ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನ
Posted On:
30 SEP 2025 11:17AM by PIB Bengaluru
ಕ್ರೀಡೆಯಲ್ಲಿನ ಶ್ರೇಷ್ಠತೆಯನ್ನು ಗುರುತಿಸಲು ಮತ್ತು ಪುರಸ್ಕಾರ ನೀಡಲು ಪ್ರತಿ ವರ್ಷ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಕ್ರೀಡಾ ಕ್ಷೇತ್ರದಲ್ಲಿನ ಅದ್ಭುತ ಮತ್ತು ಅತ್ಯುತ್ತಮ ಪ್ರದರ್ಶನಕ್ಕಾಗಿ ನೀಡಲಾಗುತ್ತದೆ; ಅರ್ಜುನ ಪ್ರಶಸ್ತಿಯನ್ನು ಕ್ರೀಡಾಪಟುವಿನ ಸ್ಥಿರವಾದ ಅತ್ಯುತ್ತಮ ಪ್ರದರ್ಶನಕ್ಕಾಗಿ ನೀಡಲಾಗುತ್ತದೆ; ಅರ್ಜುನ ಪ್ರಶಸ್ತಿ (ಜೀವಮಾನ) ಕ್ರೀಡಾ ಅಭಿವೃದ್ಧಿಗೆ ಜೀವಮಾನದ ಕೊಡುಗೆಗಾಗಿ ನೀಡಲಾಗುತ್ತದೆ; ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರನ್ನು ತಯಾರು ಮಾಡುವ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಗುತ್ತದೆ ಮತ್ತು ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ (ಆರ್.ಕೆ.ಪಿ.ಪಿ.)ವನ್ನು ದೇಶದಲ್ಲಿ ಕ್ರೀಡೆಗಳ ಪ್ರಚಾರ ಮತ್ತು ಅಭಿವೃದ್ಧಿಯಲ್ಲಿ ಗಮನಾರ್ಹ ಪಾತ್ರ ವಹಿಸಿದ ಕಾರ್ಪೊರೇಟ್ ಘಟಕ (ಸಾರ್ವಜನಿಕ/ಖಾಸಗಿ), ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಒ.) ಗೆ ನೀಡಲಾಗುತ್ತದೆ. ಯೋಜನೆಗಳ ಪ್ರತಿಯನ್ನು ಸಚಿವಾಲಯದ ಜಾಲತಾಣ www.yas.nic.in ನಲ್ಲಿ ಕಾಣಬಹುದು.
ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಪ್ರತಿ ವರ್ಷ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತದೆ. 2025ರ ಈ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಗಳನ್ನು www.yas.nic.in ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ.
ಅರ್ಹ ಕ್ರೀಡಾಪಟುಗಳು/ತರಬೇತುದಾರರು/ಸಂಸ್ಥೆಗಳಿಂದ ಅರ್ಜಿಗಳನ್ನು ಆಯಾ ಪ್ರಶಸ್ತಿಗಳಿಗೆ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಮೀಸಲಾದ ಪೋರ್ಟಲ್ ಮೂಲಕ ಆನ್ ಲೈನ್ ಮೂಲಕ ಮಾತ್ರ ಆಹ್ವಾನಿಸಲಾಗುತ್ತಿದೆ.
ಪ್ರಶಸ್ತಿಯ ಮಾರ್ಗಸೂಚಿಗಳಿಗೆ ಅನುಸಾರವಾಗಿ ಅರ್ಹರಾಗಿರುವ ಅರ್ಜಿದಾರರು www.dbtyas-sports.gov.in ಪೋರ್ಟಲ್ ನಲ್ಲಿ ಮಾತ್ರ ಆನ್ ಲೈನ್ ನಲ್ಲಿ ತಾವೇ ಅರ್ಜಿ ಸಲ್ಲಿಸಬೇಕು. ಆನ್ ಲೈನ್ ಅರ್ಜಿ ನಮೂನೆಯಲ್ಲಿ ಯಾವುದೇ ಸಮಸ್ಯೆ ಎದುರಾದರೆ, ಅರ್ಜಿದಾರರು ಕ್ರೀಡಾ ಇಲಾಖೆಯನ್ನು sportsawards-moyas[at]gov[dot]in ಇಮೇಲ್ ಮೂಲಕ ಸಂಪರ್ಕಿಸಬಹುದು, ಅಥವಾ ಯಾವುದೇ ಕೆಲಸದ ದಿನದಂದು ಬೆಳಿಗ್ಗೆ 9.00 ರಿಂದ ಸಂಜೆ 5.30 ರವರೆಗೆ ದೂರವಾಣಿಸಂಖ್ಯೆ 011-233-87432 ಅಥವಾ ಟೋಲ್ ಫ್ರೀ ಸಂಖ್ಯೆ 1800-202-5155, 1800-258-5155 (ಬೆಳಿಗ್ಗೆ 8.00 ರಿಂದ ರಾತ್ರಿ 8.00 ರವರೆಗಿನ ಯಾವುದೇ ಕೆಲಸದ ದಿನದಂದು) ಸಂಪರ್ಕಿಸಬಹುದು. ಪ್ರಶಸ್ತಿಗಳಿಗಾಗಿ ಅರ್ಹ ಕ್ರೀಡಾಪಟುಗಳು/ತರಬೇತುದಾರರು/ಸಂಸ್ಥೆಗಳು ಅರ್ಜಿಗಳನ್ನು ಅಕ್ಟೋಬರ್ 28, 2025 ರಂದು (ಅಂದರೆ ಮಂಗಳವಾರ) ರಾತ್ರಿ 11:59 ರೊಳಗೆ ಆನ್ಲೈನ್ ಪೋರ್ಟಲ್ www.dbtyas-sports.gov.in ನಲ್ಲಿ ಸಲ್ಲಿಸಬೇಕು.
*****
(Release ID: 2173142)
Visitor Counter : 6