ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೋಲ್ಕತ್ತಾದಲ್ಲಿ ನಡೆದ ಸಂಯೋಜಿತ ಕಮಾಂಡರ್ ಗಳ ಸಮ್ಮೇಳನದಲ್ಲಿ ಸಶಸ್ತ್ರ ಪಡೆಗಳ ವರ್ಧಿಕ ಕಾರ್ಯಾಚರಣೆಯ ಸಿದ್ಧತೆಗಾಗಿ ಒಗ್ಗೂಡಿ ಹೋರಾಡುವುದು, ಆತ್ಮನಿರ್ಭರ ಭಾರತ ಮತ್ತು ನಾವೀನ್ಯತೆಯ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 

Posted On: 15 SEP 2025 3:34PM by PIB Bengaluru

ಪ್ರಧಾನಮಂತ್ರಿ ಅವರು ಕೋಲ್ಕತ್ತಾದಲ್ಲಿ 16ನೇ ಸಂಯೋಜಿತ ಕಮಾಂಡರ್‌ ಗಳ ಸಮಾವೇಶವನ್ನು ಉದ್ಘಾಟಿಸಿದರು. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಸಮ್ಮೇಳನ ಸಶಸ್ತ್ರ ಪಡೆಗಳ ಉನ್ನತ ಮಟ್ಟದ ಚಿಂಥನ ಮಂಥನಕ್ಕೆ ಒಂದು ವೇದಿಕೆಯಾಗಿದೆ. ಇದು ಭಾರತದ ಮಿಲಿಟರಿ ಸಿದ್ಧತೆಯ ಭವಿಷ್ಯದ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಲು ಮತ್ತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ದೇಶದ ಉನ್ನತ ನಾಗರಿಕ ಮತ್ತು ಮಿಲಿಟರಿ ನಾಯಕತ್ವವನ್ನು ಒಗೂಡಿಸುತ್ತದೆ. ಸಮ್ಮೇಳನದ ವಿಷಯವು 'ಸುಧಾರಣೆಗಳ ವರ್ಷ - ಭವಿಷ್ಯಕ್ಕಾಗಿ ಪರಿವರ್ತನೆ' ಎಂಬುದಾಗಿದೆ, ಇದು ಸಶಸ್ತ್ರ ಪಡೆಗಳ ನಡೆಯುತ್ತಿರುವ ಆಧುನೀಕರಣ ಮತ್ತು ಪರಿವರ್ತನೆಗೆ ಹೊಂದಿಕೆಯಾಗುತ್ತದೆ.

ಆಪರೇಷನ್ ಸಿಂದೂರ ಯಶಸ್ಸಿನಲ್ಲಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವಿಭಾಜ್ಯ ಪಾತ್ರ ನಿರ್ವಹಿಸುತ್ತಿರುವ ಸಶಸ್ತ್ರ ಪಡೆಗಳು, ಪೈರಸಿ ತಡೆ, ಸಂಘರ್ಷ ಪ್ರದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರುವುದು ಮತ್ತು ಮಿತ್ರ ರಾಷ್ಟ್ರಗಳಿಗೆ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್ ಎ ಡಿ ಆರ್) ನೆರವು ನೀಡುವಲ್ಲಿ ಸಶಸ್ತ್ರ ಪಡೆಗಳ ಪಾತ್ರವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. 2025ರ ವರ್ಷವು ರಕ್ಷಣಾ ವಲಯದಲ್ಲಿ 'ಸುಧಾರಣೆಗಳ ವರ್ಷ'ವಾಗಿರುವುದರಿಂದ, ಭವಿಷ್ಯದ ಸವಾಲುಗಳನ್ನು ಎದುರಿಸಲು ಮತ್ತು ಯಾವುದೇ ಸಂಭವನೀಯತೆಯ ವಿರುದ್ಧ ಮೇಲುಗೈ ಸಾಧಿಸಲು ಒಗ್ಗೂಡಿ ಹೋರಾಡುವುದು, ಆತ್ಮನಿರ್ಭರ ಭಾರತ ಮತ್ತು ನಾವೀನ್ಯತೆಯನ್ನು ಸಾಧಿಸಲು ಸಮಗ್ರ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರುವಂತೆ ಪ್ರಧಾನಮಂತ್ರಿ ಅವರು ರಕ್ಷಣಾ ಸಚಿವಾಲಯಕ್ಕೆ ಸೂಚನೆ ನೀಡಿದರು. 

ಆಪರೇಷನ್ ಸಿಂದೂರ ಸೃಷ್ಟಿಸಿದ ಹೊಸ ಅಸಾಮಾನ್ಯತೆಯ ಸಂದರ್ಭದಲ್ಲಿ ಸೇನಾ ಪಡೆಗಳ ಕಾರ್ಯಾಚರಣೆಯ ಸನ್ನದ್ಧತೆ, ಉದಯೋನ್ಮುಖ ತಂತ್ರಜ್ಞಾನ ಮತ್ತು ತಂತ್ರಗಳ ಸಂದರ್ಭದಲ್ಲಿ ಯುದ್ಧದ ಭವಿಷ್ಯದ ಬಗ್ಗೆ ಪ್ರಧಾನಮಂತ್ರಿ ಅವರಿಗೆ ವಿವರಿಸಲಾಯಿತು. ಕಳೆದ ಎರಡು ವರ್ಷಗಳಲ್ಲಿ ಜಾರಿಗೆ ತಂದ ಸುಧಾರಣೆಗಳು ಮತ್ತು ಮುಂದಿನ ಎರಡು ವರ್ಷಗಳ ಯೋಜನೆಯನ್ನು ಪ್ರಧಾನಮಂತ್ರಿ ಅವರು ಅವಲೋಕಿಸಿದರು. 

ಮುಂದಿನ ಎರಡು ದಿನಗಳ ಕಾಲ ಸಮಾವೇಶದಲ್ಲಿ, ಸೇನೆಯ ವಿವಿಧ ಪಡೆಗಳಿಂದ ಬರುವ ಪ್ರತಿಕ್ರಿಯೆ, ಹೆಚ್ಚುತ್ತಿರುವ ಜಾಗತಿಕ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ಸನ್ನದ್ಧತೆ ಮತ್ತು ಪ್ರಧಾನಮಂತ್ರಿ ಅವರ ದೂರದೃಷ್ಟಿಯ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ನೀಲನಕ್ಷೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು.

 

*****


(Release ID: 2166827) Visitor Counter : 2