ಕೃಷಿ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ’ ಮತ್ತು ‘ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಅಭಿಯಾನ’ಕ್ಕೆ ಚಾಲನೆ ನೀಡಿದರು


ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಎಫ್‌.ಪಿ.ಒಗಳು ಮತ್ತು ಗ್ರಾಮೀಣ ನಾವೀನ್ಯತೆ ಕ್ಷೇತ್ರಗಳಿಗೆ 42,000 ಕೋಟಿ ರೂ.ಗೂ ಹೆಚ್ಚು ಐತಿಹಾಸಿಕ ಹೂಡಿಕೆ ಘೋಷಣೆ

ಕೃಷಿ ಮೂಲಸೌಕರ್ಯ ನಿಧಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ವಲಯಗಳ ಅಡಿಯಲ್ಲಿ1,100 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು 42,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭೂತಪೂರ್ವ ಉಪಕ್ರಮಗಳಿಗಾಗಿ ರೈತರ ಪರವಾಗಿ ಪ್ರಧಾನಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ

ದೆಹಲಿಯ ಪೂಸಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ರಾಜ್ಯ ಸಚಿವರಾದ ಶ್ರೀ ಭಗೀರಥ್‌ ಚೌಧರಿ ಅವರು ಪ್ರಧಾನಮಂತ್ರಿ ಅವರೊಂದಿಗೆ ಉಪಸ್ಥಿತರಿದ್ದರು; ಕೇಂದ್ರ ಸಚಿವರಾದ ಶ್ರೀ ರಾಜೀವ್‌ ರಂಜನ್‌ ಸಿಂಗ್‌ ಮತ್ತು ಶ್ರೀ ರಾಮನಾಥ್‌ ಠಾಕೂರ್‌ ಅವರೊಂದಿಗೆ ಹಲವಾರು ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು ಮತ್ತು ಲಕ್ಷಾಂತರ ರೈತರು ವಿವಿಧ ಸ್ಥಳಗಳಿಂದ ವರ್ಚುವಲ್‌ ಮೂಲಕ ಭಾಗವಹಿಸಿದ್ದರು

ಎ.ಐ.ಎಫ್‌, ಪಶುಸಂಗೋಪನೆ ಮತ್ತು ಮೀನುಗಾರಿಕೆ ವಲಯದ ಫಲಾನುಭವಿಗಳು ಮತ್ತು ದ್ವಿದಳ ಧಾನ್ಯಗಳ ಬೆಳೆಗಾರರೊಂದಿಗೆ ನೇರವಾಗಿ ಸಂವಾದ ನಡೆಸಿದ ಪ್ರಧಾನಮಂತ್ರಿ

ಲೋಕ ನಾಯಕ ಜಯಪ್ರಕಾಶ್‌ ನಾರಾಯಣ್‌ ಮತ್ತು ನಾನಾಜಿ ದೇಶಮುಖ್‌ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

ಕೃಷಿ ಉತ್ಕೃಷ್ಟತೆಗೆ ಕೊಡುಗೆ ನೀಡುತ್ತಿರುವ ರೈತರು, ಎಫ್‌.ಪಿ.ಒಗಳು, ಸಹಕಾರಿ ಸಂಸ್ಥೆಗಳು ಮತ್ತು ನಾವೀನ್ಯಕಾರರನ್ನು ಸನ್ಮಾನಿಸಿದ ಪ್ರಧಾನಮಂತ್ರಿ

ಕೃಷಿ ಯಂತ್ರೋಪಕರಣಗಳ ಮೇಲಿನ ಜಿ.ಎಸ್‌.ಟಿ ಇಳಿಕೆ ಮತ್ತು ಪ್ರಮುಖ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ ಕೇಂದ್ರ ಸಚಿವರಾದ ಶಿವರಾಜ್‌ ಸಿಂಗ್‌ ಚೌಹಾಣ್‌

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಹೆಚ್ಚುತ್ತಿರುವ ರಸಗೊಬ್ಬರ ಬೆಲೆಗಳು ರೈತರ ಮೇಲೆ ಹೊರೆಯಾಗದಂತೆ ಸರ್ಕಾರ ನೋಡಿಕೊಂಡಿದೆ ಎಂದು ಹೇಳಿದ ಶಿವರಾಜ್‌ ಸಿಂಗ್‌ ಚೌಹಾಣ್‌.

ಸಾಂಸ್ಥಿಕ ಸಾಲ, ಬೆಳೆ ವಿಮೆ ಮತ್ತು ಇತರ ಆರ್ಥಿಕ ನೆರವು ಯೋಜನೆಗಳು ರೈತರನ್ನು ಸಬಲೀಕರಣಗೊಳಿಸುತ್ತಿವೆ: ಕೇಂದ್ರ ಕೃಷಿ ಸಚಿವರು

‘ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಮಿಷನ್‌’ ಮತ್ತು ‘ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ’ ರೈತರ ಸಮೃದ್ಧಿ ಮತ್ತು ಕೃಷಿ ಪರಿವರ್ತನೆಯ ಐತಿಹಾಸಿಕ ಉಪಕ್ರಮಗಳು: ಶ್ರೀ ಶಿವರಾಜ್‌ ಸಿಂಗ್‌

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಗ್ರಾಮೀಣ ಮತ್ತು ಕೃಷಿ ಕಲ್ಯಾಣವನ್ನು ಮುನ್ನಡೆಸುತ್ತಲೇ ಇದೆ: ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌

ಸ್ವದೇಶಿ ಮತ್ತು ಸ್ವಾವಲಂಬನೆಯ ಮೂಲಕ ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸುವ ಸಾಮೂಹಿಕ

Posted On: 11 OCT 2025 5:51PM by PIB Bengaluru

ದೆಹಲಿಯ ಪೂಸಾದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿಪ್ರ ಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಕೃಷಿ ಮತ್ತು ಪೂರಕ ವಲಯಗಳ ಸರಣಿ ಪರಿವರ್ತನಾತ್ಮಕ ಉಪಕ್ರಮಗಳನ್ನು ಅನಾವರಣಗೊಳಿಸಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಸಹಾಯಕ ಸಚಿವರಾದ ಶ್ರೀ ಭಗೀರಥ್‌ ಚೌಧರಿ ಅವರು ಪ್ರಧಾನಮಂತ್ರಿ ಅವರೊಂದಿಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದ್ವಿದಳ ಧಾನ್ಯಗಳ ಕೃಷಿಯಲ್ಲಿತೊಡಗಿರುವ ರೈತರ ಗುಂಪುಗಳು, ಕೃಷಿ ಮೂಲಸೌಕರ್ಯ ನಿಧಿ (ಎ.ಐ.ಎಫ್‌), ಪಶುಸಂಗೋಪನೆ ಮತ್ತು ಮೀನುಗಾರಿಕೆಯೊಂದಿಗೆ ನೇರವಾಗಿ ಸಂವಾದ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅವರ ಸವಾಲುಗಳು ಮತ್ತು ಆವಿಷ್ಕಾರಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಮತ್ತು ನಾನಾಜಿ ದೇಶಮುಖ್‌ ಅವರಂತಹ ಶ್ರೇಷ್ಠ ಸಮಾಜ ಸುಧಾರಕರಿಗೆ ಅವರ ಜನ್ಮ ವಾರ್ಷಿಕೋತ್ಸವದಂದು ಗೌರವ ನಮನ ಸಲ್ಲಿಸಲಾಯಿತು.

‘ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ’ ಮತ್ತು ‘ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಮಿಷನ್‌’ ಪ್ರಾರಂಭವು ಭಾರತದ ಕೃಷಿ ಪ್ರಯಾಣದಲ್ಲಿಒಂದು ಪ್ರಮುಖ ಮೈಲಿಗಲ್ಲಾಗಿದೆ. ‘ಪಿಎಂ ಧನ-ಧಾನ್ಯ ಕೃಷಿ ಯೋಜನೆ’ 11 ಸಚಿವಾಲಯಗಳಾದ್ಯಂತ 36 ಉಪ-ಯೋಜನೆಗಳನ್ನು ಒಳಗೊಂಡ ಸಂಘಟಿತ ಉಪಕ್ರಮವಾಗಿದ್ದು, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಕೃಷಿ ಪ್ರಗತಿಯನ್ನು ವೇಗಗೊಳಿಸಲು ವಿನ್ಯಾಸಗೊಳಿಸಲಾಗಿದೆ. ‘ದ್ವಿದಳ ಧಾನ್ಯಗಳಲ್ಲಿಸ್ವಾವಲಂಬನೆ ಮಿಷನ್‌’ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ, ಹೆಚ್ಚುತ್ತಿರುವ ದೇಶೀಯ ಬೇಡಿಕೆಯ ಹಿನ್ನೆಲೆಯಲ್ಲಿ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಕೃಷಿ ಮೂಲಸೌಕರ್ಯ ನಿಧಿ (ಎ.ಐ.ಎಫ್‌), ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ವಲಯಗಳ ಅಡಿಯಲ್ಲಿ1,100 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಒಟ್ಟಾರೆಯಾಗಿ, ಈ ಉಪಕ್ರಮಗಳು 42,000 ಕೋಟಿ ರೂಪಾಯಿಗಿಂತ ಹೆಚ್ಚಿನ ಐತಿಹಾಸಿಕ ಹೂಡಿಕೆಯನ್ನು ಪ್ರತಿನಿಧಿಸುತ್ತವೆ. ಇದು ಗ್ರಾಮೀಣ ಭಾರತದಾದ್ಯಂತ ಆಧುನಿಕ ಕೋಲ್ಡ್‌ ಸ್ಟೋರೇಜ್‌ ಸೌಲಭ್ಯಗಳು, ಸಂಸ್ಕರಣಾ ಘಟಕಗಳು ಮತ್ತು ಗೋದಾಮುಗಳ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ.

ರೈತರು ಮತ್ತು ಎಫ್‌.ಪಿ.ಒಗಳ ಮಾನ್ಯತೆ

ಕೃಷಿ ಅಭಿವೃದ್ಧಿಗೆ ಅಸಾಧಾರಣ ನಾವಿನ್ಯತೆ ಮತ್ತು ಕೊಡುಗೆಯನ್ನು ಪ್ರದರ್ಶಿಸಿದ ರೈತರು, ರೈತ ಉತ್ಪಾದಕ ಸಂಸ್ಥೆಗಳು (ಎಫ್‌.ಪಿ.ಓ.ಗಳು), ಸಹಕಾರಿ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಪ್ರಧಾನಮಂತ್ರಿ ಅವರು ಸನ್ಮಾನಿಸಿದರು. ಅವರ ಸಾಧನೆಗಳನ್ನು ಭಾರತದ ಬೆಳೆಯುತ್ತಿರುವ ಗ್ರಾಮೀಣ ಉದ್ಯಮ ಪರಿಸರ ವ್ಯವಸ್ಥೆಯ ಅನುಕರಣೀಯ ಮಾದರಿಗಳೆಂದು ಗುರುತಿಸಲಾಗಿದೆ.

ರಸಗೊಬ್ಬರ ಸಬ್ಸಿಡಿ ಮತ್ತು ಜಿ.ಎಸ್‌.ಟಿ ಪರಿಹಾರ

ಪ್ರಧಾನಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಾಗತಿಕ ರಸಗೊಬ್ಬರ ಬೆಲೆಗಳ ಏರಿಕೆಯು ಭಾರತೀಯ ರೈತರ ಮೇಲೆ ಪರಿಣಾಮ ಬೀರದಂತೆ ಸರ್ಕಾರ ಖಚಿತಪಡಿಸಿದೆ ಎಂದು ಹೇಳಿದರು. ಸರ್ಕಾರದ ಬೃಹತ್‌ ಸಬ್ಸಿಡಿಗಳಿಂದಾಗಿ ಒಂದು ಚೀಲ ಯೂರಿಯಾ ಕೇವಲ 266 ರೂ.ಗೆ ಮತ್ತು ಡಿ.ಎ.ಪಿ 1,350 ರೂ.ಗೆ ಲಭ್ಯವಿದೆ ಎಂದು ಅವರು ಹೇಳಿದರು. ಕೃಷಿ ಯಂತ್ರೋಪಕರಣಗಳ ಮೇಲಿನ ಜಿ.ಎಸ್‌.ಟಿ ಕಡಿತವು ರಾಷ್ಟ್ರವ್ಯಾಪಿ ರೈತರಿಗೆ ಆಧುನಿಕ ಉಪಕರಣಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಕನಿಷ್ಠ ಬೆಂಬಲ ಬೆಲೆಯಲ್ಲಿಐತಿಹಾಸಿಕ ಹೆಚ್ಚಳ

ಕೇಂದ್ರ ಸರ್ಕಾರವು ಪ್ರಮುಖ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂ.ಎಸ್‌.ಪಿ) ಗಮನಾರ್ಹವಾಗಿ ಹೆಚ್ಚಿಸಿದೆ ಎಂದು ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಒತ್ತಿ ಹೇಳಿದರು: ಗೋಧಿಗೆ ಕ್ವಿಂಟಲ್‌ಗೆ 160 ರೂ., ಕಡಲೆಗೆ 200ಕ್ಕೂ ಅಧಿಕ ರೂ., ಮಸೂರಕ್ಕೆ 300 ರೂ., ಸಾಸಿವೆಗೆ 250 ರೂ. ಮತ್ತು ಸೂರ್ಯಕಾಂತಿಗೆ 600 ರೂ. ಬೆಂಬಲ ಬೆಲೆ ಘೋಷಿಸಲಾಗಿದೆ.

ರೈತರ ಆರ್ಥಿಕ ಸಬಲೀಕರಣ

‘ಪಿ.ಎಂ.-ಕಿಸಾನ್‌ ಸಮ್ಮಾನ್‌ ನಿಧಿ’ ಅಡಿಯಲ್ಲಿ3.90 ಲಕ್ಷ  ಕೋಟಿ ರೂ.ಗಳನ್ನು ನೇರವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವರು ಹೇಳಿದರು. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ (ಕೆ.ಸಿ.ಸಿ) ಯೋಜನೆಯ ಮೂಲಕ, 2024-25ರ ಹಣಕಾಸು ವರ್ಷದಲ್ಲಿ10 ಲಕ್ಷ  ಕೋಟಿ ರೂ.ಗಿಂತ ಹೆಚ್ಚಿನ ಸಾಲಗಳನ್ನು ವಿತರಿಸಲಾಗಿದೆ, ಜೊತೆಗೆ 1.62 ಲಕ್ಷ  ಕೋಟಿ ರೂ.ಗಳ ಬಡ್ಡಿ ಸಬ್ಸಿಡಿಗಳನ್ನು ವಿತರಿಸಲಾಗಿದೆ. ‘ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ’ ವಿಮೆ ಮಾಡಿದ ರೈತರಿಗೆ 1.83 ಲಕ್ಷ  ಕೋಟಿ ರೂ.ಗಿಂತ ಹೆಚ್ಚಿನ ಪರಿಹಾರವನ್ನು ಒದಗಿಸಿದೆ ಎಂದು ಮಾಹಿತಿ ಹಂಚಿಕೊಂಡರು.

ಎಫ್‌.ಪಿ.ಒ ಬೆಳವಣಿಗೆ ಮತ್ತು ನಾವೀನ್ಯತೆ

ರೈತ ಉತ್ಪಾದಕ ಸಂಸ್ಥೆಗಳ (ಎಫ್‌.ಪಿ.ಒಗಳು) ಯಶಸ್ಸನ್ನು ಬಿಂಬಿಸಿದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌, 52 ಲಕ್ಷ ಕ್ಕೂ ಹೆಚ್ಚು ರೈತರು ಈಗ ಎಫ್‌.ಪಿ.ಒಗಳಲ್ಲಿ ಷೇರುದಾರರಾಗಿದ್ದಾರೆ, 1,100 ಎಫ್‌.ಪಿ.ಒಗಳು ‘ಕೋಟ್ಯಧಿಪತಿ’ ಸ್ಥಾನಮಾನವನ್ನು ಸಾಧಿಸಿವೆ ಮತ್ತು ಒಟ್ಟಾರೆಯಾಗಿ 15,000 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ದಾಖಲಿಸಿವೆ ಎಂದು ಹೇಳಿದರು. ಕೃಷಿ ಸಚಿವಾಲಯವು ಈ ಸಂಸ್ಥೆಗಳಿಗೆ ನಾವೀನ್ಯತೆ, ಬ್ರ್ಯಾಂಡಿಂಗ್‌ ಮತ್ತು ಮಾರುಕಟ್ಟೆ ಸಂಪರ್ಕ ಬೆಂಬಲವನ್ನು ವಿಸ್ತರಿಸುವುದನ್ನು ಮುಂದುವರಿಸಿದೆ.

ಸ್ವಾವಲಂಬನೆ ಮತ್ತು ‘ವಿಕಸಿತ ಭಾರತ’ಕ್ಕೆ ಬದ್ಧತೆ

ರಾಷ್ಟ್ರವನ್ನು ‘ಆತ್ಮನಿರ್ಭರತೆ’ (ಸ್ವಾವಲಂಬನೆ) ಮತ್ತು ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಕಡೆಗೆ ಕೊಂಡೊಯ್ಯುವಾಗ ಭಾರತೀಯ ಕೃಷಿಯನ್ನು ಜಾಗತಿಕ ಮಾನದಂಡಗಳಲ್ಲಿಇರಿಸಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸಚಿವರು ಪುನರುಚ್ಚರಿಸಿದರು. ಸ್ವದೇಶಿಯನ್ನು ಸ್ವೀಕರಿಸುವಂತೆ ಮತ್ತು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವಂತೆ ಅವರು ನಾಗರಿಕರಿಗೆ ಮನವಿ ಮಾಡಿದರು.

ಪ್ರಧಾನಮಂತ್ರಿ ಅವರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ರೈತರ ಸಮೃದ್ಧಿ, ಸ್ಥಳೀಯ ಉದ್ಯಮ ಮತ್ತು ನಾವೀನ್ಯತೆಯ ಅಡಿಪಾಯದ ಮೇಲೆ ನಿರ್ಮಿಸಲಾದ ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. 

 

*****


(Release ID: 2177915) Visitor Counter : 4