ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
azadi ka amrit mahotsav

ʻವಿಶ್ವ ಆಹಾರ ಭಾರತ-2025ʼ


ಶೃಂಗಸಭೆಯ 1 ಮತ್ತು 2 ನೇ ದಿನದಂದು 1 ಲಕ್ಷ ಕೋಟಿ ರೂ. ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಲಾಯಿತು

ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ವಲಯದ ಮಧ್ಯಸ್ಥಗಾರರ ಭಾಗವಹಿಸುವಿಕೆಯೊಂದಿಗೆ 25ಕ್ಕೂ ಹೆಚ್ಚು ಜ್ಞಾನ ವಿನಿಮಯ ಅಧಿವೇಶನಗಳು ನಡೆದವು

Posted On: 27 SEP 2025 9:40AM by PIB Bengaluru

ʻವಿಶ್ವ ಆಹಾರ ಭಾರತ-2025’ ಶೃಂಗಸಭೆಯ ಎರಡನೇ ದಿನದಂದು ಸುಸ್ಥಿರತೆ, ತಂತ್ರಜ್ಞಾನ, ಹೂಡಿಕೆ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಗಳ ಮೇಲೆ ಗಮನ ಕೇಂದ್ರೀಕರಿಸಿದ ಸಂವಾದಗಳೊಂದಿಗೆ ಭಾರತವನ್ನು ಭವಿಷ್ಯದ ಜಾಗತಿಕ ಆಹಾರ ಬುಟ್ಟಿಯಾಗಿ ಇರಿಸುವತ್ತ ನಾವು ಗಮನಾರ್ಹ ದಾಪುಗಾಲುಗಳನ್ನು ಕಂಡಿದ್ದೇವೆ. ಜಾಗತಿಕ ನಿಯಂತ್ರಕರು, ಉದ್ಯಮದ ನಾಯಕರು, ನವೋದ್ಯಮಗಳು ಮತ್ತು ನೀತಿ ನಿರೂಪಕರ ಉನ್ನತ ಮಟ್ಟದ ಭಾಗವಹಿಸುವಿಕೆಯೊಂದಿಗೆ ʻಭಾರತ ಮಂಟಪʼದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಇಂದಿನ ಕಾರ್ಯಕ್ರಮವು, ಪಾಲುದಾರ ಮತ್ತು ಗಮನ ಕೇಂದ್ರಿತ ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಜಾರ್ಖಂಡ್ ಮತ್ತು ಬಿಹಾರದ ಅಧಿವೇಶನಗಳನ್ನು ಒಳಗೊಂಡಿದೆ; ನ್ಯೂಜಿಲ್ಯಾಂಡ್, ವಿಯೆಟ್ನಾಂ, ಜಪಾನ್ ಮತ್ತು ರಷ್ಯಾ ದೇಶಗಳು ಪಾಲ್ಗೊಂಡಿವೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಆಯುಷ್ ಸಚಿವಾಲಯ, ಎಪಿಇಡಿಎ ಮತ್ತು ವಿಶ್ವ ಬ್ಯಾಂಕ್ ಅಧಿವೇಶನಗಳನ್ನು ಆಯೋಜಿಸಿವೆ. ಅಲ್ಲದೆ, ಆಹಾರ ಸಂಸ್ಕರಣೆ ಸಚಿವಾಲಯವು ಈ ವರ್ಷದ ಆವೃತ್ತಿಯ ಐದು ಕೇಂದ್ರೀಕೃತ ಸ್ತಂಭಗಳು ಹಾಗೂ ಸಾಕುಪ್ರಾಣಿಗಳ ಆಹಾರ, ನ್ಯೂಟ್ರಾಸ್ಯುಟಿಕಲ್ಸ್, ವಿಶೇಷ ಆಹಾರಗಳು, ಆಲ್ಕೊಹಾಲ್‌ಯುಕ್ತ ಪಾನೀಯಗಳು ಮತ್ತು ಸಸ್ಯ ಆಧಾರಿತ ಆಹಾರಗಳಂತಹ ಪ್ರಮುಖ ವಿಷಯಗಳು ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡ ಹದಿಮೂರು ಅಧಿವೇಶನಗಳನ್ನು ಆಯೋಜಿಸಿತು.

ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯವು 25,000 ಕೋಟಿ ರೂ.ಗಿಂತ ಅಧಿಕ ಹೂಡಿಕೆಯೊಂದಿಗೆ ಇಪ್ಪತ್ತೊಂದು ಕಂಪನಿಗಳು ಒಪ್ಪಂದಗಳ ಅಂಕಿತಕ್ಕೆ ಸಾಕ್ಷಿಯಾಯಿತು. ಇದರೊಂದಿಗೆ 1 ಮತ್ತು 2ನೇ ದಿನದಂದು ಸಹಿ ಹಾಕಲಾದ ಒಪ್ಪಂದಗಳ ಒಟ್ಟು ಮೌಲ್ಯವು 1 ಲಕ್ಷ ಕೋಟಿ ರೂ. ಹೂಡಿಕೆಯನ್ನು ದಾಟಿದೆ. ಶೃಂಗಸಭೆಯ ಭಾಗವಾಗಿ, ಕೃಷಿ ಮತ್ತು ಆಹಾರ ಸಂಸ್ಕರಣೆಯಲ್ಲಿ ಸಹಕಾರವನ್ನು ಬಲಪಡಿಸಲು ರಷ್ಯಾ ಮತ್ತು ಪೋರ್ಚುಗಲ್‌ನ ಅಂತಾರಾಷ್ಟ್ರೀಯ ಸಹವರ್ತಿಗಳೊಂದಿಗೆ ಪ್ರಮುಖ ಸರ್ಕಾರದಿಂದ ಸರ್ಕಾರದ ಸಭೆಗಳನ್ನು ನಡೆಸಲಾಯಿತು.

ವಿಶ್ವ ಆಹಾರ ಭಾರತದ ಜೊತೆಗೆ, ಎರಡು ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು, ʻಎಫ್ಎಸ್ಎಸ್ಎಐʼನಿಂದ 3ನೇ ಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆ ನಡೆಯುತ್ತಿದೆ. ಇದು ಆಹಾರ ಸುರಕ್ಷತಾ ಮಾನದಂಡಗಳ ಸಾಮರಸ್ಯವನ್ನು ಚರ್ಚಿಸಲು ಮತ್ತು ನಿಯಂತ್ರಕ ಸಹಕಾರವನ್ನು ಬಲಪಡಿಸಲು ಜಾಗತಿಕ ನಿಯಂತ್ರಕರಿಗೆ ಅನನ್ಯ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಭಾರತದ ಬೆಳೆಯುತ್ತಿರುವ ಸಮುದ್ರಾಹಾರ ರಫ್ತು ಸಾಮರ್ಥ್ಯ ಮತ್ತು ಜಾಗತಿಕ ಮಾರುಕಟ್ಟೆ ಸಂಪರ್ಕಗಳ ಮೇಲೆ ಕೇಂದ್ರೀಕರಿಸುವ 24ನೇ ಭಾರತ ಅಂತಾರಾಷ್ಟ್ರೀಯ ಸಮುದ್ರಾಹಾರ ಪ್ರದರ್ಶನ (ಐಐಎಸ್ಎಸ್) ಅನ್ನು ʻವಿಶ್ವ ಆಹಾರ ಭಾರತʼದ ಭಾಗವಾಗಿ ಸಮಾನಾಂತರ ಕಾರ್ಯಕ್ರಮಗಳಾಗಿ ನಡೆಸಲಾಗುತ್ತಿದೆ.

ಆಹಾರ ಸಂಸ್ಕರಣಾ ವಿಭಾಗಗಳಿಗೆ ಸಂಬಂಧಿಸಿದ ಆವಿಷ್ಕಾರಗಳಲ್ಲಿ ಹೂಡಿಕೆ ಮಾಡುವಂತೆ ಈ ಕಾರ್ಯಕ್ರಮವು ಎಲ್ಲಾ ಉದ್ಯಮದ ಮಧ್ಯಸ್ಥಗಾರರನ್ನು ಒತ್ತಾಯಿಸಿತು. ಈ ಕಾರ್ಯಕ್ರಮವು ಸ್ವೀಕಾರಾರ್ಹ ಮತ್ತು ಹೂಡಿಕೆ-ಸನ್ನದ್ಧ ತಾಣವಾಗಿ ಭಾರತದ ಸ್ಥಾನವನ್ನು ಬಲಪಡಿಸಿತು, ಆಹಾರ ಸಂಸ್ಕರಣಾ ವಿಭಾಗಗಳಲ್ಲಿ ನಾವೀನ್ಯತೆಗಳನ್ನು ನಿಯಂತ್ರಿಸಲು, ತಂತ್ರಜ್ಞಾನ ವರ್ಗಾವಣೆ ಮತ್ತು ಜ್ಞಾನ ಹಂಚಿಕೆಯಲ್ಲಿ ಸಹಕರಿಸಲು ಹಾಗೂ ಆಹಾರ ಭದ್ರತೆಯಿಂದ ಪೌಷ್ಟಿಕಾಂಶ ಭದ್ರತೆಯವರೆಗಿನ ಭಾರತದ ಪ್ರಯಾಣದಲ್ಲಿ ಭಾಗವಹಿಸಲು ಜಾಗತಿಕ ಮಧ್ಯಸ್ಥಗಾರರನ್ನು ಒತ್ತಾಯಿಸಿತು.

 

*****


(Release ID: 2172076) Visitor Counter : 6