ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಭಾರತದ ಅತಿದೊಡ್ಡ ಲೈವ್ ಸ್ಕೂಲ್ ಇನ್ನೋವೇಶನ್ ಚಾಲೆಂಜ್‌ನಲ್ಲಿ3 ಲಕ್ಷಕ್ಕೂ ಅಧಿಕ ಶಾಲೆಗಳು ಭಾಗವಹಿಸಿದ್ದು ಐತಿಹಾಸಿಕ ಕ್ಷಣ
ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಭಾರತದ ಅತಿದೊಡ್ಡ ಶಾಲಾ ನಾವೀನ್ಯತೆ ಆಂದೋಲನ - ವಿಕಸಿತ ಭಾರತ್ ಬಿಲ್ಡಥಾನ್ 2025ಅನ್ನು ಉದ್ಘಾಟಿಸಿದರು
ನಮ್ಮ ಪ್ರತಿಭಾವಂತ ಶಾಲಾ ವಿದ್ಯಾರ್ಥಿಗಳ ಹೆಗಲ ಮೇಲೆ ವಿಕಸಿತ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲಾಗುವುದು - ಶ್ರೀ ಧರ್ಮೇಂದ್ರ ಪ್ರಧಾನ್
Posted On:
13 OCT 2025 5:07PM by PIB Bengaluru
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ನವದೆಹಲಿಯಲ್ಲಿ ವಿಕಸಿತ ಭಾರತ್ ಬಿಲ್ಡಥಾನ್ (ವಿ.ಬಿ.ಬಿ) 2025ಅನ್ನು ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳಿಗಾಗಿ ಭಾರತದ ಅತಿದೊಡ್ಡ ಹೊಂದಾಣಿಕೆಯ ನಾವೀನ್ಯತೆಯ ಹ್ಯಾಕಥಾನ್ ವಿಕಸಿತ ಭಾರತ್ ಬಿಲ್ಡಥಾನ್ 2025ರಲ್ಲಿ3 ಲಕ್ಷಕ್ಕೂ ಹೆಚ್ಚು ಶಾಲೆಗಳು ಏಕಕಾಲದಲ್ಲಿ ಭಾಗವಹಿಸಿದ್ದವು. ಉದ್ಘಾಟನಾ ಅಧಿವೇಶನದಲ್ಲಿ ಸಚಿವರು ಒಡಿಶಾದ ಭುವನೇಶ್ವರದ ಖೋರ್ಡಾದಲ್ಲಿರುವ ಪಿ.ಎಂ. ಶ್ರೀ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಮೆಗಾ ಸ್ಕೂಲ್ ಇನ್ನೋವೇಶನ್ ಉಪಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಕ್ಕಾಗಿ ಭಾರತದಾದ್ಯಂತದ 3 ಲಕ್ಷಕ್ಕೂ ಅಧಿಕ ಶಾಲೆಗಳು ಮತ್ತು ಭಾಗವಹಿಸುವ ವಿದ್ಯಾರ್ಥಿಗಳನ್ನು ಶ್ರೀ ಪ್ರಧಾನ್ ಅಭಿನಂದಿಸಿದರು. ಇಲ್ಲಿಂದ ಮೊಳಕೆಯೊಡೆದ ನವೀನ ಆಲೋಚನೆಗಳು ಹೊಸ ಜಾಗತಿಕ ಮಾದರಿಗಳನ್ನು ರಚಿಸಲು ಮತ್ತು ದೇಶೀಯ ಮತ್ತು ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ದಾರಿ ಮಾಡಿಕೊಡುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಪ್ರತಿಭಾವಂತ ಶಾಲಾ ವಿದ್ಯಾರ್ಥಿಗಳ ಹೆಗಲ ಮೇಲೆ ವಿಕಸಿತ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲಾಗುವುದು ಎಂದು ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವು ವಿಬಿಬಿಯಂತಹ ಪರಿವರ್ತನಾತ್ಮಕ ಪ್ರಯತ್ನಗಳ ಮೂಲಕ ಸಾಕಾರಗೊಳ್ಳಲಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳು ಸಕ್ರಿಯ ಪಾತ್ರ ವಹಿಸಬೇಕು ಎಂದು ಒತ್ತಾಯಿಸಿದರು.

ಶಿಕ್ಷ ಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಅವರು ತಮ್ಮ ಭಾಷಣದಲ್ಲಿ, ಈ ಉಪಕ್ರಮದಲ್ಲಿ ದೇಶಾದ್ಯಂತದ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮತ್ತು ಪ್ರಯತ್ನಗಳನ್ನು ಶ್ಲಾಘಿಸಿದರು. ಈ ರೀತಿಯ ಆಂದೋಲನವು ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ವಿದ್ಯಾರ್ಥಿಗಳ ನವೀನ ವಿಧಾನವನ್ನು ಬಲಪಡಿಸುತ್ತದೆ ಎಂದು ಶ್ರೀ ಕುಮಾರ್ ಪ್ರತಿಪಾದಿಸಿದರು. ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಶ್ರೀ ಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದರು.
ಅಟಲ್ ಇನ್ನೋವೇಶನ್ ಮಿಷನ್‌ನ ಮಿಷನ್ ನಿರ್ದೇಶಕ ಶ್ರೀ ದೀಪಕ್ ಬಾಗ್ಲಾಅವರು ವಿ.ಬಿ.ಬಿಯ ಹೆಚ್ಚುತ್ತಿರುವ ಮಹತ್ವವನ್ನು ಒತ್ತಿಹೇಳಿದರು ಮತ್ತು ಬಿಲ್ಡಥಾನ್ ನಾವೀನ್ಯತೆಯನ್ನು ಜನಾಂದೋಲನವನ್ನಾಗಿ ಮಾಡುತ್ತದೆ, ದೂರದ ಹಳ್ಳಿಗಳಲ್ಲಿನ ಶಾಲೆಗಳನ್ನು ಜನನಿಬಿಡ ಮಹಾನಗರಗಳಿಗೆ ಸಂಪರ್ಕಿಸುತ್ತದೆ ಎಂದು ಹೇಳಿದರು.
ಶ್ರೀ ಧರ್ಮೇಂದ್ರ ಪ್ರಧಾನ್ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲು ದೆಹಲಿ ಪಬ್ಲಿಕ್ ಸ್ಕೂಲ್, ಮಥುರಾ ರಸ್ತೆ ಮತ್ತು ದೆಹಲಿ ಕಂಟೋನ್ಮೆಂಟ್‌ನ ಪಿ.ಎಂ. ಶ್ರೀ ಕೇಂದ್ರೀಯ ವಿದ್ಯಾಲಯ ಸಂಖ್ಯೆ 2ಕ್ಕೆ ಭೇಟಿ ನೀಡಿದರು. ಶ್ರೀ ಪ್ರಧಾನ್ ಅವರು ಹಲವಾರು ನವೀನ ವಿದ್ಯಾರ್ಥಿ ಯೋಜನೆಗಳನ್ನು ಗಮನಿಸಿದರು ಮತ್ತು ಅವರ ಕಲಿಕೆಯ ಪ್ರಕ್ರಿಯೆಗಳ ಒಳನೋಟಗಳನ್ನು ಪಡೆದರು. ಅವರ ಸೃಜನಶೀಲತೆ ಮತ್ತು ಉತ್ಸಾಹವನ್ನು ಶ್ಲಾಘಿಸಿದ ಅವರು, ಜಿಜ್ಞಾಸೆಯಿಂದ ಇರುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು ಮತ್ತು ಆತ್ಮನಿರ್ಭರ ಭಾರತದ ಗುರಿಯತ್ತ ಸಕ್ರಿಯವಾಗಿ ಕೊಡುಗೆ ನೀಡುವ ಅವರ ಅಸಾಧಾರಣ ಸೃಜನಶೀಲತೆಯನ್ನು ಶ್ಲಾಘಿಸಿದರು.


ಉದ್ಘಾಟನಾ ಅಧಿವೇಶನದ ನಂತರ 120 ನಿಮಿಷಗಳ ಲೈವ್(ನೇರ) ಇನ್ನೋವೇಶನ್ ಚಾಲೆಂಜ್ ನಡೆಯಿತು. 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಎರಡು ಗಂಟೆಗಳ ಸುದೀರ್ಘ ಲೈವ್ ಟಿಂಕರಿಂಗ್ ಅಧಿವೇಶನದಲ್ಲಿ ಭಾಗವಹಿಸಿದ್ದರು, ಇದರಲ್ಲಿ6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಆತ್ಮನಿರ್ಭರ ಭಾರತ್, ಸ್ವದೇಶಿ, ವೋಕಲ್ ಫಾರ್ ಲೋಕಲ್ ಮತ್ತು ಸಮೃದ್ಧಿ ಎಂಬ ನಾಲ್ಕು ವಿಷಯಗಳ ಸುತ್ತ ಮೂಲಮಾದರಿಗಳನ್ನು ರೂಪಿಸಲು 3-5 ರ ತಂಡಗಳಲ್ಲಿಕೆಲಸ ಮಾಡಿದರು. ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯೆಂದರೆ ಸ್ಕೂಲ್ ಸ್ಪಾಟ್ ಲೈಟ್‌ಗಳು, ಅಲ್ಲಿದೂರದ ಪ್ರದೇಶಗಳು, ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಗುಡ್ಡಗಾಡು ರಾಜ್ಯಗಳು ಮತ್ತು ಗಡಿ ಪ್ರದೇಶಗಳಿಂದ 150ಕ್ಕೂ ಹೆಚ್ಚು ಶಾಲೆಗಳು ತಮ್ಮ ಪ್ರಗತಿ ಮತ್ತು ಅನುಭವಗಳನ್ನು ಹಂಚಿಕೊಳ್ಳಲು ನೇರವಾಗಿ ಸಂಪರ್ಕ ಹೊಂದಿದ್ದವು.
ನೋಂದಾಯಿಸಲಾದ ಶಾಲೆಗಳ ವಿವರಗಳು (ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು)
1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 171
2 ಆಂಧ್ರಪ್ರದೇಶ 3980
3 ಅರುಣಾಚಲ ಪ್ರದೇಶ 206
4 ಅಸ್ಸಾಂ 15656
5 ಬಿಹಾರ 15732
6 ಚಂಡೀಗಢ 269
7 ಛತ್ತೀಸ್ ಗಢ 8363
8 ದೆಹಲಿ 4033
9 ಗೋವಾ 194
10 ಗುಜರಾತ್ 20017
11 ಹರಿಯಾಣ 11567
12 ಹಿಮಾಚಲ ಪ್ರದೇಶ 4575
13 ಜಮ್ಮು ಮತ್ತು ಕಾಶ್ಮೀರ 4754
14 ಜಾರ್ಖಂಡ್ 9779
15 ಕರ್ನಾಟಕ 10248
16 ಕೇರಳ 4640
17 ಲಡಾಖ್ 358
18 ಲಕ್ಷ ದ್ವೀಪ 9
19 ಮಧ್ಯಪ್ರದೇಶ 18129
20 ಮಹಾರಾಷ್ಟ್ರ 41198
21 ಮಣಿಪುರ 896
22 ಮೇಘಾಲಯ 544
23 ಮಿಜೋರಾಂ 835
24 ನಾಗಾಲ್ಯಾಂಡ್ 926
25 ಒಡಿಶಾ 12344
26 ಪುದುಚೇರಿ 149
27 ಪಂಜಾಬ್ 5725
28 ರಾಜಸ್ಥಾನ 6310
29 ಸಿಕ್ಕಿಂ 338
30 ತಮಿಳುನಾಡು 16370
31 ತೆಲಂಗಾಣ 2724
32 ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು 235
33 ತ್ರಿಪುರಾ 2299
34 ಉತ್ತರ ಪ್ರದೇಶ 78206
35 ಉತ್ತರಾಖಂಡ 2473
36 ಪಶ್ಚಿಮ ಬಂಗಾಳ 1216
****
(Release ID: 2178629)
Visitor Counter : 6