ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಭಾರತದ ಶುದ್ಧ ಇಂಧನ ಪರಿವರ್ತನೆಗೆ ವೇಗ ನೀಡಲು ನವೀಕರಿಸಬಹುದಾದ ಇಂಧನ ಸಾಧನಗಳ ಮೇಲೆ ಶೇ.5ಕ್ಕೆ ಇಳಿಕೆ


ಪಿಎಂ ಸೂರ್ಯ ಘರ್ ಅಡಿಯಲ್ಲಿ ಮೇಲ್ಛಾವಣಿ ಸೌರಶಕ್ತಿ ಫಲಕ: ಮಫ್ಟ್ ಬಿಜ್ಲಿ ಯೋಜನೆ 3 ಕಿ.ವ್ಯಾ ವ್ಯವಸ್ಥೆಗೆ 9,000–10,500 ರೂ. ರಷ್ಟು ಅಗ್ಗ

ಜಿಎಸ್‌ಟಿ ಕಡಿತದೊಂದಿಗೆ ಪಿಎಂ-ಕುಸುಮ್ ಅಡಿಯಲ್ಲಿ ರೈತರಿಗೆ 10 ಲಕ್ಷ ಸೌರ ಪಂಪ್‌ಗಳಲ್ಲಿ 1,750 ಕೋಟಿ ರೂ. ಉಳಿತಾಯ

ಜಿಎಸ್‌ಟಿ ಕಡಿತದಿಂದಾಗಿ ಮಾದರಿ ಮತ್ತು ಘಟಕ ವೆಚ್ಚ ಶೇ. 3–4 ರಷ್ಟು ತಗ್ಗಲಿದ್ದು, ನವೀಕರಿಸಬಹುದಾದ ಇಂಧನ ಸಾಧನಗಳ ಉತ್ಪಾದನೆಗೆ ಉತ್ತೇಜನ

ಮುಂದಿನ ದಶಕದಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ 5–7 ಲಕ್ಷ ಹಸಿರು ಉದ್ಯೋಗಗಳಿಗೆ ಶಕ್ತಿ ತುಂಬಲು ಜಿಎಸ್‌ಟಿ ಸುಧಾರಣೆ

Posted On: 17 SEP 2025 12:14PM by PIB Bengaluru

ಜಿ ಎಸ್ ಟಿಯನ್ನು ನಿಜವಾಗಿಯೂ ಆರ್ಥಿಕತೆಯ ಎಲ್ಲಾ ವಲಯಗಳನ್ನು ಬಲವರ್ಧನೆಗೊಳಿಸುವ “ಉತ್ತಮ ಮತ್ತು ಸರಳ ತೆರಿಗೆ’’ ವ್ಯವಸ್ಥೆಯನ್ನಾಗಿ ಪರಿವರ್ತಿಸಬೇಕೆನ್ನುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ 2025ರ ಸೆಪ್ಟಂಬರ್‌ 3ರಂದು ನಡೆದ ಜಿಎಸ್ ಟಿ ಮಂಡಳಿಯ 56ನೇ ಸಭೆ ಇತ್ತೀಚೆಗೆ ಅನುಮೋದಿಸಿದ ಸುಧಾರಣೆಗಳಲ್ಲಿ ನವೀಕರಿಸಬಹುದಾದ ಇಂಧನ ವಲಯಕ್ಕೆ ಭಾರಿ ಉತ್ತೇಜನ  ನೀಡುವಂತಹ ಹಲವು ಕ್ರಮಗಳನ್ನು ಘೋಷಿಸಲಾಗಿದೆ.

ನವೀಕರಿಸಬಹುದಾದ ಇಂಧನ ಮೌಲ್ಯ ಸರಣಿಯಾದ್ಯಂತ ಜಿಎಸ್‌ಟಿ ದರಗಳನ್ನು ಶೇ.12 ರಿಂದ 5 ಕ್ಕೆ ಏಕರೂಪಗೊಳಿಸುವುದರಿಂದ ಶುದ್ಧ ಇಂಧನ ಯೋಜನೆಗಳ ವೆಚ್ಚ ತಗ್ಗುತ್ತದೆ, ವಿದ್ಯುತ್ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಮತ್ತು ಕುಟಂಬಗಳು, ರೈತರು, ಕೈಗಾರಿಕೆಗಳು ಮತ್ತು ಡೆವಲಪರ್‌ಗಳಿಗೆ ನೇರವಾಗಿ ಪ್ರಯೋಜನವಾಗುತ್ತದೆ.ಉದಾಹರಣೆಗೆ ಸಾಮಾನ್ಯವಾಗಿ ಪ್ರತಿ ಮೆಗಾವ್ಯಾಟ್‌ಗೆ ಸುಮಾರು 3.5–4 ಕೋಟಿ ರೂಪಾಯಿಗಳಷ್ಟು ಮೊತ್ತದ ಸೌರ ಯೋಜನೆಯ ಬಂಡವಾಳ ವೆಚ್ಚವು ಈಗ ಪ್ರತಿ ಮೆಗಾವ್ಯಾಟ್‌ಗೆ 20–25 ಲಕ್ಷ ರೂ. ಉಳಿತಾಯವಾಗುತ್ತದೆ. 500 ಮೆಗಾವ್ಯಾಟ್ ಸೌರ ಪಾರ್ಕ್‌ನ ಪ್ರಮಾಣದಲ್ಲಿ ಇದು 100 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಯೋಜನಾ ವೆಚ್ಚ ಕಡಿತಕ್ಕೆ ಕಾರಣವಾಗುತ್ತದೆ, ಇದು ತೆರಿಗೆ ಸ್ಪರ್ಧಾತ್ಮಕತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

ತಗ್ಗಿದ ವೆಚ್ಚ ಮತ್ತು ಹೆಚ್ಚಿನ ಸ್ಪರ್ಧಾತ್ಮಕತೆ

ಜಿಎಸ್‌ಟಿ ಕಡಿತವು ನವೀಕರಿಸಬಹುದಾದ ಸುಂಕಗಳನ್ನು ತಗ್ಗಿಸುವ ಮೂಲಕ ವಿದ್ಯುತ್ ವಿತರಣಾ ಕಂಪನಿಗಳಿಗೆ (ಡಿಸ್ಕಾಮ್‌ಗಳು) ವಿದ್ಯುತ್ ಖರೀದಿಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಇದು ದೇಶಾದ್ಯಂತ ವಾರ್ಷಿಕ 2,000–3,000 ಕೋಟಿ ರೂಪಾಯಿಗಳಷ್ಟು ವಿದ್ಯುತ್ ಖರೀದಿ ವೆಚ್ಚವನ್ನು ಉಳಿತಾಯ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಅಂತಿಮವಾಗಿ ಗ್ರಾಹಕರಿಗೆ ಕೈಗೆಟುಕುವ ಶುದ್ಧ ಇಂಧನ ಲಭ್ಯತೆಯ ಪ್ರಯೋಜನ ಪಡೆಯುತ್ತಾರೆ, ಇದು ಭಾರತದ ವಿದ್ಯುತ್ ಕ್ಷೇತ್ರದ ದೀರ್ಘಕಾಲೀನ ಸುಸ್ಥಿರತೆಯನ್ನು ಬಲವರ್ಧನೆಗೊಳಿಸುತ್ತದೆ.

ಕುಟುಂಬಗಳು, ರೈತರು ಮತ್ತು ಗ್ರಾಮೀಣ ಸಮುದಾಯಗಳಿಗೆ ಪ್ರಯೋಜನಗಳು

ಈ ಸುಧಾರಣೆಯು ಮನೆಗಳಲ್ಲಿ ಸೌರಶಕ್ತಿ ಮೇಲ್ಛಾವಣಿ ವ್ಯವಸ್ಥೆಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.  3 ಕೆಡಬ್ಲೂ ಮೇಲ್ಛಾವಣಿ ಸೌರ ವ್ಯವಸ್ಥೆಯು ಈಗ ಸುಮಾರು 9,000–10,500 ರೂಪಾಯಿಗಳಷ್ಟು ಅಗ್ಗವಾಗಲಿದೆ. ಇದು ಲಕ್ಷಾಂತರ ಕುಟುಂಬಗಳು ಸೌರಶಕ್ತಿಯನ್ನು ಅಳವಡಿಸಿಕೊಳ್ಳಲು ಸುಲಭಗೊಳಿಸುತ್ತದೆ ಮತ್ತು ಪಿಎಂ ಸೂರ್ಯ ಘರ್: ಮಫ್ಟ್ ಬಿಜ್ಲಿ ಯೋಜನೆಯಡಿಯಲ್ಲಿ ದೊಡ್ಡ ಪ್ರಮಾಣದ ಬಳಕೆಗೆ ಉತ್ತೇಜನ ನೀಡುತ್ತದೆ.

ಪಿಎಂ-ಕುಸುಮ್ ಯೋಜನೆಯಡಿಡಿಯಲ್ಲಿ ರೈತರೂ ಸಹ ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದಾರೆ. ಸುಮಾರು 2.5 ಲಕ್ಷ ರೂಪಾಯಿ ವೆಚ್ಚದ 5 ಎಚ್ ಪಿ ಸೌರ ಪಂಪ್ ಈಗ ಸುಮಾರು 17,500 ರೂಪಾಯಿಗಳಷ್ಟು ಅಗ್ಗವಾಗಲಿದೆ. 10 ಲಕ್ಷ ಸೌರ ಪಂಪ್‌ಗಳ ಪ್ರಮಾಣದಲ್ಲಿ ರೈತರು ಒಟ್ಟಾರೆಯಾಗಿ 1,750 ಕೋಟಿ ರೂಪಾಯಿ ಉಳಿತಾಯ ಮಾಡಬಹುದು, ಇದು ನೀರಾವರಿಯನ್ನು ಹೆಚ್ಚು ಕೈಗೆಟುಕುವಂತೆ ಮತ್ತು ಸುಸ್ಥಿರವಾಗುವಂತೆ ಮಾಡುತ್ತದೆ.

ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳು ಮಿನಿ-ಗ್ರಿಡ್‌ಗಳು, ಜೀವನೋಪಾಯ ಕ್ರಮಗಳ ಅಳವಡಿಕೆ ಮತ್ತು ಸೌರ ನೀರಿನ ಪಂಪ್‌ಗಳಂತಹ ಅಗ್ಗದ ವಿಕೇಂದ್ರೀಕೃತ ಪರಿಹಾರಗಳಿಂದ ಲಾಭ ಪಡೆಯುತ್ತವೆ. ಕಡಿಮೆ ಮರುಪಾವತಿ ಅವಧಿಗಳು ಮತ್ತು ಸುಧಾರಿತ ಆದಾಯವು ಶಾಲೆಗಳು, ಆರೋಗ್ಯ ಕೇಂದ್ರಗಳು ಮತ್ತು ಸಣ್ಣ ವ್ಯವಹಾರಗಳಿಗೆ ಶುದ್ಧ ಮತ್ತು ವಿಶ್ವಾಸಾರ್ಹ ಇಂಧನ ಲಭ್ಯತೆಯನ್ನು ಒದಗಿಸುತ್ತದೆ.

ದೇಶೀಯ ಉತ್ಪಾದನೆ ಮತ್ತು ಸ್ವಾವಲಂಬನೆಗೆ ಉತ್ತೇಜನ

ಜಿಎಸ್ ಟಿ ಇಳಿಕೆಯಿಂದಾಗಿ, ಮಾದರಿ ಮತ್ತು ಘಟಕ ವೆಚ್ಚ ಶೇ.3–4ರಷ್ಟು ತಗ್ಗುವ ಮೂಲಕ ಭಾರತದಲ್ಲಿಯೇ ತಯಾರಿಸಿದ ನವೀಕರಿಸಬಹುದಾದ ಇಂಧನ ಉಪಕರಣಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ, ಜತೆಗೆ ಇದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಉಪಕ್ರಮಗಳನ್ನು ಬೆಂಬಲಿಸುತ್ತದೆ. ಭಾರತವು 2030ರ ವೇಳೆಗೆ 100 ಗಿಗಾವ್ಯಾಟ್‌  ಸೌರ ಉತ್ಪಾದನಾ ಸಾಮರ್ಥ್ಯವನ್ನು ಗುರಿಯನ್ನು ಇಟ್ಟುಕೊಂಡಿರುವುದರಿಂದ ಸದ್ಯದ ಈ  ಸುಧಾರಣೆಗಳು ದೇಶೀಯ ಉತ್ಪಾದನಾ ಕೇಂದ್ರಗಳಲ್ಲಿ ಹೊಸ ಹೂಡಿಕೆಯನ್ನು ಉತ್ತೇಜಿಸುತ್ತದೆ. ಪ್ರತಿ ಗಿಗಾವ್ಯಾಟ್ ಉತ್ಪಾದನೆಯು ಸುಮಾರು 5 ಸಾವಿರ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಪರಿಗಣಿಸಿ, ಸುಧಾರಣೆಯು ಮುಂದಿನ ದಶಕದಲ್ಲಿ 5–7 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಬೆಂಬಲಿಸಲಿದೆ, ಇದು ಭಾರತದ ಶುದ್ಧ ಇಂಧನ ಕೈಗಾರಿಕಾ ಪೂರಕ ವ್ಯವಸ್ಥೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುತ್ತದೆ.

ಭಾರತದ ಇಂಧನ ಪರಿವರ್ತನೆಗೆ ವೇಗ ನೀಡುವುದು

ಈ ಜಿಎಸ್ ಟಿ ಕಡಿತವು ಇಂಧನ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ಹೂಡಿಕೆದಾರರ ವಿಶ್ವಾಸವನ್ನು ವೃದ್ಧಿಸುತ್ತದೆ. ವಿದ್ಯುತ್ ಖರೀದಿ ಒಪ್ಪಂದಗಳಿಗೆ ವೇಗವಾಗಿ ಸಹಿ ಹಾಕಲು ಮತ್ತು ಯೋಜನೆಗಳನ್ನು ಶೀಘ್ರವಾಗಿ ಜಾರಿಗೊಳಿಸಲು ಅನುವು ಮಾಡಿಕೊಡುತ್ತದೆ. ಭಾರತವು 2030ರ ವೇಳೆಗೆ ಸುಮಾರು 300 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸೇರ್ಪಡೆ ಮಾಡುವ ಗುರಿಯನ್ನು ಹೊಂದಿರುವುದರಿಂದ ಶೇ.2–3ರಷ್ಟು ವೆಚ್ಚ ಕಡಿತವು ಸಹ 1–1.5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪ್ರತಿ ಗಿಗಾವ್ಯಾಟ್  ಸೌರಶಕ್ತಿ ವಾರ್ಷಿಕವಾಗಿ ಸುಮಾರು 1.3 ಮಿಲಿಯನ್ ಟನ್  ಇಂಗಾಲ ಹೊರಸೂಸುವಿಕೆ (CO₂) ಉಳಿಸುತ್ತದೆ;  ಜಿಎಸ್ ಟಿ ಏಕರೂಪಗೊಳಿಸುವಿಕೆಯಿಂದ ವೇಗವಾಗಿ ಯೋಜನೆಗಳು ಜಾರಿಗೊಳಿಸುವುದರಿಂದ 2030 ರ ವೇಳೆಗೆ ವರ್ಷಕ್ಕೆ ಹೆಚ್ಚುವರಿಯಾಗಿ 50–70 ಮಿಲಿಯನ್ ಟನ್ ಇಂಗಾಲಹೊರಸೂಸುವಿಕೆಯನ್ನು ತಪ್ಪಿಸಬಹುದಾಗಿದೆ.

ನವೀಕರಿಸಬಹುದಾದ ಇಂಧನವನ್ನು ಹೆಚ್ಚು ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಮೂಲಕ ಈ ಸುಧಾರಣೆಯು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಭಾರತದ ಅಂತಾರಾಷ್ಟ್ರೀಯ ಬದ್ಧತೆಗಳೊಂದಿಗೆ ಹೊಂದಿಕೆಯಾಗುತ್ತದೆ ಮತ್ತು 2030 ರ ವೇಳೆಗೆ ದೇಶದ 500 ಗಿಗಾವ್ಯಾಟ್ ಬಳಸಿದರೆ ಬರಿದಾಗದೇ ಇರುವಂತಹ ಅಂದರೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿ ಸಾಧಿಸಲು ನೆರವಾಗುತ್ತದೆ. ಹವಾಮಾನ ವೈಪರೀತ್ಯದ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತವನ್ನು ಧೃಢ ನಾಯಕನಾಗಿರಿಸುತ್ತದೆ.

ಪರಿಷ್ಕೃತ ಜಿಎಸ್‌ಟಿ ದರಗಳು 2025ರ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ. ಈ ಮಹತ್ವದ ನಿರ್ಧಾರವು ಲಕ್ಷಾಂತರ ಗ್ರಾಹಕರು, ರೈತರು, ಡೆವಲಪರ್‌ಗಳು ಮತ್ತು ತಯಾರಕರಿಗೆ ನೇರ ಪ್ರಯೋಜನಗಳನ್ನು ಒದಗಿಸುತ್ತದೆ ಮತ್ತು ಹಸಿರು ಬೆಳವಣಿಗೆ ಮತ್ತು ಇಂಧನ ಸ್ವಾತಂತ್ರ್ಯದ ಅವಳಿ ಗುರಿಗಳಿಗೆ ಕೊಡುಗೆ ನೀಡುತ್ತದೆ. ಸ್ವಚ್ಛ, ಕೈಗೆಟುಕುವ ಮತ್ತು ಸುಸ್ಥಿರ ಇಂಧನವು ಭಾರತದ ವಿಕಸಿತ ಭಾರತ ಪಯಣಕ್ಕೆ ಭದ್ರ ಬುನಾದಿ ಆಗುವುದನ್ನು ಖಾತ್ರಿಪಡಿಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಇದು ಪುನರ್ ಪ್ರತಿಪಾದಿಸುತ್ತದೆ.

 

*****


(Release ID: 2167569) Visitor Counter : 2
Read this release in: English , Urdu , Hindi , Malayalam