ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಯಸ್ಕರ ಶಿಕ್ಷಣದ ಪರಿವರ್ತನೆ ಮತ್ತು ಸಾಕ್ಷರತಾ ಗುರಿಗಳನ್ನು ಮುನ್ನಡೆಸುವ ಉಲ್ಲಾಸ್ ಕಾರ್ಯಕ್ರಮವನ್ನು ಶ್ಲಾಘಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 06 OCT 2025 12:27PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ರ ಅಡಿಯಲ್ಲಿ ಪ್ರಮುಖ ಉಪಕ್ರಮವಾಗಿ 2022ರಲ್ಲಿ ಪ್ರಾರಂಭಿಸಲಾದ ಸಮಾಜದಲ್ಲಿ ಎಲ್ಲರಿಗೂ ಜೀವನಪರ್ಯಂತ ಕಲಿಕೆಯ ತಿಳುವಳಿಕೆ (ಯುಎಲ್ಎಎಸ್) ಕಾರ್ಯಕ್ರಮದ ಪರಿವರ್ತನಾತ್ಮಕ ಪರಿಣಾಮವನ್ನು ಶ್ಲಾಘಿಸುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮವು ಗ್ರಾಮೀಣ ಸಮುದಾಯಗಳು ಮತ್ತು ಮಹಿಳೆಯರ ಮೇಲೆ ವಿಶೇಷ ಗಮನವನ್ನು ಕೇಂದ್ರೀಕರಿಸಿ ಭಾರತದಾದ್ಯಂತ ವಯಸ್ಕ ಕಲಿಯುವವರಿಗೆ ಶೈಕ್ಷಣಿಕ ಅವಕಾಶಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ.

ಕೇಂದ್ರ ಸಚಿವರಾದ ಶ್ರೀ ಜಯಂತ್ ಚೌಧರಿ ಅವರ ಎಕ್ಸ್ ಖಾತೆಯ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಕಾರ್ಯಾಲಯ ಇಂಡಿಯಾ ಖಾತೆ ಹೀಗೆ ಹೇಳಿದೆ:

"ಈ ಲೇಖನದಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಸರಣೆಯಲ್ಲಿ 2022ರಲ್ಲಿ ಪ್ರಾರಂಭಿಸಲಾದ ಸಮಾಜದಲ್ಲಿ ಎಲ್ಲರಿಗೂ ಜೀವನಪರ್ಯಂತ ಕಲಿಕೆಯ (ಯುಎಲ್ಎಎಸ್) ಕಾರ್ಯಕ್ರಮವು ವಯಸ್ಕರಿಗೆ ಶೈಕ್ಷಣಿಕ ಅವಕಾಶಗಳನ್ನು ಹೇಗೆ ಒದಗಿಸುತ್ತದೆ ಎಂಬುದನ್ನು ರಾಜ್ಯ ಸಚಿವರಾದ ಶ್ರೀ @jayantrld ವಿವರಿಸುತ್ತಾರೆ.

ಉಲ್ಲಾಸ್ ಕಾರ್ಯಕ್ರಮದ ಪ್ರಭಾವದಿಂದ ಗ್ರಾಮೀಣ ಮತ್ತು ಮಹಿಳಾ ಸಾಕ್ಷರತೆಯು ಹೆಚ್ಚಾಗಿದೆ, ಇದು 2030ರ ವೇಳೆಗೆ ವಿಶ್ವಸಂಸ್ಥೆಯ ಎಸ್ಡಿಜಿಗಳ ಸಾಕ್ಷರತಾ ಗುರಿಯನ್ನು ಸಾಧಿಸುವ ಹಾದಿಯಲ್ಲಿ ಭಾರತವನ್ನು ಇರಿಸಿದೆ ಎಂದು ಅವರು ಬಿಂಬಿಸಿದ್ದಾರೆ,’’ ಎಂದು ಹೇಳಿದ್ದಾರೆ.

 

*****


(Release ID: 2175260) Visitor Counter : 5