿವೆ: -

  • ಕ್ರಮವಾಗಿ 1,272 ಹೊರಾಂಗಣ ಅಭಿಯಾನಗಳನ್ನು ನಡೆಸಲಾಗಿದ್ದು, 2,073 ಸ್ಥಳಗಳನ್ನು ಸ್ವಚ್ಛಗೊಳಿಸಲಾಗಿದೆ.
  • 40,381 ಕೆ.ಜಿ. ಇ-ತ್ಯಾಜ್ಯ ಸೇರಿದಂತೆ ಒಟ್ಟು 2,62,391 ಕೆ.ಜಿ. ಗುಜರಿ ವಸ್ತುಗಳನ್ನು ವಿಲೇವಾರಿ ಮಾಡಲಾಗಿದ್ದು, ಇದರಿಂದ ₹ 1.37 ಕೋಟಿ ಆದಾಯ ಗಳಿಸಲಾಗಿದೆ. ಅಲ್ಲದೆ, 77,348 ಚದರ ಅಡಿಗಳಷ್ಟು ಸ್ಥಳವನ್ನು ಮುಕ್ತಗೊಳಿಸಲಾಗಿದೆ. ಒಟ್ಟಾರೆಯಾಗಿ 174 ವಾಹನಗಳನ್ನು ಸಹ ಬಳಕೆಯಿಂದ ಸ್ಥಗಿತಗೊಳಿಸಲಾಗಿದೆ.
  • ದಾಖಲೆ ನಿರ್ವಹಣೆಯ ಅಡಿಯಲ್ಲಿ, 35,281 ಭೌತಿಕ ಕಡತಗಳನ್ನು ಪರಿಶೀಲಿಸಲಾಗಿದ್ದು, ಅವುಗಳಲ್ಲಿ 11,389 ಕಡತಗಳನ್ನು ತೆಗೆದುಹಾಕಲಾಗಿದೆ. ಅಂತೆಯೇ, 1,486 ಇ-ಕಡತಗಳನ್ನು (e-files) ಪರಿಶೀಲಿಸಿ, 289 ಕಡತಗಳನ್ನು ಮುಕ್ತಾಯಗೊಳಿಸಲಾಗಿದೆ.
  • ಈ ಅಭಿಯಾನದ ಅವಧಿಯಲ್ಲಿ ಒಟ್ಟು 489 ಸಾರ್ವಜನಿಕ ಕುಂದುಕೊರತೆಗಳು, 121 ಕುಂದುಕೊರತೆ ಮೇಲ್ಮನವಿಗಳು, 19 ಸಂಸದರ ಉಲ್ಲೇಖಗಳು, 2 ರಾಜ್ಯ ಸರ್ಕಾರದ ಉಲ್ಲೇಖಗಳು ಮತ್ತು 2 ಪ್ರಧಾನ ಮಂತ್ರಿ ಕಾರ್ಯಾಲಯದ ಉಲ್ಲೇಖಗಳನ್ನು ಇತ್ಯರ್ಥಪಡಿಸಲಾಗಿದೆ.

ಸ್ವಚ್ಛತೆಯ ಸಂದೇಶವನ್ನು ಹರಡಲು, ಜಾಗೃತಿ ಮೂಡಿಸಲು ಮತ್ತು ಸಾರ್ವಜನಿಕ ಸಹಭಾಗಿತ್ವವನ್ನು ಹೆಚ್ಚಿಸಲು ಈ ಅಭಿಯಾನದ ಪ್ರಚಾರವನ್ನು ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡಲಾಯಿತು.

ಅಭಿಯಾನದ ಪ್ರಗತಿಯನ್ನು ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ವಾರಕ್ಕೊಮ್ಮೆ ನಿಯಮಿತವಾಗಿ ಪರಿಶೀಲಿಸುತ್ತಿದ್ದರು. ಸಚಿವಾಲಯದ ನೋಡಲ್ ಅಧಿಕಾರಿ ಹಾಗೂ ಹಿರಿಯ ಆರ್ಥಿಕ ಸಲಹೆಗಾರರಾದ ಶ್ರೀ ಆರ್.ಕೆ. ಜೇನಾ ಅವರು, ಪ್ರತಿ ಮಾಧ್ಯಮ ಘಟಕದ ಎಲ್ಲಾ ನೋಡಲ್ ಅಧಿಕಾರಿಗಳೊಂದಿಗೆ ಪ್ರತಿದಿನ ಪ್ರಗತಿಯ ಮೇಲ್ವಿಚಾರಣೆ ನಡೆಸಿದರು. ಮಾನ್ಯ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಸಚಿವಾಲಯದ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ಮತ್ತು ಮುಂದಿನ ಸುಧಾರಣೆಗಾಗಿ ನಿರ್ದೇಶನಗಳನ್ನು ನೀಡಿದರು.

ಅಭಿಯಾನದ ಸಮಯದಲ್ಲಿ ಸಚಿವಾಲಯ ಮತ್ತು ಅದರ ಕ್ಷೇತ್ರ ಕಚೇರಿಗಳು ಹಲವಾರು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿವೆ. ಅವುಗಳಲ್ಲಿ ಕೆಲವನ್ನು ಕೆಳಗಿನ ಚಿತ್ರಗಳಲ್ಲಿ ತೋರಿಸಲಾಗಿದೆ:

1.  ಆಕಾಶವಾಣಿ, ಅಹಮದಾಬಾದ್‌ನ ಕಾಂಪೌಂಡ್ ಗೋಡೆಯ ಅಲಂಕಾರ 

ಆಕಾಶವಾಣಿ, ಅಹಮದಾಬಾದ್, ತನ್ನ ಕಚೇರಿ ಆವರಣದ ಕಾಂಪೌಂಡ್ ಗೋಡೆಯನ್ನು, ಮಾಧ್ಯಮ ಮತ್ತು ಮನರಂಜನಾ ವಲಯವನ್ನು ಪ್ರತಿನಿಧಿಸುವ ಚಿಹ್ನೆಗಳ ವರ್ಣಚಿತ್ರಗಳೊಂದಿಗೆ ಅಂದಗೊಳಿಸುವ ಕಾರ್ಯವನ್ನು ಕೈಗೊಂಡಿತು.

2.  ಎಸ್‌ ಆರ್‌ ಎಫ್‌ ಟಿ ಐ, ಕೋಲ್ಕತ್ತಾದಿಂದ 'ತ್ಯಾಜ್ಯದಿಂದ ಕಲೆ' 

ಎಸ್‌ ಆರ್‌ ಎಫ್‌ ಟಿ ಐ (SRFTI) ವಿದ್ಯಾರ್ಥಿಗಳು ಹಳೆಯ ವೃತ್ತಪತ್ರಿಕೆಗಳು ಮತ್ತು ಬಳಸಿ ಬಿಸಾಡಿದ ಕಾರ್ಡ್‌ಬೋರ್ಡ್‌ಗಳನ್ನು ಉಪಯೋಗಿಸಿ, ಬೋಗನ್ವಿಲ್ಲಾ ಮರವನ್ನು ಒಳಗೊಂಡ ಜಪಾನೀಸ್ ಮನೆಯೊಂದನ್ನು ಪುನರ್‌ ಸೃಷ್ಟಿಸಿದರು. ತರುವಾಯ ಇದನ್ನು ಚಿತ್ರೀಕರಣದ ಸೆಟ್‌ ನಲ್ಲಿ ಪರಿಕರವಾಗಿ ಬಳಸಿಕೊಳ್ಳಲಾಯಿತು.

 

 

3. ಕೋಲ್ಕತ್ತಾದ ಎಸ್‌ ಆರ್‌ ಎಫ್‌ ಟಿ ಐ ನಿಂದ 'ವ್ಯಾಟ್' (VAT) ಪ್ರದೇಶದ ಅಂದಗೊಳಿಸುವಿಕೆ

ಎಸ್‌ ಆರ್‌ ಎಫ್‌ ಟಿ ಐ (SRFTI) ಸಂಸ್ಥೆಯು, ಕಸ ಸಂಗ್ರಹಿಸಲು ಬಳಸಲಾಗುತ್ತಿದ್ದ 'ವ್ಯಾಟ್' (VAT) ಪ್ರದೇಶವನ್ನು ಅಂದಗೊಳಿಸಲಾಯಿತು.

 

4. ಐಐಎಂಸಿ (IIMC) ಕೊಟ್ಟಾಯಂನಿಂದ ಕೊಳ ನಿರ್ಮಾಣ

ನೀರಿನ ಕೊರತೆಯಿರುವ ಕ್ಯಾಂಪಸ್‌ ನ ದೂರದ ಪ್ರದೇಶದಲ್ಲಿ ಐಐಎಂಸಿ ಕೊಟ್ಟಾಯಂ ಒಂದು ಕೊಳವನ್ನು ಅಭಿವೃದ್ಧಿಪಡಿಸುತ್ತಿದೆ.

 

5. ಮುಖ್ಯ ಸಚಿವಾಲಯದ ಕೊಠಡಿಯ ಅಂದಗೊಳಿಸುವಿಕೆ

ಮುಖ್ಯ ಸಚಿವಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳು ಶಾಸ್ತ್ರಿ ಭವನದಲ್ಲಿರುವ ರಾಜಭಾಷಾ ವಿಭಾಗದ ಕೊಠಡಿ ಸಂಖ್ಯೆ 116A ಅನ್ನು ಅಂದಗೊಳಿಸಿದರು.

ಚಿತ್ರಗಳಲ್ಲಿ ಕೆಲವು ಪ್ರಮುಖ ಚಟುವಟಿಕೆಗಳು:

1. ಅಭಿಯಾನದ ಸಮಯದಲ್ಲಿ ಜಾಗೃತಿ ಮೂಡಿಸಲು, ಸಿಬಿಸಿ ಭುವನೇಶ್ವರ ಸಂಸ್ಥೆಯು ಪುರಿ ಬಸ್ ನಿಲ್ದಾಣದಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು.

2. ಡಿಡಿಕೆ ಪ್ರಯಾಗ್‌ರಾಜ್ ಅವರಿಂದ ಸ್ವಚ್ಛತಾ ಕಾರ್ಯ

3. ತಿರುವನಂತಪುರಂ ಡಿಪಿಡಿಯಲ್ಲಿ ಸ್ವಚ್ಛತಾ ಅಭಿಯಾನ

ಸಚಿವಾಲಯದ ಕಚೇರಿಗಳಿಗೆ ಮಾನ್ಯ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರ ಭೇಟಿ

ಮುಖ್ಯ ಸಚಿವಾಲಯ, ಶಾಸ್ತ್ರಿ ಭವನ, ನವದೆಹಲಿ:

 ದೂರದರ್ಶನ ಭವನ, ನವದೆಹಲಿ

ಆಕಾಶವಾಣಿ ಭವನ, ನವದೆಹಲಿ

 

*****


(Release ID: 2186515) Visitor Counter : 8