ಪ್ರಧಾನ ಮಂತ್ರಿಯವರ ಕಛೇರಿ
ರವಿ ನಾಯಕ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
15 OCT 2025 8:58AM by PIB Bengaluru
ಗೋವಾ ಸರ್ಕಾರದ ಸಚಿವರಾಗಿದ್ದ ರವಿ ನಾಯಕ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಶ್ರೀ ನಾಯಕ್ ಅವರನ್ನು ಗೋವಾದ ಅಭಿವೃದ್ಧಿ ಪಯಣದಲ್ಲಿ ಗಣನೀಯ ಕೊಡುಗೆ ನೀಡಿದ ಅನುಭವಿ ಆಡಳಿತಗಾರ ಮತ್ತು ಸಮರ್ಪಿತ ಸಾರ್ವಜನಿಕ ಸೇವಕ ಎಂದು ಸ್ಮರಿಸಲಾಗುತ್ತದೆ ಎಂದು ಶ್ರೀ ಮೋದಿ ಹೇಳಿದ್ದಾರೆ. ಶ್ರೀ ನಾಯಕ್ ಅವರು ದೀನದಲಿತರು ಮತ್ತು ಸಮಾಜದ ಅಂಚಿನಲ್ಲಿರುವವರನ್ನು ಸಬಲೀಕರಣಗೊಳಿಸುವ ಬಗ್ಗೆ ವಿಶೇಷವಾಗಿ ಉತ್ಸುಕರಾಗಿದ್ದರು ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಗೋವಾ ಸರ್ಕಾರದ ಸಚಿವರಾದ ರವಿ ನಾಯಕ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಗೋವಾದ ಅಭಿವೃದ್ಧಿ ಪಥವನ್ನು ಶ್ರೀಮಂತಗೊಳಿಸಿದ ಅನುಭವಿ ಆಡಳಿತಗಾರ ಮತ್ತು ಸಮರ್ಪಿತ ಸಾರ್ವಜನಿಕ ಸೇವಕ ಎಂದು ಅವರನ್ನು ಸ್ಮರಿಸಲಾಗುತ್ತದೆ. ಅವರು ದೀನದಲಿತರು ಮತ್ತು ಸಮಾಜದ ಅಂಚಿನಲ್ಲಿರುವವರನ್ನು ಸಬಲೀಕರಣಗೊಳಿಸುವ ಬಗ್ಗೆ ವಿಶೇಷವಾಗಿ ಉತ್ಸುಕರಾಗಿದ್ದರು. ಈ ದುಃಖದ ಸಮಯದಲ್ಲಿ ಅವರ ಕುಟುಂಬವರ್ಗ ಮತ್ತು ಬೆಂಬಲಿಗರಿಗೆ ಸಾಂತ್ವನ ಹೇಳುತ್ತೇನೆ. ಓಂ ಶಾಂತಿ.”
****
(Release ID: 2179207)
Visitor Counter : 11
Read this release in:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam