ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಾ. ಪಿಯರೆ-ಸಿಲ್ವೈನ್ ಫಿಲಿಯೋಜತ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 

Posted On: 31 DEC 2024 1:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡಾ. ಪಿಯರೆ-ಸಿಲ್ವೈನ್ ಫಿಲಿಯೋಜತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಂಸ್ಕೃತ ಅಧ್ಯಯನವನ್ನು, ವಿಶೇಷವಾಗಿ ಸಾಹಿತ್ಯ ಮತ್ತು ವ್ಯಾಕರಣ ಕ್ಷೇತ್ರದಲ್ಲಿ ಜನಪ್ರಿಯಗೊಳಿಸಲು ಅವರು ಮಾಡಿದ ಅನುಕರಣೀಯ ಪ್ರಯತ್ನಗಳಿಗಾಗಿ ಅವರನ್ನು ಸ್ಮರಿಸಲಾಗುವುದು ಎಂದು ಹೇಳಿದ್ದಾರೆ.

ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ: 

''ಡಾ. ಪಿಯರೆ-ಸಿಲ್ವೈನ್ ಫಿಲಿಯೋಜತ್ ಅವರನ್ನು ಸಂಸ್ಕೃತ ಅಧ್ಯಯನವನ್ನು, ವಿಶೇಷವಾಗಿ ಸಾಹಿತ್ಯ ಮತ್ತು ವ್ಯಾಕರಣ ಕ್ಷೇತ್ರದಲ್ಲಿ ಜನಪ್ರಿಯಗೊಳಿಸಲು ಅವರು ಮಾಡಿದ ಅನುಕರಣೀಯ ಪ್ರಯತ್ನಗಳಿಗಾಗಿ ಸ್ಮರಿಸಲಾಗುವುದು. ಅವರು ಭಾರತ ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ಆಳವಾಗಿ ಸಂಪರ್ಕ ಹೊಂದಿದ್ದರು. ಅವರ ನಿಧನದಿಂದ ನೋವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳನ್ನು ಹೇಳುತ್ತೇನೆ."

 

*****

 


(Release ID: 2178884) Visitor Counter : 5