ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮಾಜಿ ಸಂಸದ ಮತ್ತು ಹಿರಿಯ ನಾಯಕರಾದ ವಿಜಯ್‌ ಕುಮಾರ್‌ ಮಲ್ಹೋತ್ರಾ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ


ಶ್ರೀ ಅಮಿತ್‌ ಶಾ ಅವರು ನವದೆಹಲಿಯಲ್ಲಿಅಗಲಿದ ನಾಯಕನ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು

ಸಂಘಟನೆಯನ್ನು ರೂಪಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹಿರಿಯ ನಾಯಕ ವಿಜಯ್‌ ಕುಮಾರ್‌ ಮಲ್ಹೋತ್ರಾ ಅವರ ನಿಧನದಿಂದ ತೀವ್ರ ದುಃಖವಾಗಿದೆ

ಪಕ್ಷದ ರಾಜ್ಯ ಅಧ್ಯಕ್ಷರಾಗಿ, ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ, ಅಥವಾ ಸಾರ್ವಜನಿಕ ಪ್ರತಿನಿಧಿಯಾಗಿ, ವಿಜಯ್‌ ಕುಮಾರ್‌ ಮಲ್ಹೋತ್ರಾ ಅವರು ರಾಷ್ಟ್ರ ಮತ್ತು ದೆಹಲಿಯ ಜನರಿಗೆ ಪ್ರತಿಯೊಂದು ಪಾತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ

ವಿಜಯ್‌ ಕುರ್ಮಾ ಮಲ್ಹೋತ್ರಾ ಅವರು ದೆಹಲಿಯಲ್ಲಿ ಪಕ್ಷ ದ ಸಂಘಟನೆಯನ್ನು ಬಲಪಡಿಸಿದ್ದಲ್ಲದೆ, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವಾಗ, ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಯಾವಾಗಲೂ ಆದ್ಯತೆ ನೀಡಿದರು

ಈ ದುಃಖದ ಸಮಯದಲ್ಲಿ, ಇಡೀ ಪಕ್ಷದ ಕುಟುಂಬವು ಅವರ ಕುಟುಂಬ ಸದಸ್ಯರೊಂದಿಗೆ ನಿಲ್ಲುತ್ತದೆ

Posted On: 30 SEP 2025 5:04PM by PIB Bengaluru

ಮಾಜಿ ಸಂಸತ್‌ ಸದಸ್ಯ ಮತ್ತು ಹಿರಿಯ ನಾಯಕರಾದ ವಿಜಯ್‌ ಕುಮಾರ್‌ ಮಲ್ಹೋತ್ರಾ ಅವರ ನಿಧನಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ಅಮಿತ್‌ ಶಾ ಅವರು ನವದೆಹಲಿಯಲ್ಲಿಅಗಲಿದ ನಾಯಕನ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.

CR5_9254.jpg

ಸಂಘಟನೆಯನ್ನು ರೂಪಿಸುವಲ್ಲಿಮತ್ತು ವಿಸ್ತರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹಿರಿಯ ನಾಯಕ ವಿಜಯ್‌ ಕುಮಾರ್‌ ಮಲ್ಹೋತ್ರಾ ಅವರ ನಿಧನದಿಂದ ತೀವ್ರ ನೋವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ತಮ್ಮ ‘ಎಕ್ಸ್‌’  ಪೋಸ್ಟ್‌ಗಳಲ್ಲಿ ತಿಳಿಸಿದ್ದಾರೆ. ದೆಹಲಿಯ ರಾಜ್ಯ ಪಕ್ಷದ ಅಧ್ಯಕ್ಷರಾಗಿ, ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ, ಅಥವಾ ಸಾರ್ವಜನಿಕ ಪ್ರತಿನಿಧಿಯಾಗಿ, ವಿಜಯ್‌ ಕುಮಾರ್‌ ಮಲ್ಹೋತ್ರಾ ಅವರು ರಾಷ್ಟ್ರ ಮತ್ತು ದೆಹಲಿಯ ಜನರಿಗೆ ಪ್ರತಿಯೊಂದು ಪಾತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ.

CR5_9284.jpg

ತಮ್ಮೊಂದಿಗಿನ ಪ್ರತಿ ಸಭೆಯಲ್ಲಿ, ಸಾಂಸ್ಥಿಕ ವಿಷಯಗಳಿಗೆ ಸಂಬಂಧಿಸಿದ ಅನೇಕ ಅಮೂಲ್ಯವಾದ ಒಳನೋಟಗಳನ್ನು ಪಡೆದಿದ್ದೇನೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಈ ದುಃಖದ ಸಮಯದಲ್ಲಿ, ಇಡೀ ಪಕ್ಷದ ಕುಟುಂಬವು ಅವರ ಕುಟುಂಬ ಸದಸ್ಯರೊಂದಿಗೆ ನಿಲ್ಲುತ್ತದೆ. ಅಗಲಿದ ಆತ್ಮಕ್ಕೆ ದೇವರು ತನ್ನ ದಿವ್ಯ ಪಾದಗಳ ಬಳಿ ಸ್ಥಾನ ನೀಡಲಿ. ಓಂ ಶಾಂತಿ ಶಾಂತಿ ಶಾಂತಿ.

CR5_9244.jpg

ವಿಜಯ್‌ ಕುಮಾರ್‌ ಮಲ್ಹೋತ್ರಾ ಅವರು ದೆಹಲಿಯಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಿದ್ದಲ್ಲದೆ, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವಾಗ, ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಯಾವಾಗಲೂ ಆದ್ಯತೆ ನೀಡಿದರು ಎಂದು ಶ್ರೀ ಅಮಿತ್‌ ಶಾ ಹೇಳಿದರು. ಇಂದು, ಅವರ ಪಾರ್ಥಿವ ಶರೀರಗಳಿಗೆ ಗೌರವ ನಮನ ಸಲ್ಲಿಸಿದರು ಮತ್ತು ಅವರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದರು.

 

 

*****


(Release ID: 2173225) Visitor Counter : 5