ಗೃಹ ವ್ಯವಹಾರಗಳ ಸಚಿವಾಲಯ
ರಾಜಸ್ಥಾನದಲ್ಲಿ ₹4 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳ ಶಿಲಾನ್ಯಾಸ ಸಮಾರಂಭವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಜೈಪುರದಲ್ಲಿ ಉದ್ಘಾಟಿಸಿದರು
ರಾಜಸ್ಥಾನ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಗೃಹ ಸಚಿವರು ಶಂಕುಸ್ಥಾಪನೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿದರು ಮತ್ತು ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ರಾಜ್ಯಮಟ್ಟದ ಪ್ರದರ್ಶನವನ್ನು ಉದ್ಘಾಟಿಸಿದರು
ಜೀವನದ ಸುಲಭತೆಯನ್ನು ಹೆಚ್ಚಿಸಲು ಮೋದಿ ಹಲವಾರು ಸುಧಾರಣೆಗಳನ್ನು ತಂದಿದ್ದಾರೆ, ಮತ್ತು ಮೂರು ಹೊಸ ಕ್ರಿಮಿನಲ್ ಕಾನೂನುಗಳ ಸಂಪೂರ್ಣ ಅನುಷ್ಠಾನದ ನಂತರ, ನ್ಯಾಯದ ಸುಲಭತೆಯಲ್ಲಿ ಪ್ರಮುಖ ಪರಿವರ್ತನೆಯಾಗಲಿದೆ
ಭಾರತದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಪರಿಚಯವು 21ನೇ ಶತಮಾನದ ಅತಿದೊಡ್ಡ ಸುಧಾರಣೆಯಾಗಿದೆ
ಮೂರು ಹೊಸ ಕಾನೂನುಗಳ ಅನುಷ್ಠಾನದ ನಂತರ, ರಾಜಸ್ಥಾನದಲ್ಲಿ ಶಿಕ್ಷೆಯ ಪ್ರಮಾಣವು 42% ರಿಂದ 60% ಕ್ಕೆ ಏರಿದೆ ಮತ್ತು ಸಂಪೂರ್ಣವಾಗಿ ಜಾರಿಗೆ ಬಂದ ನಂತರ, ಇದು 90% ಕ್ಕೆ ತಲುಪುತ್ತದೆ
ಮೂರು ಹೊಸ ಕಾನೂನುಗಳನ್ನು ಜಾರಿಗೆ ತಂದ ಒಂದು ವರ್ಷದೊಳಗೆ, ದೇಶದಲ್ಲಿ 50% ಆರೋಪಪಟ್ಟಿಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲು ಪ್ರಾರಂಭಿಸಲಾಗಿದೆ ಮತ್ತು ಮುಂದಿನ ವರ್ಷದೊಳಗೆ ಇದು 90% ತಲುಪುವ ನಿರೀಕ್ಷೆಯಿದೆ
ರಾಜಸ್ಥಾನ ಸರ್ಕಾರವು ₹35 ಲಕ್ಷ ಕೋಟಿ ಮೌಲ್ಯದ ಒಪ್ಪಂದದಲ್ಲಿ ₹7 ಲಕ್ಷ ಕೋಟಿ ಮೌಲ್ಯದ ಒಪ್ಪಂದವನ್ನು ಅಲ್ಪಾವಧಿಯಲ್ಲಿಯೇ ಜಾರಿಗೆ ತಂದಿದೆ
ವಿರೋಧ ಪಕ್ಷಗಳ ಸರ್ಕಾರಗಳು ವಿದ್ಯಾರ್ಥಿಗಳ ಸಮವಸ್ತ್ರದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ, ಆದರೆ ಭಜನ್ ಲಾಲ್ ನೇತೃತ್ವದ ರಾಜಸ್ಥಾನ ಸರ್ಕಾರವು 47,000 ವಿದ್ಯಾರ್ಥಿಗಳಿಗೆ ₹260 ಕೋಟಿಯನ್ನು ಡಿಡಿಟಿ ಮೂಲಕ ಕಳುಹಿಸಿದೆ
ರೈತ ಸಹೋದರರಿಗೆ ನನ್ನ ಮನವಿ ಏನೆಂದರೆ "ದೇಶವನ್ನು ಈ ವಲಯಗಳಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಉತ್ಪಾದನೆಯನ್ನು ಹೆಚ್ಚಿಸುವುದು"
ಎನ್ ಎ ಎಫ್ ಇ ಡಿ ಮತ್ತು ಎನ್.ಸಿ.ಸಿ.ಎಫ್ ನಲ್ಲಿ ನೋಂದಾಯಿಸಿದ ನಂತರ, ಭಾರತ ಸರ್ಕಾರವು ರೈತರ ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜ ಬೆಳೆಗಳನ್ನು 100% ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುತ್ತದೆ
Posted On:
13 OCT 2025 4:28PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಜಸ್ಥಾನದ ಜೈಪುರದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ರಾಜ್ಯಮಟ್ಟದ ಪ್ರದರ್ಶನವನ್ನು ಉದ್ಘಾಟಿಸಿದರು ಮತ್ತು ₹4 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳಿಗೆ ಇಂದು ಭೂಮಿಪೂಜೆ ನೆರವೇರಿಸಿದರು. ಇದಲ್ಲದೆ, ಶ್ರೀ ಶಾ ಅವರು ರಾಜಸ್ಥಾನ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಿಲಾನ್ಯಾಸ ಮಾಡಿದರು. ಈ ಸಂದರ್ಭದಲ್ಲಿ, ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಮತ್ತು ಇತರ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇಳೆ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಇಂದಿನ ಕಾರ್ಯಕ್ರಮವು ಅಭಿವೃದ್ಧಿ ಮತ್ತು ನ್ಯಾಯವನ್ನು ಸಂಯೋಜಿಸುವ ಒಂದು ಸಂದರ್ಭವಾಗಿದೆ. ದೇಶದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತರುವ ಮತ್ತು ಸಂವಿಧಾನವು ನೀಡಿರುವ ಹಕ್ಕುಗಳನ್ನು ಜನರಿಗೆ ಸರಳ ರೀತಿಯಲ್ಲಿ ಲಭ್ಯವಾಗುವಂತೆ ಮಾಡುವ ಮೂರು ಹೊಸ ಅಪರಾಧ ಕಾನೂನುಗಳನ್ನು ಪರಿಚಯಿಸಲು ಇಂದು ಇಲ್ಲಿ ಅತ್ಯಾಧುನಿಕ ಪ್ರದರ್ಶನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು. ರಾಜಸ್ಥಾನದ ಅಭಿವೃದ್ಧಿಯನ್ನು ಉತ್ತೇಜಿಸಲು, ರೈಸಿಂಗ್ ರಾಜಸ್ಥಾನ್ ಕಾರ್ಯಕ್ರಮದಲ್ಲಿ ಸಹಿ ಹಾಕಲಾದ ₹35 ಲಕ್ಷ ಕೋಟಿ ಮೌಲ್ಯದ ತಿಳುವಳಿಕೆ ಪತ್ರಗಳಲ್ಲಿ (ಎಂಒಯು) ₹3 ಲಕ್ಷ ಕೋಟಿ ಮೌಲ್ಯದ ಕಾರ್ಯಗತಗೊಂಡಿದೆ ಮತ್ತು ಇಂದು ಹೆಚ್ಚುವರಿಯಾಗಿ ₹4 ಲಕ್ಷ ಕೋಟಿ ಮೌಲ್ಯದ ಒಪ್ಪಂದಕ್ಕೆ ಭೂಮಿಪೂಜೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಅಪರಾಧ ನ್ಯಾಯ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬರೂ ಈ ಪ್ರದರ್ಶನಕ್ಕೆ ಭೇಟಿ ನೀಡಬೇಕು, ಏಕೆಂದರೆ ಇದು ಮುಂಬರುವ ದಿನಗಳಲ್ಲಿ ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಸಂಭವಿಸುವ ಮಹತ್ವದ ಬದಲಾವಣೆಗಳನ್ನು ನಿಖರವಾಗಿ ಪ್ರದರ್ಶಿಸುತ್ತದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಈ ಪ್ರದರ್ಶನದ ಮೂಲಕ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 160 ವರ್ಷಗಳಷ್ಟು ಹಳೆಯ ಕಾನೂನುಗಳನ್ನು ಬದಲಾಯಿಸಿ ಜಾರಿಗೆ ತಂದ ಮೂರು ಹೊಸ ಕಾನೂನುಗಳು, 2027ರ ನಂತರ ದಾಖಲಾಗುವ ಯಾವುದೇ ಎಫ್‌ಐಆರ್ ಗೆ ಮೂರು ವರ್ಷಗಳಲ್ಲಿ ನ್ಯಾಯವನ್ನು ಹೇಗೆ ಖಚಿತಪಡಿಸುತ್ತವೆ ಎಂಬುದನ್ನು ಜನರು ಸ್ವತಃ ಅನುಭವಿಸಿತ್ತಾರೆ ಎಂದು ಅವರು ಹೇಳಿದರು. ಹೊಸ ಕ್ರಿಮಿನಲ್ ಕಾನೂನುಗಳು ದೇಶದ ಜನರಿಗೆ ಸಕಾಲಿಕ, ಸುಲಭವಾಗಿ ಅವಕಾಶ ಲಭ್ಯವಾಗಲಿದೆ ಮತ್ತು ಸರಳೀಕೃತ ನ್ಯಾಯವನ್ನು ನೀಡುತ್ತವೆ ಎಂದು ಶ್ರೀ ಶಾ ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ಮೋದಿ ಸುಲಭ ಜೀವನಕ್ಕಾಗಿ ದೇಶದಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದಾರೆ ಮತ್ತು ಈ ಹೊಸ ಕಾನೂನುಗಳ ಅನುಷ್ಠಾನದೊಂದಿಗೆ, ಸುಲಭ ನ್ಯಾಯದಲ್ಲಿಯೂ ಗಮನಾರ್ಹ ಪರಿವರ್ತನೆಯಾಗಲಿದೆ ಎಂದು ಅವರು ಹೇಳಿದರು.
ಮೂರು ಹೊಸ ಕಾನೂನುಗಳ ಮೂಲಕ, ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಶಿಕ್ಷೆಗಿಂತ ನ್ಯಾಯದ ಮೇಲೆ ಕೇಂದ್ರೀಕರಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಕಾನೂನುಗಳನ್ನು ದೇಶಾದ್ಯಂತ ನಿಖರವಾಗಿ ಜಾರಿಗೆ ತರಲಾಗಿದೆ ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಅವುಗಳ ಅನುಷ್ಠಾನ ಮತ್ತು ಅನುಸರಣೆಗಾಗಿ ಮಾರ್ಗದರ್ಶನ ನೀಡುತ್ತಿದೆ ಎಂದು ಅವರು ಹೇಳಿದರು. ಬ್ರಿಟಿಷರು ಮಾಡಿದ ಕಾನೂನುಗಳನ್ನು ಬದಲಾಯಿಸುವುದು, ಅವರ ಸಂಸತ್ತಿನಲ್ಲಿ ಅಂಗೀಕರಿಸುವುದು ಮತ್ತು ಬ್ರಿಟಿಷ್ ಆಡಳಿತವನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಕಾನೂನುಗಳನ್ನು ಭಾರತೀಯರು ಮಾಡಿದ ಕಾನೂನುಗಳೊಂದಿಗೆ, ಭಾರತೀಯ ಸಂಸತ್ತಿನಲ್ಲಿ ಅಂಗೀಕರಿಸುವುದು ಮತ್ತು ಭಾರತೀಯರಿಗೆ ನ್ಯಾಯವನ್ನು ತಲುಪಿಸುವ ಗುರಿಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು.
ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳಿಗೆ ಪ್ರತ್ಯೇಕ ಅಧ್ಯಾಯವನ್ನು ಸೇರಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಇ-ಎಫ್‌ಐಆರ್ ಮತ್ತು ಶೂನ್ಯ ಎಫ್‌ಐಆರ್ ಗೆ ಅವಕಾಶಗಳನ್ನು ಮಾಡಲಾಗಿದೆ, ಎಲ್ಲಾ ವಶಪಡಿಸಿಕೊಳ್ಳುವಿಕೆಗಳಿಗೆ ವೀಡಿಯೊಗ್ರಫಿ ಕಡ್ಡಾಯಗೊಳಿಸಲಾಗಿದೆ ಮತ್ತು ಏಳು ವರ್ಷಗಳಿಗಿಂತ ಹೆಚ್ಚು ಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆಯನ್ನು ಕಡ್ಡಾಯಗೊಳಿಸಲಾಗಿದೆ. ರಾಜಸ್ಥಾನದಲ್ಲಿ ಶಿಕ್ಷೆಯ ಪ್ರಮಾಣವು ಶೇಕಡಾ 42 ರಷ್ಟಿದ್ದು, ಈ ಕಾನೂನುಗಳನ್ನು ಜಾರಿಗೆ ತಂದ ಕೇವಲ ಒಂದು ವರ್ಷದೊಳಗೆ ಇದು ಶೇಕಡಾ 60ಕ್ಕೆ ಏರಿದೆ ಎಂದು ಅವರು ಹೇಳಿದರು. ಈ ಕಾನೂನುಗಳನ್ನು ಸಂಪೂರ್ಣವಾಗಿ ಜಾರಿಗೆ ತಂದ ನಂತರ, ಈ ಪ್ರಮಾಣವು ಶೇಕಡಾ 60 ರಿಂದ ಶೇಕಡಾ 90ಕ್ಕೆ ಏರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಕಾನೂನುಗಳ ಸುಗಮ ಅನುಷ್ಠಾನಕ್ಕಾಗಿ, 2020ರಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು (ಎನ್ ಎಫ್ ಎಸ್ ಯು) ಸ್ಥಾಪಿಸಲಾಯಿತು ಮತ್ತು ವೈಜ್ಞಾನಿಕ ತನಿಖೆಯಲ್ಲಿ ತರಬೇತಿ ಪಡೆದ ಯುವಕರ ಹೊಸ ಕಾರ್ಯಪಡೆಯನ್ನು ರಚಿಸಲು ದೇಶಾದ್ಯಂತ ಸಂಯೋಜಿತ ಕಾಲೇಜುಗಳನ್ನು ತೆರೆಯಲಾಗುತ್ತಿದೆ ಎಂದು ಶ್ರೀ ಶಾ ಅವರು ಹೇಳಿದರು.
ಹೊಸ ಕ್ರಿಮಿನಲ್ ಕಾನೂನುಗಳಲ್ಲಿ, ಭಯೋತ್ಪಾದನೆ, ಗುಂಪು ಹತ್ಯೆ, ಸಂಘಟಿತ ಅಪರಾಧ ಮತ್ತು ಡಿಜಿಟಲ್ ಅಪರಾಧಗಳನ್ನು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ವ್ಯಾಖ್ಯಾನಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಕಾನೂನುಗಳು 29ಕ್ಕೂ ಹೆಚ್ಚು ವಿಭಿನ್ನ ನಿಬಂಧನೆಗಳಲ್ಲಿ ಸಮಯ ಮಿತಿಗಳನ್ನು ನಿರ್ದಿಷ್ಟಪಡಿಸುತ್ತವೆ ಎಂದು ಅವರು ಹೇಳಿದರು. ದೇಶದಿಂದ ಪರಾರಿಯಾಗಿರುವ ಅಪರಾಧಿಗಳಿಗೆ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಗೈರುಹಾಜರಿಯಲ್ಲಿ ವಿಚಾರಣೆಗೆ ಅವಕಾಶವನ್ನು ಸಹ ಪರಿಚಯಿಸಲಾಗಿದೆ ಎಂದು ಅವರು ಹೇಳಿದರು. ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಪರಿಚಯಿಸುವುದನ್ನು ಭಾರತದಲ್ಲಿ 21ನೇ ಶತಮಾನದ ಅತಿದೊಡ್ಡ ಸುಧಾರಣೆ ಎಂದು ಶ್ರೀ ಶಾ ಅವರು ಬಣ್ಣಿಸಿದರು. ಈ ಕಾನೂನುಗಳ ಸಂಪೂರ್ಣ ಅನುಷ್ಠಾನದ ನಂತರ, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದ ಅತ್ಯಂತ ಆಧುನಿಕ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಾಗಲಿದೆ ಎಂದು ಅವರು ಹೇಳಿದರು. ಈ ಕಾನೂನುಗಳ ಜಾರಿಯೊಂದಿಗೆ, ಸುಮಾರು 50 ಪ್ರತಿಶತದಷ್ಟು ಆರೋಪಪಟ್ಟಿಗಳನ್ನು ಈಗ ಸಮಯಕ್ಕೆ ಸರಿಯಾಗಿ ಸಲ್ಲಿಸಲಾಗುತ್ತಿದೆ ಮತ್ತು ಮುಂದಿನ ವರ್ಷ ಈ ದರವು 90 ಪ್ರತಿಶತವನ್ನು ತಲುಪುವ ನಿರೀಕ್ಷೆಯಿದೆ. ಲಕ್ಷಾಂತರ ಪೊಲೀಸ್ ಅಧಿಕಾರಿಗಳು, ಸಾವಿರಾರು ನ್ಯಾಯಾಂಗ ಅಧಿಕಾರಿಗಳು, ಎಫ್‌ಎಸ್‌ಎಲ್ (ವಿಧಿವಿಜ್ಞಾನ ಪ್ರಯೋಗಾಲಯ) ಅಧಿಕಾರಿಗಳು ಮತ್ತು ಜೈಲು ಸಿಬ್ಬಂದಿಯ ತರಬೇತಿಯೂ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.
ಇಂದು ₹4 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳಿಗೆ ಶಿಲಾನ್ಯಾಸ ಸಮಾರಂಭವನ್ನು ನಡೆಸಲಾಯಿತು ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ರಾಜಸ್ಥಾನದ ಶ್ರೀ ಭಜನ್ ಲಾಲ್ ಶರ್ಮಾ ಅವರ ನೇತೃತ್ವದ ಸರ್ಕಾರವು ಸಹಿ ಮಾಡಿದ ₹35 ಲಕ್ಷ ಕೋಟಿ ಮೌಲ್ಯದ ಒಪ್ಪಂದದಲ್ಲಿ ₹7 ಲಕ್ಷ ಕೋಟಿ ಮೌಲ್ಯದ ಒಪ್ಪಂದವನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ ಎಂದು ಅವರು ಹೇಳಿದರು. ಈ ಸಾಧನೆಯ ಮೂಲಕ, ವಿವಿಧ ರೀತಿಯ ಯೋಜನೆಗಳು ರಾಜಸ್ಥಾನದ ಯುವಕರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು. ಇಂದು ₹9,315 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ವಿರೋಧ ಪಕ್ಷಗಳ ಸರ್ಕಾರಗಳು ವಿದ್ಯಾರ್ಥಿಗಳ ಸಮವಸ್ತ್ರದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಶ್ರೀ ಶಾ ಎ ಹೇಳಿದರು, ಆದರೆ ಶ್ರೀ ಭಜನ್ ಲಾಲ್ ನೇತೃತ್ವದ ರಾಜಸ್ಥಾನ ಸರ್ಕಾರವು 47,000 ವಿದ್ಯಾರ್ಥಿಗಳಿಗೆ ₹260 ಕೋಟಿಗಳನ್ನು ಡಿಬಿಟಿ ಮೂಲಕ ನೇರವಾಗಿ ಹಣ ಕಳುಹಿಸಿದೆ. ಹಾಲು ಉತ್ಪಾದನೆಯನ್ನು ಹೆಚ್ಚಿಸಲು ರಾಜಸ್ಥಾನದಲ್ಲಿ 5 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರಿಗೆ ₹364 ಕೋಟಿ ಸಬ್ಸಿಡಿ ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ಮಾಹೆಯಾನ ಉಚಿತ 150 ವಿದ್ಯುತ್ ಘಟಕಗಳ ಯೋಜನೆಗೆ ನೋಂದಣಿಯನ್ನು ಸಹ ಇಂದು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಇದರ ಜೊತೆಗೆ, 56 ಎಫ್‌ಎಸ್‌ಎಲ್ (ವಿಧಿವಿಜ್ಞಾನ ಪ್ರಯೋಗಾಲಯ) ವಾಹನಗಳು ಮತ್ತು ಹಲವಾರು ಪೊಲೀಸ್ ವಾಹನಗಳ ಉದ್ಘಾಟನೆಯೂ ನಡೆಯಿತು.
ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ಎನ್ ಎ ಎಫ್ ಇ ಡಿ) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್.ಸಿ.ಸಿ.ಎಫ್) ದಲ್ಲಿ ನೋಂದಾಯಿಸಿಕೊಂಡಿರುವ ರೈತರು ಉತ್ಪಾದಿಸುವ ತೊಗರಿ, ಮಸೂರ್ ಮತ್ತು ಉದ್ದಿನ ಬೇಳೆಕಾಳುಗಳಲ್ಲಿ ಶೇ. 100 ರಷ್ಟು ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ)ಯಲ್ಲಿ ಖರೀದಿಸಲಾಗುವುದು ಎಂದು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ರಾಜಸ್ಥಾನದಲ್ಲಿ ಈಗಾಗಲೇ ಉದ್ದಿನ ಬೇಳೆಯನ್ನು ಬೆಳೆಯಲಾಗುತ್ತಿದ್ದು, ಅಲ್ಲಿಯೂ ತೊಗರಿ ಬೆಳೆಯಬಹುದು ಎಂದು ಅವರು ಹೇಳಿದರು, ರಾಜ್ಯದ ರೈತರು ನಫೀಡ್ ಮತ್ತು ಎನ್.ಸಿ.ಸಿ.ಎಫ್ ನಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರೋತ್ಸಾಹಿಸಲಾಯಿತು, ನಂತರ ಭಾರತ ಸರ್ಕಾರವು ನೋಂದಾಯಿತ ರೈತರ ಸಂಪೂರ್ಣ ಬೇಳೆಕಾಳು ಉತ್ಪಾದನೆಯನ್ನು ಎಂ ಎಸ್ ಪಿ ದರದಲ್ಲಿ ಸಂಗ್ರಹಿಸುತ್ತದೆ. ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು, ರೈತರು ತಮ್ಮ ಉತ್ಪಾದನೆಯನ್ನು ಹೆಚ್ಚಿಸಬೇಕಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
*****
(Release ID: 2178684)
Visitor Counter : 5