ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನಕ್ಸಲರ ವಿರುದ್ಧ ಮತ್ತೊಂದು ಪ್ರಮುಖ ಗೆಲುವು ಸಾಧಿಸಿದ್ದಕ್ಕಾಗಿ ಭದ್ರತಾ ಪಡೆಗಳನ್ನು ಶ್ಲಾಘಿಸಿದ್ದಾರೆ
ಮಹಾರಾಷ್ಟ್ರ- ಛತ್ತೀಸ್‌ಗಢ ಗಡಿಯಲ್ಲಿರುವ ನಾರಾಯಣಪುರದ ಅಬುಜ್ಮದ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಇಬ್ಬರು ನಕ್ಸಲರ ಕೇಂದ್ರ ಸಮಿತಿ ಸದಸ್ಯ ನಕ್ಸಲ್ ನಾಯಕರಾದ ಕದರಿ ಸತ್ಯನಾರಾಯಣ ರೆಡ್ಡಿ ಅಲಿಯಾಸ್ ಕೋಸಾ ಮತ್ತು ಕಟ್ಟಾ ರಾಮಚಂದ್ರ ರೆಡ್ಡಿ ಅವರನ್ನು ಹತ್ಯೆ ಮಾಡಿದ್ದಾರೆ
ಭೂಗತರಾಗಿ ಕಾರ್ಯಚಟುವಟಿಕೆ ತಟಸ್ಥಗೊಳಿಸಲಾದ ಈ ಇಬ್ಬರೂ ನಕ್ಸಲ್ ನಾಯಕರ ತಲೆಗೆ ತಲಾ 40 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು
ಭಾರತೀಯ ಭದ್ರತಾ ಪಡೆಗಳು ನಕ್ಸಲರ ಉನ್ನತ ನಾಯಕತ್ವವನ್ನು ವ್ಯವಸ್ಥಿತವಾಗಿ ಕಿತ್ತುಹಾಕುತ್ತಿವೆ, ಕೆಂಪು ಭಯೋತ್ಪಾದನೆಯ ಬೆನ್ನೆಲುಬನ್ನು ಮುರಿಯುತ್ತಿವೆ
Posted On:
22 SEP 2025 7:30PM by PIB Bengaluru
ನಕ್ಸಲರ ವಿರುದ್ಧ ಮತ್ತೊಂದು ಪ್ರಮುಖ ವಿಜಯ ಸಾಧಿಸಿದ್ದಕ್ಕಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಭದ್ರತಾ ಪಡೆಗಳನ್ನು ಶ್ಲಾಘಿಸಿದ್ದಾರೆ.
ಎಕ್ಸ್ ತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನಮ್ಮ ಭದ್ರತಾ ಪಡೆಗಳು ನಕ್ಸಲರ ವಿರುದ್ಧ ಮತ್ತೊಂದು ಪ್ರಮುಖ ವಿಜಯವನ್ನು ಸಾಧಿಸಿವೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ- ಛತ್ತೀಸ್‌ಗಢ ಗಡಿಯಲ್ಲಿರುವ ನಾರಾಯಣಪುರದ ಅಬುಜ್ಮದ್ ಪ್ರದೇಶದಲ್ಲಿ, ನಮ್ಮ ಭದ್ರತಾ ಪಡೆಗಳು ಇಬ್ಬರು ನಕ್ಸಲರ ಕೇಂದ್ರ ಸಮಿತಿ ಸದಸ್ಯ ಹಾಗೂ ನಕ್ಸಲ್ ನಾಯಕರಾದ ಕದರಿ ಸತ್ಯನಾರಾಯಣ ರೆಡ್ಡಿ ಅಲಿಯಾಸ್ ಕೋಸಾ, ಕಟ್ಟಾ ರಾಮಚಂದ್ರ ರೆಡ್ಡಿ ಅವರನ್ನು ಹೊಡೆದುರುಳಿಸಿದವು. ಕಾರ್ಯಚಟುವಟಿಕೆಗಳು ತಟಸ್ಥಗೊಂಡ ಈ ಇಬ್ಬರು ನಕ್ಸಲ್ ನಾಯಕರ ತಲೆಗೆ ತಲಾ ರೂ 40 ಲಕ್ಷ ಬಹುಮಾನವಿತ್ತು. ನಮ್ಮ ಭದ್ರತಾ ಪಡೆಗಳು ನಕ್ಸಲ್ ಗಳ ಉನ್ನತ ನಾಯಕತ್ವವನ್ನು ವ್ಯವಸ್ಥಿತವಾಗಿ ಕೆಡವುತ್ತಿವೆ, ಕೆಂಪು ಭಯೋತ್ಪಾದನೆಯ ಬೆನ್ನೆಲುಬನ್ನು ಮುರಿಯುತ್ತಿವೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
*****
(Release ID: 2169851)
Read this release in:
English
,
Urdu
,
Hindi
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Malayalam